ದೆಹಲಿ ತಲುಪಿದ ಸಿದ್ದರಾಮಯ್ಯ, ಡಿಕೆಶಿ – ಇಂದೇ ಫೈನಲ್‌ ಆಗುತ್ತಾ ನೂತನ ಸಚಿವರ ಪಟ್ಟಿ?

ದೆಹಲಿ ತಲುಪಿದ ಸಿದ್ದರಾಮಯ್ಯ, ಡಿಕೆಶಿ – ಇಂದೇ ಫೈನಲ್‌ ಆಗುತ್ತಾ ನೂತನ ಸಚಿವರ ಪಟ್ಟಿ?

ಬೆಂಗಳೂರು: ರಾಜ್ಯದಲ್ಲಿ ಸಿಎಂ, ಡಿಸಿಎಂ ಆಯ್ಕೆ ಪ್ರಹಸನ ಮುಗಿದಿದ್ದು, ಈಗ ಸಂಪುಟ ಸಚಿವರ ಆಯ್ಕೆಗಾಗಿ ಸರ್ಕಸ್‌ ನಡೆಯುತ್ತಿದೆ. ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಸಂಪುಟ ರಚನೆ ಕುರಿತು ಚರ್ಚಿಸಲು ದೆಹಲಿಗೆ ತಲುಪಿದ್ದು, ಹೈಕಮಾಂಡ್ ಜೊತೆ ಚರ್ಚೆ ಮಾಡಲಿದ್ದಾರೆ.

ಇದನ್ನೂ ಓದಿ:  ಡಿಸಿಎಂ ಸ್ಥಾನ ಸಿಗದಿದ್ದಕ್ಕೆ ತ್ಯಾಗದ ತೇಪೆ ಹಚ್ಚಿದ ಪರಮೇಶ್ವರ್ – ಎಲ್ಲವೂ ಮುಗಿಯಿತೆಂದು ಸೈಲೆಂಟ್!  

ಶನಿವಾರ ಮಧ್ಯಾಹ್ನ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಇಂದು ಸಂಜೆಯೇ ನೂತನ ಸಚಿವರ ಪಟ್ಟಿ ಅಂತಿಮವಾಗುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಹಲವು ಶಾಸಕರೂ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಶುಕ್ರವಾರ ಮುಂಜಾನೆಯೇ ಹಲವು ಶಾಸಕರು ಮೂರು ಗುಂಪುಗಳಾಗಿ ದೆಹಲಿಗೆ ತೆರಳಿ ಅಲ್ಲಿಯೇ ಬೀಡು ಬಿಟ್ಟಿದ್ದು ಸಚಿವ ಸ್ಥಾನಕ್ಕೆ ಲಾಬಿ ಮುಂದುವರಿಸಿದ್ದಾರೆ.

ಇದು ನಾವೆಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡಬೇಕಾದ ಸಮಯ. ನಮ್ಮ ವೈಯಕ್ತಿಕ ಅಭಿಲಾಷೆಗಳನ್ನು ಮರೆತು, ಜನರಿಗೆ ನಾವು ನೀಡಿದ ಭರವಸೆಗಳನ್ನು ಈಡೇರಿಸುವ ಸಮಯವಿದು. ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕಿದೆ. ಪ್ರತಿಯೊಬ್ಬರೂ ತಮ್ಮ ಸ್ಥಾನಮಾನಕ್ಕಾಗಿ ಬೇಡಿಕೆ ಇಡುತ್ತಾರೆ. ಹಾಗಂತ, ಅದೆಲ್ಲವೂ ಆಗುತ್ತದೆ ಎಂದು ಹೇಳಲು ಬರುವುದಿಲ್ಲ. ಒಂದು ಮಟ್ಟದ ತ್ಯಾಗ ಅಗತ್ಯವಿರುತ್ತದೆ ಎಂದು ಶಾಸಕ ಡಾ.ಜಿ. ಪರಮೇಶ್ವ‌ ಹೇಳಿದ್ದಾರೆ.

ಕಾಂಗ್ರೆಸ್ ಎಂದರೆ ಎಲ್ಲ ಜಾತಿ, ಧರ್ಮ ಮತ್ತು ಸಮುದಾಯಗಳ ಒಳಗೊಳ್ಳುವಿಕೆಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾವು ಕೇಳುವ ಅಗತ್ಯವಿಲ್ಲ. ಎಲ್ಲ ಸಮುದಾಯಕ್ಕೂ ಸಮಾನ ಅವಕಾಶಗಳನ್ನು ನೀಡಲಾಗುತ್ತದೆ. ನಾಯಕರಿಗೆ ಮಾತ್ರವಲ್ಲಿ ಆ ಸಮುದಾಯದ ಜನರಿಗೂ ಆದ್ಯತೆ ಸಿಗಲಿದೆ. ಹಾಗಾಗಿ, ಸಂಪುಟ ರಚನೆ ಸುಸೂತ್ರವಾಗಿ ನಡೆಯಲಿದೆ’ ಎಂದು ಶಾಸಕ ಯು.ಟಿ. ಖಾದರ್ ಹೇಳಿದ್ದಾರೆ.

suddiyaana