ಸೈಮಾದಲ್ಲಿ ಕನ್ನಡಿಗರಿಗೆ ಬೆಲೆ ಯಾಕಿಲ್ಲ? – D BOSS ಮಾತು ಸತ್ಯವಾಯ್ತಾ?
ಸ್ಯಾಂಡಲ್‌ವುಡ್‌ನಿಂದ SIIMA ಬಯ್ಕಟ್

ಸೈಮಾದಲ್ಲಿ ಕನ್ನಡಿಗರಿಗೆ ಬೆಲೆ ಯಾಕಿಲ್ಲ? –  D BOSS ಮಾತು ಸತ್ಯವಾಯ್ತಾ?ಸ್ಯಾಂಡಲ್‌ವುಡ್‌ನಿಂದ  SIIMA ಬಯ್ಕಟ್

ಕನ್ನಡ.. ಈ ಕನ್ನಡ ಬಾಷೆಗೆ ತನ್ನದೇ ಆದ ಇತಿಹಾಸವಿದೆ.. ಸಾವಿರಾರು ವರ್ಷಗಳ ನಂಟಿದೆ.. ಸಾಂಸ್ಕೃತಿಕವಾಗಿ ಕನ್ನಡ ಬಲಿಷ್ಠವಾಗಿದೆ. ಕನ್ನಡ ಸಿನಿಮಾಗಳು ಗಡಿಯಾಚೆಗೆ ನಿಂತು ಸದ್ದು ಮಾಡ್ತಿವೆ. ಕೆಜಿಎಫ್‌ ಕಾಂತಾರ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು, ದೊಡ್ಡ ದೊಡ್ಡ ಇಂಡಸ್ಟ್ರಿಗೆ ಕನ್ನಡ ಇಂಡಸ್ಟ್ರಿಗೆ ತಾಕತ್ತು ಎಲ್ಲರಿಗೂ ಗೊತ್ತಾಗಿದೆ.. ಆದ್ರೆ ಎಲ್ಲೋ ಒಂದ್ಕಡೆ ಕನ್ನಡ ಇಂಡಸ್ಟ್ರಿ ಎಷ್ಟೇ ಬೆಳೆದ್ರೂ ಮರ್ಯಾದೆ ಸಿಗುತ್ತಿಲ್ಲವೇನೋ ಅನಿಸುತ್ತಿದೆ. ಅದ್ದಕ್ಕೆ ಕಾರಣ ದುನಿಯಾ ವಿಜಿ ಅವರ ಮಾತು..

ಸೈಮಾ ಅವಾರ್ಡ್.. ದಕ್ಷಿಣ ಭಾರತದ ಚಿತ್ರರಂಗದಲ್ಲಿ  ಸಾಧನೆ ಮಾಡಿದವರಿಗೆ ಕೊಡುವ ಒಂದು ಅವಾರ್ಡ್.. ಈ ಅವಾರ್ಡ್‌ಗೆ ತನ್ನದೇ ಆದ ಬೆಲೆ ಇದೆ. ಎರಡು ದಿನಗಳ ಕಾಲ ನಡೆಯುವ ಈ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತೆ.  ಆದ್ರೆ ಈ ಅವಾರ್ಡ್ ಕಾರ್ಯಕ್ರಮದಲ್ಲಿ ಕನ್ನಡಿಗರನ್ನ ಕೀಳಾಗಿ ನೋಡುತ್ತಿದ್ದಾರೆ ಅನ್ನೋ  ಮಾತು ಸಾಕಷ್ಟು ವರ್ಷಗಳಿಂದಿದೆ. ಇದು ಈ ಸರಿ ದುನಿಯಾ ವಿಜಿ ಮೂಲಕ ಡೈರೆಕ್ಟ್ ಆಗಿ ಗೊತ್ತಾಗಿದೆ..

