ಊಟದ ಆಟ ಶುರು -ಸಿಎಂ ಸಿದ್ದು ಸೇಫ್ ಗೇಮ್

ಸಚಿವ ಸಂಪುಟ ಪುನರ್ರಚನೆ ಅಂದಿದ್ದೇ ಅಂದಿದ್ದು.. ಹಾಲಿ ಸಚಿವರ ಹಾರ್ಟ್ ಬೀಟ್ ಜಾಸ್ತಿಯಾಗ್ತಿದ್ರೆ, ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಹೂವಿನ ಬಾಣ ಬಿಟ್ಟಂತೆ ಆಗ್ತಿದೆ. ಅಂದಹಾಗೇ ನವೆಂಬರ್ 20ಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ಕಂಪ್ಲೀಟ್ ಆಗ್ತಿದೆ. ಇದ್ರ ಬೆನ್ನಲ್ಲೇ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡೋಕೆ ಕಾಂಗ್ರೆಸ್ ರೆಡಿಯಾಗಿದೆ. ಅಷ್ಟೇ ಅಲ್ಲೇ ಇದೇ 13ಕ್ಕೆ ಅಂದ್ರೆ ನಾಳೆ ರಾತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ಸಚಿವರಿಗೆ ಭರ್ಜರಿ ಊಟ ಹಾಕಿಸುತ್ತಿದ್ದಾರೆ. ಅಂದ್ರೆ ಇದು ಊಟದ ಆಟ ಅಂದ್ರೆ ತಪ್ಪಿಲ್ಲ.. ಯಾಕಂದ್ರೆ ಈ ಔತಣ ಕೂಟದ ಹಿಂದೆ ಸಾಕಷ್ಟು ಲೆಕ್ಕಚಾರವಿದೆ. ಅದ್ರಲ್ಲೂ ನಮ್ಮ ಸಿಎಂ ಸಿದ್ದರಾಮಯ್ಯ ಅವರು ಪ್ಲ್ಯಾನ್ ಇಲ್ದೇ ಯಾವುದ್ದನ್ನೂ ಮಾಡಲ್ಲ.. ಗಾಳಕ್ಕೆ ಚಿಕ್ಕ ಮೀನು ಸಿಗಸಿ ದೊಡ್ಡ ಮೀನು ಹಿಡಿಯೋ ಪ್ಲ್ಯಾನ್ ಸಿದ್ದರಾಮಯ್ಯರದ್ದು. ಇದ್ದಕ್ಕಿದ್ದಂತೆ ಸಿಎಂ ಸಿದ್ದು ಸಂಪುಟ ಪುನಾರಚನೆ ದಾಳ ಉರುಳಿಸುವುದ್ದಕ್ಕೆ ಕಾರಣ ಸಿಎಂ ಬದಲಾವಣೆ ಚರ್ಚೆಯನ್ನ ಮುಚ್ಚಿ ಹಾಕೋದ್ ಆಗಿದೆ.. ಹಾಗೇ ತನ್ನ ಕುರ್ಚಿಯನ್ನ ಒಂದಷ್ಟು ದಿನ ಸೇಫ್ ಮಾಡಿಕೊಳ್ಳುವುದ್. ಸಚಿವ ಸಂಪುಟ ಅಂತ ಹೇಳಿದ್ದಕ್ಕೆ ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಅನ್ನೋ ಮ್ಯಾಟ್ರು ಸೈಲೆಂಟ್ ಆಗ್ತಿದೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಬಣದವರು ಸದ್ಯಕ್ಕೆ ಈ ಬಗ್ಗೆ ಏನು ಮಾತಾಡುತ್ತಿಲ್ಲ.. ಯಾಕಂದ್ರೆ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೇ ಆಕಾಂಕ್ಷಿಗಳಲ್ಲಿ ಮತ್ತೆ ಸಚಿವ ಸ್ಥಾನದ ಕನಸು ಚಿಗುರಿದೆ. ಸಂಪುಟ ಪುನಾರಚನೆ ವೇಳೆ ತಮಗೆ ಅವಕಾಶ ಸಿಕ್ಕೇ ಸಿಗಲಿದೆ ಅನ್ನೋ ವಿಶ್ವಾಸದಲ್ಲಿ ಒಂದಷ್ಟು