ಬಿಸಿಲಿಗೆ ಕಬ್ಬಿನ ಹಾಲು ಕುಡೀಬಾರದಾ?  – ಈ ಕಾಯಿಲೆ ಇರೋರಿಗೆ ಡೇಂಜರ್!

ಬಿಸಿಲಿಗೆ ಕಬ್ಬಿನ ಹಾಲು ಕುಡೀಬಾರದಾ?  – ಈ ಕಾಯಿಲೆ ಇರೋರಿಗೆ ಡೇಂಜರ್!

ಬೇಸಿಗೆಕಾಲದಲ್ಲಿ ಡಿ ಹೈಡ್ರೇಷನ್‌ ಸಮಸ್ಯೆ ಸರ್ವೇ ಸಾಮಾನ್ಯ. ಸರಿಯಾಗಿ ನೀರು ಕುಡೀಬೇಕು.. ಜ್ಯೂಸ್‌ ಕುಡೀಬೇಕು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರಾನೇ.. ನೀರು-ಮಜ್ಜಿಗೆ ಅಂತ ಜನ ಆಗಾಗ್ಗೇ ತಮ್ಮ ಅನುಕೂಲಕ್ಕೆ ತಕ್ಕಂತೆ ಕುಡೀತಿರುತ್ತಾರೆ.. ಹಾಗೆನೇ ಬೇಸಿಗೆಯಲ್ಲಿ ಕಬ್ಬಿನ ಹಾಲು ಕಂಡ್ರೆ ಒಮ್ಮೆ ಕುಡಿದು ಹೊಟ್ಟೆ ತಂಪಾಗಿಸಿಕೊಳ್ಳೋಣ ಎಂದು ಆಸೆ ಪಡುವವರ ಸಂಖ್ಯೆ ಹೆಚ್ಚು. ಆದ್ರೆ ನಿಮ್ಗೊಂದು ವಿಚಾರ ಗೊತ್ತಾ? ಈ ಕಾಯಿಲೆ ಇರೋರು ಶುಗರ್ ಕೇನ್ ಜ್ಯೂಸ್ ಕುಡಿಲೇಬಾರ್ದು.. ಇದ್ರಿಂದಾಗಿ ಆರೋಗ್ಯ ಮತ್ತಷ್ಟು ಹಾಳಾಗ್ಬೋದು.

ಇದನ್ನೂ ಓದಿ: ಪಕ್ಷೇತರರಾಗಿ ಕೆಎಸ್ ಈಶ್ವರಪ್ಪ ಕಣಕ್ಕೆ! – ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್!

ಈಗಿನ ಕಾಲದಲ್ಲಿ ಏನ್ ಕುಡಿದ್ರೂ ಆಗಲ್ಲ. ಏನ್ ತಿಂದ್ರೂ ಆಗಲ್ಲ. ಸಣ್ಣ ವಯಸ್ಸಲ್ಲೇ ನಾನಾ ಕಾಯಿಲೆಗಳು ವಕ್ಕರಿಸಿಕೊಳ್ಳುತ್ತಿವೆ. ಇನ್ನು ಬೇಸಿಗೆಗಾಲ ಕಾಲಿಡ್ತಿದ್ದಂತೆ  ಡಿ ಹೈಡ್ರೇಷನ್‌ ಸಮಸ್ಯೆ ಕಾಡೋದಿಕ್ಕೆ ಶುರುವಾಗುತ್ತೆ. ಇದಕ್ಕಾಗಿ ಅನೇಕರು ಕಬ್ಬಿನ ಹಾಲು ಕುಡೀತಾರೆ. ಕಬ್ಬನ ಹಾಲು ಕುಡಿದ್ರೆ ದೇಹ ತಂಪಾಗುತ್ತೆ. ದೇಹಕ್ಕೆ ಅಗತ್ಯವಾಗಿ ಬೇಕಾಗುವ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಮಿನರಲ್ಸ್‌ ಇದ್ರಿಂದ ಸಿಗುತ್ತದೆ. ಆದರೆ ಕಬ್ಬಿನ ರಸವು ಎಲ್ಲರಿಗೂ ಪ್ರಯೋಜನಕಾರಿಯಾಗಲ್ಲ ಅನ್ನೋದು ಇಲ್ಲಿ ಗಮನಿಸಬೇಕಾದ ಸಂಗತಿ. ಯಾಕಂದ್ರೆ ಕಬ್ಬಿನ ಜ್ಯೂಸ್ ಕುಡಿದ್ರೆ ಕೆಲವರಿಗೆ ತೊಂದರೆಯಾಗುವ ಸಾಧ್ಯತೆ ಇದೆ.

