ಬೆಂಗಳೂರು ವಾಹನ ಸವಾರರೇ ದಯವಿಟ್ಟು ಗಮನಿಸಿ – ಮತ್ತೆ ಬರ್ತಿದೆ ಟೋಯಿಂಗ್ , ಜೇಬಿಗೆ ಬೀಳಲಿದೆ ಕತ್ತರಿ

ಬೆಂಗಳೂರು ವಾಹನ ಸವಾರರೇ ದಯವಿಟ್ಟು ಗಮನಿಸಿ –  ಮತ್ತೆ ಬರ್ತಿದೆ ಟೋಯಿಂಗ್ , ಜೇಬಿಗೆ ಬೀಳಲಿದೆ ಕತ್ತರಿ

 ಹಿಂದೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲಿ ಬೇಕಾದ್ರೆ ಅಲ್ಲಿ ವಾಹನಗಳನ್ನ ಪಾರ್ಕಿಂಗ್ ಮಾಡಿದ್ರೆ ಪೊಲೀಸ್ ಎತ್ತ್ಕೊಂಡ್  ಹೋಗ್ತಿದ್ರು. ಸವಾರರ ಜೇಬಿಗೆ ಕತ್ತರಿ ಹಾಕುತ್ತಿದ್ದರು.  ಆಮೇಲೆ ಈ ಟೋಯಿಂಗ್ ಮಾಡುವುದರ ಬಗ್ಗೆ ಜನ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಕರಣ ನ್ಯಾಯಾಲಯದ ಮೆಟ್ಟಲನ್ನೂ ಏರಿತ್ತು. ಅದರ ನಂತರ ಟೋಯಿಂಗ್ ಮಾಡುತ್ತಿರಲಿಲ್ಲ. ಈಗ ಮತ್ತೆ ಟೋಯಿಂಗ್ ಶುರುವಾಗುತ್ತಿದೆ ಎನ್ನುವ ಮಾಹಿತಿಗಳು ಸಿಗುತ್ತಿವೆ.

ಈ ಬಾರಿ ಟೋಯಿಂಗ್ ವ್ಯವಸ್ಥೆ ವಿನೂತನ ರೀತಿಯಲ್ಲಿ ಬರಲಿದೆ. ಇಷ್ಟು ದಿನ ಬೆಂಗಳೂರು ಟ್ರಾಫಿಕ್ ಪೊಲೀಸರು ಟೋಯಿಂಗ್ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು. ಈಗ ನೇರವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವೇ ಟೋಯಿಂಗ್ ಮಾಡಿ ದಂಡ ವಿಧಿಸಲಿದೆ. ಎಲ್ಲೆಂದರಲ್ಲಿ ಗಾಡಿ ನಿಲ್ಲಿಸುವವರಿಗೆ ಡಬ್ಬಲ್ ಶಾಕ್ ಕಾದಿದೆ ಎಂದು ತಿಳಿದುಬರುತ್ತಿದೆ.

ಇದನ್ನೂ ಓದಿ: ಸೆರೆವಾಸದಲ್ಲಿರುವ ದಾಸನಿಗೆ ಟಿವಿ ಭಾಗ್ಯ! – ದರ್ಶನ್‌ಗಾಗಿ ಹೊಸ ಟಿವಿ ಖರೀದಿಸಿದ ಜೈಲಾಧಿಕಾರಿಗಳು!

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಪುನಃ ಟೋಯಿಂಗ್ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಸದ್ದಿಲ್ಲದೆ ಟೋಯಿಂಗ್ ವ್ಯವಸ್ಥೆ ಜಾರಿಮಾಡಲು ಸಿದ್ಧತೆ ನಡೆಸಿರುವ ಗ್ರೇಟರ್ ಬೆಂಗಳೂರು ಅಥಾರಿಟಿ ಈಗಾಗಲೇ ಟೋಯಿಂಗ್ ವಾಹನ ಖರೀದಿಗೆ ಟೆಂಡರ್ ಕರೆದಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಜತೆಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಕೂಡ ಕೈಜೋಡಿಸಲಿದ್ದಾರೆ. ಈಗ ಗ್ರೇಟರ್ ಬೆಂಗಳೂರು ಅಥಾರಿಟಿ ಟೋಯಿಂಗ್ ಮಾಡಿದ್ರೆ ಎರಡುಪಟ್ಟು ದಂಡ ಕಟ್ಟಲೇಬೇಕಾಗುತ್ತದೆ. ದಂಡಕಟ್ಟಡ ವಾಹನಗಳನ್ನು ಕಸದ ಕ್ವಾರಿಗಳಲ್ಲಿ ಪಾರ್ಕ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಜಿಡಿಎ ಮೂಲಗಳು ತಿಳಿಸಿವೆ.

ರಸ್ತೆ ಬದಿ ಅನಾವಶ್ಯಕವಾಗಿ ವಾಹನ ಪಾರ್ಕ್ ಮಾಡುವುದು ಮತ್ತು ಕಂಡಕಂಡಲ್ಲಿ ಪಾರ್ಕ್ ಮಾಡ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಈ ಸಮಸ್ಯೆಗೆ ಬ್ರೇಕ್ ಹಾಕಲು ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತೆ ಟೋಯಿಂಗ್ ವ್ಯವಸ್ಥೆಯನ್ನು ಜಾರಿ ಮಾಡುತ್ತಿದೆ ಎಂದು ಜಿಬಿಎ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.

Kishor KV