ಡಿಂಪಲ್ ಕ್ವೀನ್ ರಚಿತಾರಾಮ್‌ಗೆ ಸಿದ್ದೇಗೌಡರಿಂದ ಪ್ರಪೋಸ್ – ಪ್ರೇಮನಿವೇದನೆಗೆ ನಾಚಿ ನೀರಾದ ಬುಲ್ ಬುಲ್

ಡಿಂಪಲ್ ಕ್ವೀನ್ ರಚಿತಾರಾಮ್‌ಗೆ ಸಿದ್ದೇಗೌಡರಿಂದ ಪ್ರಪೋಸ್ –  ಪ್ರೇಮನಿವೇದನೆಗೆ ನಾಚಿ ನೀರಾದ ಬುಲ್ ಬುಲ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮ ಇದೀಗ ಸೆಮಿಫೈನಲ್ ಹಂತಕ್ಕೆ ಬಂದಿದೆ. ಈಗಾಗಲೇ ಸಿದ್ದೇಗೌಡರು ಮತ್ತು ದೀಶಲ್ ಫಿನಾಲೆ ಟಿಕೆಟ್ ಕೂಡಾ ಪಡೆದಿದ್ದಾರೆ. ಇದರ ಮಧ್ಯೆ ಸೆಮೆಫೈನಲ್ ವೇದಿಕೆಯಲ್ಲಿ ಸಿದ್ದೇಗೌಡರು ಮಿಂಚಿದ್ದಾರೆ. ಅದು ಕೂಡಾ ಡಿಂಪಲ್ ಕ್ವೀನ್ ರಚಿತಾರಾಮ್ ಅವರಿಗೆ ಪ್ರಪೋಸ್ ಮಾಡುವ ಮೂಲಕ.

ಇದನ್ನೂ ಓದಿ:ಕುಸ್ತಿ ಅಂದ್ರೆ ಬ್ಯಾಟ್‌ನಿಂದ ಬಾಲ್​ ಹೊಡೆಯೋವ ಆಟ ಅಲ್ಲ. ಸಾವಿಗೆ ಎದೆಯೊಡ್ಡೋ ಆಟ! – ಪೆದ್ದಿ ಟೀಸರ್‌ ರಿಲೀಸ್!

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡ್ರು ಹೆಸರಿನ ಪಾತ್ರವನ್ನು ಧನಂಜಯ್ ಮಾಡುತ್ತಿದ್ದಾರೆ. ಈಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲೂ ಸಿದ್ದೇಗೌಡರು ಮಿಂಚುತ್ತಿದ್ದಾರೆ. ಲಾಸ್ಟ್ ವೀಕ್‌ನಲ್ಲಿ ಫಿನಾಲೆ ಟಿಕೆಟ್ ಪಡೆಯುವಲ್ಲೂ ಸಿದ್ದೇಗೌಡ್ರು ಸಕ್ಸಸ್ ಆಗಿದ್ದರು. ಇದೀಗ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಪ್ರಪೋಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಡಿಂಪಲ್‌ ಕ್ವೀನ್‌ಗಾಗಿ ಕವನ ಬರೆದಿದ್ದರು ಧನಂಜಯ್. ವೇದಿಕೆ ಮೇಲೆ ಕವಿಯಾಗುವ ಮೂಲಕ ತನ್ನ ಪ್ರೇಮನಿವೇದನೆಯನ್ನು ಕವಿತೆ ಮೂಲಕ ರಚಿತಾ ರಾಮ್ ಮುಂದಿಟ್ಟರು. ಒಂದೊಂದು ಸಾಲುಗಳಲ್ಲೂ ಪ್ರೀತಿಯ ತುಡಿತವಿತ್ತು.. ಸಿದ್ದೇಗೌಡರ ಕವನ ವಾಚನ.. ಕವಿತೆಯಲ್ಲಿರುವ ಪ್ರಾಸ ರಚಿತಾರಾಮ್ ಮನಸಿಗೆ ಹಿಡಿಸಿದೆ. ತಕ್ಷಣ ವೇದಿಕೆಗೆ ಬಂದ ರಚಿತಾ ರಾಮ್ ಸಿದ್ದೇಗೌಡರ ಜೊತೆ ಹೆಜ್ಜೆಹಾಕಿದರು. ಈ ಸಂದರ್ಭದಲ್ಲಿ ಸಿದ್ದೇಗೌಡರು ರಚಿತಾರಾಮ್ ಅವರನ್ನು ತನ್ನ ಎದೆಗೆ ಒರಗಿಸಿಕೊಳ್ಳುವ ಮೂಲಕ ಅಭಿಮಾನ ತೋರಿದರು.

Sulekha