ಹೌದು ಸೈಮಾ ಅವಾರ್ಡ್ ವೇದಿಕೆ ಮುಂಭಾಗದಲ್ಲಿ ಕನ್ನಡ ಫಿಲ್ಮ್ ಮೇಕರ್ಸ್ ಕೂರಲು ಅವಕಾಶ ಇರುವುದಿಲ್ಲ. ಎಲ್ಲೋ ಮೂಲೆಯಲ್ಲಿ ಕೂರಬೇಕು. ಬೇರೆ ಭಾಷೆಯವರಿಗೆಲ್ಲಾ ಪ್ರಶಸ್ತಿ ಕೊಟ್ಟು ಅವರೆಲ್ಲಾ ಎದ್ದು ಹೊರಡುವ ಸಮಯದಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರಶಸ್ತಿ ಕೊಡುತ್ತಾರೆ. ಬಳಿಕ ಎಡಿಟಿಂಗ್‌ನಲ್ಲಿ ಕನ್ನಡ ಸಾಧಕರು ಪ್ರಶಸ್ತಿ ಸ್ವೀಕರಿಸುವಾಗ ಎಲ್ಲರೂ ಕೂಡ ಚಪ್ಪಾಳೆ ಹೊಡೆಯುವಂತೆ ತೋರಿಸುತ್ತಾರೆ. ಆದ್ರೆ ಪ್ರಶಸ್ತಿ ನೀಡುವಾಗ ಯಾರು ಕೂಡ ಇರಲ್ಲ. ಇದೇ ಕಾರಣಕ್ಕೆ ದುನಿಯಾ ವಿಜಯ್ ಗರಂ ಆಗಿದ್ದಾರೆ.. ಹೀಗಾಗಿ ಸೈಮಾ ಪ್ರಶಸ್ತಿ ಸ್ವೀಕರಿಸುತ್ತಾ ದುನಿಯಾ ವಿಜಯ್ ವೇದಿಕೆ ಮೇಲೆಯೇ ಆಯೋಜಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಯಾರೂ ಇರದ ವೇಳೆ ವೇದಿಕೆ ಮೇಲೆ ಕರೆದು ಕನ್ನಡರಿಗೆ ಪ್ರಶಸ್ತಿ ಕೊಡುವುದು ಸರಿಯಲ್ಲ. ಕನ್ನಡ ಭಾಷೆ ಉನ್ನತ ಸ್ಥಾನದಲ್ಲಿದೆ. ಅದನ್ನು ಕೆಳಗಿಳಿಸುವ ಪ್ರಯತ್ನ ಮಾಡಬೇಡಿ. ಮುಂದೆನೂ ಹೀಗಾದರೆ, ನಾವ್ಯಾರೂ ಈ ಕಾರ್ಯಕ್ರಮಕ್ಕೆ ಬರೋದಿಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ..

ಸೈಮಾ ಅವಾರ್ಡ್‌ನಲ್ಲಿ ಕನ್ನಡಗರ ವಿಷ್ಯದಲ್ಲಿ ತಾರತಮ್ಯ ನಡೆಯುತ್ತಿದೆ ಅನ್ನೋ ಆರೋಪ ಇವತ್ತು ನಿನ್ನೆಯದ್ದಲ್ಲ..  ಈ ಹಿಂದೆ ಕೂಡ ಈ ಆರೋಪಗಳು ಕೇಳಿ ಬಂದಿದ್ದವು. ಕಳೆದ ಬಾರಿ ಕೂಡ ಸೈಮಾದಿಂದ ಕನ್ನಡದ ತಾರೆಯರಿಗೆ ಅವಮಾನವಾಗಿತ್ತು. ಅಲ್ಲಿ ಸರಿಯಾ ಸೌಲಭ್ಯ ಇರಲ್ಲ.. ಯಾರೋ ಗೊತ್ತಿಲ್ಲದವರ ಜೊತೆ ರೂಂ ಶೇರ್ ಮಾಡಿಕೊಳ್ಳಬೇಕು..ಯಾರ್ಯಾರೋ ಜೊತೆ ಇರೋಕೆ ಸರಿ ಆಗಲ್ಲ.. ಹಾಗೇ ಖರ್ಚು ಕೂಡ ಕಮ್ಮಿಯಲ್ಲಿ ಇರಬೇಕು ಅಂತಾರೆ.. ಹಾಪ್ ರೇಟ್ – ಚೀಪ್ ರೇಟ್ ಖರ್ಚ್ನಲ್ಲಿ ಮಾಡ್ತಾರೆ ಅಂತ ಸಾಕಷ್ಟು ಜನ ಆರೋಪ ಮಾಡಿದ್ದಾರೆ.. ಇದೆಲ್ಲಾದರ ನಡುವೆ ಡಿ ಬಾಸ್ ದರ್ಶನ್ ವಿಡಿಯೋ ಈಗ ವೈರಲ್ ಆಗ್ತಿದೆ.  ಸಂಗೊಳ್ಳಿ ರಾಯಣ್ಣ ಸಿನಿಮಾದ ಟೈಂನಲ್ಲೇ  ದರ್ಶನ್  ಈ ಬಗ್ಗೆ ಬೇಸರ ಹೊರಹಾಕಿದ್ದರು. ಈಗ ಈ ವಿಡಿಯೋ ವೈರಲ್ ಆಗ್ತಿದೆ.

