ಸಿದ್ದರಾಮಯ್ಯ ಸಿಟ್ಟಿನಿಂದಾಗಿ ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ಸಿಕ್ಕಿಲ್ವಾ?

ಸಿದ್ದರಾಮಯ್ಯ ಸಿಟ್ಟಿನಿಂದಾಗಿ ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ಸಿಕ್ಕಿಲ್ವಾ?

ಮೈಸೂರಿನ ನರಸಿಂಹರಾಜ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ತನ್ವೀರ್‌ ಸೇಠ್‌ಗೂ ಮಂತ್ರಿಗಿರಿ ಸಿಕ್ಕಿಲ್ಲ. ಮಂತ್ರಿಗಿರಿ ಕೈತಪ್ಪಿದವರಲ್ಲಿ ಇನ್ನೊಬ್ಬ ಪ್ರಮುಖ ನಾಯಕ, ತನ್ವೀರ್‌ ಸೇಠ್‌. ಮೈಸೂರಿನ ನರಸಿಂಹರಾಜ ಕ್ಷೇತ್ರದಿಂದ ಸತತ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ತನ್ವೀರ್‌ ಸೇಠ್‌ ಕೂಡ ಸಹಜವಾಗಿಯೇ ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ಹಿಂದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಉತ್ತಮ ಕಾರ್ಯನಿರ್ವಹಣೆ ಮಾಡಿದ್ದರು.. ಆದರೆ ಮೊದಲಹಂತದಲ್ಲಿ ರಹೀಂ ಖಾನ್ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದು ಮತ್ತು ಮೈಸೂರಿನಲ್ಲಿ ಸಿಎಂ ಆಗಿ  ಸಿದ್ದರಾಮಯ್ಯ ಮಾತ್ರವಲ್ಲದೆ ಸಚಿವ ಸ್ಥಾನಕ್ಕೆ ಡಾ.ಹೆಚ್‌.ಸಿ.ಮಹದೇವಪ್ಪ ಮತ್ತು ಪಿರಿಯಾಪಟ್ಟಣ ಶಾಸಕ ಕೆ.ವೆಂಕಟೇಶ್‌ ಆಯ್ಕೆಯಾಗಿದ್ದು, ತನ್ವೀರ್‌ ಸೇಠ್‌ ಅವರಿಗೆ ಅವಕಾಶದ ಬಾಗಿಲು ಮುಚ್ಚುವಂತೆ ಮಾಡಿದೆ.

ಇದನ್ನೂ ಓದಿ:  24 ಶಾಸಕರು ಸಚಿವರಾಗಿ ಪ್ರಮಾನವಚನ ಸ್ವೀಕಾರ – ಯಾವ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ?  

