ಸತ್ಯ ಬಾಯ್ಬಿಟ್ಟ ಸಿಎಂ ಪತ್ನಿ – ಸಿದ್ದುಗೆ ‘ಲೋಕಾ’ ನೋಟಿಸ್
ರಾಜೀನಾಮೆ ಕೊಡ್ತಾರಾ ಸಿಎಂ?

ಸತ್ಯ ಬಾಯ್ಬಿಟ್ಟ ಸಿಎಂ ಪತ್ನಿ – ಸಿದ್ದುಗೆ ‘ಲೋಕಾ’ ನೋಟಿಸ್ರಾಜೀನಾಮೆ ಕೊಡ್ತಾರಾ ಸಿಎಂ?

ಒಂದ್ಕಡೆ ಸಿಎಂ ಸಿದ್ದರಾಮಯ್ಯಗೆ ಬೈ ಎಲೆಕ್ಷನ್ ಟೆನ್ಶನ್ ಶುರುವಾಗಿದ್ರೆ, ಮತ್ತೊಂದ್ಕಡೆ ಮುಡಾ ಕೇಸ್ ಬೆನ್ನು ಬಿಡದೆ ಕಾಡುತ್ತಿದೆ. ಮುಡಾ ಸೈಟ್ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯಯ್ಯರ ಪತ್ನಿ ಪಾರ್ವತಿ  ಸಿದ್ದರಾಮಯ್ಯರನ್ನ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಸುಮಾರು 3 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ್ದಾರೆ. ಲೋಕಾಯುಕ್ತ ಎಸ್‌ಪಿ ಉದೇಶ್ ನೇತೃತ್ವದಲ್ಲಿ ತನಿಖೆ ನಡೆದಿದ್ದು, 20 ಪ್ರಶ್ನೆಗಳನ್ನು ಕೇಳಿದ್ದಾರಂತೆ. ಲೋಕಾಯುಕ್ತ ಪೊಲೀಸರು ಸಾಲು ಸಾಲು ಪ್ರಶ್ನೆ ಕೇಳಿದ್ದು, ಪಾರ್ವತಿ ಅವರು ಎಲ್ಲದಕ್ಕೂ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಸತತ ಮೂರು ಗಂಟೆಗಳ ವಿಚಾರಣೆಯಲ್ಲಿ ಪಾರ್ವತಿ ಎದುರಿಸಿದ ಪ್ರಶ್ನೆಗಳೇನು? ಅದಕ್ಕೆ ಸಿದ್ದರಾಮಯ್ಯನವರ ಪತ್ನಿ ಉತ್ತರಿಸಿದ್ದೇನು?.. ಸಿದ್ದರಾಮಯ್ಯ ಅವರ ವಿಚಾರಣೆ ಯಾವಾಗ..? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:2 ಇನ್ನಿಂಗ್.. 11 ವಿಕೆಟ್.. SUPER MAN ವಾಷಿಂಗ್ಟನ್ – ಕಿವೀಸ್ ಕಿವಿ ಹಿಂಡಿದ್ದೇ ಸುಂದರ್

ಉಪ ಚುನಾವಣೆ ಕಾವೇರಿರುವ ಹೊತ್ತಲ್ಲೇ ಮುಡಾ ಹಗರಣದ ತನಿಖೆಗೆ ಮಹತ್ವದ ಘಟ್ಟ ತಲುಪಿದೆ. ನಿರೀಕ್ಷೆಗಿಂತ ವೇಗವಾಗಿ ಲೋಕಾಯುಕ್ತ  ತನಿಖೆ ನಡೀತಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರನ್ನು ಮೈಸೂರು ಲೋಕಾಯುಕ್ತ ಎಸ್‌ಪಿ ವಿಚಾರಣೆಗೆ ಒಳಪಡಿಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಅವರು ವಿಚಾರಣೆ ಎದುರಿಸಿದ್ದಾರೆ. ಲೋಕಾಯುಕ್ತ ಪೊಲೀಸರು ಸಮನ್ಸ್ ನೀಡಿದ ಹಿನ್ನೆಲೆಯಲ್ಲಿಂದು ಸಿಎಂ ಪತ್ನಿ ವಿಚಾರಣೆಗೆ ಹಾಜರಾಗಿದ್ರು. ಗೌಪ್ಯ ಸ್ಥಳದಲ್ಲಿ ಸಿಎಂ ಪತ್ನಿಯನ್ನು ಮೂರು ಗಂಟೆಗಳ ಕಾಲ ಲೋಕಾಯುಕ್ತ ಎಸ್‌ಪಿ ವಿಚಾರಣೆ ಮಾಡಿದ್ದಾರೆ. ವಿವಾದಿತ ಜಮೀನು ಮತ್ತು 14 ಸೈಟ್‌ಗಳ ಖರೀದಿ ವಿಚಾರವಾಗಿ ಹತ್ತಾರು ಪ್ರಶ್ನೆಗಳನ್ನು ಲೋಕಾಯುಕ್ತ ಎಸ್‌ಪಿ ಕೇಳಿದ್ದಾರೆ. ಇದಕ್ಕೆ ತಮ್ಮಲ್ಲಿರುವ ಮಾಹಿತಿಯನ್ನು ಸಿಎಂ ಪತ್ನಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಲೋಕಾಯುಕ್ತ ಪ್ರಶ್ನೆಗೆ ಸಿಎಂ ಪತ್ನಿ ಉತ್ತರ

