‘ವಿಧಾನಸೌಧದ ಗೋಡೆಗೆ ಕಿವಿ ಇಟ್ರೆ ಲಂಚ ಲಂಚ ಅನ್ನುತ್ತೆ’ – ಬಿಜೆಪಿಗೆ ಸಿದ್ದು ಸಖತ್ ಟಾಂಗ್!

‘ವಿಧಾನಸೌಧದ ಗೋಡೆಗೆ ಕಿವಿ ಇಟ್ರೆ ಲಂಚ ಲಂಚ ಅನ್ನುತ್ತೆ’ – ಬಿಜೆಪಿಗೆ ಸಿದ್ದು ಸಖತ್ ಟಾಂಗ್!

ಕೋಲಾರ :ರಾಜ್ಯ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರೋ ಪ್ರಜಾಧ್ವನಿ ಯಾತ್ರೆ ಇವತ್ತು ಕೋಲಾರದಲ್ಲಿ ನಡೆಯಿತು. ಕೋಲಾರ ಕ್ಷೇತ್ರದಿಂದ ವಿಪಕ್ಷನಾಯಕ ಸಿದ್ದರಾಮಯ್ಯ ಸ್ಪರ್ಧೆ ಮಾಡೋದಾಗಿ ಘೋಷಣೆ ಮಾಡಿರೋದ್ರಿಂದ ಇವತ್ತಿನ ಯಾತ್ರೆ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಕೋಲಾರ ಹೊರವಲಯದ ಟಮಕ ಬಳಿ ನಡೆದ ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಘಟಾನುಘಟಿಗಳು ಭಾಗಿಯಾಗಿದ್ರು.

ಇದನ್ನೂ ಓದಿ : ‘ಸಿದ್ದರಾಮಯ್ಯ ಸ್ಪರ್ಧೆಗೆ ಪಾಕಿಸ್ತಾನವೇ ಸೇಫ್’ – ಸಿ.ಟಿ ರವಿ ವಾಗ್ದಾಳಿ..!

ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ತಿರುಗಿ ಬಿದ್ದಿದ್ರು. ಕೋಲಾರದಲ್ಲಿ ಆರಕ್ಕೆ ಆರು ಕ್ಷೇತ್ರಗಳನ್ನ ಗೆಲ್ಲುವ ವಾತಾವರಣ ನಿರ್ಮಾಣವಾಗಲಿ. ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸಲು ಪ್ರಾರಂಭವಾಗಿದೆ. ಹೀಗಾಗಿ ಬಿಜೆಪಿಯವ್ರು ಹೆದರಿಕೊಂಡು ಪ್ರಧಾನಿ ಮೋದಿಯನ್ನ ವಾರಕ್ಕೊಂದು ಸಲ ಕರೆಸಿಕೊಳ್ತಿದ್ದಾರೆ. ಯಾಕಂದ್ರೆ ಅವ್ರ ಬಂಡವಾಳ ಮೋದಿ ಬಿಟ್ರೆ ಬೇರೆ ಯಾರು ಇಲ್ಲ. ಮೋದಿಯವರು ಕರ್ನಾಟಕದಲ್ಲಿ ಮತ್ತೆ ಅಧಿಕಾರ ಕೊಡಿಸ್ತಾರೆ ಅನ್ನೋ ಭ್ರಮೆಯಲ್ಲಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ 100 ಸಲ ಕರ್ನಾಟಕಕ್ಕೆ ಬಂದು ಹೋದ್ರೂ, ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು ಸತ್ಯವೋ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ ಅಂದ್ರು.

