ಕಾಂಗ್ರೆಸ್ ಸೋತರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಥೆ ಮುಗಿದಂಗೆ! – ಚುನಾವಣೆ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆಯಾಗುತ್ತಾ?
ಕಾಂಗ್ರೆಸ್ ನಲ್ಲಿ ಮತ್ತೆ ಸಿಎಂ ಬದಲಾವಣೆಯ ಟಾಕ್ ಶುರುವಾಗಿದೆ. ಲೋಕಸಭೆಯಲ್ಲಿ ಕಡಿಮೆ ಸ್ಥಾನ ಗೆದ್ರೆ ಸಿಎಂ ಬದಲಾವಣೆಯ ಭೀತಿ ಕಾಡ್ತಾ ಇದ್ಯಾ ಅನ್ನೊ ಪ್ರಶ್ನೆ ಶುರುವಾಗಿದೆ. ಸಿಎಂ ಸಿದ್ಧರಾಮಯ್ಯ, ಅವರ ಪುತ್ರ, ಬೆಂಬಲಿಗರಿಂದಲೂ ಸಿಎಂ ಬದಲಾವಣೆಯ ಬಗ್ಗೆ ಚರ್ಚೆ ಶುರುವಾಗಿದೆ. ಈ ಬೆನ್ನಲ್ಲೇ ಸಿಎಂ ಸಿದ್ಧರಾಮಯ್ಯ ಕೂಡ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ನಾನು ಉಳಿಯಬೇಕೆಂದರೆ ಹೆಚ್ಚಿನ ಲೀಡ್ ಕೊಡಿ. 60 ಸಾವಿರ ಮತಗಳ ಅಂತರದಲ್ಲಿ ಗೆದ್ದರೆ ನನ್ನನ್ನು ಯಾರು ಮುಟ್ಟುವುದಿಲ್ಲ ಅಂತಾ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಮಕ್ಕಳಿಗಾಗಿ ಬಿಎಸ್ ವೈ & ಹೆಬ್ಬಾಳ್ಕರ್ ಒಳ ಒಪ್ಪಂದ?
ವರುಣ ಕ್ಷೇತ್ರದಲ್ಲಿ ಸೋಮವಾರ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 60 ಸಾವಿರ ಲೀಡ್ ಬಂದರೆ ನನ್ನನ್ನು ಯಾರೂ ಮುಟ್ಟಲು ಆಗುವುದಿಲ್ಲ. ವರುಣ ನನ್ನ ಪಾಲಿಗೆ ಅದೃಷ್ಟದ ಕ್ಷೇತ್ರ ಎಂದಿದ್ದರು. ಅದಲ್ಲದೇ ಎರಡು ಸಲ ನನ್ನನ್ನು ಗೆಲ್ಲಿಸಿ ಮುಖ್ಯಮಂತ್ರಿ ಮಾಡಿದ್ದೀರಿ, ಈಗ ನಾನು ಇರಬೇಕೋ ಬೇಡವೋ ಎಂದು ಜನರನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಈ ಮಾತುಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ.
ಇದೀಗ ಹೇಳಿಕೆ ಕುರಿತು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಟೀಕಿಸಿದ್ದಾರೆ. ಸಿಎಂ ಬದಲಾವಣೆಯಾಗುತ್ತೆ ಎಂದು ಹಿಂದೆ ಕಾಂಗ್ರೆಸ್ ನವರೇ ಹೇಳುತ್ತಿದ್ದರು. ಎಂಪಿ ಚುನಾವಣೆಯಲ್ಲಿ ಬಹುಮತ ಬರಲ್ಲ ತಾನೂ ಬದಲಾಗೋದು ಗ್ಯಾರಂಟಿ ಎನ್ನವುದು ಸಿಎಂಗೆ ಗೊತ್ತಾಗಿದೆ. ಸಿಎಂ ಬದಲಾವಣೆಯಾಗುತ್ತೆ ಎಂದು ಸಿದ್ದರಾಮಯ್ಯಗೆ ಗೊತ್ತಾಗಿದೆ ಎಂದು ಲೇವಡಿ ಮಾಡಿದರು.