‘ನಮ್ಮ ಪಾಲು ನಮಗೆ ಬರಲಿಲ್ಲ.. ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ’ – ಲೆಕ್ಕ ಕೊಟ್ಟು ಸಿಡಿದ ಸಿದ್ದರಾಮಯ್ಯ!

‘ನಮ್ಮ ಪಾಲು ನಮಗೆ ಬರಲಿಲ್ಲ.. ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ’ – ಲೆಕ್ಕ ಕೊಟ್ಟು ಸಿಡಿದ ಸಿದ್ದರಾಮಯ್ಯ!

ಸಿಎಂ, ಡಿಸಿಎಂ ಹಾಗೂ ಸಚಿವರ ಪದಗ್ರಹಣದ ಬೆನ್ನಲ್ಲೇ ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆಸಲಾಯ್ತು. ಕಾಂಗ್ರೆಸ್ ನ ಗ್ಯಾರಂಟಿಗಳನ್ನ ಕುರಿತಂತೆ ಚರ್ಚೆ ನಡೆಸಲಾಯ್ತು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಭಾಗಿಯಾಗಿದ್ರು. ವಿಧಾನಸೌಧದಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ಸಿಎಂ, ಡಿಸಿಎಂ ಜೊತೆ ನೂತನ ಸಚಿವರಾದ ಡಾ.ಜಿ ಪರಮೇಶ್ವರ್, ಕೆ.ಹೆಚ್ ಮುನಿಯಪ್ಪ, ಕೆ.ಜೆ ಜಾರ್ಜ್, ರಾಮಲಿಂಗಾ ರೆಡ್ಡಿ, ಪ್ರಿಯಾಂಕ್ ಖರ್ಗೆ, ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ ಹಾಗೂ ಜಮೀರ್ ಅಹ್ಮದ್ ಖಾನ್ ಭಾಗಿಯಾಗಿದ್ರು.

ಇದನ್ನೂ ಓದಿ : ನುಡಿದಂತೆಯೇ ನಡೆದ ಕಾಂಗ್ರೆಸ್ ಸರ್ಕಾರ – 5 ಗ್ಯಾರಂಟಿಗಳ ಜಾರಿಗೆ ಮುಹೂರ್ತ ಫಿಕ್ಸ್..!

ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ನಾಡಿನ ಜನತೆಗೆ ಹಾಗೂ ಮತದಾರರಿಗೆ ಧನ್ಯವಾದ ತಿಳಿಸಿದ್ರು. ಹಾಗೇ ಪ್ರಮುಖವಾಗಿ ಪ್ರಣಾಳಿಕೆ ಮೂಲಕ ಹಲವು ಭರವಸೆಗಳನ್ನ ನೀಡಿದ್ದೇವೆ. ಅವೆಲ್ಲ ಒಂದೇ ಬಾರಿಗೆ ಈಡೇರಿಸುವ ಭರವಸೆಗಳಲ್ಲ. ಅದರಲ್ಲಿ 5 ಗ್ಯಾರಂಟಿಗಳನ್ನ ಜನರಿಗೆ ವಾಗ್ದಾನದ ಮೂಲಕ ಕೊಟ್ಟಿದ್ದೇವೆ. ಜನರಿಗೆ ಹೇಳಿದಂತೆ ಮೊದಲನೇ ಸಚಿವ ಸಂಪುಟ ಸಭೆಯಲ್ಲೇ 5 ಗ್ಯಾರಂಟಿಗಳಿಗೆ ಒಪ್ಪಿಗೆ ಪಡೆದು ಸಂಬಂಧಪಟ್ಟ ಆದೇಶ ಹೊರಡಿಸೋದಾಗಿ ಹೇಳಿದ್ದೆವು. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಅಂದ್ರು. ಹಾಗೇ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.

ಕಳೆದ ಬಾರಿ ಅಂದ್ರೆ 2013ರಿಂದ 2018ರ ಅವಧಿಯಲ್ಲಿ 165 ಭರವಸೆಗಳ ಪೈಕಿ 158ನ್ನ ಈಡೇರಿಸಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಪ್ರಣಾಳಿಕೆಯಲ್ಲಿ ನೀಡದೇ ಇದ್ದರೂ 30 ಯೋಜನೆಗಳನ್ನ ಜಾರಿಗೆ ತಂದಿದ್ದೆವು. ಆದರೆ ವಿರೋಧ ಪಕ್ಷದವರು ಜನರನ್ನ ತಪ್ಪು ದಾರಿಗೆ ಎಳೆಯೋಕೆ ಭರವಸೆ ಈಡೇರಿಸೋಕೆ ಆಗಲ್ಲ, ರಾಜ್ಯ ದಿವಾಳಿಯಾಗುತ್ತೆ, ಸಾಲಗಾರ ರಾಜ್ಯವಾಗುತ್ತೆ ಅಂತಾ ಪ್ರಧಾನಮಂತ್ರಿಗಳೇ ಮನ್ ಕೀ ಬಾತ್ ನಲ್ಲಿ ಹೇಳಿದ್ದಾರೆ. ಬೊಮ್ಮಾಯಿ ಸೇರಿದಂತೆ ರಾಜ್ಯದ ಹಲವು ನಾಯಕರು ಇದನ್ನೇ ಹೇಳಿದ್ರು. ಆದರೆ ನಾವು ಕೊಟ್ಟಿರುವ ಗ್ಯಾರಂಟಿಗಳ ಈಡೇರಿಕೆಗೆ 50 ಸಾವಿರ ಕೋಟಿ ವೆಚ್ಚವಾಗುತ್ತದೆ. ನಮ್ಮ ರಾಜ್ಯದ ಬಜೆಟ್ 3ಲಕ್ಷದ 10 ಕೋಟಿ ರೂಪಾಯಿ ಇದೆ. ತೆರಿಗೆ ಕಟ್ಟುನಿಟ್ಟಾಗಿ ಕಟ್ಟಿಸಿಕೊಳ್ಳೋದ್ರಿಂದ ಆದಾಯ ಹೆಚ್ಚಾಗುತ್ತೆ ಅಂದರು.

