ಕಾಂಗ್ರೆಸ್‌ ಗ್ಯಾರಂಟಿ ಕಾಲ್‌ ಬಂತಾ? – 20 ಸೀಟು ಗೆಲ್ಲುವ PLAN ವರ್ಕ್‌ ಆಗುತ್ತಾ?

ಕಾಂಗ್ರೆಸ್‌ ಗ್ಯಾರಂಟಿ ಕಾಲ್‌ ಬಂತಾ? – 20 ಸೀಟು ಗೆಲ್ಲುವ PLAN ವರ್ಕ್‌ ಆಗುತ್ತಾ?

ಲೋಕಸಭೆ ಅಖಾಡದಲ್ಲಿ ಈಗ ಕಾಂಗ್ರೆಸ್‌ ಗ್ಯಾರಂಟಿ ಮಂತ್ರ ಜಪಿಸುತ್ತಿದೆ..ಹಾಗೆಯೇ ಪ್ರಧಾನಮಂತ್ರಿ ಮೋದಿ ಅವರೂ ಕೂಡ ಮೋದಿ ಗ್ಯಾರಂಟಿಯ ಬಗ್ಗೆ ಮಾತಾಡ್ತಿದ್ದಾರೆ.. ಅಲ್ಲದೆ ತಾವು ಆಶ್ವಾಸನೆ ನೀಡಿದ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ ಎಂದು ಮೋದಿ ಹೇಳುತ್ತಿದ್ದಾರೆ.. ಇಷ್ಟಕ್ಕೂ ಮೋದಿಯವರು ಕೊಟ್ಟ ಗ್ಯಾರಂಟಿಯೇನು? ಹೇಗೆ ಜಾರಿಗೊಳಿಸಿದ್ರು ಎನ್ನುವುದರ ಬಗ್ಗೆ ಸ್ಪಷ್ಟತೆಗಳಿಲ್ಲ.. ಯಾಕಂದ್ರೆ ಮೋದಿಯವರು ಎಲ್ಲೂ ನಿರ್ದಿಷ್ಟ ಗ್ಯಾರಂಟಿಗಳನ್ನು ಘೋಷಣೆ ಮಾಡಿರಲಿಲ್ಲ.. ಹಾಗೆ ನೋಡಿದ್ರೆ ಮೋದಿಯವರು ಕಾಂಗ್ರೆಸ್‌ ಹೇಳುತ್ತಿದ್ದ ಗ್ಯಾರಂಟಿಗಳ ವಿರುದ್ಧವಿದ್ದರು.. ಈ ಗ್ಯಾರಂಟಿಗಳು ದೇಶದ ಆರ್ಥಿಕತೆಗೆ ಹೊಡೆತ ನೀಡಬಹುದು ಎಂಬ ಆತಂಕವನ್ನು ಪ್ರಧಾನಿ ಮೋದಿಯವರು ವ್ಯಕ್ತಪಡಿಸುತ್ತಿದ್ದಾರೆ..

ಹೀಗೆ ಹೇಳಲು ಮುಖ್ಯ ಕಾರಣ, ಜನರ ಕೈಗೆ ನೇರವಾಗಿ ಸರ್ಕಾರದ ಬೊಕ್ಕಸದಿಂದ ಹಣ ಕೊಟ್ಟರೆ, ಸರ್ಕಾರ ನಿಜವಾಗಿ ಮಾಡಬೇಕಿರುವ ಅಭಿವೃದ್ಧಿ ಕೆಲಸಗಳಿಗೆ, ರಸ್ತೆ ನಿರ್ಮಾಣಕ್ಕೆ, ರೈಲುಗಳ ಆಧುನೀಕರಣಕ್ಕೆ, ಸೇನೆಯನ್ನು ಮತ್ತಷ್ಟು ಬಲಶಾಲಿ ಮಾಡೋದಕ್ಕೆ.. ಇಂತಹ ಕೆಲಸಗಳಿಗೆ ದುಡ್ಡೆಲ್ಲಿಂದ ಬರುತ್ತದೆ ಎಂಬ ಪ್ರಶ್ನೆಯಿದೆ.. ಇತ್ತೀಚೆಗೆ ಇದೇ ಮಾತನ್ನು ಜನ ಸಾಮಾನ್ಯರೂ ಕೇಳುತ್ತಿದ್ದಾರೆ.. ಇವ್ರು ಹಿಂಗೆ ಜನರ ಕೈಗೆ ದುಡ್ಡು ಕೊಟ್ಟರೆ ಏನ್‌ ಪ್ರಯೋಜನ ಎಂಬ ಪ್ರಶ್ನೆ ಮಾಡ್ತಿದ್ದಾರೆ.. ಇದಕ್ಕಿಂತ ಶಿಕ್ಷಣ ಉಚಿತ ಮಾಡಬಹುದಿತ್ತಲ್ವಾ ಎಂಬ ಪ್ರಶ್ನೆ ಎತ್ತುತ್ತಿದ್ದಾರೆ.. ಹಾಗೆ ನೋಡಿದ್ರೆ ಈಗಲೂ ಶಿಕ್ಷಣ ಉಚಿತವಾಗಿಯೇ ಇದೆ.. ಆದರೆ ಸರ್ಕಾರಿ ಸಂಸ್ಥೆಗಳಲ್ಲಿ ಓದಲು ಎಷ್ಟು ಜನ ಉತ್ಸುಕರಾಗಿದ್ದಾರೆ ಎಂಬ ಪ್ರಶ್ನೆ ಮಾಡಿದರೆ, ಏನು ಉತ್ತರ ಸಿಗಬಹುದು ಎಂಬುವುದು ಎಲ್ಲರಿಗೂ ಗೊತ್ತೇ ಇದೆ.

ಇದನ್ನೂ ಓದಿ:

ಸದ್ಯ ರಾಜ್ಯದಲ್ಲಿ ಐದು ಗ್ಯಾರಂಟಿ ಕಾರ್ಯಕ್ರಮಗಳನ್ನು ಕಾಂಗ್ರೆಸ್‌ ಜಾರಿಗೊಳಿಸಿದೆ.. ಇದೇ ಕಾರಣಕ್ಕಾಗಿ ನಾವು ನುಡಿದಂತೆ ನಡೆದಿದ್ದೀವೇ ಎಂದು ಕಾಂಗ್ರೆಸ್‌ ನಾಯಕರು ಹೋದಲ್ಲಿ ಬಂದಲ್ಲಿ ಹೇಳ್ತಿದ್ದಾರೆ.. ಇದಕ್ಕಾಗಿ ಸರಿ ಸುಮಾರು 56 ಸಾವಿರ ಕೋಟಿ ರುಪಾಯಿಗಳನ್ನು 2024-25ರ ಆರ್ಥಿಕ ವರ್ಷದಲ್ಲಿ ಮೀಸಲಿಟ್ಟಿರುವುದಾಗಿ ಖುದ್ದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ.. ಅಷ್ಟೇ ಅಲ್ಲದೆ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಹತ್ತಿರ ಹತ್ತಿರ ನಾಲ್ಕೂವರೆ ಕೋಟಿ ಜನರಿಗೆ ನೇರವಾಗಿ ತಲುಪಿದೆ ಎನ್ನುವುದು ಕಾಂಗ್ರೆಸ್‌ ಮುಂದಿಡುತ್ತಿರುವ ಲೆಕ್ಕ.. ಹೀಗೆ ಸರ್ಕಾರದ ಹಣ ನಾಲ್ಕೂವರೆ ಕೋಟಿ ಫಲಾನುಭವಿಗಳಿಗೆ ತಲುಪಿದೆ ಅಂತಾದ್ರೆ ಅವರೆಲ್ಲರೂ ಕಾಂಗ್ರೆಸ್‌ ಪರವಾಗಿ ನಿಲ್ಲುತ್ತಾರಾ ಎಂಬ ಪ್ರಶ್ನೆಯಿದೆ.. ಒಂದು ವೇಳೆ ಯೋಜನೆಯ ಲಾಭ ಪಡೆದ ಎಲ್ಲರೂ ಕಾಂಗ್ರೆಸ್‌ ಪರವಾಗಿ ವೋಟು ಹಾಕಿದ್ರೆ ರಾಜ್ಯದಲಲಿ 28ಕ್ಕೆ 28ಗ ಸೀಟು ಆರಾಮವಾಗಿ ಕಾಂಗ್ರೆಸ್‌ಗೆ ಸಿಗಬೇಕು.. ಅಲ್ಲದೆ ಸಿಎಂ ಸಿದ್ದರಾಮಯ್ಯ ಆಗ್ಲೀ.. ಡಿಸಿಎಂ ಡಿ.ಕೆ.ಶಿವಕುಮಾರ್‌ ಆಗ್ಲೀ ಇಷ್ಟೆಲ್ಲಾ ಬಿರು ಬಿಸಿಲಿನಲ್ಲಿ ತಿರುಗಾಡಿ ಜನರ ಬಳಿಯಲ್ಲಿ ಮತಯಾಚಿಸುವ ಅಗತ್ಯ ಇರಲಿಲ್ಲ.. ಆದ್ರೆ ಕಾಂಗ್ರೆಸ್‌ ಗೆ ತಾವು ನೀಡಿರುವ ಗ್ಯಾರಂಟಿ ಸ್ಕೀಂಗಳಿಂದಲೇ ಜನರು ಮತ ಹಾಕ್ತಾರೆ ಎಂಬ ನಂಬಿಕೆಯಿಲ್ಲ.. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ.. ಒಂದು ಜನರು ಗ್ಯಾರಂಟಿ ಸ್ಕೀಂಗಳನ್ನು ನಂಬಿ 2023ರಲ್ಲಿ ಮತಹಾಕಿದ್ದು ರಾಜ್ಯ ಸರ್ಕಾರದ ಆಯ್ಕೆ ಕಾರಣಕ್ಕೆ.. ಕೇಂದ್ರದ ಚುನಾವಣೆಯಲ್ಲೂ ಇದೇ ವಿಚಾರಕ್ಕಾಗಿ ವೋಟು ಹಾಕಲೇ ಬೇಕು ಎಂಬ ಅನಿವಾರ್ಯತೆ ಮತದಾರರಿಗೆ ಇಲ್ಲ.. ಎರಡನೆಯದ್ದೂ ಗ್ಯಾರಂಟಿಗಳ ಸುತ್ತಲೂ ನಡೆಯುತ್ತಿರುವ ಪ್ರಚಾರ.. ಗಂಡನ ಜೇಬಿಂದ ಹಣ ತೆಗೆದು ಅದನ್ನು ಹೆಂಡತಿಗೆ ಹಂಚುತ್ತಿದ್ದಾರೆ ಎಂಬ  ನರೇಟಿವ್‌ ಆಲ್‌ರೆಡಿ ಇಡೀ ರಾಜ್ಯದಲ್ಲಿ ವ್ಯಕ್ತವಾಗುತ್ತಿದೆ.. ಇದನ್ನು ಎದುರಾಳಿ ಪಕ್ಷಗಳು ಕೂಡ ಜೋರಾಗಿಯೇ ಉಪಯೋಗ ಮಾಡ್ತಿವೆ.. ಇದ್ರಿಂದಾಗಿ ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಮೈಮರೆತು ಕುಳಿತುಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್‌ ಇಲ್ಲ..

ಇಷ್ಟಕ್ಕೂ ಬೆಲೆ ಏರಿಕೆ ಎನ್ನುವುದು ಎಲ್ಲಾ ಕಾಲದಲ್ಲೂ ನಡೆಯುವ ಸಾಮಾನ್ಯ ಬೆಳವಣಿಗೆ.. ಮದ್ಯದ ಮೇಲಿನ ತೆರಿಗೆ ಹೆಚ್ಚಳ.. ಸಿಗರೇಟ್‌ ಮೇಲಿನ ತೆರಿಗೆ ಹೆಚ್ಚಳ ಇಲ್ಲದ ಬಜೆಟ್‌ಗಳು ಬಹಳ ಕಡಿಮೆ.. ಹಾಗಿದ್ದರೂ ಹಾಗೆ ತೆರಿಗೆ ಹೆಚ್ಚಳ ಮಾಡಿದಾಗಲೆಲ್ಲಾ ಜನರ ಕೈಗೆ ನೇರವಾಗಿ ಅದು ಗಂಡನಿಗೇ ಆಗಲೀ.. ಅಥವಾ ಹೆಂಡತಿಯ ಕೈಗೇ ಆಗಲಿ ಸರ್ಕಾರ ಹಣ ಕೊಟ್ಟಿರಲಿಲ್ಲ.. ಆದ್ರೀಗ ಅಲ್ಲಿ ತೆರಿಗೆ ಹೆಚ್ಚಳ ಮಾಡಿದ್ದರೂ ಇಲ್ಲಿ ಹಣ ವಾಪಸ್‌ ಬರುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಲ್ವಾ ಎನ್ನುವುದು ಕಾಂಗ್ರೆಸ್‌ನವರು ಮುಂದಿಡುತ್ತಿರುವ ವಾದ..  ಈ ವಾದವನ್ನು ಮುಂದಿಟ್ಟೇ ಕಾಂಗ್ರೆಸ್ ಈಗ ಲೋಕಸಭಾ ಚುನಾವಣೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಡಲು ತಯಾರಿ ಮಾಡುತ್ತಿದೆ.. ಅದೇನಂದ್ರೆ ಎಲೆಕ್ಷನ್‌ನಲ್ಲಿ ಮತದಾನಕ್ಕೂ ಮುಂಚಿತವಾಗಿ ಪ್ರತಿಯೊಬ್ಬ ಫಲಾನುಭವಿಗೂ ಫೋನ್‌ ಕಾಲ್‌ ಮಾಡುವುದು ಕಾಂಗ್ರೆಸ್‌ನ ಉದ್ದೇಶ.. ಇಷ್ಟಕ್ಕೂ ಗ್ಯಾರಂಟಿ ಯೋಜನೆಗಳ ಎಲ್ಲಾ ಫಲಾನುಭವಿಗಳ ಫೋನ್ ನಂಬರ್‌ ಸದ್ಯ ಸರ್ಕಾರದ ಬಳಿಯಿದೆ.. ಇದನ್ನೇ ಬಳಸಿಕೊಂಡು ಗ್ಯಾರಂಟಿ ಸ್ಕೀಂ ಸರಿಯಾಗಿ ತಲುಪುತ್ತಿದೆಯೇ ಎಂಬ ಫೋನ್‌ ಕಾಲ್‌ ಮಾಡಲು ಕಾಂಗ್ರೆಸ್‌ ತಯಾರಿ ಮಾಡ್ಕೊಂಡಿದೆಯಂತೆ.. ಜೊತೆಗೆ ಎಲೆಕ್ಷನ್‌ನಲ್ಲಿ ನೀವು ಕಾಂಗ್ರೆಸ್‌ ಗೆ ಮತ ಹಾಕ್ತೀರಾ ಅಂತ ಖಾತ್ರಿ ಪಡಿಸಿಕೊಳ್ಳೋದಿಕ್ಕೂ ಕೆಲ ಪ್ರಶ್ನೆಗಳನ್ನು ಫಲಾನುಭವಿಗಳ ಮುಂದಿಡಬಹುದು.. ಅಲ್ಲದೆ ಗ್ಯಾರಂಟಿ ಕೊಟ್ಟಿದ್ದಕ್ಕೆ ನೀವು ಕಾಂಗ್ರೆಸ್‌ಗೇ ಮತ ಹಾಕಬೇಕಿದೆ ಎನ್ನುವುದನ್ನು ಕನ್ವಿನ್ಸ್‌ ಮಾಡಲು ಇನ್ನಿಲ್ಲದ ಪ್ರಯತ್ನವನ್ನು ಕಾಂಗ್ರೆಸ್‌ ಮಾಡುವ ಸಾಧ್ಯತೆ ದಟ್ಟವಾಗಿದೆ.. ಈ ಮೂಲಕ ಗ್ಯಾರಂಟಿ  ಸ್ಕೀಂ ಹೆಸರಲ್ಲೇ ಮತ ಕೇಳುವುದು ಕಾಂಗ್ರೆಸ್‌ ನಾಯಕರ ಲೆಕ್ಕಾಚಾರ..

ಇದೇ ವಿಶ್ವಾಸದಲ್ಲಿಯೇ ಕಾಂಗ್ರೆಸ್‌ ನಾಯಕರು ನಾವು 20ಕ್ಕೂ ಹೆಚ್ಚು ಸೀಟು ಗೆಲ್ತೇವೆ ಎಂದು ಹೇಳ್ತಿದ್ದಾರೆ.. ಆದ್ರೆ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ಎನ್ನುವುದು ಸುನಾಮಿಯ ರೂಪ ತಾಳುವ ಸಾಧ್ಯತೆ ಇದ್ದೇ ಇರುತ್ತದೆ.. ಮೋದಿ ಸುನಾಮಿಯೆದ್ದರೆ ಯಾವ ಗ್ಯಾರಂಟಿಯೂ ತಡೆಯೋದು ಸಾಧ್ಯವಿಲ್ಲ.. ಆದರೆ ಮೋದಿ ಕೇವಲ ಅಲೆಯಾಗಿ ಮಾತ್ರವೇ ಪರಿವರ್ತನೆಯಾದರೆ ಆ ಅಲೆಗಳನ್ನು ಗ್ಯಾರಂಟಿಗಳೆಂಬ ತಡೆಯ ಮೂಲಕ ತಡೆದು ನಿಲ್ಲಿಸಬಹುದು ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್‌ ನಾಯಕರಿದ್ದಾರೆ.. ಆದರೆ ಇವರ ಫೋನ್‌ಕಾಲ್‌ಗೆ ಜನರು ಹೇಗೆ ರೆಸ್ಪಾಂಡ್‌ ಮಾಡುತ್ತಾರೆ ಮತ್ತು ಫೋನ್‌ ಕಾಲ್‌ ಮೂಲಕ ಎಷ್ಟರ ಮಟ್ಟಿಗೆ ಕಾಂಗ್ರೆಸ್‌ ನಾಯಕರು ಮನವೊಲಿಸಲು ಸಾಧ್ಯವಾಗುತ್ತದೆ ಎಂಬುದರ ಆಧಾರದ ಮೇಲೆಯೇ ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ರಿಸಲ್ಟ್‌ ನಿಂತಿದೆ..

Shwetha M