ದಾಖಲೆಯ ಬಜೆಟ್ ಮಂಡನೆಯಲ್ಲಿ ರೇಷ್ಮೆ ಪಂಚೆ ಉಟ್ಟು ಸಿಎಂ ಸಿದ್ದು ಮಿಂಚಿಂಗ್ – 800 ಕರ್ನಾಟಕ ಪಬ್ಲಿಕ್ ಶಾಲೆ ಘೋಷಣೆ

ಕರ್ನಾಟಕ ವಿಧಾನಮಂಡಲದ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿದ್ದಾರೆ. ಇದು ರಾಜ್ಯದ ಹಣಕಾಸು ಸಚಿವರಾಗಿ ದಾಖಲೆಯ 17ನೇ ಬಜೆಟ್ ಆಗಿದೆ. ದಾಖಲೆಯ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಅವರು ರೇಷ್ಮೆ ಪಂಚೆ ಹಾಗೂ ಶರ್ಟ್ ಧರಿಸಿ ವಿಧಾನಸೌಧಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಕಳೆದ 30 ವರ್ಷಗಳಲ್ಲಿ ಸಿಎಂ ಸಿದ್ದರಾಮಯ್ಯ ಇದೀಗ 17 ಬಜೆಟ್ ಮಂಡಿಸುತ್ತಿದ್ದಾರೆ. ಬಜೆಟ್ ಹೈಲೆಟ್ಸ್ ಇಲ್ಲಿದೆ.
- 800 ಕರ್ನಾಟಕ ಪಬ್ಲಿಕ್ ಶಾಲೆ ಘೋಷಣೆ
ರಾಜ್ಯದ 2026-27ನೇ ಸಾಲಿನ ಬಜೆಟ್ನಲ್ಲಿ ಶಿಕ್ಷಣ ಇಲಾಖೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ 800 ಕರ್ನಾಟಕ ಪಬ್ಲಿಕ್ ಶಾಲೆ ಘೋಷಣೆ ಮಾಡಲಾಗಿದೆ. ಇದು ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ.
- ಗೃಹಲಕ್ಷ್ಮೀಯರಿಗೆ 28,608 ಕೋಟಿ
ರಾಜ್ಯದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ ಸಿಎಂ ಸಿದ್ದರಾಮಯ್ಯ. ಗೃಹಲಕ್ಷ್ಮೀಯರಿಗೆ 28,608 ಕೋಟಿ ಘೋಷಣೆ ಮಾಡಲಾಗಿದೆ.
- ರಾಜ್ಯದಲ್ಲಿ 12 ಹೊಸ ಪೊಲೀಸ್ ಠಾಣೆ ಆರಂಭ
ರಾಜ್ಯದಲ್ಲಿ ಈಗಿರುವ ಪೊಲೀಸ್ ಠಾಣೆಗಳ ಜೊತೆಗೆ ಮತ್ತೆ 12 ಹೊಸ ಪೊಲೀಸ್ ಠಾಣೆ ಘೋಷಣೆ ಮಾಡಲಾಗಿದೆ.
- ಉದ್ಯೋಗಿಗಳಿಗೆ ಬಂಪರ್
ರಾಜ್ಯದಲ್ಲಿ ನಿರುದ್ಯೋಗಿಗಳಿಗೆ ಈ ಬಾರಿ ಬಜೆಟ್ನಲ್ಲಿ ಸಿಹಿ ಸುದ್ದಿ ಸಿಕ್ಕಿದೆ. 56 ಸಾವಿರ ಉದ್ಯೋಗ ಭರ್ತಿ ಮಾಡಲಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಇದರಿಂದ ನಿರುದ್ಯೋಗಿಗಳಿಗೆ ರಿಲೀಫ್ ಸಿಗುತ್ತಾ ಕಾದುನೋಡಬೇಕಿದೆ.
- ಬೆಂಗಳೂರಲ್ಲಿ ವೈಟ್ ಟಾಪಿಂಗ್ಗೆ 1700 ಕೋಟಿ
ಬೆಂಗಳೂರಲ್ಲಿ ವೈಟ್ ಟಾಪಿಂಗ್ಗೆ 1700 ಕೋಟಿ ಅನುದಾನ ನೀಡಲಾಗಿದೆ. 158 ಕಿ.ಮೀ ವೈಟ್ ಟಾಪಿಂಗ್ ಘೋಷಣೆ ಮಾಡಲಾಗಿದೆ.

ನೋಡಿರಿ

