ಚಿನ್ನಸ್ವಾಮಿಯಲ್ಲಿ ಮೇಳೈಸಿದ ಕನ್ನಡ ಡಿಂಡಿಮ – ರಜತ್ ಗೆ ಜೊತೆಯಾಗಿ ನಿಂತ ವಿರಾಟ್ ಕೊಹ್ಲಿ!

ಆರ್ ಸಿಬಿಯ ಹೊಸ ಅಧ್ಯಾಯ ಶುರುವಾಯ್ತು. ಅದ್ಧೂರಿ ಅನ್ ಬಾಕ್ಸ್ ಈವೆಂಟ್ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ರಾಯಲ್ಲಾಗೇ ಐಪಿಎಲ್ ಅಖಾಡಕ್ಕೆ ಧುಮುಕಿದೆ. ಹೊಸ ಕ್ಯಾಪ್ಟನ್, ಹೊಸ ಜೆರ್ಸಿ, ಹೊಸ ಟೀಮ್ ಮೇಟ್ಸ್ ಜೊತೆ ನ್ಯೂಲುಕ್ನಲ್ಲಿ ಕಾಣ್ತಿರೋ ಬಾಯ್ಸ್ ಎಲ್ರೂ ಕಪ್ ಗೆಲ್ಲೋ ಜೋಶ್ನಲ್ಲಿದ್ದಾರೆ. 18ನೇ ಸೀಸನ್ ಐಪಿಎಲ್ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿರೋ ಬೆಂಗಳೂರು ಟೀಂ ಐಪಿಎಲ್ ಆರಂಭಕ್ಕೂ ಮುನ್ನವೇ ಕ್ರೇಜ್ ಹೆಚ್ಚಿಸಿದೆ.
ಕಳೆದ 17 ವರ್ಷಗಳಿಂದಲೂ ಟ್ರೋಫಿಗಾಗಿ ಕಾಯ್ತಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಈ ಬಾರಿ ಐಪಿಎಲ್‌ನಲ್ಲಿ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲಿದೆ. ಇದರ ಪೂರ್ವಭಾವಿಯಾಗಿ ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನ್‌ಬಾಕ್ಸ್ ಕಾರ್ಯಕ್ರಮವನ್ನ ಅದ್ಧೂರಿಯಾಗಿ ಆಯೋಜನೆ ಮಾಡ್ಲಾಗಿತ್ತು. ಈ ವೇಳೆ ಆರ್‌ಸಿಬಿ ತನ್ನ ಹೊಸ ಜೆರ್ಸಿಯನ್ನೂ ಬಿಡುಗಡೆಗೊಳಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ 4 ಗಂಟೆಗೆ ಆರ್‌ಸಿಬಿ ತಂಡದ ಎಲ್ಲಾ ಆಟಗಾರರು ಪ್ರಾಕ್ಟೀಸ್ ಶುರು ಮಾಡಿದ್ರು. ಆ ನಂತ್ರ ಮ್ಯೂಜಿಕಲ್ ಮ್ಯಾಜಿಕ್ನಲ್ಲಿ ಖ್ಯಾತ ಗಾಯಕರಾದ ಅಲೋಕ್, ಸಂಜಿತ್ ಹೆಗ್ಡೆ, ಐಶ್ವರ್ಯಾ ರಂಗರಾಜನ್, ಹನುಮಾನ್‌ಕೈಂಡ್ ಸೇರಿದಂತೆ ಹಲವರು ಸಂಗೀತ ಪ್ರದರ್ಶನ ನೀಡಿದರು.
