ಧ್ರುವನಾರಾಯಣ ಪಾರ್ಥಿವ ಶರೀರ ಕಂಡು ಮೌನವಾದ ಸಿದ್ದರಾಮಯ್ಯ – ಬಿಕ್ಕಿ ಬಿಕ್ಕಿ ಅತ್ತ ಬೆಂಬಲಿಗರು!

ಧ್ರುವನಾರಾಯಣ ಪಾರ್ಥಿವ ಶರೀರ ಕಂಡು ಮೌನವಾದ ಸಿದ್ದರಾಮಯ್ಯ – ಬಿಕ್ಕಿ ಬಿಕ್ಕಿ ಅತ್ತ ಬೆಂಬಲಿಗರು!

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಅಗಲಿಕೆಗೆ ಕಾಂಗ್ರೆಸ್ ನಾಯಕರು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ತಮ್ಮ ಪಕ್ಷದ ಪ್ರಭಾವಿ ನಾಯಕನನ್ನ ಕಳೆದುಕೊಂಡಿರೋ ಕಾಂಗ್ರೆಸ್​ಗೆ ದೊಡ್ಡ ಆಘಾತವೇ ಆಗಿದೆ.

ಧ್ರುವನಾರಾಯಣ್​ರ ಅಗಲಿಕೆ ಆಘಾತದಲ್ಲಿರುವ ವಿಪಕ್ಷನಾಯಕ ಸಿದ್ದರಾಮಯ್ಯ ಅವರ ಮನೆಗೆ ತೆರಳಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಧ್ರುವನಾರಾಯಣರ ಪುತ್ರ ಮತ್ತು ಪತ್ನಿಯೊಂದಿಗೆ ಮಾತುಕತೆ ನಡೆಸಿ ಸಾಂತ್ವನ ಹೇಳಿದ್ದಾರೆ.ಈ ವೇಳೆ ಸಿದ್ದರಾಮಯ್ಯ ಜೊತೆಗೆ ಸಲೀಂ ಅಹ್ಮದ್ ಮತ್ತು ಸಿದ್ದರಾಮಯ್ಯ ಪುತ್ರ ಶಾಸಕ ಯತೀಂದ್ರ ಸಿದ್ದರಾಮಯ್ಯ ಇದ್ದರು.

ಇದನ್ನೂ ಓದಿ : ಧ್ರುವನಾರಾಯಣ್ ಅಗಲಿಕೆಗೆ ಕಣ್ಣೀರಿಟ್ಟ ಡಿ.ಕೆ ಶಿವಕುಮಾರ್ – ಪಕ್ಷಾತೀತವಾಗಿ ನಾಯಕರ ಸಂತಾಪ..!

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ (R Dhruvanarayana) ಅವರ ಸಾವಿಗೆ ಬೆಳಗ್ಗೆ ದಾವಣಗೆರೆಯಲ್ಲಿ ಶೋಕ ವ್ಯಕ್ತಪಪಡಿಸಿದ ಸಿದ್ದರಾಮಯ್ಯ (Siddaramaiah) ಮಧ್ಯಾಹ್ನದ ಹೊತ್ತಿಗೆ ಮೈಸೂರಲ್ಲಿರುವ ಮೃತರ ಮನೆಗೆ ತಲುಪಿ ಅಂತಿಮ ದರ್ಶನ ಪಡೆದರು. ನಂತರ ಸಿದ್ದರಾಮಯ್ಯ ಕುಟುಂಬದ ಸದಸ್ಯರ ಜೊತೆ ಕೂತು ಮಾತಾಡುತ್ತಾ ಅವರಿಗೆ ಸಾಂತ್ವನ ಹೇಳಿದರು. ಧ್ರುವನಾರಾಯಣ್ ಮೃತದೇಹ ನೊಡಿ ಮೌನವಾಗಿ ನಿಂತಿದ್ದ ಸಿದ್ದು ಬಳಿಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಸಿದ್ದರಾಮಯ್ಯರನ್ನ ಕಂಡೊಡನೆ ಧ್ರುವನಾರಾಯಣ್ ಆಪ್ತರ ಆಕ್ರಂದನ ಮುಗಿಲು ಮುಟ್ಟಿತ್ತು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ (R Dhruvanarayana) ಅವರ ಸಾವು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ ಇಡೀ ಸಮಾಜಕ್ಕೆ ಬಹುದೊಡ್ಡ ನಷ್ಟ ಎಂದು ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.  ಧ್ರುವನಾರಾಯಣ ಬಹಳ ಚಿಕ್ಕ ವಯಸ್ಸಿನವರಾಗಿದ್ದರು, ಖಂಡಿತ ಸಾಯುವ ವಯಸ್ಸಲ್ಲ, ಪಾದರಸದಂತೆ ಕ್ಷೇತ್ರದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಓಡಾಡಿಕೊಂಡಿದ್ದರು ಎಂದು ಹೇಳಿದ ಸಿದ್ದರಾಮಯ್ಯ, ಅವರಿಗೆ ಯಾವುದೇ ಕಾಯಿಲೆ ಕೂಡ ಇರಲಿಲ್ಲ. ಅವರ ಸಾವು ಅದರಲ್ಲೂ ಚುನಾವಣೆ ಹತ್ತಿರ ಬಂದಿರುವಾಗ ಕಣ್ಮರೆಯಾಗಿರುವುದು ಪಕ್ಷದ ಮೇಲೆ ದೊಡ್ಡ ಪ್ರಭಾವ ಬೀರಿದೆ. ಹಳೆ ಮೈಸೂರು ಭಾಗದಲ್ಲಿ ಅವರು ಪ್ರಮುಖ ದಲಿತ ನಾಯಕರಾಗಿದ್ದರು (Dalit leader) ಎಂದು ಸಿದ್ದರಾಮಯ್ಯ ಭಾವುಕರಾಗಿ ಹೇಳಿದರು.

suddiyaana