ಗಾಯಕ ರಘು ದೀಕ್ಷಿತ್ 2ನೇ ಮದುವೆ – ಗಾಯಕಿ ವಾರಿಜಶ್ರೀ ಜೊತೆ ವಿವಾಹಕ್ಕೆ ಸಿದ್ಧತೆ

ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಅವರು ಎರಡನೆ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಸಿಂಗರ್ ವಾರಿಜಶ್ರೀ ವೇಣುಗೋಪಾಲ್ ಅವರ ಜೊತೆ ಮದುವೆಯಾಗಲಿದ್ದಾರೆ.
ಇದನ್ನೂ ಓದಿ:ಆಲಿಯಾ ಭಟ್ ಮನೆಯಲ್ಲಿ ಮೈಸೂರಿನ ಗಣಪ – ಮೂರ್ತಿ ರೆಡಿಮಾಡಿ ಮುಂಬೈಗೆ ಕಳಿಸಿದ ಅರುಣ್ ಯೋಗಿರಾಜ್
ಸಂಗೀತ ಪ್ರಿಯರನ್ನು ತಮ್ಮದೇ ಗುಂಗಿನಲ್ಲಿ ತೇಲಿಸಿದ ಖ್ಯಾತ ಗಾಯಕ ರಘು ದೀಕ್ಷಿತ್ ಅವರು ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಮೊದಲ ಮದುವೆಯಿಂದ ರಘು ದೀಕ್ಷಿತ್ ವಿಚ್ಛೇದನ ಪಡೆದಿದ್ದರು. 2005ರಲ್ಲಿ ಡ್ಯಾನ್ಸರ್ ಮಯೂರಿ ಉಪಾಧ್ಯ ಜೊತೆ ರಘು ದೀಕ್ಷಿತ್ ವಿವಾಹ ನೆರವೇರಿತ್ತು. 2019ರಲ್ಲಿ ಅವರಿಬ್ಬರು ವಿಚ್ಛೇನದ ಪಡೆದರು. ಇಷ್ಟು ದಿನ ಒಂಟಿಯಾಗಿದ್ದ ಗಾಯಕ ರಘು ದೀಕ್ಷಿತ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿ, ಕೊಳಲು ವಾದಕಿ ವಾರಿಜಶ್ರಿ ಅವರ ಜೊತೆ ರಘು ದೀಕ್ಷಿತ್ ಸಪ್ತಪದಿ ತುಳಿಯಲಿದ್ದಾರೆ.
ರಘು ದೀಕ್ಷಿತ್ ಅವರಿಗೆ ಈಗ 50 ವರ್ಷ ವಯಸ್ಸು. 2ನೇ ಮದುವೆ ಬಗ್ಗೆ ಅವರು ಈ ಮೊದಲು ಯೋಚಿಸಿರಲಿಲ್ಲ. ಆದರೆ ವಾರಿಜಶ್ರೀ ಜೊತೆ ಒಡನಾಟ ಬೆಳೆದ ಬಳಿಕ ಅವರ ನಿರ್ಧಾರ ಬದಲಾಯಿತು. ಅವರ ಈ ನಿರ್ಧಾರಕ್ಕೆ ಎರಡೂ ಕುಟುಂಬದವರ ಬೆಂಬಲ ಸಿಕ್ಕಿದೆ. ಹಾಗಾಗಿ ರಘು ದೀಕ್ಷಿತ್ ಮತ್ತು ವಾರಿಜಶ್ರಿ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ರೀತಿ ಆಗಲಿದೆ ಅಂತ ನಾನು ಊಹಿಸಿರಲಿಲ್ಲ. ನನ್ನ ಜೀವನದುದ್ದಕ್ಕೂ ಒಂಟಿಯಾಗಿರಲು ನಾನು ಸಿದ್ಧನಾಗಿದ್ದೆ. ಆದರೆ ಜೀವನದ ಪ್ಲ್ಯಾನ್ ಬೇರೆ ಆಗಿತ್ತು. ಬಲವಾದ ಸ್ನೇಹದಿಂದ ಪ್ರಾರಂಭವಾದದ್ದು ಸ್ವಾಭಾವಿಕವಾಗಿ ಪ್ರೀತಿ ಮತ್ತು ಒಡನಾಟವಾಗಿ ಬೆಳೆಯಿತು. ನಾವು ಒಂದೇ ರೀತಿಯ ಆಸಕ್ತಿಗಳನ್ನು ಹೊಂದಿದ್ದೇವೆ. ವಾರಿಜಶ್ರೀ ಅವರ ಪೋಷಕರ ಆಶೀರ್ವಾದದೊಂದಿಗೆ, ನಮ್ಮ ಜೀವನದ ಈ ಹೊಸ ಅಧ್ಯಾಯವನ್ನು ಒಟ್ಟಿಗೆ ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ’ ಎಂದು ರಘು ದೀಕ್ಷಿತ್ ಅವರು ಹೇಳಿದ್ದಾರೆ.
ವಾರಿಜಶ್ರೀ ಅವರಿಗೆ ಈಗ 34 ವರ್ಷ ವಯಸ್ಸು. ರಘು ದೀಕ್ಷಿತ್ ಹಾಗೂ ವಾರಿಜಶ್ರೀ ನಡುವೆ ವಯಸ್ಸಿನ ದೊಡ್ಡ ಅಂತರ ಇದೆ. ಆ ಕಾರಣಕ್ಕಾಗಿ ಅಭಿಮಾನಿಗಳಿಗೆ ಈ ಮದುವೆಯ ನಿರ್ಧಾರವು ಅಚ್ಚರಿಯನ್ನುಂಟು ಮಾಡಿದೆ. ವಾರಿಜಶ್ರೀ ಅವರದ್ದು ಸಂಗೀತಗಾರರ ಕುಟುಂಬ. ವಾರಿಜಶ್ರೀ ತಂದೆ ವೇಣುಗೋಪಾಲ್ ಅವರು ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ ರಘು ದೀಕ್ಷಿತ್ ಮತ್ತು ವಾರಿಜಶ್ರೀ ವೇಣುಗೋಪಾಲ್ ಅವರು ಸಾಕಷ್ಟು ವಿಡಿಯೊ ಸಾಂಗ್ ಆಲ್ಬಂಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಇಬ್ಬರ ನಡುವೆ ಸ್ನೇಹ-ಪ್ರೀತಿ ಮೂಡಿದೆ. ಇಬ್ಬರ ಮದುವೆಯ ಸ್ಥಳ ಮತ್ತು ದಿನಾಂಕದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

ನೋಡಿರಿ

