ಅಶ್ವಿನಿ & ಗ್ಯಾಂಗ್‌ ಪ್ಲ್ಯಾನ್‌ ವರ್ಕೌಟ್?‌ – ಈ ವಾರದ ಕಳಪೆ ಮಾಳು!

ಅಶ್ವಿನಿ & ಗ್ಯಾಂಗ್‌ ಪ್ಲ್ಯಾನ್‌ ವರ್ಕೌಟ್?‌ – ಈ ವಾರದ ಕಳಪೆ ಮಾಳು!

ಬಿಗ್‌ ಬಾಸ್‌ ಮನೆಯ ಆಟ ಯಾರೂ ಊಹಿಸದ ರೀತಿಯಲ್ಲಿ ಸಾಗ್ತಾ ಇದೆ. ಕಳೆದ ವಾರ ದೊಡ್ಮನೆಯ ಕ್ಯಾಪ್ಟನ್‌ ಆಗಿದ್ದ ಮಾಳು ನಿಪನಾಳ್‌ಗೆ ಈ ವಾರ ಕಳಪೆ ಪಟ್ಟ ಸಿಕ್ಕಿದೆ. ಅದೂ ಕೂಡ ಅಶ್ವಿನಿ ಆಂಡ್‌ ಗ್ಯಾಂಗ್‌ ಪ್ಲ್ಯಾನ್‌ನಿಂದಾಗಿ. ಅವರು ಅಂದುಕೊಂಡಂತೆ ಮಾಳು ಜೈಲು ವಾಸ ಅನುಭವಿಸುವಂತೆ ಆಗಿದೆ.

ಇದನ್ನೂ ಓದಿ:  ರಾಂಗ್‌ ರೂಟ್‌ನಲ್ಲಿ ಬಂದು ಆಟೋ ಚಾಲಕನ ಮೇಲೆ ದರ್ಪ ತೋರಿದ ಮಹಿಳೆ! – ಈಕೆ ಎಡವಟ್ಟಿನಿಂದ 1 ಕಿ.ಮೀ. ಟ್ರಾಫಿಕ್‌ ಜಾಮ್!

ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನದಿಂದಲೇ ರಂಪಾಟ ಮಾಡುತ್ತಾ ಬಂದಿರುವ ಅಶ್ವಿನಿ ಆಂಡ್‌ ಗ್ಯಾಂಗ್‌ ಕಿಚ್ಚ ಕ್ಲಾಸ್‌ ಗೂ ಬಗ್ಗುತ್ತಿಲ್ಲ. ಪ್ರತಿವಾರ ಕಿಚ್ಚ ಸುದೀಪ್‌ ಬುದ್ದಿವಾದ ಹೇಳಿದ್ರೂ ಇವರು ಬದಲಾಗುತ್ತಿಲ್ಲ. ಈ ವಾರ ಅಶ್ವಿನಿ ಗ್ಯಾಂಗ್‌ ಮತ್ತೊಂದು ತಪ್ಪು ಮಾಡಿದೆ. ಮಾಳುವನ್ನ ಜೈಲಿಗೆ ಕಳುಹಿಸಿದ್ದಾರೆ.

ಹೌದು, ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಕ್ಯಾಪ್ಟನ್‌ ಆಗಿದ್ದ ಮಾಳುಗೆ ನಾಮಿನೇಟ್‌ ಮಾಡುವ ಅಧಿಕಾರ ಸಿಕ್ಕಿತ್ತು. ಮಾಳು ಅವರು ಏಳು ಮಂದಿಯನ್ನು ನಾಮಿನೇಟ್‌ ಮಾಡಿದ್ದರು. ಇದೀಗ ಅವರೆಲ್ಲಾ ಮಾಳು ವಿರುದ್ಧ ತಿರುಗಿಬಿದ್ದಿದ್ದಾರೆ. ಕ್ಯಾಪ್ಟನ್‌ ರೂಮ್‌ನಿಂದ ಸೀದಾ ಜೈಲಿಗೆ ಹೋಗುವಂತೆ ಮಾಳುವನ್ನು ಮಾಡಿದ್ದಾರೆ. ರಿಷಾ ಗೌಡ, ಕಾಕ್ರೋಚ್‌ ಸುಧಿ, ಅಶ್ವಿನಿ ಗೌಡ, ಜಾಹ್ನವಿ ಮುಂತಾದವರು ಮಾಳು ನಿಪನಾಳ್‌ ಅವರು ಕಳಪೆ ಪಟ್ಟ ನೀಡಿದ್ದಾರೆ.

