ಚೇಸ್ ಮಾಡುವಾಗ ಬೈಕ್ ಟಚ್ -ಶಿರಸಿಯಲ್ಲಿ ಗ್ಯಾಂಗ್‌ವಾರ್‌ಗೆ ಕಾರಣವಾದ ಚಿಕ್ಕ ಕಿರಿಕ್

ಪೊಲೀಸರು ಎಷ್ಟೇ ಖಡಕ್ ಆಗಿದ್ರೂ ಪುಡಿರೌಡಿಗಳು ರಾಜ್ಯದಲ್ಲಿ ಬಾಲ ಬಿಚ್ಚೋದ್ದನ್ನ ನಿಲ್ಲಿಸಿಲ್ಲ. ಈಗ ಉತ್ತರಕನ್ನಡ ಜಿಲ್ಲೆಯಲ್ಲೂ ಪುಡಿರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ಚಿಕ್ಕ ವಿಚಾರವನ್ನ ದೊಡ್ಡದಾಗಿ ಮಾಡಿ ಎರಡು ಕೋಮಿನ ನಡುವೆ ಗಲಾಟೆ ನಡೆಯುವುದ್ದಕ್ಕೆ ಕಾರಣವಾಗಿದೆ.
ಅಂದಹಾಗೇ ಇದೇ ಮೇ.21ರಂದು ರಾತ್ರಿ ಬೈಕ್ ತಾಗಿಸಿದ ವಿಚಾರವಾಗಿ ಎರಡು ಕೋಮಿನ ಯುವಕರ ಗುಂಪಿನ ನಡುವೆ ಕಿರಿಕ್ ಆಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ದೇವಿಕೆರೆ ಸಮೀಪದ ಸಿಂಪಿಗಲ್ಲಿಯಲ್ಲಿ ಈ ಘಟನೆ ನಡೆದಿದೆ. ಒಂದು ಕೋಮಿನ ಇಬ್ಬರು ಯುವಕರು ಮತ್ತೊಂದು ಕೋಮಿನ ಯುವಕರ ವಾಹನವನ್ನು ಚೇಸ್ ಮಾಡುವಾಗ ವಾಹನಕ್ಕೆ ತಾಗಿದೆ.
ಇದನ್ನೂ ಓದಿ: ರುಕ್ಮಿಣಿ ವಸಂತ್‌ಗೆ ಡೀಪ್‌ಪೇಕ್ ಕಾಟ – ಖಡಕ್ ಎಚ್ಚರಿಕೆ ನೀಡಿದ ಕಾಂತಾರ ಬೆಡಗಿ
ಈ ವಿಚಾರವಾಗಿ ಎರಡು ಗುಂಪಿನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಹಿಂದು ಯುವಕರು ಮತ್ತೊಂದು ಕೋಮಿನ ಯುವಕರ ಮೇಲೆ ಹಲ್ಲೆ ಮಾಡಿದ್ದರು. ಇದಾದ ನಂತರ ಹಲ್ಲೆಗೊಳಗಾದ ಕೋಮಿನ ಯುವಕರು ಗುಂಪು ಕಟ್ಟಿಕೊಂಡು ಬಂದು ಹಿಂದೂ ಯುವಕರಿಗೆ ಹಲ್ಲೆ ಮಾಡಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಈ ಗಲಾಟೆಯ ದೃಶ್ಯವನ್ನ ಸ್ಥಳೀಯರೊಬ್ಬರು ಶಿರಸಿ ನಗರ ಠಾಣೆ ಪೊಲೀಸರಿಗೆ ನೀಡಿದ್ದಾರೆ. ಈ ದೃಶ್ಯ ಆಧರಿಸಿ ತನಿಖೆಗಿಳಿದ ಪೊಲೀಸರು ಸುಮಟೋ ಪ್ರಕರಣ ದಾಖಲಿಸಿ ಶಿರಸಿಯ ಅಯಾನ್ ,ಟಿನಮೇಕರ್ ,ಸರ್ಪರಾಜು ಟಿನಮೇಕರ್ ,ಆದಿಲ್ ಸಕ್ಕರ್ ಖಾನ್ ,ಅಭಯ್ ಹುದರ್,ಸರ್ವೇಶ್ ಹಿರೇಮಠ್ ಹಾಗೂ ಆಕಾಶ್ ಕುಂದನಗಾರ ಸೇರಿದಂತೆ ಒಟ್ಟು ಆರು ಯುವಕರ ವಿರುದ್ಧ ಶಿರಸಿ ನಗರ ಠಾಣೆಯಲ್ಲಿ ಇಂದು ಪ್ರಕರಣ ದಾಖಲಿಸಿದ್ದಾರೆ.

ನೋಡಿರಿ

