ಸಿದ್ದರಾಮಯ್ಯ ʼಸಾಲರಾಮಯ್ಯʼ..  ಬಜೆಟ್‌ನಲ್ಲಿ ಸಿಕ್ಕಿರುವುದು ʼಸಾಲದ ಹೊರೆ – ತೆರಿಗೆಯ ಬರೆʼ..  – ಬಿಜೆಪಿ ಟ್ವೀಟಾಸ್ತ್ರ

ಸಿದ್ದರಾಮಯ್ಯ ʼಸಾಲರಾಮಯ್ಯʼ..  ಬಜೆಟ್‌ನಲ್ಲಿ ಸಿಕ್ಕಿರುವುದು ʼಸಾಲದ ಹೊರೆ – ತೆರಿಗೆಯ ಬರೆʼ..  – ಬಿಜೆಪಿ ಟ್ವೀಟಾಸ್ತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇ ದಾಖಲೆಯ ಬಜೆಟ್​ ಮಂಡನೆ ಮಾಡಿದ್ದಾರೆ. ಈ ಬಾರಿ ಬಜೆಟ್ ಗಾತ್ರ 3,27,747 ಲಕ್ಷ ಕೋಟಿ ರೂ ಗಾತ್ರದ್ದಾಗಿದೆ. ಇದರಲ್ಲಿ 3.27 ಲಕ್ಷ ಕೋಟಿ ರೂ ಬಜೆಟ್​ನಲ್ಲಿ ಸಾಲ ಮರುಪಾವತಿಗೆ 22,441 ಕೋಟಿ ರೂ ವ್ಯಯವಾಗಲಿದೆ. ಇನ್ನು ಬಂಡವಾಳ ಹೂಡಿಕೆಗಳಿಗೆ 54,374 ಕೋಟಿ ರೂ ವೆಚ್ಚ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಬಜೆಟ್‌ ಮಂಡನೆ ಬೆನ್ನಲ್ಲೇ ರಾಜ್ಯ ಬಿಜೆಪಿ ಟ್ವೀಟ್‌ ಮಾಡಿದ್ದು, ರಾಜ್ಯದಲ್ಲಿ ಸಿದ್ದರಾಮಯ್ಯನವರು ಮಂಡಿಸಿರುವ 2023-24ರ ಸಾಲಿನ ಬಜೆಟ್‌ನಿಂದ ಸಿಕ್ಕಿರುವುದು ಎರಡೇ, “ಸಾಲದ ಹೊರೆ – ತೆರಿಗೆಯ ಬರೆ”ಎಂದು ಕಿಡಿಕಾರಿದೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‌ಗೆ ಹೊಸ ಟಚ್ ನೀಡಲು ಬಜೆಟ್ ನಲ್ಲಿ ತೀರ್ಮಾನ – ಯೋಜನೆಗೆ 100 ಕೋಟಿ ರೂ. ಮೀಸಲು

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಇದು ಎಟಿಎಂ ಸರ್ಕಾರದ  ಕಲೆಕ್ಷನ್‌ ಬಜೆಟ್! ರಾಜ್ಯದಲ್ಲಿ ಸಿದ್ಧರಾಮಯ್ಯನವರು ಮಂಡಿಸಿರುವ 2023-24ರ ಸಾಲಿನ ಬಜೆಟ್‌ನಿಂದ ಸಿಕ್ಕಿರುವುದು ಎರಡೇ, “ಸಾಲದ ಹೊರೆ – ತೆರಿಗೆಯ ಬರೆ”. ಅವಾಸ್ತವಿಕ ಗ್ಯಾರಂಟಿಗಳ ಅನುಷ್ಠಾನದ ಹೆಸರಿನಲ್ಲಿ ಕರ್ನಾಟಕಕ್ಕೆ ಅನಿಯಮಿತ ಸಾಲದ ಹೊರೆ ನೀಡಿದೆ. ಸರ್ಕಾರ ಗ್ಯಾರಂಟಿಗಳನ್ನು ನಂಬಿ ಮೋಸ ಹೋದ ಕನ್ನಡಿಗರಿಗೆ ತೆರಿಗೆಯ ಬರೆ ನೀಡುತ್ತಿದೆ ಎಂದು ಕಿಡಿಕಾರಿದೆ.

ಕರ್ನಾಟಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಾಲ ಮಾಡಿರುವ ಆರ್ಥಿಕ ವರ್ಷವೆಂದರೇ ಇದೇ ವರ್ಷ. ಸರ್ಕಾರ ಮಾಡಿರುವ ಸಾಲ ಉತ್ಪಾದಕ ವಲಯಕ್ಕೆ ಪೂರಕವಾಗಿರದೇ, ಅನುತ್ಪಾದಕ ವಲಯಕ್ಕೆ ಮೀಸಲು ನೀಡಿದೆ. ಆದಾಯವನ್ನು ಹೆಚ್ಚಿಸಲು ಯಾವುದೇ ಉಪಕ್ರಮಗಳನ್ನು ಘೋಷಿಸದೇ, ಕೇವಲ ಸಾಲದ ಹೊರೆಯ ಹೇರಿಕೆ ಮಾಡಿದೆ. ಸಿದ್ದರಾಮಯ್ಯ ʼಸಾಲರಾಮಯ್ಯʼ ಎಂದು ಹ್ಯಾಶ್‌ ಟ್ಯಾಗ್‌ ಬಳಸಿ ತಿಳಿಸಿದೆ.

ಸಿಎಂ ಸಿದ್ದರಾಮಯ್ಯ ಅವರ ಬಜೆಟ್‌ ಮಂಡನೆ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್‌ ಗ್ಯಾರಂಟಿಗಳಿಗೆ ಒದಗಿಸಬೇಕಾದ ಹಣಕಾಸಿನ ಗೊಂದಲ ಇನ್ನೂ ಮುಂದುವರೆದಿದೆ. ಶಿಕ್ಷಣ, ಆರೋಗ್ಯ, ಕೃಷಿ, ಕುಡಿಯುವ ನೀರು, ಗ್ರಾಮೀಣಾಭಿವೃದ್ಧಿ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಮೀಸಲಿರಿಸಲಾದ ಹಣಕಾಸಿನಲ್ಲಿ ನಮ್ಮ ಬಜೆಟ್‌ಗೆ ಹೋಲಿಸಿದರೆ ಕಡಿತವಾಗಿದೆ. ಇದೊಂದು ನಿರಾಶದಾಯಕ ಬಜೆಟ್‌, ಆಯವ್ಯಯ ಮಂಡನೆಯಲ್ಲೂ ಕಾಂಗ್ರೆಸ್‌ ಸರ್ಕಾರ ದ್ವೇಷದ ರಾಜಕಾರಣ ಮಾಡಿದೆ ಎಂದು ಕಿಡಿಕಾರಿದ್ದಾರೆ.

suddiyaana