ಸಿದ್ದರಾಮಯ್ಯನವರ ತುಘಲಕ್ ದರ್ಬಾರ್‌ಗೆ ಬೆದರಿ ಸಚಿವರು ಸತ್ಯ ಹೇಳುತ್ತಿಲ್ಲ..! – ಬಿಜೆಪಿ ಕಿಡಿ

ಸಿದ್ದರಾಮಯ್ಯನವರ ತುಘಲಕ್ ದರ್ಬಾರ್‌ಗೆ ಬೆದರಿ ಸಚಿವರು ಸತ್ಯ ಹೇಳುತ್ತಿಲ್ಲ..! – ಬಿಜೆಪಿ ಕಿಡಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆದು ಭರ್ಜರಿ ಗೆಲುವು ಸಾಧಿಸಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದ್ರೂ ಕೂಡ ಕಾಂಗ್ರೆಸ್ ಗೆ ತಾಪತ್ರಯ ತಪ್ಪಿಲ್ಲ. ಸರ್ಕಾರ ರಚನೆಯಾಗಿ 2 ತಿಂಗಳಲ್ಲೇ ಒಂದಿಲ್ಲೊಂದು ಸವಾಲುಗಳು ಎದುರಾಗುತ್ತಲೇ ಇವೆ. ಈ ಹಿನ್ನೆಲೆ ರಾಜ್ಯ ಬಿಜೆಪಿ ಟ್ವೀಟ್‌ ಮೂಕಲ ಕಾಂಗ್ರೆಸ್‌ ಸರ್ಕಾರವನ್ನು ಲೇವಡಿ ಮಾಡಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್ಸಿಗರು ಅಪರೂಪಕ್ಕೊಮ್ಮೆ ಸತ್ಯ ನುಡಿಯುವುದುಂಟು! ಅದರಲ್ಲಿ ‘ಸಿದ್ದರಾಮಯ್ಯರವರು ಹಿಂದುಳಿದ ವರ್ಗದವರನ್ನು ಕಡೆಗಣಿಸಿದ್ದಾರೆ, ತುಳಿದಿದ್ದಾರೆ’ ಎಂಬ ಬಿ. ಕೆ. ಹರಿಪ್ರಸಾದ್‌ರವರ ಸತ್ಯನುಡಿಗೆ, ಈಗಾಗಲೆ ಮಂತ್ರಿಮಂಡಲದಿಂದ ದೂರವಿಟ್ಟಿರುವ ಅವರನ್ನು ಇದೀಗ ಸಿದ್ದರಾಮಯ್ಯರವರು ಇನ್ನೇನು ಮಾಡುತ್ತಾರೆಂದು ಕಾದು ನೋಡಬೇಕಿದೆ! ಎಂದು ಕಿಡಿಕಾರಿದೆ.

ಇದನ್ನೂ ಓದಿ: ಬಂಡಾಯ ನಾಯಕರಿಗೆ ಬಿಜೆಪಿ ರೆಡ್ ಕಾರ್ಪೆಟ್ – ಮಹಾರಾಷ್ಟ್ರದ ಸಿಎಂ ಪಟ್ಟಕ್ಕೇರುತ್ತಾರಾ ಅಜಿತ್ ಪವಾರ್?!

ತಮ್ಮದೇ ಸರಕಾರದ ‘ಸತ್ಯ’ ಹೊರ ಹಾಕಿದ ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ಸಚಿವ ರಾಜೇಂದ್ರ ಸಿಂಗ್ ಗುಧಾ ವಜಾ..! ಅದೇ ರೀತಿ ತಾವೆಲ್ಲಿ ಹೊರದಬ್ಬಲ್ಪಡುತ್ತೇವೋ ಎಂದು ತಮ್ಮ ಅಧಿಕಾರದ ಉಳಿವಿಗೆ ಸಿದ್ದರಾಮಯ್ಯ ಅವರ ತುಘಲಕ್ ದರ್ಬಾರ್‍‌ಗೆ ಬೆದರಿ ಸತ್ಯ ಹೇಳದೆ ಸುಳ್ಳಿನ ಕೋಟೆ ಕಟ್ಟುತ್ತಿದ್ದಾರೆ ಕಾಂಗ್ರೆಸ್‌ನ ಸಚಿವರು..!

