10 ಗಂಟೆಗಿಂತ ಹೆಚ್ಚು ಹೊತ್ತು ಕೂತ್ರೆ ಜೀವಕ್ಕೆ ಕಂಟಕ? -ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್‌ ವಿಚಾರ!

10 ಗಂಟೆಗಿಂತ ಹೆಚ್ಚು ಹೊತ್ತು ಕೂತ್ರೆ ಜೀವಕ್ಕೆ ಕಂಟಕ? -ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್‌ ವಿಚಾರ!

ಬದಲಾದ ಜೀವನ ಶೈಲಿಯಲ್ಲಿ ಎಲ್ಲವೂ ಕುಳಿತಲ್ಲೇ ಆಗಬೇಕು ಅಂತಾ ಬಯಸುತ್ತಾರೆ. ಹೆಚ್ಚು ಹೊತ್ತು ಫೋನ್‌ ಬಳಸುತ್ತಾ, ಟಿವಿ ನೋಡುತ್ತಾ ಕುಳಿತುಕೊಂಡಿರುತ್ತಾರೆ. ಇನ್ನು ಆಫೀಸ್‌ಗೆ ಹೋಗಿ ಕುಳಿತರೇ ಟೈಂ ಹೋಗಿದ್ದೇ ಗೊತ್ತಾಗಲ್ಲ. ಕೆಲಸ ಕೆಲಸ ಅಂತಾ ಬೆಳಗ್ಗಿನಿಂದ ಸಂಜೆ ವರೆಗೂ ಕುಳಿತೇ ಇರುತ್ತೇವೆ. ಕೂತಲ್ಲೇ ಕೂತಿದ್ರೆ ಬೊಜ್ಜು ಬೆಳೆಯುತ್ತೆ ಅಂತ ಸಾಮಾನ್ಯವಾಗಿ ಎಲ್ಲರೂ ಹೇಳ್ತಾರೆ. ದಿನದಲ್ಲಿ ಹತ್ತು ಗಂಟೆಗಿಂತ ಹೆಚ್ಚು ಕೂತಿದ್ರೆ ಮಾನಸಿಕ ಆರೋಗ್ಯ ಹಾಳಾಗುತ್ತೆ ಅಂತಾ ಅಧ್ಯಯನದಿಂದ ಗೊತ್ತಾಗಿದೆ.

ಇದನ್ನೂ ಓದಿ: ಚಿಕನ್‌ ಇಷ್ಟ ಅಂತಾ ಹೆಚ್ಚು ತಿಂತೀರಾ? – ಪ್ರತಿದಿನ ಚಿಕನ್‌ ತಿಂದ್ರೆ ಆರೋಗ್ಯಕ್ಕೆ ಕಂಟಕ!

ಕೆಲವ್ರು ದಿನವಿಡಿ ಅಂದ್ರೆ ಸುಮಾರು 10 ಗಂಟೆಗೂ ಹೆಚ್ಚು ಕಾಲ ಸಿಸ್ಟಮ್ ಮುಂದೆ ಕೂತು ಕೆಲಸ ಮಾಡ್ತಿರುತ್ತಾರೆ. ಇನ್ನು ಮನೆಯಲ್ಲಿರುವ ಹಿರಿಯರು ಟಿವಿ ನೋಡುತ್ತಾ, ಫೋನ್ ನೋಡುತ್ತಾ  ಕಾಲ‌ಕಳೆಯುತ್ತಾರೆ.. ಹೀಗೆ ಹತ್ತು ಗಂಟೆಗಿಂತ ಹೆಚ್ಚು ಹೊತ್ತು ಕೂತಲ್ಲೇ ಕೂತಿದ್ರೆ ಡಿಮೆನ್ಷಿಯಾ ಕಾಡೋ ಸಾಧ್ಯತೆ ಇದೆ ಅಂತಾ ಅಧ್ಯಯನದಿಂದ ಗೊತ್ತಾಗಿದೆ.

60 ವರ್ಷ ಕ್ಕಿಂತ ಮೇಲ್ಪಟ್ಟವರ ಮೇಲೆ ನಡೆಸಲಾದ ಅಧ್ಯಯನದಲ್ಲಿ ನೆನಪಿನ‌ ಶಕ್ತಿ‌ಕಳೆದುಕೊಳ್ಳುವ ಅಪಾಯ ಹೆಚ್ಚಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಮುಖ್ಯವಾಗಿ ಕುಳಿತಲ್ಲೇ ಕೆಲಸ‌ ಮಾಡೋದರಿಂದ ಯಾವುದೇ ಚಟುವಟಿಕೆಯಿಲ್ಲದೆ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದು ನಿರಂತರವಾದರೆ ಮೆದುಳು ನೆನಪಿನ ಶಕ್ತಿಯನ್ನೂ ಕಳೆದುಕೊಳ್ಳುತ್ತದೆ. ಇದಲ್ಲದೆ ದೀರ್ಘಕಾಲ ಕುಳಿತುಕೊಳ್ಳುವುದು ನಿಮ್ಮ ಕುತ್ತಿಗೆ, ಬೆನ್ನು, ಭುಜಗಳು ಮತ್ತು ಸೊಂಟದಲ್ಲಿ ನೋವು ಉಂಟುಮಾಡಬಹುದು. ಇದು ಇತರೆ ಆರೋಗ್ಯ ಸಮಸ್ಯೆಗಳಿಗೂ ದಾರಿ‌ಮಾಡಿಕೊಡುತ್ತದೆ. ಕೂತಲ್ಲೇ ಕೂತು ಅನಾರೋಗ್ಯಕ್ಕೆ ಒಳಗಾಗೋ ಬದಲು ಸಮಯ ಸಿಕ್ಕಾಗ ಒಂದಷ್ಟು ಓಡಾಡುವುದು ಒಳ್ಳೆಯದು| .

Shwetha M