ಶಾಸಕರು ಇದ್ದಾರೆ.. ಹೀಗಾಗಿ ಸಿಎಂ ಸುತ್ತ ಮುತ್ತ ಆಕಾಂಕ್ಷಿಗಳು ಕಾಣಿಸಿಕೊಳ್ತಿದ್ದಾರೆ. ಸಚಿವ ಪುನರ್ ರಚನೆ ಅಂದ್ರೆ ಈ ಟೈಂನಲ್ಲಿ ಡಿಕೆಶಿ ಹವಾ ಜಾಸ್ತಿ ನಡೆಯಲ್ಲ, ಎಲ್ಲಾ ಸಿಎಂ ಹೇಳಿದ್ದಂತೆ ಕೇಳ್ತಾರೆ. ಹೀಗಾಗಿ ಎಲ್ಲಾ ಶಾಸಕರು ಸಚಿವರು ಸಿಎಂ ಹಿಂದೆ ಸುತ್ತುತ್ತಾರೆ.
ಇನ್ನೂ ಪುನಾರಚನೆ ವೇಳೆ 12 ಸಚಿವರನ್ನ ಕೈ ಬಿಡೋಕೆ ಮುಂದಾಗಿದ್ದಾರೆ ಅನ್ನೋ ಚರ್ಚೆ ಕೂಡ ನಡೆಯುತ್ತಿದೆ.. ಡಿನ್ನರ್ ನೆಪದಲ್ಲಿ ಅವರನ್ನ ಕರೆಸಿ ಅವರ ಜೊತೆ ಈ ಬಗ್ಗೆ ಚರ್ಚೆ ಕೂಡ ಸಿಎಂ ನಡೆಸಲಿದ್ದಾರೆ.. ಇವೆರಲ್ಲಾರ ಜೊತೆ ಸಚಿವ ಸಂಪುಟ ವಿಸ್ತರಣೆ ಮಾಡೋದು ಸಿಎಂ ಲೆಕ್ಕಚಾರ.. ಹಾಗೇ ಮುಂದಿನ ಎರಡೂವರೆ ವರ್ಷ ಕೂಡ ನಾನೇ ಸಿಎಂ ಆಗಿ ಇರ್ತೀನಿ. ಮುಂದಿನ ಎರಡೂವರೆ ವರ್ಷ ಅವಧಿಯಲ್ಲೂ ಯಾವುದೇ ತಕರಾರು ಇಲ್ಲದೆ ನೀಟಾಗಿ ಸರ್ಕಾರ ನಡೆಸಿಕೊಂಡು ಹೋಗೋಣ ಅಂತ ಎಲ್ಲಾ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಈ ಮೂಲಕ ಸಿದ್ದರಾಮಯ್ಯ ಮುಂದಾಗಿದ್ದಾರೆ ಅಂತಾನೇ ಹೇಳಬಹುದು.
ಮತ್ತೊಂದ್ಕಡೆ ಎರಡು ಡಜನ್ ಗೂ ಹೆಚ್ಚು ಶಾಸಕರು ಸಚಿವ ಸ್ಥಾನದ ಕನಸು ಕಾಣ್ತಿದ್ದಾರೆ. ಸಂಪುಟ ಪುನಾರಚನೆ ವೇಳೆ ನಮ್ಗೊಂದ್ ಅವಕಾಶ ಸಿಕ್ಕೇ ಸಿಗುತ್ತೆ ಅನ್ನೋ ನಂಬಿಕೆಯಲ್ಲಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರ ಸುತ್ತ ಮುತ್ತ ಆಕಾಂಕ್ಷಿಗಳು ಕಾಣಿಸಿಕೊಳ್ಳಲು ಶುರುಮಾಡಿದ್ದಾರೆ. ಅಷ್ಟೇ ಅಲ್ಲ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಳಿಯೂ ಲಾಬಿ ನಡೆಸುತ್ತಿದ್ದಾರೆ. ಖರ್ಗೆ ನಿವಾಸಕ್ಕೂ ಮಂತ್ರಿ ಸ್ಥಾನದ ಆಕಾಂಕ್ಷಿಗಳು ಹೋಗಿ ಬರೋದ್ ಮಾಡ್ತಿದ್ದಾರೆ. ಖರ್ಗೆ ಆರೋಗ್ಯ ವಿಚಾರಿಸುವ ನೆಪದಲ್ಲಿ ಸಾಲು ಸಾಲಾಗಿದೆ ಆಕಾಂಕ್ಷಿಗಳು ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಈ ಮೂಲಕ ಮಂತ್ರಿ ಗಿರಿ ಪಡೆದುಕೊಳ್ಳಲು ಕೊನೆಯ ಹಂತದ ಕಸರತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ.