ಬಹಳ ಹಿಂದೆ ಸಂದರ್ಶನದಲ್ಲಿ ಇದೇ ವಿಚಾರದ ಬಗ್ಗೆ ನಟ ದರ್ಶನ್ ಮಾತನಾಡಿದ್ದರು. ಆ ವಿಡಿಯೋ ಈಗ ವೈರಲ್ ಆಗ್ತಿದೆ. “ನಾನು ಅವಾರ್ಡ್ ಫಂಕ್ಷನ್‌ಗಳಿಗೆ ಹೋಗಲ್ಲ, ನಮ್ಮ ರಾಜ್ಯದಲ್ಲಿ ನಡೆಯೋ ಕಾರ್ಯಕ್ರಮ ಅಲ್ಲ. ಹೊರಗಡೆ ನಡೆಯುವ ಐಫಾ, ಫಿಲ್ಮ್‌ಫೇರ್ ರೀತಿಯ ಕಾರ್ಯಕ್ರಮಗಳು. ಮೊದಲು ಕನ್ನಡ ಕಲಾವಿದರು ಮುಂದೆ ಕೂರುವಂತೆ ಆಗಬೇಕು. ಉಳಿದವರು ಹಿಂದೆ ಕೂರಬೇಕು, ಅವತ್ತು ನಾವು ಗೆದ್ದಂತೆ ಎಂದಿದ್ದರು. ಈಗ ಮಾತು ವೈರಲ್ ಆಗುತ್ತಿದ್ದು, ಕನ್ನಡ ನಟ ನಟಿಯರು ಕೂಡ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ನಾವು ಕೂಡ ಬೆಲೆ ಇಲ್ಲದ ಜಾಗಕ್ಕೆ ಹೋಗಲ್ಲ ಎನ್ನುತ್ತಿದ್ದಾರೆ. ಪ್ಯಾನ್ ಇಂಡಿಯಾ ಹಿಟ್ ಸಿನಿಮಾಗಳು ನೀಡಿದ್ರೂ ಕನ್ನಡ ಇಂಡಸ್ಟ್ರಿಗೆ ಬೆಲೆ ಇಲ್ಲ ಅಂದ್ರೂ ಮೇಲೆ ಇಂತಹ ಅವಾರ್ಡ್ ಕಾರ್ಯಕ್ರಮಗಳನ್ನ ನಾವು ಬಾಯ್ಕಟ್ ಮಾಡಬೇಕು ಅನ್ನೋ ಮಾತು ಕೇಳಿ ಬರ್ತಿದೆ.. ನಿಜಕ್ಕೂ ಇದು ಕನ್ನಡಕ್ಕೆ ಆಗುತ್ತಿರುವು ಅವಮಾನ..

Kishor KV