ಹೈಕಮಾಂಡ್ ಹೇಳಿದಂತೆ ನಾನು, ಡಿಕೆಶಿ ನಡೆದುಕೊಳ್ಳಬೇಕು! – ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಖಡಕ್ ಮಾತು!

ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಕದನ ಆರಕ್ಕೆ ಏರುತ್ತಿಲ್ಲ.. ಮೂರಕ್ಕೆ ಇಳಿಯುತ್ತಿಲ್ಲ. ಸಿಎಂ ಬಜೆಟ್ ಮಂಡನೆಗೆ ಸಜ್ಜಾಗಿರೋ ಹೊತ್ತಲ್ಲೇ ಮತ್ತೆ ಕುರ್ಚಿ ಕದನ ಸದ್ದು ಮಾಡ್ತಿದೆ. ಇದೀಗ ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಪಕ್ಕದ ಮನೆ ಮುಂದೆ ಕೆಮ್ಮುವುದು ಡೇಂಜರ್! – ಜೋರಾಗಿ ಕೆಮ್ಮಿದ್ದಕ್ಕೆ ಯುವಕನ ಕೊಂದೇ ಬಿಟ್ರು ಪಾಪಿಗಳು!
ಸಿಎಂ ಸಿದ್ದರಾಮಯ್ಯ ಕುರ್ಚಿ ಬಿಟ್ಟು ಕೊಡ್ತಾರೆ ಎಂಬ ವಿಶ್ವಾಸ ಇದೆ ಎಂದು ಡಿಕೆ ಸುರೇಶ್ ಹೇಳಿದ್ದರು. ಈ ಕುರಿತು ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಸಿಎಂ ಬದಲಾವಣೆ ವಿಚಾರ ಬಿಟ್ಟು ಬೇರೆ ಏನು ಕೇಳೋಕೆ ಬರಲ್ವಾ ನಿಮಗೆ? ಇನ್ನೇನು ಕೇಳೋದೆ ಇಲ್ಲವಲ್ಲ. 3 ತಿಂಗಳು ಆಯ್ತು ಇದನ್ನ ನೀವು ಶುರು ಮಾಡಿ. ಇನ್ನು ಮೇಲೆ ಇದನ್ನ ಕೇಳಬೇಡಿ ದಯಮಾಡಿ. ಹೈಕಮಾಂಡ್‌ಗೆ ಎಲ್ಲವೂ ಗೊತ್ತು. ಹೈಕಮಾಂಡ್ ಅವರು ಎಲ್ಲವನ್ನ ತೀರ್ಮಾನ ಮಾಡ್ತಾರೆ ಅಂತ ತಿಳಿಸಿದರು.
ಹೈಕಮಾಂಡ್ ಏನ್ ತೀರ್ಮಾನ ಮಾಡುತ್ತೋ ಅದರಂತೆ ನಡೆದುಕೊಳ್ಳೋನು ನಾನು. ಇದನ್ನ ಎಷ್ಟು ಸಾರಿ ಹೇಳೋದು ನಿಮಗೆ. ಯಾರು ಕೇಳೋಕೆ ಹೋಗಬೇಡಿ ಇನ್ನು. ಹೈಕಮಾಂಡ್ ತೀರ್ಮಾನದಂತೆ ನಡೆದುಕೊಳ್ಳೋದು. ಹೈಕಮಾಂಡ್ ಹೇಳಿದಂತೆ ನಾನು ನಡೆದುಕೊಳ್ಳಬೇಕು, ಡಿಕೆ ಶಿವಕುಮಾರ್ ಕೂಡಾ ನಡೆದುಕೊಳ್ಳಬೇಕು ಅದು ಬಿಟ್ಟು ಬೇರೆ ಏನು ಕೇಳೋದೇ ಇಲ್ಲವಾ ಎಂದು ಅಕ್ರೋಶಗೊಂಡ್ರು. ಇವತ್ತು ಡಿಕೆ ಸುರೇಶ್ ಮಾತಾಡಿದ್ರೆ, ಅವ್ರನ್ನೇ ಕೇಳಿ, ನನಗೆ ಯಾಕೆ ಕೇಳ್ತೀರಾ? ನಾನು ಹೈಕಮಾಂಡ್ ಹೇಳಿದಂತೆ ಕೇಳೋದು ಎಂದರು.

ನೋಡಿರಿ

