ಶಬರಿಮಲೆ ಅಯ್ಯಪ್ಪ ದೇವಾಲಯದ 18 ಪವಿತ್ರ ಮೆಟ್ಟಿಲುಗಳ ಮಹತ್ವವೇನು? -ಅಯ್ಯಪ್ಪನ ಭಕ್ತರು ಇದನ್ನು ತಪ್ಪದೇ ತಿಳಿದುಕೊಳ್ಳಿ

ಶಬರಿಮಲೆ ಅಯ್ಯಪ್ಪ ದೇವಾಲಯದ 18 ಪವಿತ್ರ ಮೆಟ್ಟಿಲುಗಳ ಮಹತ್ವವೇನು? -ಅಯ್ಯಪ್ಪನ ಭಕ್ತರು ಇದನ್ನು ತಪ್ಪದೇ ತಿಳಿದುಕೊಳ್ಳಿ

ಶಬರಿಮಲೆ ಅಯ್ಯಪ್ಪ ದೇವಾಲಯದ 18 ಪವಿತ್ರ ಮೆಟ್ಟಿಲುಗಳು ಹಿಂದೂ ಸಂಪ್ರದಾಯದಲ್ಲಿ ಮತ್ತು ಸನಾತನ ಸಂಸ್ಕೃತಿಯಲ್ಲಿ ಆಳವಾದ ಆಧ್ಯಾತ್ಮಿಕ ಮತ್ತು ತಾತ್ವಿಕ ಮಹತ್ವವನ್ನು ಹೊಂದಿವೆ. ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಸಾಗುವಾಗ ಈ ಮೆಟ್ಟಿಲುಗಳನ್ನು ಹತ್ತುವುದು ಕೇವಲ ದೈಹಿಕ ಕ್ರಿಯೆಯಾಗಿರದೆ, ಆತ್ಮಶುದ್ಧಿ ಮತ್ತು ಆತ್ಮಸಾಕ್ಷಾತ್ಕಾರದ ಒಂದು ಪ್ರಮುಖ ಭಾಗವಾಗಿದೆ. ಭಕ್ತರು ಅಯ್ಯಪ್ಪನ ಸನ್ನಿಧಿಯಲ್ಲಿ 18 ಮೆಟ್ಟಿಲು ಹತ್ತಿದ್ರೆ ಎಲ್ಲಾ ಪಾಪಗಳು ಕಳೆಯುತ್ತೆ.. ಕಷ್ಟಗಳು ಕರಗುತ್ತೆ ಅಂತ ನಂಬುತ್ತಾರೆ. ಹಾಗಿದ್ರೆ ಆ 18 ಮೆಟ್ಟಿಲಿನ ಮಹತ್ವವನ್ನ ನೋಡೋಣ.

ಪಂಚೇಂದ್ರಿಯಗಳ ಜಯ (1 ರಿಂದ 5 ಮೆಟ್ಟಿಲು):

ಮೊದಲ ಐದು ಮೆಟ್ಟಿಲುಗಳು ಮಾನವನ ಪಂಚೇಂದ್ರಿಯಗಳನ್ನು – ಕಣ್ಣು, ಕಿವಿ, ಮೂಗು, ಬಾಯಿ ಮತ್ತು ನಾಲಿಗೆಯನ್ನು – ಪ್ರತಿನಿಧಿಸುತ್ತವೆ. ಭಕ್ತರು ಈ ಮೆಟ್ಟಿಲುಗಳನ್ನು ಹತ್ತುವಾಗ ತಮ್ಮ ಇಂದ್ರಿಯಗಳನ್ನು ಶುದ್ಧವಾಗಿಟ್ಟುಕೊಳ್ಳುವ ಸಂಕಲ್ಪ ಮಾಡುತ್ತಾರೆ. ಕಣ್ಣುಗಳಿಂದ ದೇವರ ರೂಪವನ್ನು ಮಾತ್ರ ನೋಡುವುದು, ಕಿವಿಗಳಿಂದ ಭಜನೆಗಳನ್ನು ಮಾತ್ರ ಕೇಳುವುದು, ಮೂಗಿನಿಂದ ದೈವಿಕ ಸುಗಂಧವನ್ನು ಮಾತ್ರ ಗ್ರಹಿಸುವುದು, ನಾಲಿಗೆ ಮತ್ತು ಬಾಯಿಯಿಂದ ಶುದ್ಧ ಮಾತುಗಳನ್ನು ಮಾತ್ರ ಆಡುವುದು ಮತ್ತು ಸದ್ಭಾವನೆಯನ್ನು ಮಾತ್ರ ವ್ಯಕ್ತಪಡಿಸುವುದನ್ನು ಇದು ಸೂಚಿಸುತ್ತದೆ.

