‘ಅವನೊಬ್ಬ ಮೋಸಗಾರ.. ಮೊದಲೇ ಗೊತ್ತಿದ್ದರೆ ಟಿಕೆಟ್ ಕೊಡ್ತಿರಲಿಲ್ಲ’ – ಚಾಮುಂಡೇಶ್ವರಿ ಕ್ಷೇತ್ರದ ‘ಕೈ’ ಅಭ್ಯರ್ಥಿ ವಿರುದ್ಧ ಸಿದ್ದು ಕಿಡಿ!

‘ಅವನೊಬ್ಬ ಮೋಸಗಾರ.. ಮೊದಲೇ ಗೊತ್ತಿದ್ದರೆ ಟಿಕೆಟ್ ಕೊಡ್ತಿರಲಿಲ್ಲ’ – ಚಾಮುಂಡೇಶ್ವರಿ ಕ್ಷೇತ್ರದ ‘ಕೈ’ ಅಭ್ಯರ್ಥಿ ವಿರುದ್ಧ ಸಿದ್ದು ಕಿಡಿ!

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ. ರಾಜ್ಯ ರಾಜಕೀಯದ ಮತ್ತೊಂದು ಹೈವೋಲ್ಟೇಜ್ ಕ್ಷೇತ್ರ. ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿ ಜಿ.ಟಿ ದೇವೇಗೌಡ ವಿರುದ್ಧ ಸಿದ್ದರಾಮಯ್ಯ ಸೋತ ಬಳಿಕ ಈ ಕ್ಷೇತ್ರ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಈ ಬಾರಿ ಜಿಟಿಡಿ ವಿರುದ್ಧ ಜೆಡಿಎಸ್ ನಿಂದಲೇ ಬಂಡಾಯ ಎದ್ದು ಕಾಂಗ್ರೆಸ್ ಸೇರಿದ್ದ ಮಾವಿನಹಳ್ಳಿ ಸಿದ್ದೇಗೌಡರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ಆದರೆ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ : ಸಿ.ಟಿ ರವಿ ಆರೋಗ್ಯದಲ್ಲಿ ಏರುಪೇರು – ಕಿಡ್ನಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಬಿಜೆಪಿ ಶಾಸಕ

ಮೈಸೂರಿನಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಒಬ್ಬ ಮೋಸಗಾರ ಎಂದು ಕಿಡಿಕಾರಿದ್ದಾರೆ. ಅವನೊಬ್ಬ ಮೋಸಗಾರ. ಅವನು ಇಂಥವನು ಅಂತ ಗೊತ್ತಿದ್ದರೆ ನಮ್ಮ ಹುಡುಗನನ್ನೇ ನಿಲ್ಲಿಸುತ್ತಿದ್ದೆ ಎಂದು ಸಿದ್ದರಾಮಯ್ಯ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಜಿ.ಟಿ ದೇವೇಗೌಡರನ್ನ ಸೋಲಿಸಲು ಕಾಂಗ್ರೆಸ್‌ ತಯಾರಿ ನಡೆಸಿದ್ದು ಅದರಂತೆ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾವಿನಹಳ್ಳಿ ಸಿದ್ದೇಗೌಡರನ್ನ ಕಣಕ್ಕಿಳಿಸಿದ್ದರು. ಸಿದ್ದೇಗೌಡ ಮತ್ತು ಅವರ ತಂಡ ಜಿ.ಟಿ. ದೇವೇಗೌಡರ ನಡೆಯಿಂದ‌ ಬೇಸತ್ತು, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಜಿ.ಟಿ ದೇವೇಗೌಡರನ್ನು ಶತಾಯಗತಾಯ ಮಣಿಸಲೇಬೇಕು ಅಂತ ಮಾವಿನಹಳ್ಳಿ ಸಿದ್ದೇಗೌಡಗೆ ಸಿದ್ದರಾಮಯ್ಯ ಟಿಕೆಟ್ ಕೊಡಿಸಿದ್ದರು. ಆದರೆ ಕಳೆದ ನಾಲ್ಕು ದಿನಗಳಿಂದ ಮತದಾರರ ಕೈಗೆ ಸಿಗದೆ ಕಾಂಗ್ರೆಸ್‌ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ನಾಪತ್ತೆಯಾಗುವ ಮೂಲಕ ಜಿ.ಟಿ ದೇವೇಗೌಡರ ಗೆಲುವಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ. ಹೀಗಾಗಿ ಮಾವಿನಹಳ್ಳಿ ಸಿದ್ದೇಗೌಡ ನಡೆಗೆ ಸಿದ್ದರಾಮಯ್ಯ ಫುಲ್‌ ಗರಂ ಆಗಿದ್ದು, ವಾಗ್ದಾಳಿ ನಡೆಸಿದ್ದಾರೆ.

ಬುಧವಾರವಷ್ಟೇ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಮೇ 13ಕ್ಕೆ ಬಹುನಿರೀಕ್ಷಿತ ಫಲಿತಾಂಶ ಹೊರಬೀಳಲಿದ್ದು, ಹಲವು ಸಮೀಕ್ಷೆಗಳಲ್ಲೂ ಕಾಂಗ್ರೆಸ್‌ ಗೆಲುವಿನ ಸಮೀಪದಲ್ಲಿದೇ ಎಂದು ವರದಿಯಾಗಿದೆ. ಆದರೆ, ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವತಃ ಒಪ್ಪಿಕೊಂಡಂತಾಗಿದೆ.

 

suddiyaana