ವಧು – ವರರಿಗಾಗಿಯೇ ವಿನ್ಯಾಸಗೊಳಿಸಿದ ಬೆಳ್ಳಿ ಚಪ್ಪಲಿ! – ಇದರ ಬೆಲೆ ಎಷ್ಟು ಗೊತ್ತಾ?

ವಧು – ವರರಿಗಾಗಿಯೇ ವಿನ್ಯಾಸಗೊಳಿಸಿದ ಬೆಳ್ಳಿ ಚಪ್ಪಲಿ! – ಇದರ ಬೆಲೆ ಎಷ್ಟು ಗೊತ್ತಾ?

ಮದುವೆ ಎಂಬುವುದು ಜೀವನದಲ್ಲಿ ಒಂದು ಬಾರಿ ಮಾತ್ರ ಆಗಲು ಸಾಧ್ಯ. ಹೀಗಾಗಿಯೇ ತನ್ನ ಮದುವೆ ತಾನು ಕನಸು ಕಂಡಂತೆ ನಡೆಯಬೇಕು ಅಂತಾ ಕನಸು ಕಾಣುತ್ತಾರೆ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಊಟ, ಬಟ್ಟೆ, ಮೇಕಪ್​​ನಿಂದ ಹಿಡಿದು ಪ್ರತಿಯೊಂದನ್ನು ವಿಶೇಷ ಮತ್ತು ವಿಭಿನ್ನತೆಯನ್ನು ನೋಡುತ್ತಾರೆ. ಹೀಗೆ ವಿಭಿನ್ನತೆ ನೋಡುವವರಿಗಾಗಿಯೇ ಮಾರುಕಟ್ಟೆಯಲ್ಲಿ ಮುತ್ತು ಹಾಗೂ ರತ್ನಗಳಿಂದ ಮಾಡಿರುವ ಬೆಳ್ಳಿ ಚಪ್ಪಲಿಗಳು ಲಗ್ಗೆ ಇಟ್ಟಿವೆ!

ಸಾಮಾನ್ಯವಾಗಿ ಮದುವೆಗೆ ದುಬಾರಿ ಚಪ್ಪಲಿಗಳನ್ನು ಖರೀದಿಸುತ್ತಾರೆ. ಮದುವೆಗಾಗಿಯೇ ಹೊಸ ವಿನ್ಯಾಸದ ಚಪ್ಪಲಿಗಳನ್ನು ಖರೀದಿಸುತ್ತಾರೆ. ಇದೀಗ ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಬೆಳ್ಳಿಯ ಚಪ್ಪಲಿಗಳು ಲಗ್ಗೆ ಇಟ್ಟಿವೆ. ಲಕ್ನೋದಲ್ಲಿ ಆಭರಣ ವ್ಯಾಪಾರಿ ವಿನೋದ್ ಮಹೇಶ್ವರಿ ಎಂಬುವವರು 300 ರಿಂದ 500 ಗ್ರಾಂ ಬೆಳ್ಳಿಯಿಂದ ಚಪ್ಪಲಿಯನ್ನು ತಯಾರಿಸಿದ್ದಾರೆ. ಈ ಬೆಳ್ಳಿ ಚಪ್ಪಲಿಗಳ ಬೆಲೆ, ಚಪ್ಪಲಿಗಳ ವಿನ್ಯಾಸಕ್ಕೆ ಬಳಸುವ ಮುತ್ತು, ರತ್ನಗಳ ಆಧಾರದ ಮೇಲೆ ಅವುಗಳ ಬೆಲೆ ನಿಗದಿ ಪಡಿಸಿದ್ದಾರೆ. ಈ ಚಪ್ಪಲಿಗಳ ಬೆಲೆ 25,000 ರೂ.ಗಳಿಂದ ಆರಂಭವಾಗುತ್ತದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.

ಇದನ್ನೂ ಓದಿ: ಹಕ್ಕಿಗೂ ಕೆಲಸದಿಂದ  ಗೇಟ್‌ಪಾಸ್‌ ನೀಡಿದ ಮಸ್ಕ್‌! – ಟ್ವಿಟರ್‌ಗೆ ಇನ್ನುಮುಂದೆ ಹೊಸ ಲೋಗೊ  

ವಧು ಮತ್ತು ವರರಿಗೆ ವಿಭಿನ್ನ ವಿನ್ಯಾಸಗಳೊಂದಿಗೆ ಸ್ಯಾಂಡಲ್‌ಗಳನ್ನು ತಯಾರಿಸಲಾಗುತ್ತದೆ. ಕೆಲವರು ಅವರ ಅಂಗಡಿಗೆ ಬಂದು ಬೆಳ್ಳಿ ಚಪ್ಪಲಿ ಬಗ್ಗೆ ಕೇಳುತ್ತಾರೆ. ಇದೀಗ ಮದುವೆ ಸೀಸನ್ ನಡೆಯುತ್ತಿರುವುದರಿಂದ ವಧು-ವರರಿಗೆ ಚಪ್ಪಲಿ ತಯಾರಿಸಿ ಆರ್ಡರ್ ಪ್ರಕಾರ ಅವರವರ ಅಳತೆಗೆ ತಕ್ಕಂತೆ ತಯಾರಿಸುತ್ತಿದ್ದೇವೆ. ಕೇವಲ ವಧು-ವರರಿಗೆ ಮಾತ್ರವಲ್ಲದೆ ಮಕ್ಕಳಿಗೂ ಬೆಳ್ಳಿಯ ಚಪ್ಪಲಿಯನ್ನು ತಯಾರಿಸುತ್ತಿದ್ದೇವೆ ಎಂದು ಆಭರಣ ಮಳಿಗೆಯ ಮಾಲೀಕ ವಿನೋದ್ ಮಹೇಶ್ವರಿ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವರನು ಶೇರ್ವಾನಿಗಳನ್ನು ಧರಿಸುವುದು ಸಾಮಾನ್ಯವಾಗಿದೆ. ವರ ಧರಿಸುವ ಬೆಲ್ಟ್ ಗಳನ್ನೂ ಬೆಳ್ಳಿಯಿಂದಲೇ ಶೇರ್ವಾನಿಗೆ ಸೂಕ್ತ ಮಾದರಿಯಲ್ಲಿ ಮಾಡಲಾಗಿದೆ. ಇವುಗಳನ್ನು ಚಪ್ಪಲಿಗಳ ಮೇಲೆ ಮುತ್ತುಗಳು ಮತ್ತು ರತ್ನಗಳಿಂದ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಆಕರ್ಷಕವಾಗಿ ಕಾಣುವುದರಿಂದ ಅನೇಕರು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ ಎನ್ನುತ್ತಾರೆ ಅಂಗಡಿ ಮಾಲೀಕರು. 100 ರಿಂದ 500 ಗ್ರಾಂ ತೂಕದ ಈ ಪಾದರಕ್ಷೆಗಳ ಬೆಲೆ ರೂ. 25 ಸಾವಿರಕ್ಕೆ ಮಾರಾಟವಾಗುತ್ತಿದೆ.

suddiyaana