ಇದು ಮೇಲ್ನೋಟಕ್ಕೆ ಕಾಣುವ ರಾಜಕೀಯ ಕಾರಣಗಳಾಗಿದ್ದರೆ, ಆಂತರಿಕವಾಗಿ ಸಿದ್ದರಾಮಯ್ಯ ಅವರಿಗೆ ತನ್ವೀರ್‌ ಸೇಠ್‌ ಮೇಲೆ ಅಂತಹ ಒಲವೇನೂ ಇಲ್ಲ ಎಂಬುದೂ ಅಷ್ಟೇ ಪ್ರಬಲ ಕಾರಣ ಅನ್ನೋದನ್ನು ಮರೀಬಾರದು..  ಹಿಂದೆ 2013ರಲ್ಲೂ ಸಿದ್ದರಾಮಯ್ಯ ಆರಂಭದಲ್ಲಿ ತನ್ವೀರ್‌ ಸೇಠ್‌ ಅವರನ್ನು ಮಂತ್ರಿ ಮಾಡಿರಲಿಲ್ಲ.. ಮುಂದೆ ಕ್ಯಾಬಿನೆಟ್‌ ಪುನರ್‌ ರಚನೆ ವೇಳೆ ತನ್ವೀರ್ ಸೇಠ್‌ಗೆ ಅವಕಾಶ ನೀಡಲಾಗಿತ್ತು.. ಇದಾದ ನಂತರ 2021ರಲ್ಲಿ ನಡೆದ ಮೈಸೂರು ಮೇಯರ್‌ ಚುನಾವಣೆಯ ವೇಳೆ ತನ್ವೀರ್‌ ಸೇಠ್‌ ತಾಳಿದ್ದ ನಿಲುವು ಸಿದ್ದರಾಮಯ್ಯ ಕೆರಳಿ ಕೆಂಡವಾಗುವಂತೆ ಮಾಡಿತ್ತು.. ಅಂದು ಕಾಂಗ್ರೆಸ್‌ಗೆ ಮೇಯರ್‌ ಸ್ಥಾನ ಬಿಟ್ಟುಕೊಡುವುದಿದ್ದರೆ ಮಾತ್ರ ಜೆಡಿಎಸ್‌ಗೆ ಬೆಂಬಲಿಸಿ ಎಂದು ಸಿದ್ದರಾಮಯ್ಯ ಸ್ಪಷ್ಟ ಸೂಚನೆ ಕೊಟ್ಟಿದ್ದರು. ಹಾಗಿದ್ದರೂ ಕಡೇ ಕ್ಷಣದಲ್ಲಿ ಜೆಡಿಎಸ್‌ಗೆ ಮೇಯರ್‌ ಸ್ಥಾನ ಬಿಟ್ಟುಕೊಟ್ಟು, ಕಾಂಗ್ರೆಸ್‌ ಕೇವಲ ಉಪಮೇಯರ್‌ ಸ್ಥಾನಕ್ಕೆ ಒಪ್ಪಿಕೊಳ್ಳಲು ತನ್ವೀರ್‌ ಸೇಠ್‌ ಕಾರಣಕರ್ತರಾಗಿದ್ದರು.. ಇದರಿಂದಾಗಿ ತನ್ವೀರ್‌ ಸೇಠ್‌ಗೆ ಕೆಪಿಸಿಸಿಯಿಂದ ಶೋಕಾಸ್‌ ನೋಟಿಸ್‌ ಕೂಡ ರವಾನೆಯಾಗಿತ್ತು. ತನ್ವೀರ್‌ ಸೇಠ್‌ ವಿರುದ್ಧ ಸಿದ್ದರಾಮಯ್ಯ ಸಿಕ್ಕಾಪಟ್ಟೆ ಸಿಟ್ಟಾಗಿದ್ದರು.. ನಂತರ ಸಂಬಂಧ ಸ್ವಲ್ಪಮಟ್ಟಿಗೆ ಸುಧಾರಿಸಿದೆಯಾದ್ರೂ, ಜಮೀರ್‌ ಅಹಮದ್‌ ಖಾನ್‌ಗೆ ಮಂತ್ರಿಗಿರಿ ಕೊಡಿಸಬೇಕು ಎಂದು ಹಠ ಹಿಡಿದಂತೆ ತನ್ವೀರ್‌ ಸೇಠ್‌ಗೆ ಸಚಿವ ಸ್ಥಾನ ಕೊಡಿಸಲು ಸಿದ್ದರಾಮಯ್ಯ ಇಂಟ್ರೆಸ್ಟ್‌ ತೋರಿಸಿಲ್ಲ. ಹಾಗಂತ ಕಾಂಗ್ರೆಸ್‌ಗೆ ಈಗ ಪೂರ್ಣ ಬಹುಮತದ ಸರ್ಕಾರ ಇರೋದ್ರಿಂದ ಎರಡೂವರೆ ವರ್ಷದ ನಂತರ ಸಂಪುಟಕ್ಕೆ ಸರ್ಜರಿ ಆಗುವ ಸಾಧ್ಯತೆ ಇದ್ದೇ ಇದೆ.. ಆಗ ತನ್ವೀರ್‌ ಸೇಠ್‌ ಮತ್ತು ಲಕ್ಷ್ಮಣ ಸವದಿ ಸೇರಿದಂತೆ ಈಗ ಅವಕಾಶ ವಂಚಿತರಾಗಿರುವ ಶಾಸಕರು ಮಂತ್ರಿಗಳಾಗುವ ಸಾಧ್ಯತೆ ಇದ್ದೇ ಇದೆ..

suddiyaana