  • ಲೋಕಾಯುಕ್ತ: ಪರಿಹಾರ ಕೇಳಿ ನೀವು ಎಷ್ಟು ಬಾರಿ ಮುಡಾಗೆ ಪತ್ರ ಕೊಟ್ಟಿದ್ರಿ?
  • ಸಿಎಂ ಪತ್ನಿ: ಐದಾರು ಬಾರಿ ಕೊಟ್ಟಿದ್ದೇನೆ, ನನಗೆ ಸ್ಪಷ್ಟವಾಗಿ ನೆನಪಾಗುತ್ತಿಲ್ಲ
  • ಲೋಕಾಯುಕ್ತ:  ನಿರ್ದಿಷ್ಟ ಸ್ಥಳದಲ್ಲೆ ಪರ್ಯಾಯ ನಿವೇಶನ ಬೇಕು ಅಂತಾ ಕೇಳಿದ್ರಾ?
  • ಸಿಎಂ ಪತ್ನಿ: ಖಂಡಿತ ಇಲ್ಲ, ನಮಗೆ ಪರಿಹಾರ ಕೊಡಿ ಅಂತ ಅಷ್ಟೇ ಕೇಳಿದ್ದೇನೆ.
  • ಲೋಕಾಯುಕ್ತ : ಈ ವಿಚಾರದಲ್ಲಿ ನಿಮ್ಮ ಪತಿ ಅಥವಾ ಮಗನ ಮಧ್ಯಪ್ರವೇಶ ಆಗಿತ್ತಾ?
  • ಸಿಎಂ ಪತ್ನಿ : ಇದು ತವರುಮನೆ ಉಡುಗೊರೆ. ನನಗೆ ಅನ್ಯಾಯ ಆಗಿತ್ತು. ಇದಕ್ಕಾಗಿ ನ್ಯಾಯ ಕೇಳಿದ್ದೆ ಅಷ್ಟೇ. ಅದಕ್ಕಾಗಿ ಪ್ರಭಾವ ಬಳಸಿಲ್ಲ
  • ಲೋಕಾಯುಕ್ತ: ನಿಮ್ಮ ಒಂದು ಪತ್ರದ ಮೇಲೆ ವೈಟ್ನರ್ ಯಾಕೆ ಹಾಕಿದ್ರಿ? ವೈಟ್ನರ್ ಹಾಕಿದ್ದು ನೀವಾ? ಬೇರೆಯವರಾ?
  • ಸಿಎಂ ಪತ್ನಿ: ವೈಟ್ನರ್ ಹಾಕಿದ್ದು ನಾನೇ. ಅಲ್ಲಿ ಯಾವುದೋ ತಪ್ಪಾದ ವಾಕ್ಯ ಇತ್ತು. ಏನದು ಎಂಬುದನ್ನು ಮರೆತಿದ್ದೇನೆ.
  • ಲೋಕಾಯುಕ್ತ: ಪದೇ ಪದೇ ನಿಮ್ಮ ಸಹಿಗಳು ವ್ಯತ್ಯಾಸ ಆಗಿರೋದು ಯಾಕೆ?
  • ಸಿಎಂ ಪತ್ನಿ: ನಾನು ರೆಗ್ಯೂಲರ್ ಆಗಿ ದಾಖಲೆಗಳಿಗೆ ಸಹಿ ಹಾಕಲ್ಲ.. ಹೀಗಾಗಿ ಸಹಿ ಸ್ವಲ್ಪ ಬದಲಾಗುತ್ತೆ.
  • ಲೋಕಾಯುಕ್ತ: ನಿಮ್ಮ ಸಹೋದರ ನಿಮಗೆ ಗಿಫ್ಟ್ ಆಗಿ ಜಮೀನು ಕೊಟ್ಟಾಗ ನೀವು ಆ ಜಾಗ ನೋಡಿರಲಿಲ್ವಾ?
  • ಸಿಎಂ ಪತ್ನಿ: ನಾನು ಅವತ್ತು ಜಾಗ ನೋಡಿರಲಿಲ್ಲ, 3-4 ವರ್ಷವಾದ ಮೇಲೆ ಜಾಗ ನೋಡಿದ್ದೆ.