ಈಗ ಇರೋ ಸಾಕಷ್ಟು ಸಚಿವರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಲಾಗುತ್ತೆ ಅನ್ನೋ ಮಾತು ಕೂಡ ಕೇಳಿ ಬರ್ತಿದೆ. ಈಗಾಗಲೇ ಸಾಕಷ್ಟು ಶಾಸಕರ ತಮ್ಮ ಮನದಲ್ಲಿರೋ ಆಸೆ ಯನ್ನು ಹೊರಹಾಕಿದ್ದಾರೆ. ಸಲೀಂ ಅಹ್ಮದ್ ನಾನು ಆಕಾಂಕ್ಷಿ ಎಂದಿದ್ದಾರೆ. ನರೇಂದ್ರ ಸ್ವಾಮಿ ಕೂಡಾ ನನಗೆ ಸಚಿವ ಸ್ಥಾನ ಸಿಗಲಿದೆ ಎಂಬ ವಿಶ್ವಾಸ ಹೊಂದಿದ್ದಾರೆ. ಹಾಗೇ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕೂಡ ಈ ಸಲ ನಾನ್ ಪಕ್ಕಾ ಸಚಿವ ಆಗೇ ಆಗ್ತಿನಿ ಅಂತ ಹೇಳಿದ್ದಾರೆ. ಹೀಗೆ ಹೊಸ ಹೊಸ ಮುಖಗಳು ಸಚಿವ ಸ್ಥಾನ ಮೇಲೆ ಕಣ್ಣಿಟ್ಟಿವೆ. ಇದ್ರ ಜೊತೆ ಸಂಪುಟ ಪುನಾರಚನೆ ಆದರೆ ವಾಲ್ಮೀಕಿ ಸಮುದಾಯಕ್ಕೆ ಎರಡು ಸ್ಥಾನ ನೀಡಲೇ ಬೇಕು ಎಂದು ವಾಲ್ಮೀಕಿ ಸಮುದಾಯದ ಶಾಸಕರು ಪಟ್ಟು ಹಿಡಿದಿದ್ದಾರೆ. ಆರೋಪಗಳಿಂದ ಸಚಿವ ಸ್ಥಾನ ಕಳೆದುಕೊಂಡಿದ್ದ ಬಿ ನಾಗೇಂದ್ರ ಅವರು ಮತ್ತೆ ಗೂಟದ ಕಾರು ಏರುವ ವಿಶ್ವಾಸದಲ್ಲಿದ್ದಾರೆ. ಸೋ ಯಾರಿಗೆ ಸಚಿವ ಸ್ಥಾನ ಸಿಗುತ್ತೆ ಅನ್ನೋ ಕುತೂಹಲ ಒಂದ್ಕಡೆಯಾದ್ರೆ, ನಾಳೆಯ ಸಿಎ ಡಿನ್ನರ ಮೀಟಿಂಗ್‌ನಲ್ಲಿ ಏನೆಲ್ಲಾ ಆಗುತ್ತೆ ಕ್ಯೂರಿಯಾಸಿಟಿ ಹೆಚ್ಚಾಗಿದೆ.

ನೋಡಿರಿ

