ದೀರ್ಘಾವಧಿ ಸಿಎಂ, ದೇವರಾಜು ಅರಸು ರೆಕಾರ್ಡ್ ಬ್ರೇಕ್ – ಸಿದ್ದರಾಮಯ್ಯ ಕಾರ್ಯಕರ್ತರಿಂದ ನಾಟಿ ಕೋಳಿ ಪಾರ್ಟಿ

ರಾಜಕೀಯ ಹೈಡ್ರಾಮಾಗಳ ಮಧ್ಯೆ ಸಿಎಂ ಸಿದ್ದರಾಮಯ್ಯ ಹೊಸದೊಂದು ದಾಖಲೆ ಬರೆದಿದ್ದಾರೆ. ಡಿಕೆಶಿ ಮುಖ್ಯಮಂತ್ರಿ ಆಗ್ತಾರಾ ಇಲ್ವೋ ಅನ್ನೋ ಪ್ರಶ್ನೆಗಳ ಮಧ್ಯೆ ಸಿದ್ದು, ದೇವರಾಜು ಅರಸು ದಾಖಲೆ ಬ್ರೇಕ್ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅತಿಹೆಚ್ಚು ಅವಧಿಯ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಯಾಕಂದರೆ, ದಿ. ದೇವರಾಜ ಅರಸು ಅವರು ಕರ್ನಾಟಕದ ಪಾಲಿಗೆ ಅತಿಹೆಚ್ಚು ಅವಧಿಗೆ ಸಿಎಂ ಆಗಿ ಆಡಳಿತ ನಡೆಸಿದ ದಾಖಲೆ ಇದೆ. ಅವರ ದಾಖಲೆಯನ್ನು ಸಿಎಂ ಸಿದ್ದರಾಮಯ್ಯ ಬ್ರೇಕ್ ಮಾಡಿದ್ದಾರೆ. ಜನವರಿ 6ಕ್ಕೆ ( ಇಂದು ) ಸಿದ್ದರಾಮಯ್ಯ ದೀರ್ಘಾವಧಿ ಸಿಎಂ ಆಗಿ ರೆಕಾರ್ಡ್ ಮಾಡಿದ್ದಾರೆ.
ಹಿಂದುಳಿದ ವರ್ಗಗಳ ನೇತಾರರೆಂದೇ ಖ್ಯಾತಿಯಾಗಿದ್ದ ದಿವಂಗತ ದೇವರಾಜು ಅವರು ಈವರೆಗಿನ ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಒಟ್ಟು 7 ವರ್ಷ 239 ದಿನ ಸಿಎಂ ಆಗಿ ಆಡಳಿತ ನಡೆಸಿದ್ರು. ಮೊದಲ ಅವಧಿ ಅಂದರೆ 1972ರ ಮಾರ್ಚ್ 20ರಿಂದ 1977ರ ಡಿಸೆಂಬರ್ 31ರವರೆಗೆ ಮೊದಲ ಅವಧಿ ಪೂರ್ಣಗೊಳಿಸಿದ್ದ ಅರಸು, ಒಟ್ಟು 5 ವರ್ಷ 286 ದಿನ ಅಧಿಕಾರ ನಡೆಸಿದ್ದರು. 2ನೇ ಅವಧಿಯಲ್ಲಿ ಅಂದ್ರೆ 1978ರ ಮಾರ್ಚ್ 17ರಿಂದ 1980ರ ಜೂನ್ 8ರವರೆಗೆ ರಾಜ್ಯದ ಸಿಎಂ ಆಗಿದ್ದರು. ಈ ಅವಧಿಯಲ್ಲಿ 1 ವರ್ಷ 318 ದಿನಗಳ ಕಾಲ ಸಿಎಂ ಆಗಿ ಅಧಿಕಾರ ನಡೆಸಿದ್ದರು. ಈ ಮೂಲಕ 7 ವರ್ಷ 239 ದಿನ ಸುದೀರ್ಘ ಕಾಲ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಏಕೈಕ ನಾಯಕ ಅನ್ನೋ ದಾಖಲೆಗೆ ಡಿ.ದೇವರಾಜು ಅರಸು ಅವರು ಪಾತ್ರರಾಗಿದ್ರು.
ಇದನ್ನೂ ಓದಿ: ಗಂಭೀರ್ ಬದಲಾಗದಿದ್ರೆ ಕೋಚ್ ಚೇಂಜ್ – 5 ತಪ್ಪು.. 2026ರಲ್ಲಿ ಡು ಆರ್ ಡೈ!