ಹೀಗೆ ಸಾಕಷ್ಟು ಪ್ರಶ್ನೆಗಳನ್ನ ಲೋಕಾಯುಕ್ತ ಅಧಿಕಾರಿಗಳನ್ನು ಸಿಎಂ ಪತ್ನಿ ಮುಂದೆ ಇಟ್ಟಿದ್ರು. ಇದಕ್ಕೆ ಸಿಎಂ ಪತ್ನಿ ಉತ್ತರವನ್ನ ನೀಡಿದ್ದಾರೆ ಎನ್ನಲಾಗಿದೆ.

ಸಿಎಂ ಸಿದ್ದರಾಮಯ್ಯ ವಿಚಾರಣೆ ಯಾವಾಗ? ಎಲ್ಲಿ?

ಮುಡಾ ನಿವೇಶನ  ಹಂಚಿಕೆ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ನೋಟಿಸ್ ನೀಡುವ ಸಾಧ್ಯತೆ ಇದೆ. ಇಡಿ ಮತ್ತು ಲೋಕಾಯುಕ್ತ ತನಿಖೆ ಚುರುಕುಗೊಳಿಸಿದ್ದು, ಮುಡಾ ಕೇಸ್‌ನಲ್ಲಿ ಈಗಾಗಲೇ ಎ2 ಸಿಎಂ ಪತ್ನಿ ಪಾರ್ವತಿ ವಿಚಾರಣೆ ನಡೆಸಲಾಗಿದೆ. ಹಾಗೇಎ3 ಮಲ್ಲಿಕಾರ್ಜುನಸ್ವಾಮಿ, ಎ4 ದೇವರಾಜು ಕರೆಸಿ ವಿಚಾರಣೆ ನಡೆಸಲಾಗಿದೆ. ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗಳ ವಿಚಾರಣೆ ಸಹ ಅಂತ್ಯಗೊಂಡಿದೆ.  ಸದ್ಯ ಮುಡಾ ಪ್ರಕರಣದಲ್ಲಿ ಎ1 ಸಿಎಂ ಸಿದ್ದರಾಮಯ್ಯ ವಿಚಾರಣೆ ಮಾತ್ರ ಬಾಕಿ ಇದೆ. ಸಿಎಂ ವಿಚಾರಣೆ ಯಾವಾಗ ಎಂಬ ಕುತೂಹಲ ಮೂಡಿದೆ.ಹೀಗಾಗಿ ಬಾಕಿ ಇರುವುದು ಎ1 ಆರೋಪಿ ವಿಚಾರಣೆ ಸಿಎಂಗೆ ನೋಟಿಸ್ ನೀಡಲು ಲೋಕಾಯುಕ್ತ ಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಪತ್ನಿ ಪಾರ್ವತಮ್ಮ ವಿಚಾರಣೆಯ ಟಿಪ್ಪಣಿ ಬರೆಯುತ್ತಿದ್ದಾರೆ. ಟಿಪ್ಪಣಿ ಕಾರ್ಯ ಮುಗಿದ ಮೇಲೆ ಸಿಎಂಗೆ ನೋಟಿಸ್ ನೀಡುವ ಸಾಧ್ಯತೆ ಇದೆ.

Shwetha M

Leave a Reply

Your email address will not be published. Required fields are marked *