ರಾಜ್ಯದ ಜನ ಬಿಜೆಪಿ ಸರ್ಕಾರದ ಆಡಳಿತದಿಂದ ನೊಂದಿದ್ದಾರೆ. ರಾಜ್ಯದಲ್ಲಿ ಲಂಚ ಕೊಡದೆ ಯಾವ ಕೆಲ್ಸನೂ ಆಗಲ್ಲ. ರಾಜ್ಯದ ಇತಿಹಾಸದಲ್ಲೇ ಬಿಜೆಪಿಯಷ್ಟು ಭ್ರಷ್ಟಾಚಾರ ಯಾರೂ ಮಾಡಿಲ್ಲ ಅಂದ್ರು. ಹಾಗೇ 40 ಪರ್ಸೆಂಟ್ ಕಮಿಷನ್ ಬಗ್ಗೆಯೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ನಾನು ತಿನ್ನಲ್ಲ, ತಿನ್ನೋಕೆ ಬಿಡಲ್ಲ ಅಂತಾ ಮೋದಿ ಹೇಳ್ತಾರೆ. ಆದ್ರೆ ಯಾಕೆ ಕ್ರಮ ಕೈಗೊಂಡಿಲ್ಲ. ಅಸೆಂಬ್ಲಿಯಲ್ಲಿ ಈ ಬಗ್ಗೆ ಚರ್ಚೆ ಮಾಡಲು 3 ಸಲ ಪ್ರಯತ್ನ ಮಾಡಿದೆ. ಆದ್ರೆ ಮೂರು ಸಲವೂ ಪ್ರಸ್ತಾಪ ಮಾಡಲು ಅವಕಾಶ ಕೊಡ್ಲಿಲ್ಲ. ಹೋಟೆಲ್​ಗಳಲ್ಲಿ ತಿಂಡಿಗಳಿಗೆ ರೇಟ್ ಹಾಕೋ ಥರ ವಿಧಾನಸೌಧದಲ್ಲಿ ಇಷ್ಟಿಷ್ಟು ಲಂಚ ಅಂತಾ ಬೋರ್ಡ್​ ಹಾಕಿದ್ದಾರೆ. ವಿಧಾನಸೌಧಕ್ಕೆ ಹೋಗಿ ಗೋಡೆಗೆ ಕಿವಿ ಕೊಟ್ರೆ ಲಂಚ ಲಂಚ ಅಂತಾ ಪಿಸುಗುಟ್ಟುತ್ತೆ ಎಂದು ವ್ಯಂಗ್ಯವಾಡಿದ್ರು.

ನಾನು 13 ಬಜೆಟ್ ಮಂಡಿಸಿದ್ದೇನೆ. 12 ವರ್ಷ ಹಣಕಾಸು ಮಂತ್ರಿಯಾಗಿದ್ದೆ. ಯಾವೊಬ್ಬ ಗುತ್ತಿಗೆದಾರ ನಾನು ಲಂಚ ತಗೊಂಡಿದ್ದೆ ಅಂತೇಳಿದ್ರೆ ರಾಜಕೀಯ ನಿವೃತ್ತಿ ಪಡೀತಿನಿ. ಆದ್ರೆ ಬಿಜೆಪಿಯವರು ಲಜ್ಜೆಗೆಟ್ಟ ಜನ. ಹೀಗಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು ಅಂದ್ರು. ಪ್ರಧಾನಿ ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡೋದಾಗಿ ಹೇಳಿದ್ರು. ಆದ್ರೆ ಇರೋ ಕಂಪನಿಗಳನ್ನೇ ಮಾರಾಟ ಮಾಡ್ತಿದ್ದಾರೆ. ಉದ್ಯೋಗ ಕೇಳಿದ್ರೆ ಪಕೋಡಾ ಮಾರೋಕೆ ಹೋಗಿ ಅಂತಾರೆ ಎಂದು ಕಿಡಿ ಕಾರಿದ್ರು. ಇದೇ ವೇಳೆ ಜೆಡಿಎಸ್ ಬಗ್ಗೆಯೂ ಮಾತನಾಡಿದ ಸಿದ್ದು, ಜೆಡಿಎಸ್​ನವ್ರು ಗೆದ್ದೆತ್ತಿನ ಬಾಲ ಹಿಡಿಯುತ್ತಾರೆ. ಬಿಜೆಪಿ ಕರೆದ್ರೆ ಬಿಜೆಪಿ ಹಿಂದೆ ಹೋಗ್ತಾರೆ, ಕಾಂಗ್ರೆಸ್ ಕರೆದ್ರೆ ಕಾಂಗ್ರೆಸ್ ಹಿಂದೆ ಹೋಗ್ತಾರೆ ಎಂದು ಹೆಚ್​ಡಿಕೆ ವಿರುದ್ಧ ಗುಡುಗಿದ್ರು.

suddiyaana