ಇದನ್ನೂ ಓದಿ : ₹869 ಕೋಟಿಗೆ ಸಿಕ್ಕಿದ್ದೇ ₹52 ಕೋಟಿ – ಪಾಕಿಸ್ತಾನಕ್ಕೆ ಶೇ.85% ನಷ್ಟ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಕನ್ನಡಿಗರು ಹೃದಯದಲ್ಲಿ ಇಟ್ಕೊಂಡು ಆರಾಧಿಸ್ತಾರೆ. 17 ಸೀಸನ್ ಅಲ್ಲ 50 ಸೀಸನ್ ಕಳ್ದು ಟ್ರೋಫಿ ಗೆದ್ದಿಲ್ಲ ಅಂದ್ರೂ ನಮ್ಮ ಸಪೋರ್ಟ್ ನಿಮಗೇ ಅಂತಾ ದೊಡ್ಡ ಸ್ಟ್ರೆಂಥ್ ಆಗಿ ನಿಂತಿದ್ದಾರೆ. ಬಟ್ ಕನ್ನಡಿಗರಿಗೆ ಮೊದ್ಲಿಂದಲೂ ಆರ್‌ಸಿಬಿ ಬಗ್ಗೆ ಇರೋ ಸಿಟ್ಟು, ಬೇಜಾರು ಅಂದ್ರೆ ಕನ್ನಡವನ್ನ ಕೇರ್ಲೆಸ್ ಮಾಡ್ತಾರೆ, ಕನ್ನಡ ಆಟಗಾರರಿಗೆ ಇಂಪಾರ್ಟೆನ್ಸ್ ಕೊಡಲ್ಲ. ಅದರಲ್ಲೂ ಆರ್‌ಸಿಬಿ ಕನ್ನಡವನ್ನು ಬಳಸುತ್ತಿಲ್ಲ, ಕನ್ನಡಿಗರನ್ನು ಪ್ರತಿನಿಧಿಸುತ್ತಿಲ್ಲ ಎಂದು ಅನೇಕರು ಹಲವು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವನ್ನು ಹೊರಹಾಕಿದ್ದರು. ಬಟ್ ಈ ಬಾರಿ ಅನ್ ಬಾಕ್ಸ್ ಈವೆಂಟ್ನಲ್ಲೇ ಕನ್ನಡ ಡಿಂಡಿಮ ಮೇಳೈಸಿತ್ತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳನ್ನು ಪ್ಲೇ ಮಾಡಿದ್ದಾರೆ. ಅಲ್ಲದೆ ಕರುನಾಡ ರಾಜರತ್ನ ಪುನೀತ್ ರಾಜ್ಕುಮಾರ್ ಅವರಿಗೆ ವಿಶೇಷ ಗೌರವವನ್ನು ಸಹ ಸಲ್ಲಿಸಿದ್ದಾರೆ. ಇವೆಲ್ಲದರ ಜೊತೆಗೆ ಮೈದಾನದಲ್ಲಿ ಕನ್ನಡ ಬಾವುಟ ಕೂಡ ರಾರಾಜಿಸಿದೆ. ನೃತ್ಯಪಟುಗಳು ಕನ್ನಡದ ಧ್ವಜ ಹಿಡಿದು, ಕನ್ನಡ ಹಾಡು ಹಾಡುತ್ತಾ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು. ಗಾಯಕ ಆಲ್ ಓಕೆ ಕನ್ನಡ ಹಾಡು ಹಾಡುತ್ತಿದ್ದಂತೆ ಚಿನ್ನಸ್ವಾಮಿ ಮೈದಾನದಲ್ಲಿ ಕೆಂಪು ಮತ್ತು ಹಳದಿ ಧ್ವಜ ರಾರಾಜಿಸಿತ್ತು. ನಿಜ ಹೇಳ್ಬೇಕಂದ್ರೆ ಫಾರ್ ದಿ ಫಸ್ಟ್ ಟೈಂ ಆರ್‌ಸಿಬಿ ಅಂಗಳವು ಕನ್ನಡತನದಿಂದ ಕಂಗೊಳಿಸ್ತಾ ಇತ್ತು. ಆರ್‌ಸಿಬಿ ಫ್ರಾಂಚೈಸಿಯ ಈ ನಡೆಯಿಂದ ಅಭಿಮಾನಿಗಳು ಕೂಡ ಫುಲ್ ಖುಷಿಯಾಗಿದ್ದಾರೆ. ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕನ್ನಡ ಧ್ವಜವನ್ನು ಹಾರಿಸಿದಕ್ಕೆ ಹಲವರು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.
ಆರ್ಸಿಬಿಯ ಅನ್ ಬಾಕ್ಸ್ ಈವೆಂಟ್ ನಲ್ಲಿ ಕನ್ನಡಿಗರ ರಾಜಕುಮಾರ ಪುನೀತ್ ರಾಜ್ಕುಮಾರ್ ಅವ್ರ ಜನ್ಮದಿನಕ್ಕೆ ವಿಶೇಷ ಗೌರವ ಸಲ್ಲಿಸಲಾಯ್ತು. ಕಾರ್ಯಕ್ರಮ ನಡೆದ ದಿನದಂದೇ ಅಪ್ಪು ಅವರ 50ನೇ ಜನ್ಮದಿನವಾಗಿದ್ದು, ಅಗಲಿದ ಮಹಾನ್ ಚೇತನಕ್ಕೆ ಆರ್‌ಸಿಬಿ ವಿಶೇಷ ಗೌರವವನ್ನು ಸಲ್ಲಿಸಿತು. ಇನ್ನು ಕಾರ್ಯಕ್ರಮದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಸಹ ಹಾಜರಿದ್ದರು. ಸಿಂಗರ್ ವಿಜಯಪ್ರಕಾಶ್ ಅವರು ರಾಜ್ಕುಮಾರ ಚಿತ್ರದ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ಗೀತೆಯನ್ನು ಹಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು.