ಸಿದ್ದರಾಮಯ್ಯ ಗ್ಯಾರಂಟಿ ಬಜೆಟ್ – ಗೃಹಲಕ್ಷ್ಮೀ ಯೋಜನೆಗೆ 28 ಸಾವಿರದ 608 ಕೋಟಿ ರೂಪಾಯಿ

ಸಿದ್ದರಾಮಯ್ಯ ಗ್ಯಾರಂಟಿ ಬಜೆಟ್ – ಗೃಹಲಕ್ಷ್ಮೀ ಯೋಜನೆಗೆ 28 ಸಾವಿರದ 608 ಕೋಟಿ ರೂಪಾಯಿ

ಗೃಹಲಕ್ಷ್ಮೀ ಯೋಜನೆಗೆ 28 ಸಾವಿರದ 608 ಕೋಟಿ ರೂಪಾಯಿ ಮೀಸಲು ಇಡಲಾಗುವುದು. 1.33 ಕೋಟಿ ಮಹಿಳೆಯರಿಗೆ ಯೋಜನೆಯಿಂದ ಲಾಭವಾಗಲಿದೆ. ಜನವರಿ 31ರವರೆಗೆ 1.27 ಕೋಟಿ ಮಹಿಳೆಯರ ನೋಂದಣಿಯಾಗಿದೆ, 11726 ಕೋಟಿ ನೇರವಾಗಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ಬಜೆಟ್‌ನಲ್ಲಿ ಬೆಂಗಳೂರಿಗೆ ಬಂಪರ್ ಕೊಡುಗೆ – ಹೋಟೆಲ್ ವ್ಯಾಪಾರ ಅವಧಿ ರಾತ್ರಿ 1 ಗಂಟೆಗೆ ವಿಸ್ತರಣೆ

ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 44,422 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆ 34,406 ಕೋಟಿ ರೂಪಾಯಿ,  ಇಂಧನ ಇಲಾಖೆಗೆ 23,159 ಕೋಟಿ ರೂಪಾಯಿ ಘೋಷಣೆಯಾಗಿದೆ. ಗ್ರಾಮೀಣಾಭಿವೃದ್ಧಿಗೆ 21,160 ಕೋಟಿ ರೂಪಾಯಿ ಗೃಹ ಮತ್ತು ಸಾರಿಗೆ ಇಲಾಖೆಗೆ 19,777 ಕೋಟಿ ರೂಪಾಯಿ ಹಾಗೂ ನೀರಾವರಿ ಇಲಾಖೆಗೆ 19,179 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಮತ್ತು ನಗರಾಭಿವೃದ್ಧಿ ಇಲಾಖೆಗೆ 18,188 ಕೋಟಿ ರೂಪಾಯಿ ಘೋಷಣೆಯಾಗಿದೆ.

100 ಹಾಸಿಗೆ ಆಸ್ಪತ್ರೆ ನಿರ್ಮಾಣ

ತಾಲೂಕು ಆಸ್ಪತ್ರೆಯಿಲ್ಲದ ಆನೇಕಲ್ ನೆಲಮಂಗಲ ಹೊಸಕೋಟೆ ಶೃಂಗೇರಿ ಶಿರಹಟ್ಟಿ ತಾಲೂಕಿಗಳಲ್ಲಿ ೨೮೦ ಕೋಟಿ ವೆಚ್ಚದಲ್ಲಿ ೧೦೦ ಹಾಸಿಗೆ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆಯಾಗಿದೆ. ಬೆಂಗಳೂರಿನ ಕೆ ಸಿ ಜನರಲ್ ಆಸ್ಪತ್ರೆ ಆವರಣದಲ್ಕಿ ತಾಯಿ ಮತ್ತು ಮಕ್ಕಳ ಮೂಲಸೌಕರ್ಯ ಕಾಮಗಾರಿಗಳನ್ನ ೧೫೦ ಕೋಟಿ ವೆಚ್ಚದಲ್ಲಿ ಪ್ರಾರಂಭ ಮಾಡಲಾಗುವುದು. ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ 46 ಹೊಸ ಪ್ರಾಥಮಿಕ ಕೇಂದ್ರಗಳನ್ನು 221 ಕೋಟಿಗಳ ವೆಚ್ಚದಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.

 

Sulekha