ಕೇಂದ್ರದ ಫೈನಾನ್ಸ್ ಕಮಿಷನ್ ಬಗ್ಗೆಯೂ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರದಿಂದ 15 ಫೈನಾನ್ಸ್ ಕಮಿಷನ್ ಮೂಲಕ 50 ಸಾವಿರ ಕೋಟಿ ಬರುತ್ತೆ. ನನ್ನ ಪ್ರಕಾರ ಅದು 1 ಲಕ್ಷ ಕೋಟಿ ಆಗುತ್ತೆ. 15 ಫೈನಾನ್ಸ್ ಕಮಿಷನ್ ನಲ್ಲಿ ಅನ್ಯಾಯ ಆಗದಿದ್ದರೆ 1 ಲಕ್ಷ ಕೋಟಿ ಆಗಬೇಕಿತ್ತು. ಇಲ್ಲಿದ್ದ ಬಿಜೆಪಿ ಬೇಜವಾಬ್ದಾರಿ ಸರ್ಕಾರ 15 ಫೈನಾನ್ಸ್ ಕಮಿಷನ್ ಮುಂದೆ ವಾದ ಮಂಡಿಸದೆ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಹಣ ತಪ್ಪಿಸಿದ್ರು. ನಾವು ಕಟ್ಟುವ ತೆರಿಗೆಯ ನಮ್ಮ ಪಾಲು ಇದೆ. ಕರ್ನಾಟಕದಿಂದ ಸುಮಾರು 4 ಲಕ್ಷ ಕೋಟಿ ರೂಪಾಯಿ ತೆರಿಗೆ ಕಟ್ಟುತ್ತಿದ್ದೇವೆ. ಆದರೆ ಸರಿಯಾಗಿ ನಮಗೆ ವಾಪಸ್ ಕೊಡುತ್ತಿಲ್ಲ. ಕೆಲವನ್ನ ಅವರೇ ಇಟ್ಟುಕೊಳ್ತಾರೆ. ಕಳೆದ ಬಾರಿ 5,495 ಕೋಟಿ ಕರ್ನಾಟಕಕ್ಕೆ ಬರಬೇಕಿತ್ತು. ಇದನ್ನ ಕಳೆದ ಬಿಜೆಪಿ ಸರ್ಕಾರ ತಗೊಂಡೇ ಇಲ್ಲ. ಇದಕ್ಕಿಂತ ಅನ್ಯಾಯ ಮಾಡಿರುವ ಸರ್ಕಾರ ಇಲ್ವೇ ಇಲ್ಲ. ಕರ್ನಾಟಕ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಕೊಡಲೇಇಲ್ಲ. ಇದರಿಂದ ಕರ್ನಾಟಕಕ್ಕೆ ನಷ್ಟವಾಗಿದೆ. 5,495 ಕೋಟಿ ಏನು ಚಿಕ್ಕ ಹಣವಲ್ಲ. ಆದರೆ ಯಾರೊಬ್ಬರೂ ಕೂಡ ಇದನ್ನ ಕೇಳಲೇಇಲ್ಲ ಅಂದ್ರು.

ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಎಸ್​ಟಿ ಕೌನ್ಸಿಲ್ ಸದಸ್ಯರಾಗಿದ್ದರು. ಆದರೂ ಪ್ರಯೋಜನವಾಗಲಿಲ್ಲ. ಕೇಂದ್ರ ಸರ್ಕಾರ ನಮ್ಮ ತೆರಿಗೆಯನ್ನೇ ವಾಪಸ್ ಕೊಡೋದು. 5 ಗ್ಯಾರಂಟಿ ಯೋಜನೆಯಾದ್ರೆ ರಾಜ್ಯ ದಿವಾಳಿ ಆಗುತ್ತೆ ಅಂತ ಬಿಜೆಪಿಯವರು ಹೇಳುತ್ತಾರೆ. ದೇಶವನ್ನು ಸಾಲಗಾರ ಮಾಡಿದ್ದು ಯಾರು? ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕೇವಲ ಬರೀ 53 ಲಕ್ಷ ಕೋಟಿ ರೂ. ಸಾಲ ಇತ್ತು. ಈಗ 155 ಲಕ್ಷ ಕೋಟಿ ರೂಪಾಯಿ ದೇಶದ ಮೇಲೆ ಸಾಲ ಇದೆ. ಈಗ ರಾಜ್ಯದ ಸಾಲ 3 ಲಕ್ಷದ 22 ಸಾವಿರ ಕೋಟಿ ರೂ. ಇದೆ ಎಂದು ಸಿದ್ದರಾಮಯ್ಯ ಹೇಳಿದರು.

suddiyaana