ನಮ್ಮ ನಡುವೆ ಯಾವುದೇ ಗುಂಪು ಇಲ್ಲ.. ಸಿಎಂ, ನಾನು ಬ್ರದರ್ಸ್ ತರ ಕೆಲಸ ಮಾಡ್ತೀವಿ ಎಂದ ಡಿಕೆಶಿ!

ಕಳೆದ ಒಂದೆರಡು ತಿಂಗಳಿನಿಂದ ರಾಜ್ಯ ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಫೈಟ್ ಜೋರಾಗಿ ನಡೆಯುತ್ತಿತ್ತು. ಸದ್ಯ ಗದ್ದುಗೆ ಗುದ್ದಾಟ ಹೈಕಮಾಂಡ್ ಅಂಗಳದಲ್ಲಿದೆ. ಇದೀಗ ಸಿಎಂ, ಡಿಸಿಎಂ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ನಾನು ಸಿಎಂ ಬ್ರದರ್ ತರ ಕೆಲಸ ಮಾಡ್ತೀವಿ. ನಮ್ಮ ನಡುವೆ ಯಾವುದೇ ಗುಂಪು ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಕಾಯಿ, ಕಾಯಿ ನುಗ್ಗೆಕಾಯಿ ಸಿಕ್ಕಾಪಟ್ಟೆ ಕಾಸ್ಟ್ಲಿ! – ನುಗ್ಗೆಕಾಯಿ, ಟೊಮ್ಯಾಟೋ ಬೆಲೆ ದುಬಾರಿ!
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿಸಿಎಂ ಡಿಕೆಶಿವಕುಮಾರ್, ನಮ್ಮಲ್ಲಿ ಯಾವುದೇ ಗುಂಪಿಲ್ಲ, ನಾವು ಹುಟ್ಟುವಾಗ ಒಬ್ಬರೇ, ಸಾಯುವಾಗಲೂ ಒಬ್ಬರೇ. ಹಾಗಾಗಿ ಗುಂಪು ಯಾಕೆ ಬೇಕು? ನೀವೆಲ್ಲ ಏನೇನೋ ತೋರಿಸ್ತಿದೀರ, ಸಿದ್ದರಾಮಯ್ಯದೊಂದು ಗುಂಪು, ಡಿಕೆಶಿ ಗುಂಪು ಅಂತ ನಮ್ಮಲ್ಲಿ ಗುಂಪು ಇಲ್ಲ. ಬ್ರೇಕ್‌ಫಾಸ್ಟ್ ಮೀಟಿಂಗ್ ವಿಚಾರ ನನಗೂ ಸಿಎಂಗೆ ಸಂಬಂಧಿಸಿದ ವಿಚಾರ. ನಾವಿಬ್ರೂ ಬ್ರದರ್ಸ್ ಥರ ಇದ್ದೀವಿ ಎಂದು ಹೇಳಿದ್ದಾರೆ.
ಇನ್ನು ವಿಧಾನಸೌಧದಲ್ಲಿಂದು ಡಿಕೆಶಿ, ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿ ಹಿನ್ನೆಲೆ ಹನುನಂತಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಗೌರವ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಡಿಸಿಎಂ, ಹನುನಂತಯ್ಯ ವಿಧಾನಸೌಧ ಕಟ್ಟಿದ್ರು, ಎಸ್.ಎಂ ಕೃಷ್ಣ ವಿಕಾಸಸೌಧ ಕಟ್ಟಿದ್ರು. ಬೆಂಗಳೂರನ್ನು ಕೆಂಪೇಗೌಡ ಕಟ್ಟಿದ್ದಾರೆ. ಅಧಿಕಾರ ಸಿಕ್ಕಿದಾಗ ಇವರೆಲ್ಲ ಸಾಕ್ಷಿಗುಡ್ಡೆ ಬಿಟ್ ಹೋಗಿದ್ದಾರೆ. ಯಾರೇ ಆಗಲೀ ಅಧಿಕಾರ ಸಿಕ್ಕಿದಾಗ ಇಂಥ ಸಾಕ್ಷಿ ಗುಡ್ಡೆ ಬಿಟ್ ಹೋಗಬೇಕು. ನಾವೂ ಕೂಡಾ ಆ ದಿಕ್ಕಿನಲ್ಲಿ ಕೆಲಸ ಮಾಡಬೇಕು. ನಾನು, ಸಿಎಂ ಬ್ರದರ್ಸ್ ಥರ ಕೆಲಸ ಮಾಡ್ತಿದೀವಿ. ನಿಮ್ಮ ಒತ್ತಡಕ್ಕೆ ಬ್ರೇಕ್‌ಫಾಸ್ಟ್ ಎಲ್ಲ, ನಮಗೇನೂ ಅಗತ್ಯ ಇಲ್ಲ. ನಮ್ಮಲ್ಲಿ ಯಾವುದೇ ಗುಂಪಿಲ್ಲ. 140 ಜನರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡ್ತಿದೀವಿ ಎಂದು ಹೇಳಿದರು.

ನೋಡಿರಿ