ಜಾಹ್ನವಿ ಕ್ಯಾಪ್ಟನ್‌ ಆಗಿದ್ದವರಿಗೆ ತಲೆಯಲ್ಲಿ ಬುದ್ಧಿ ಇರಬೇಕು. ಅಡುಗೆ ಮಾಡಬೇಕು ಎಂದರೆ, ಅವರ ಕಡೆಗೆ ಕ್ಯಾಮೆರಾ ಟರ್ನ್‌ ಆಗಬೇಕು, ಬ್ಯಾಟರಿ ಹಾಕಿಕೊಳ್ಳಬೇಕು ಎಂದರೆ, ಅವರ ಕಡೆ ಕ್ಯಾಮೆರಾ ಟರ್ನ್‌ ಆಗಬೇಕು ಎಂದು ಕಾರಣ ನೀಡಿದ್ರಿ ನೋಡಿ, ಆಗ ನನಗೆ ತುಂಬಾ ಹರ್ಟ್‌ ಆಯ್ತು ಅಂದಿದ್ದಾರೆ. ಕಾಕ್ರೋಚ್‌ ಸುಧಿ, ಕ್ಯಾಪ್ಟನ್‌ ಎನ್ನುವುದಕ್ಕಿಂತ ಅವರೊಬ್ಬರು ಕಂಟ್ರಾಕ್ಟರ್‌ ಅನ್ನಿಸ್ತು. ನಾಮಿನೇಟ್‌ ಮಾಡುವಾಗ ಸರಿಯಾದ ಕಾರಣಗಳನ್ನ ನೀಡಬೇಕು ಎಂದು ಹೇಳಿದ್ದಾರೆ. ಇನ್ನು ಅಶ್ವಿನಿ ಆರು ಕಾರಣಗಳಲ್ಲಿ ನೀವು ಕೊಟ್ಟಂತಹ ಒಂದು ಕಾರಣವೂ ನನಗೆ ಸರಿ ಅನ್ನಿಸಲಿಲ್ಲ. ಅಧಿಕಾರವನ್ನು ದುರುಪಯೋಗ ಮಾಡಿಕೊಂಡ್ರಿ ಅಂತ ಅನ್ನಿಸ್ತು ಎಂದಿದ್ದಾರೆ. ಮನೆಯವರ ವೋಟ್‌ ಆಧಾರದ ಮೇಲೆ ಮಾಳು ಜೈಲಿಗೆ ಹೋಗುವಂತೆ ಆಗಿದೆ.

ಕಳಪೆ ಕೊಡಲು ಅಶ್ವಿನಿ & ಗ್ಯಾಂಗ್‌ ಪ್ಲ್ಯಾನ್!‌

ಬಿಗ್‌ ಬಾಸ್‌ ಮನೆಯಲ್ಲಿ ಪ್ರತಿಯೊಬ್ಬರು ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಿ, ಸ್ಪರ್ಧಿಯೊಬ್ಬರಿಗೆ ಕಳಪೆ ನೀಡಬೇಕು. ಆದ್ರೆ ಅಶ್ವಿನಿ ಹಾಗೂ ಜಾಹ್ನವಿ ಕಳಪೆ ಯಾರಿಗೆ ನೀಡಬೇಕು ಎಂದು ಮೊದಲೇ ಮಾತನಾಡಿಕೊಂಡಿದ್ರು. ಎಲ್ಲರ ಅಭಿಪ್ರಾಯ ಒಂದೇ ಆಗಿರ್ಬೇಕು. ನಾನು ಬೇರೆಯವರನ್ನ ಹೇಳೋದು, ನೀವು ಬೇರೆಯವರನ್ನ ಹೇಳಿದ್ರೆ, ಬಹುಮತ ಬರಲ್ಲ. ನಮ್ಮವರೇ ಜೈಲಿಗೆ ಹೋಗ್ಬೇಕಾಗುತ್ತೆ ಎಂದು ಮಾತನಾಡಿಕೊಂಡಿದ್ರು. ಇದೀಗ ಅವರ ಪ್ಲ್ಯಾನ್‌ ಪ್ರಕಾರವೇ ಆಗಿದೆ. ಮಾಳುಗೆ ಕಳಪೆ ಸಿಕ್ಕಿದ್ದು, ಜೈಲು ವಾಸ ಅನುಭವಿಸುವಂತೆ ಆಗಿದೆ.

Shwetha M