ಕಾರು ಹತ್ತುವ ವೇಳೆ ಕುಸಿದು ಬಿದ್ದ ಸಿದ್ಧರಾಮಯ್ಯ

ವಿಜಯನಗರ: ಮಾಜಿ ಸಿಎಂ, ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ತಮ್ಮ ಕಾರು ಹತ್ತುವ ವೇಳೆ ಕುಸಿದು ಬಿದ್ದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಗಿಯಲ್ಲಿ ಶನಿವಾರ ನಡೆದಿದೆ.
ಇದನ್ನೂ ಓದಿ: ಸುಡಾನ್ ನಿಂದ ಬಂದವರಲ್ಲಿ ಹಳದಿ ಜ್ವರ? – ಲಸಿಕೆ ಪಡೆಯದೇ ನಗರಕ್ಕೆ ಬಂದ 45 ಮಂದಿ ಕ್ವಾರಂಟೈನ್
ಸಿದ್ದರಾಮಯ್ಯ ಅವರು ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಡುವಿಲ್ಲದೆ ಓಡಾಟ ನಡೆಸುತ್ತಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿಲ್ಲದೇ ಪ್ರಚಾರ ನಡೆಸುತ್ತಿದ್ದಾರೆ. ಶನಿವಾರ ಕೂಡ್ಲಗಿ ಕಾಂಗ್ರೆಸ್ ಅಭ್ಯರ್ಥಿ ಡಾ. ಎನ್ ಟಿ ಶ್ರೀನಿವಾಸ್ ಅವರ ಪರ ಪ್ರಚಾರ ಮಾಡುವುದಕ್ಕಾಗಿ ಹೆಲಿಕಾಪ್ಟರ್ ಮೂಲಕ ಕೂಡ್ಲಗಿಗೆ ಕೂಡ್ಲಿಗಿಗೆ ತೆರಳಿದ್ದರು. ಹೆಲಿಕಾಪ್ಟರ್ ನಿಂದ ಇಳಿದ ಕೂಡಲೇ ಸಿದ್ದರಾಮಯ್ಯ ಅವರು ತಮ್ಮ ಮೊಬೈಲ್ನಲ್ಲಿ ಬ್ಯೂಸಿ ಆಗಿದ್ದರು. ಬಳಿಕ ಅವರು ಕಾರಿನ ಬಳಿ ಆಗಮಿಸಿದ್ದಾರೆ. ಇನ್ನೇನು ಕಾರಿನೊಳಗೆ ಕೂರಬೇಕೆನ್ನುವಷ್ಟರಲ್ಲಿ ಬಾಗಿಲ ಬಳಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದ ಅವರ ಅಂಗರಕ್ಷಕ ನೆರವಿಗೆ ಧಾವಿಸಿ ಕೈ ಹಿಡಿದು ಎತ್ತಿದ್ದಾರೆ.
ಅಸ್ವಸ್ತಗೊಂಡಿದ್ದ ಸಿದ್ಧರಾಮಯ್ಯ ಅವರನ್ನು ಕಾರಿನ ಸೀಟಿನ ಮೇಲೆ ಕೂರಿಸಿದ್ದಾರೆ. ಬಳಿಕ ವೈದ್ಯರು ಸಿದ್ದರಾಮಯ್ಯ ಅವರ ತಪಾಸಣೆ ಮಾಡಿ ಗುಕ್ಲೋಸ್ ನೀಡಿದ್ದಾರೆ. ಗುಕ್ಲೋಸ್ ಕುಡಿದ ಬಳಿಕ ಚೇತರಿಸಿಕೊಂಡು ಮತ್ತೆ ಸಿದ್ದರಾಮಯ್ಯ ಜನರತ್ತ ಕೈ ಬೀಸಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿದ ಸಿದ್ದರಾಮಯ್ಯ ” ಗಾಬರಿ ಪಡುವಂತಹದ್ದೇನಿಲ್ಲ, ಗಟ್ಟಿಮುಟ್ಟಾಗಿದ್ದೇನೆ. ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೆ. ಈಗ ಆರಾಮಾಗಿದ್ದೇನೆ” ಎಂದು ಹೇಳಿದ್ದಾರೆ.
ಗಾಬರಿ ಪಡುವಂತಹದ್ದೇನಿಲ್ಲ, ಗಟ್ಟಿಮುಟ್ಟಾಗಿದ್ದೇನೆ.
ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೆ.
ಈಗ ಆರಾಮಾಗಿದ್ದೇನೆ.
ಇದನ್ನು ಅತಿರಂಜಿತ ರೀತಿಯಲ್ಲಿ ವರದಿಮಾಡಿ ಜನ ಗಾಬರಿ ಪಡುವಂತೆ ಮಾಡಬೇಡಿ ಎಂದು ಮಾಧ್ಯಮ ಮಿತ್ರರಲ್ಲಿ ವಿನಂತಿ.— Siddaramaiah (@siddaramaiah) April 29, 2023

ನೋಡಿರಿ

