ಹಾರ್ದಿಕ್ ಪಾಂಡ್ಯ ರೀ ಎಂಟ್ರಿಗೆ ಮುಂಬೈ ಇಂಡಿಯನ್ಸ್ ಟೀಮ್ ನಲ್ಲಿ ಅಸಮಾಧಾನ ಸ್ಫೋಟ – ಮೌನವೇ ಉತ್ತರ ಎಂದು ಜಸ್ಪ್ರೀತ್ ಬುಮ್ರಾ ಪೋಸ್ಟ್
ಐಸಿಸಿ ವಿಶ್ವಕಪ್ ಮುಗಿದ ಬಳಿಕ ಎಲ್ಲರ ಚಿತ್ತ ಈಗ ಐಪಿಎಲ್ ಟೂರ್ನಿಯತ್ತ ನೆಟ್ಟಿದೆ. ಈಗಾಗಲೇ ಟೀಂ ಸೆಲೆಕ್ಷನ್ ನಡೆಯುತ್ತಿದ್ದು ಮಹತ್ವದ ಬದಲಾವಣೆಗಳು ನಡೆಯುತ್ತಿವೆ. ಅದರಲ್ಲೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್ನಿಂದ ಕರೆತರುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಎರಡು ಸೀಸನ್ಗಳ ನಂತರ ಪಾಂಡ್ಯ ಮರಳಿ ಮುಂಬೈ ಟೀಮ್ ಸೇರಿದ್ದು, ಐಪಿಎಲ್ 2024 ರಲ್ಲಿ ರೋಹಿತ್ ತಂಡದಲ್ಲಿ ಆಡಲಿದ್ದಾರೆ.
ಇದನ್ನೂ ಓದಿ : ಹಣಕ್ಕಿಂತ ನಿಯತ್ತು ಮುಖ್ಯ ಎಂದ ವಿರಾಟ್ ಕೊಹ್ಲಿ ಆರ್‌ಸಿಬಿ ತೊರೆಯಲು ಮುಂದಾಗಿದ್ದು ಏಕೆ?
ಫಾಸ್ಟ್ ಬೌಲರ್ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಸೇರಿದ ಬೆನ್ನಲ್ಲೇ ಹೊಸ ಸುದ್ದಿಯೊಂದು ಭಾರೀ ವೈರಲ್ ಆಗ್ತಿದೆ. ಹಾರ್ದಿಕ್ ಕರೆತಂದ ಮುಂಬೈ ಫ್ರಾಂಚೈಸಿ ಮೇಲೆ ಅವರದ್ದೇ ತಂಡದ ಆಟಗಾರರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಭಾರತ ಕ್ರಿಕೆಟ್ ತಂಡದ ಮತ್ತು ಮುಂಬೈ ಇಂಡಿಯನ್ಸ್‌ನ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವ್ಯಂಗ್ಯ ಅಥವಾ ಅಸಮಾಧಾನ ವ್ಯಕ್ತಪಡಿಸುವ ಸ್ಟೋರಿಯನ್ನು ಪೋಸ್ಟ್ ಮಾಡಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಐಪಿಎಲ್ 2024ರ ಮೊದಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಗುಜರಾತ್ ಟೈಟನ್ಸ್‌ನಿಂದ ಹಾರ್ದಿಕ್ ಪಾಂಡ್ಯ ಅವರನ್ನು ವ್ಯಾಪಾರ ಮಾಡಿಕೊಳ್ಳಲಾಗಿದ್ದು, ಇದರಿಂದ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಖುಷಿಗೊಂಡಿದ್ದಾರೆ. ಆದರೆ, ಅನುಭವಿ ವೇಗಿ ವೇಗಿ ಜಸ್ಪ್ರೀತ್ ಬುಮ್ರಾ ಸೇರಿದಂತೆ ಇತರೆ ಆಟಗಾರರು ಅಸಮಾಧಾನಗೊಂಡಂತೆ ಕಾಣುತ್ತಿದೆ.
ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ಮರಳುತ್ತಿದ್ದಂತೆಯೇ ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿ ಎಂದು ಬಣ್ಣಿಸಲಾಗುತ್ತಿದೆ. ಇದರಿಂದ ಭವಿಷ್ಯದ ನಾಯಕನಾಗುವ ಆಸೆಯಲ್ಲಿದ್ದ ಜಸ್ಪ್ರೀತ್ ಬುಮ್ರಾ ಅವರಿಗೆ ಹಿನ್ನಡೆಯಾಗಿದೆ ಎಂದು ಭಾವಿಸಬಹುದು. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನನ್ನು ಕಡೆಗಣಿಸಿದೆ ಎಂಬ ಭಾವ ಜಸ್ಪ್ರೀತ್ ಬುಮ್ರಾ ಅವರುಗೆ ಬಂದಂತಿದೆ. ಇತ್ತೀಚಿನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ‘ಮೌನವೇ ಅತ್ಯುತ್ತಮ ಉತ್ತರ’ ಎಂದು ಬರೆದುಕೊಂಡಿದ್ದಾರೆ. ಏಕೆಂದರೆ, ಅವರು ಮುಂಬೈ ಇಂಡಿಯನ್ಸ್‌ನ ನಾಯಕರಾಗಲು ಬಯಸುತ್ತಿದ್ದರು ಎಂಬುದು ಬಹಿರಂಗವಾಗಿದೆ. ಆದಾಗ್ಯೂ, ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ಗೆ ಮರಳುವಿಕೆ ಅವರನ್ನು ರೋಹಿತ್ ಶರ್ಮಾ ನಂತರ ನಾಯಕರನ್ನಾಗಿ ಮಾಡಬಹುದು.