ಭೂ ಸುಧಾರಣೆ ಕಾಯ್ದೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಹೆಸರಾಗಿದ್ದ ಅರಸು ನಂತರ ಮತ್ತಾವುದೇ ಮುಖ್ಯಮಂತ್ರಿಗಳು ಇಷ್ಟು ಸುದೀರ್ಘ ಅವಧಿಗೆ ರಾಜ್ಯವನ್ನು ಆಳಿರಲಿಲ್ಲ. ಆದ್ರೀಗ ಸಿದ್ದರಾಮಯ್ಯ, ಡಿ.ದೇವರಾಜು ಅರಸು ಅವರ ರೆಕಾರ್ಡ್ ಬ್ರೇಕ್ ಮಾಡುವ ಇತಿಹಾಸ ನಿರ್ಮಿಸಿದ್ದಾರೆ. 2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ 5 ವರ್ಷ 4 ದಿನಗಳ ಕಾಲ ಅಧಿಕಾರ ನಡೆಸಿದ್ದರು. 2023ರಲ್ಲಿ ಮೇ 20ರಂದು ಎರಡನೇ ಬಾರಿ ಮುಖ್ಯಮಂತ್ರಿಯಾದರು. ನವೆಂಬರ್ 20ಕ್ಕೆ ಸರಿಯಾಗಿ ಎರಡೂವರೆ ವರ್ಷ ಪೂರೈಸಿರುವ ಸಿದ್ದರಾಮಯ್ಯ, ಜನವರಿ 6ಕ್ಕೆ ಅರಸು ದಾಖಲೆ ಮುರಿದಿದ್ದಾರೆ. ರಾಜ್ಯದ ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಕೀರ್ತಿಗೆ ಸಿದ್ದರಾಮಯ್ಯ ಭಾಜನವಾಗಿದ್ದು, ಬೆಂಬಲಿಗರು ಫುಲ್ ಹ್ಯಾಪಿ ಆಗಿದ್ದಾರೆ.
ಇನ್ನು 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಾಗ ಸಿಎಂ ಆಗಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆ ದೊಡ್ಡ ಕದನವೇ ನಡೆದಿತ್ತು. ಕೊನೆಗೆ ಹೈಕಮಾಂಡ್ 50:50 ಸೂತ್ರಕ್ಕೆ ಮೊರೆ ಹೋಗಿ, ಅಧಿಕಾರ ಹಂಚಿಕೆ ಒಪ್ಪಂದ ಮಾಡಿದ್ದಾರೆ ಎನ್ನಲಾಗಿತ್ತು. ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ನಂತರದ ಅರ್ಧ ಅವಧಿಗೆ ಡಿಕೆಶಿ ಸಿಎಂ ಅಂತಾ ಹೇಳಲಾಗಿತ್ತು. ಆದ್ರೀಗ ಸಿದ್ದರಾಮಯ್ಯ ಎರಡೂವರೆ ವರ್ಷ ಪೂರೈಸಿದ್ದು, ಡಿಕೆಶಿ ಮುಖ್ಯಮಂತ್ರಿ ಗಾದಿಗೇರಲು ಸರ್ಕಸ್ ನಡೆಸಿದ್ದಾರೆ. ದೇವರಾಜು ಅವರು ಅವರ ದಾಖಲೆ ಮುರಿದ ಬಳಿಕ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡ್ತಾರೆ ಅನ್ನೋ ಚರ್ಚೆ ಮೊದಲಿನಿಂದಲೂ ಇತ್ತು. ಆದ್ರೀಗ ಸಿದ್ದರಾಮಯ್ಯ ದೇವರಾಜ ಅರಸು ಅವರ ದಾಖಲೆ ಬ್ರೇಕ್ ಮಾಡಿ ತಾವೇ ಸುದೀರ್ಘ ಅವಧಿಯ ಸಿಎಂ ಎಂಬ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ದಾಖಲೆ ಮುರಿದ ಬೆನ್ನಲ್ಲೇ ಹೈಕಮಾಂಡ್ ಕೂಡ ಸಿದ್ದರಾಮಯ್ಯ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಬಹುದು ಅಂತಾ ಹೇಳಲಾಗ್ತಿದೆ. ಜನವರಿ 6ರಂದು ಸಿದ್ದರಾಮಯ್ಯ ದೇವರಾಜು ಅವರ ದಾಖಲೆ ಮುರಿದಿದ್ಸಾರೆ.. ಈ ಸಂತಸ, ಸಂಭ್ರಮಕ್ಕಾಗಿ ಬೆಂಬಲಿಗರು, ಕಾರ್ಯಕರ್ತರು ನಾಟಿಕೋಳಿ ಪಾರ್ಟಿ ಆಯೋಜಿಸಿದ್ದಾರೆ. ಇಂತಹ ಖುಷಿಯಲ್ಲೇ ಹೈಕಮಾಂಡ್ ಶಾಕ್ ಕೊಟ್ಟರೂ ಕೊಡಬಹುದು ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ನೋಡಿರಿ

