‘ಮುಡಾ ಸಿಬಿಐಗೆ, ಸಿದ್ದು ಜೈಲಿಗೆ’ – ಟಗರಿಗೆ ಗುಮ್ಮಿದ ರಾಜಾಹುಲಿ
ಸಂಡೂರಿನಲ್ಲಿ ಸತ್ಯ ಹೇಳಿದ ಸಿಎಂ!
ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುತ್ತಾ? ಆಗಲ್ವಾ? ಅನ್ನೊ ಗೊಂದಲ್ಲೇ ದಿನ ಕಳೆಯುತ್ತಿದೆ. ಈ ಗೊಂದಲಕ್ಕೆ ಕಾರಣವೇ ಸಿಎಂ ಸಿದ್ದರಾಮಯ್ಯ ಮೇಲೆ ಬಂದಿರೋ ಮುಡಾ ಆರೋಪ.. ಸಿದ್ದರಾಮಯ್ಯ ಮೇಲೆ ಎಫ್ಐಆರ್ ದಾಖಲಾಗುತ್ತಿದ್ದಂತೆ ವಿರೋಧ ಪಕ್ಷದವರು ಸಿದ್ದು ರಾಜೀನಾಮೆಗೆ ಆಗ್ರಹಿಸಿದ್ರೆ, ಸ್ವಪಕ್ಷದಲ್ಲಿ ನಾನೇ ಮುಂದಿನ ಸಿಎಂ ಅನ್ನೋ ಮಾತು ಕೈ ನಾಯಕರಿಂದ ಕೇಳಿ ಬಂದಿತ್ತು. ಆದ್ರೆ ಮತ್ತೆ ನಾಯಕತ್ವ ಬದಲಾವಣೆ ಕುರಿತು ರಾಜಕೀಯ ವಲಯದಲ್ಲಿ ಸದ್ದು ಮಡುತ್ತಿದೆ.
ಇದನ್ನೂ ಓದಿ: ಹರಿಣಗಳ ಬೆಂಡೆತ್ತಿದ ಭಾರತ – 10 ಸಿಕ್ಸ್.. 7 ಫೋರ್.. ಸಂಜು ಹೀರೋ
ಮುಂದಿನ ಮೂರೂವರೆ ವರ್ಷ ನಾನೇ ಸಿಎಂ
ಸಂಡೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಿದ್ದರಾಮಯ್ಯ ಮುಂದಿನ ಮೂರೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಸುತ್ತೇನೆ. ಸಿದ್ದರಾಮಯ್ಯ ಇರುವವರೆಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಬಿಜೆಪಿಯವರಿಗೆ ಗೊತ್ತಾಗಿದೆ. ಹೀಗಾಗಿ ನನ್ನನ್ನು ಮುಗಿಸಲು ಸಿಬಿಐ, ಇಡಿ, ಐಟಿಯನ್ನು ಬಳಸಿಕೊಂಡು ಷಡ್ಯಂತ್ರ ಮಾಡುತ್ತಿದ್ದಾರೆಂದು ಹೇಳಿದ್ದಾರೆ. ಆದರೆ, ನಾಯಕತ್ವ ಬದಲಾವಣೆ ವಿಚಾರವನ್ನು ಸಿದ್ದರಾಮಯ್ಯ ಅವರು ಮತ್ತೊಮ್ಮೆ ಪ್ರಸ್ತಾಪಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ತಮ್ಮ ಸ್ಥಾನವನ್ನ ಬದ್ರ ಪಡಿಸಿಕೊಳ್ಳೋಕೆ ಹೀಗೆ ಹೇಳಿದ್ರಾ ಅನ್ನೋ ಅನುಮಾನ ಶುರುವಾಗಿದೆ.
ಮುಡಾ ಕೇಸ್ ಸಿಬಿಐಗೆ ವಹಿಸಿದ್ರೆ ಸಿದ್ದು ಜೈಲಿಗೆ!
ಸಿದ್ದರಾಮಯ್ಯ ನಾನೇ ಮೂರುವರೆ ವರ್ಷ ಸಿಎಂ ಅಂದ್ರೆ ಮಾಜಿ ಸಿಎಂ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ಮುಡಾ ಹಗರಣವನ್ನು ಲೋಕಾಯುಕ್ತದಿಂದ ಸಿಬಿಐ ತನಿಖೆಗೆ ವಹಿಸಬೇಕು, ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ಜೈಲಿಗೆ ಹೋಗುತ್ತಾರೆ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಮುಡಾ ಹಗರಣ ಈಗಾಗಲೇ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಸಿಬಿಐ ತನಿಖೆ ಆಗುವುದರಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಲ್ಲ ನಾಳೆ ರಾಜೀನಾಮೆ ನೀಡಿ ಜೈಲಿಗೆ ಹೋಗುವುದು ನಿಶ್ಚಿತ ಎಂದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನ ನೀಡಿದ ತೆರಿಗೆ ಹಣವನ್ನು ಲೂಟಿ ಮಾಡುತ್ತಾ, ಜನ ಹಿತವನ್ನು ಮರೆಯುತ್ತಿದೆ ಎಂದಿದ್ದಾರೆ. ಒಂದ್ಕಡೆ ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ ಬಿಜೆಪಿ ನಾಯಕರು ಹೇಳುತ್ತಿದ್ದರೆ, ನಾನೇ ಮೂರವರೆ ವರ್ಷ ಸಿಎಂ ಆಗಿರ್ತಿನಿ ಅಂತಾ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಯಾರ ಮಾತು ಸತ್ಯವಾಗುತ್ತೆ ಅನ್ನೋದು ಗೊತ್ತಾಗೋಕೆ ಮತ್ತಷ್ಟು ದಿನ ಕಾಯಲೇಬೇಕು.