 ಗೃಹ ಸಚಿವ ಪರಮೇಶ್ವರ್

ಸುಳ್ಳು ಬಂಧಿತರು ಉಗ್ರರು ಎಂದು ಹೇಳಲಾಗದು..!

ಸತ್ಯ ಐವರು ಭಯೋತ್ಪಾದಕರಿಂದ ಬೆಂಗಳೂರು ಸ್ಪೋಟಕ್ಕೆ ಸಂಚು..!

ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ

 ಸುಳ್ಳು ಸರ್ಕಾರದ ವಿರುದ್ಧ ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ..!

ಸತ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧವಿರುವ ಸಾಕ್ಷಿಗಳು ಹೊರ ಬೀಳುವ ಭಯ..!

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

ಸುಳ್ಳು ಶಕ್ತಿ ಯೋಜನೆಯಿಂದಾಗಿ ಸಾರಿಗೆ ಆದಾಯ ಹೆಚ್ಚಳ..!

ಸತ್ಯ ಹತ್ತಿರದ ಪ್ರಯಾಣಕ್ಕೆ ದೂರದ ಟಿಕೆಟ್ ನೀಡಿ ನಿಗಮಗಳಿಂದಲೇ ವಂಚನೆ..!

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಸುಳ್ಳು  ಗೃಹ ಲಕ್ಷ್ಮಿ ಯೋಜನೆಗೆ ಉಚಿತವಾಗಿ ಮಹಿಳೆಯರು ಅರ್ಜಿ ಹಾಕಬಹುದು..!

ಸತ್ಯ ಅನಧಿಕೃತವಾಗಿ ದಲ್ಲಾಳಿಗಳಿಗೆ ಲಾಗಿನ್ ಐಡಿ ನೀಡಿ ಹಣ ವಸೂಲಿ ಜತೆ ಸರ್ವರ್ ಶಾಕ್..!

ಕೃಷಿ ಸಚಿವ ಚೆಲುವರಾಯಸ್ವಾಮಿ

ಸುಳ್ಳು ರೈತರಿಗೆ ಪೂರ್ಣ ಸ್ಪಂದನೆ ..!

ಸತ್ಯ ಸ್ಪಂದನೆ ಆತ್ಮಹತ್ಯೆಗೆಯೇ? ಕೇವಲ 45 ದಿನಗಳಲ್ಲಿ 45ಕ್ಕೂ ಹೆಚ್ಚು ರಾಜ್ಯದ ರೈತರ ಆತ್ಮಹತ್ಯೆ..!

ಎಲ್ಲಾ ಇಲಾಖೆಯ ಸಚಿವರದ್ದು ಇದೇ ಸೋಗು. ಸುಳ್ಳುಗಳ ಸೃಷ್ಟಿಗೆ ಕೆಲ ಸಚಿವರಂತೂ ಪ್ರತ್ಯೇಕ ಟೂಲ್ ಕಿಟ್ ಇಟ್ಟುಕೊಂಡಿದ್ದಾರೆ! ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

ಜನತೆಯ ಕಿವಿಯ ಮೇಲೆ ಸದಾ ಹೂವಿಡುವ ಕಾಂಗ್ರೆಸ್, ತನ್ನ ಪರಂಪರೆಯನ್ನು ರಾಜ್ಯದಲ್ಲಿ ‌ಮುಂದುವರೆಸಿದೆ. ತಮ್ಮ ಸರ್ಕಾರದ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಹಾಗೂ ಬೆಲೆಯೇರಿಕೆಯಿಂದ ತತ್ತರಿಸಿರುವ ರಾಜ್ಯದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕನಕಪುರದವರು ಸಿಂಗಾಪುರ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.

