ರಕ್ಷಾ ಬಂಧನದ ದಿನ ತಂಗಿ ಎದುರೇ ಹಾರಿ ಹೋಯ್ತು ಪ್ರಾಣಪಕ್ಷಿ.. ಅಣ್ಣನ ಮೃತದೇಹಕ್ಕೆ ರಾಖಿ ಕಟ್ಟಿದ ಸಹೋದರಿ!

ರಕ್ಷಾ ಬಂಧನದ ದಿನ ತಂಗಿ ಎದುರೇ ಹಾರಿ ಹೋಯ್ತು ಪ್ರಾಣಪಕ್ಷಿ.. ಅಣ್ಣನ ಮೃತದೇಹಕ್ಕೆ ರಾಖಿ ಕಟ್ಟಿದ ಸಹೋದರಿ!

ರಕ್ಷಾ ಬಂಧನ ಹಬ್ಬವು ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ಒಂದು ಹಬ್ಬವಾಗಿದೆ. ಈ ಹಬ್ಬವು ಸಹೋದರ ಮತ್ತು ಸೋದರಿಯ ಬಂಧವನ್ನು ಸಾರುವ ಹಬ್ಬವಾಗಿದೆ. ರಕ್ಷಾ ಬಂಧನ ಬಂದರೆ ಸಾಕು ಅಣ್ಣ ಎಷ್ಟೇ ದೂರದಲ್ಲಿದ್ದರೂ ಕೂಡ ತಂಗಿ ಅವನಿದ್ದಲ್ಲಿಗೆ ಹೋಗಿ ರಾಖಿ ಕಟ್ಟುತ್ತಾಳೆ. ಇಲ್ಲೊಬ್ಬಳು ಕೂಡ ತನ್ನ ಪ್ರತಿವರ್ಷದಂತೆ ಈ ವರ್ಷವೂ ರಾಖಿ ಕಟ್ಟಲು ಬಂದಿದ್ದಾಳೆ. ಮನೆಗೆ ಬಂದ ತಂಗಿಯನ್ನು ಅಣ್ಣ ಕೂಡ ಖುಷಿ ಖುಷಿಯಾಗಿ ಸ್ವಾಗತಿಸಿದ್ದಾನೆ. ಆದರೆ ದುರ್ವಿಧಿ ಇವರ ಖುಷಿಯನ್ನೇ ಕಸಿದುಕೊಂಡಿದೆ. ತಂಗಿಯ ಕಣ್ಣೆದುರೇ ಅಣ್ಣ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಮನೆಯಲ್ಲಿ ಸೊಳ್ಳೆ ನಿವಾರಕ ರಿಫಿಲ್‌ ಬಳಸುತ್ತಿದ್ದೀರಾ..? – ಸೊಳ್ಳೆ ನಿವಾರಕ ಲಿಕ್ವಿಡ್‌ ನಿಂದ ಬಾಲಕಿಯ ಪ್ರಾಣವೇ ಹೊಯ್ತು!

ಚೆಲ್ಲೆ ಗೌರಮ್ಮ ಎಂಬ ಮಹಿಳೆ ಮಂಗಳವಾರದಂದು ಪೆದ್ದಪಲ್ಲಿ ಜಿಲ್ಲೆಯ ಧೂಳಿಕಟ್ಟಾ ಗ್ರಾಮದ ಚೌಧರಿ ಕನಕಯ್ಯ ಎಂಬ ತನ್ನ ಸಹೋದರನಿಗೆ ರಾಖಿ ಕಟ್ಟಲು ತವರಿಗೆ ಬಂದಿದ್ದಳು. ಪ್ರತಿ ವರ್ಷದಂತೆ. ಬಹಳ ದಿನಗಳ ನಂತರ ತಂಗಿ ಮನೆಗೆ ಬಂದಾಗ ಅಣ್ಣನೂ ಖುಷಿಯಾಗಿದ್ದನು. ಆದರೆ ಇದ್ದಕ್ಕಿದ್ದಂತೆ ತಂಗಿಯ ಜೊತೆ ಖುಷಿಯಿಂದ ಮಾತನಾಡುತ್ತಾ ಆತ ಅಸ್ವಸ್ಥನಾಗಿ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾನೆ.

ತುಂಬಾ ಖುಷಿಯಿಂದ ಅಣ್ಣನಿಗೆ ರಾಖಿ ಕಟ್ಟಲು ಬಂದಿದ್ದ ತಂಗಿಗೆ ಅಣ್ಣನ ಸಾವಿನಿಂದಾಗಿ ದಿಕ್ಕೇ ತೋಚದಾಗಿದೆ. ಆಕೆಗೆ ಹೇಳಲಾಗದಷ್ಟು ತೀವ್ರ ದುಃಖವಾಗಿದ್ದು, ಕೊನೆಗೆ ಆಕೆ ಅಣ್ಣನ ಕೈಗೆ ರಾಖಿ ಕಟ್ಟಿ ಪ್ರೀತಿ ವ್ಯಕ್ತಪಡಿಸಿ ಇದೇ ಕೊನೆಯ ರಾಖಿ ಎಂದು ಅಳಲು ತೋಡಿಕೊಂಡಿದ್ದಾಳೆ. ಅಣ್ಣ ತಂಗಿಯ ನಡುವಿನ ವಾತ್ಸಲ್ಯ ಗ್ರಾಮಸ್ಥರು ಕಣ್ಣೀರು ಸುರಿಸಿದ್ದು, ಯಾವ ಸಹೋದರಿಯೂ ಇಂತಹ ಸಂಕಷ್ಟಕ್ಕೆ ಸಿಲುಕಬಾರದು ಎಂದಿದ್ದಾರೆ.

suddiyaana