ಸಿಎಂ ರೇಸ್ ನಲ್ಲಿರುವ ಸಿದ್ದುಗೇ ಸಿಗ್ತಿಲ್ವಾ ಕ್ಷೇತ್ರ? – ಆಯ್ಕೆಗಳೆಷ್ಟು.. ಅಂತಿಮ ಯಾವುದು..?

ಸಿಎಂ ರೇಸ್ ನಲ್ಲಿರುವ ಸಿದ್ದುಗೇ ಸಿಗ್ತಿಲ್ವಾ ಕ್ಷೇತ್ರ? – ಆಯ್ಕೆಗಳೆಷ್ಟು.. ಅಂತಿಮ ಯಾವುದು..?

ಜಾತಿ ಲೆಕ್ಕಾಚಾರ ವರ್ಕೌಟ್ ಆಗ್ತಿಲ್ಲ. ಆಪ್ತರ ಸಲಹೆ, ಬೆಂಬಲಿಗರ ಬಲ ಧೈರ್ಯ ತುಂಬುತ್ತಿಲ್ಲ. ಸಿಎಂ ಆಗಿ  5 ವರ್ಷ ಆಡಳಿತ ನಡೆಸಿದ್ರೂ ಸಿದ್ದರಾಮಯ್ಯಗೆ ಆತಂಕ ತಪ್ಪಿಲ್ಲ. ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ಬೇಕು ಅನ್ನೋ ಸ್ಪಷ್ಟತೆಯೂ ಇಲ್ಲ..

ಇದನ್ನೂ ಓದಿ : ‘ಮುಂದಿನ ಸಲವೂ ನಾನೇ ಮುಖ್ಯಮಂತ್ರಿ’ ಎಂದ ಬೊಮ್ಮಾಯಿ – ಹೈಕಮಾಂಡ್​ ನಿಂದ ಸಿಕ್ಕಿತಾ ಸಮ್ಮತಿ?

ಜನವರಿ ತಿಂಗಳಲ್ಲೇ ನಾನು ಕೋಲಾರದಿಂದ ಸ್ಪರ್ಧೆ ಮಾಡ್ತೇನೆ ಅಂತಾ ಘೋಷಿಸಿದ್ದ ಸಿದ್ದು ಈಗ ಅಲ್ಲಿಂದ ಒಂದು ಹೆಜ್ಜೆ ಹಿಂತೆಗೆದಿದ್ದಾರೆ. ಕೋಲಾರ ನಾಯಕರ ಭಿನ್ನಮತ, ಸರ್ವೇಯಲ್ಲಿನ ಹಿನ್ನಡೆ, ಹೈಕಮಾಂಡ್ ಸೂಚನೆ ಮೇರೆಗೆ ಸಿದ್ದು ಮನಸ್ಸು ಬದಲಿಸಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ನಿನ್ನೆ ಕೋಲಾರದ ಅಭಿಮಾನಿಗಳು ಮತ್ತು ಬೆಂಬಲಿಗರು ನೀವು ಇಲ್ಲಿಂದಲೇ ಸ್ಪರ್ಧೆ ಮಾಡ್ಬೇಕು ಬೆಂಗಳೂರಿನ ನಿವಾಸದೆದುರು ಪ್ರತಿಭಟನೆ ನಡೆಸಿದ್ರು. ಇಷ್ಟೆಲ್ಲಾ ಆದ್ರೂ ಕ್ಷೇತ್ರದ ಆಯ್ಕೆ ಕಗ್ಗಂಟಾಗಿ ಉಳಿದಿದೆ. ವರುಣ, ಬಾದಾಮಿ, ಚಾಮರಾಜಪೇಟೆ, ಕುಷ್ಟಗಿ ಹೀಗೆ ಹಲವು ಹೆಸರುಗಳು ಚಾಲ್ತಿಯಲ್ಲಿದ್ರೂ ಕೂಡ ಝೀರೋ ರಿಸ್ಕ್ ಇರುವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ. ಪುತ್ರ ಯತೀಂದ್ರನಿಗೆ ವರುಣಾ ಕ್ಷೇತ್ರ ಬಿಟ್ಟುಕೊಟ್ಟ ಬಳಿಕ ಸಿದ್ದುಗೆ ಕ್ಷೇತ್ರದ ಆಯ್ಕೆಗೆ ಸವಾಲಾಗಿ ಪರಿಣಮಿಸಿದೆ.

suddiyaana