ಈ ತುಘಲಕ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಗ್ಯಾರಂಟಿಗಳ ವಿಷಯದಲ್ಲಿ ಉಲ್ಟಾ ಹೊಡೆದಿದೆ. ವರ್ಗಾವಣೆ ದಂಧೆಯಲ್ಲಿ ನಿರತವಾಗಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಹಿಂದೂ ಕಾರ್ಯಕರ್ತರ, ಜೈನ ಮುನಿಗಳ ಹತ್ಯೆ, ಪೊಲೀಸರ ಮೇಲೆ ಹಲ್ಲೆ, ಸಾಲು ಸಾಲು ಅತ್ಯಾಚಾರ ಹೀಗೆ ತಾನು ಆಡಳಿತವನ್ನು ನಿಭಾಯಿಸಲು ಅಸಮರ್ಥ ಎಂಬುದನ್ನು ಶುರುವಾತಿನಲ್ಲಿಯೇ ನಿರೂಪಿಸಿದೆ ಎಂದು ಬಿಜೆಪಿ ಕಿಡಿಕಾರಿದೆ.

ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂಬಂತೆ  ಅಧಿಕಾರಕ್ಕೆ ಬಂದ ಎರಡು ತಿಂಗಳೊಳಗೆ ಸರ್ಕಾರಕ್ಕೆ ರಾಜ್ಯಾದ್ಯಂತ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ಬಡ, ಮಧ್ಯಮ, ಶ್ರಮಿಕ ವರ್ಗದವರು ಹೋದಲ್ಲಿ ಬಂದಲ್ಲಿ ಸರ್ಕಾರವನ್ನು ವಾಚಾಮಗೋಚರವಾಗಿ ನಿಂದಿಸಲು ಆರಂಭಿಸಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ತಮ್ಮ ಭವಿಷ್ಯ ಮಂಕಾಗಲಿದೆ ಎಂಬ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಈಗ ಸಿಂಗಾಪುರದ ನಾಟಕ ಆರಂಭಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದೆ.

ಅಷ್ಟಕ್ಕೂ ಈ ಸರ್ಕಾರವನ್ನು ಬೀಳಿಸಲು ಹೊರಗಿನವರೇ ಬೇಕಾಗಿಲ್ಲ. ಅಸಲಿಗೆ ಸರ್ಕಾರದ ಪ್ರಮುಖ ಭಾಗವಾಗಿರುವವರಿಗೆ ಈ ಸರ್ಕಾರ ಬೇಕಾಗಿಲ್ಲ. ಸಚಿವರಾದ ಜಮೀರ್ ಅಹಮದ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಗಟ್ಟಿಯಾಗಿ ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುತ್ತಾರೆ ಎಂದು ಹೇಳುವ ಹಾಗಿಲ್ಲ. ಹೇಳಿದರೆ ಡಿ.ಕೆ.ಶಿವಕುಮಾರ್ ಬಣ ಮುಗಿಬೀಳುತ್ತದೆ ಎಂದು ಬಿಜೆಪಿ ಆರೋಪಿಸಿದೆ.

ಸಿದ್ದರಾಮಯ್ಯರವರ ವಿರುದ್ಧ ಮಾತನಾಡುವ ಹೊಸ ಗುಂಪಿನ ನಾಯಕ ಹರಿಪ್ರಸಾದ್ ಬಗ್ಗೆ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಸಹ ನೀಡದೇ ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ವರ್ತಿಸುತ್ತಾರೆ. ಈ ಸರಕಾರ ಉಳಿಯುವ ಯಾವ ಲಕ್ಷಣವೂ ಇಲ್ಲ ಮತ್ತದಕ್ಕೆ ಹೊರಗಿನವರ ಶ್ರಮದ ಅಗತ್ಯವೇ ಇಲ್ಲ. ಪರಸ್ಪರ ಗುದ್ದಾಡಿಕೊಳ್ಳುತ್ತಿರುವ ಒಳಗಿನ ನಾಲ್ಕು ಗುಂಪುಗಳೇ ಈ ಸರಕಾರವನ್ನು ಮುಗಿಸಲಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.

suddiyaana