ನಿಮಗೆ ಫುಡ್ ಪಾಯ್ಸನಿಂಗ್ ಆಗಿದ್ದಲ್ಲಿ ಕಬ್ಬಿನ ರಸ ಕುಡಿಯಲೇಬಾರದು. ಏಕೆಂದರೆ ಇದು ನಿಮ್ಮ ಸಮಸ್ಯೆಯನ್ನು ಹೆಚ್ಚಿಸಬಹುದು. ಕೈಗಾಡಿಯಲ್ಲಿ ಕಬ್ಬಿನ ರಸವನ್ನು ತಯಾರಿಸುವ ಸಮಯದಲ್ಲಿ, ಕೀಟಾಣುಗಳು, ಧೂಳು ಕಬ್ಬಿನ ಮೇಲೆ ಇರುವ ಸಾಧ್ಯತೆ ಇರುತ್ತೆ. ಇದರಿಂದ ಕಬ್ಬಿನ ರಸ ದೇಹಕ್ಕೆ ಒಳ್ಳೇದು ಮಾಡೋದಕ್ಕಿಂತ ಜಾಸ್ತಿ ಕೆಟ್ಟದ್ದು ಮಾಡಬಹುದು. ಇನ್ನು  ಕಬ್ಬಿನ ರಸ ಸೇವನೆಯಿಂದ ತಲೆನೋವು ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ.  ತಲೆನೋವಿನ ಸಮಸ್ಯೆ ಇದ್ದಲ್ಲಿ ಕಬ್ಬಿನ ರಸ ಕುಡಿಯುವುದನ್ನು ತಪ್ಪಿಸಿ. ಇಲ್ಲದಿದ್ರೆ ತಲೆನೋವು ಇನ್ನಷ್ಟು ಬಿಗಡಾಯಿಸಬಹುದು. ಹಾಗೆಯೇ ನೆಗಡಿ ಇರುವಾಗ ಕಬ್ಬಿನ ರಸ ಕುಡಿಯಬಾರದು. ಕಬ್ಬಿನ ಜ್ಯೂಸ್ ತಂಪಾಗಿಸುವ ಗುಣವನ್ನು ಹೊಂದಿರುವುದರಿಂದ ನೆಗಡಿ ಮತ್ತು ಕೆಮ್ಮಿನ ಸಮಸ್ಯೆಯನ್ನು ಹೆಚ್ಚಾಗಬಹುದು.

ಒಂದು ವೇಳೆ ನೀವು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಹೆಚ್ಚು ಕಬ್ಬಿನ ರಸ  ಕುಡಿಯೋದು ಆರೋಗ್ಯದ ದೃಷ್ಟಿಯಿಂದ ಒಳ್ಳೇದಲ್ಲ. ಕಬ್ಬಿನ ರಸ ಕುಡಿಯೋದ್ರಿಂದ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲೋರಿ ಸಿಗೋದ್ರಿಂದ ತೂಕ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಬೊಜ್ಜಿನ ಸಮಸ್ಯೆ ಇರುವವರು ಕಬ್ಬಿನ ರಸವನ್ನು ಸೇವಿಸಬಾರದು.

ಇನ್ನು  ಮಧುಮೇಹಿಗಳು ಕಬ್ಬಿನ ರಸವನ್ನು ಕುಡೀಬಾರದು ಅನ್ನೋದನ್ನು ಜಾಸ್ತಿ ವಿವರಿಸಬೇಕಿಲ್ಲ ಅಂದ್ಕೋತೀನಿ. ಯಾಕಂದ್ರೆ ಕಬ್ಬಿನ ಹಾಲು ಡೈರೆಕ್ಟಾಗಿ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಿಸುತ್ತದೆ. ಹೀಗಾಗಿ ಕಬ್ಬಿನ ಜ್ಯೂಸ್‌ ಬೇಸಿಗೆಯಲ್ಲಿ ಕುಡಿಯೋದು ಒಳ್ಳೆಯದೇ. ಆದ್ರೆ ಯಾವಾಗ, ಯಾರು ಕುಡೀಬೇಕು. ಅಂತಾ ನಿಮ್ಮ ಆರೋಗ್ಯ ನೋಡಿಕೊಂಡು ನಿರ್ಧರಿಸಿದ್ರೆ ಇನ್ನೂ ಒಳ್ಳೆಯದು.

Shwetha M