ಟ್ರಬಲ್ ಎಂಜಿನ್ ವಿರುದ್ಧದ ಕರ್ನಾಟಕದ ದನಿ, ಇದು ಜಾತ್ಯತೀತ ಪಕ್ಷಕ್ಕೆ ಸಂದ ಜಯ – ಸಿದ್ಧರಾಮಯ್ಯ

ಟ್ರಬಲ್ ಎಂಜಿನ್ ವಿರುದ್ಧದ ಕರ್ನಾಟಕದ ದನಿ, ಇದು ಜಾತ್ಯತೀತ ಪಕ್ಷಕ್ಕೆ ಸಂದ ಜಯ – ಸಿದ್ಧರಾಮಯ್ಯ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆ ಕಾಂಗ್ರೆಸ್‌ ನಾಯಕ ಸಿದ್ಧರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಈ ಚುನಾವಣೆ ಲೋಕಸಭಾ ಚುನಾವಣೆಗೆ ದಿಕ್ಸೂಚಿ. ಎಲ್ಲಾ ಪ್ರಚಾರ ಸಭೆಗಳಲ್ಲೂ ಹೇಳಿದ್ದೇನೆ. ಸುಮಾರು 130 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

ಜನರು ಬದಲಾವಣೆ ಬಯಸಿದ್ದಾರೆ. 40% ಭ್ರಷ್ಟಾಚಾರ, ಬಿಜೆಪಿ ಸರ್ಕಾರದ ವಿರುದ್ಧ ಕೆಂಪಣ್ಣ ಧ್ವನಿ ಎತ್ತಿದ್ದರು. ರಾಜ್ಯದ ಜನತೆ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ. ರಾಜ್ಯದ ಜನತೆ ಬಿಜೆಪಿಗೆ ಪಾಠ ಕಲಿಸಿದ್ದಾರೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ರಾಮನಗರದಲ್ಲಿ ಅಮ್ಮನ ತ್ಯಾಗ ವ್ಯರ್ಥವಾಯ್ತು..! – ಜೆಡಿಎಸ್ ಭದ್ರಕೋಟೆಯಲ್ಲೇ ನಿಖಿಲ್ ಕುಮಾರಸ್ವಾಮಿಗೆ ಸೋಲು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಎಷ್ಟೇ ಬಾರಿ ರಾಜ್ಯಕ್ಕೆ ಬಂದರೂ ಮತದಾರನ ಮೇಲೆ ಪ್ರಭಾವ ಬೀರಲಾರರು. ಯಾಕೆಂದರೆ, ರಾಜ್ಯದ ಜನತೆ ಬಿಜೆಪಿ ಸರ್ಕಾರದಿಂದ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ಪಕ್ಷ ಹೇಳಿದ್ದು ನಿಜವಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಿದ್ಧರಾಮಯ್ಯ, 40% ಕಮಿಷನ್‌ ವಿರುದ್ಧ ಪ್ರಾಮಾಣಿಕತೆ, ಅಸ್ಥಿರತೆಯ ವಿರುದ್ಧ ಸ್ಥಿರತೆ, ಕೋಮು ರಾಜಕಾರಣದ ವಿರುದ್ಧ ಸೆಕ್ಯುಲರಿಸಂ, ದ್ವೇಷದ ವಿರುದ್ಧ ಸಾಮರಸ್ಯ, ಟ್ರಬಲ್ ಎಂಜಿನ್ ವಿರುದ್ಧದ ಕರ್ನಾಟಕದ ದನಿ, ಕನ್ನಡಿಗರ ಜನಾದೇಶ ಗಟ್ಟಿಯಾಗಿದೆ. ಇದು ಜಾತ್ಯತೀತ ಪಕ್ಷಕ್ಕೆ ಸಂದ ಜಯ. ಕರ್ನಾಟಕದ ಜನರು ಭರವಸೆ ನೀಡಿದಂತೆ ನೀಡುವ ಸ್ಥಿರ ಸರ್ಕಾರವನ್ನು ಬಯಸಿದ್ದರು ಮತ್ತು ಆದ್ದರಿಂದ ಕಾಂಗ್ರೆಸ್‌ಗೆ ಜನಾದೇಶ ನೀಡಿದ್ದಾರೆ. ಕಾಂಗ್ರೆಸ್ ಪಾರ್ಟಿ ತನ್ನ ಶಕ್ತಿ ಮೇಲೆ ಸರ್ಕಾರ ಮಾಡುತ್ತದೆ ಎಂದು ಹೇಳಿದ್ದಾರೆ.

suddiyaana