ಅಷ್ಟರಾಗಗಳ ನಿವಾರಣೆ (5 ರಿಂದ 13ಮೆಟ್ಟಿಲುಗಳು):

6 ರಿಂದ 13 ಮೆಟ್ಟಿಲುಗಳು ಅಷ್ಟರಾಗಗಳನ್ನು ಅಥವಾ ಅಷ್ಟ ದುರ್ಗುಣಗಳನ್ನು ಪ್ರತಿನಿಧಿಸುತ್ತವೆ:

ಕಾಮ (ಆಸೆ),

ಕ್ರೋಧ (ಕೋಪ)

ಲೋಭ (ದುರಾಶೆ)

ಮೋಹ (ಅತಿಯಾದ ಆಕರ್ಷಣೆ/ಅಂಟು)

ಮದ (ಅಹಂಕಾರ)

ಮತ್ಸರ (ಅಸೂಯೆ)

ದಂಭ (ಕಪಟತನ)

ದ್ವೇಷ (ವೈರತ್ವ). ಈ ಮೆಟ್ಟಿಲುಗಳನ್ನು ಹತ್ತುವಾಗ ಭಕ್ತರು ಈ ದುರ್ಗುಣಗಳನ್ನು ತೊರೆದು, ನಿಷ್ಕಲ್ಮಷ ಮನಸ್ಸಿನಿಂದ ದೇವರ ಕಡೆಗೆ ಸಾಗುವ ಸಂಕಲ್ಪ ಮಾಡುತ್ತಾರೆ.

ತ್ರಿಗುಣಗಳ ಅರಿವು (14 ರಿಂದ 16 ಮೆಟ್ಟಿಲು)mples 18 Ste

14 ರಿಂದ 16 ಮೆಟ್ಟಿಲುಗಳು ಸತ್ವ, ರಜಸ್ಸು ಮತ್ತು ತಮಸ್ಸು ಎಂಬ ಮೂರು ಗುಣಗಳನ್ನು ಪ್ರತಿನಿಧಿಸುತ್ತವೆ. ಸತ್ವಗುಣವು ಜ್ಞಾನ ಮತ್ತು ಶುದ್ಧತೆಯನ್ನು, ರಜೋಗುಣವು ಕ್ರಿಯೆ ಮತ್ತು ಆವೇಗವನ್ನು, ತಮೋಗುಣವು ಅಜ್ಞಾನ ಮತ್ತು ಜಡತ್ವವನ್ನು ಸೂಚಿಸುತ್ತದೆ. ಭಕ್ತರು ಈ ಗುಣಗಳನ್ನು ಅರ್ಥಮಾಡಿಕೊಂಡು ಅವುಗಳ ಪ್ರಭಾವದಿಂದ ಮುಕ್ತಿ ಹೊಂದಲು ಪ್ರಯತ್ನಿಸುತ್ತಾರೆ.

ಅಜ್ಞಾನದಿಂದ ಜ್ಞಾನದೆಡೆಗೆ (17 ಮತ್ತು 18ನೇ  ಮೆಟ್ಟಿಲು )

ಅಂತಿಮ ಎರಡು ಮೆಟ್ಟಿಲುಗಳು ಅಜ್ಞಾನವನ್ನು ತೊಡೆದು ಜ್ಞಾನವನ್ನು ಪಡೆಯುವ ಹಾದಿಯನ್ನು ಸೂಚಿಸುತ್ತವೆ. ನನ್ನದು ಎಂಬ ಅಹಂಕಾರವನ್ನು ತ್ಯಜಿಸಿ, ಎಲ್ಲಾ ಸಂಪತ್ತು ಮತ್ತು ಸಂಪರ್ಕಗಳು ಭಗವಂತನಿಂದ ಬಂದವು ಎಂಬ ಜ್ಞಾನವನ್ನು ಇದು ಪ್ರತಿಬಿಂಬಿಸುತ್ತದೆ. ಈ ಜ್ಞಾನವನ್ನು ಪಡೆದ ನಂತರವೇ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅರ್ಹರಾಗುತ್ತಾರೆ.

Kishor KV