ಭಾರತದಲ್ಲೂ ಸೈಬೀರಿಯನ್ ಹುಲಿಗಳ ಘರ್ಜನೆ! – ಯೂರೋಪ್ನಿಂದ ಡಾರ್ಜಿಲಿಂಗ್ ಮೃಗಾಲಯಕ್ಕೆ ಹುಲಿಗಳ ಆಗಮನ
ಪ್ರವಾಸೋಧ್ಯಮ ಅಭಿವೃದ್ಧಿಗಾಗಿ ಸರ್ಕಾರ ಸದಾ ಒಂದಲ್ಲ ಒಂದು ಯೋಜನೆಗಳನ್ನು ಕೈಗೊಳ್ಳುತ್ತಲೇ ಇದೆ. ಕೆಲವು ತಿಂಗಳ ಹಿಂದೆ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ದಕ್ಷಿಣ ಆಫ್ರಿಕಾ ಹಾಗೂ ನಮೀಬಿಯಾದಿಂದ ಒಟ್ಟು 20 ಚೀತಾಗಳನ್ನು ಕರೆತರಲಾಗಿತ್ತು. ಇದೀಗ ಡಾರ್ಜಿಲಿಂಗ್ನಲ್ಲಿರುವ ಪದ್ಮಜಾ ನಾಯ್ಡು ಹಿಮಾಲಯನ್ ಝೂಲಾಜಿಕಲ್ ಪಾರ್ಕ್ಗೆ ಸೈಬೀರಿಯನ್ ಹುಲಿಗಳು ಕರೆತರಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ – ನಟ ದರ್ಶನ್ಗೆ ಬಿಗ್ ರಿಲೀಫ್!
ಹೌದು, ಡಾರ್ಜಿಲಿಂಗ್ನಲ್ಲಿರುವ ಪದ್ಮಜಾ ನಾಯ್ಡು ಹಿಮಾಲಯನ್ ಝೂಲಾಜಿಕಲ್ ಪಾರ್ಕ್ಗೆ ಸೈಬೀರಿಯನ್ ಹುಲಿಗಳು ಕರೆತರಲಾಗಿದ. ಇನ್ನು ಮುಂದೆ ಪಾರ್ಕ್ನಲ್ಲಿ ಸೈಬೀರಿಯನ್ ಹುಲುಗಳು ಘರ್ಜಿಸಲಿವೆ. ಯುರೋಪ್ನಿಂದ ಒಂದು ಗಂಡು ಹಾಗೂ ಒಂದು ಹೆಣ್ಣು ಹುಲಿ ಡಾರ್ಜಿಲಿಂಗ್ಗೆ ಬಂದಿವೆ. ಲಾರಾ ಮತ್ತು ಅಕಾಮಾಗಳ ಮೇಲೆ ವಿಶೇಷ ನಿಗಾ ಇರಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಸೈಬೀರಿಯನ್ ಹುಲಿಗಳ ಆರೈಕೆಗಾಗಿ ಎಂಟು ಪಶುವೈದ್ಯರು ಮತ್ತು ತಜ್ಞರ ತಂಡವನ್ನು ರಚಿಸಲಾಗಿದೆ. ಪ್ರಸ್ತುತ ಅವುಗಳನ್ನು ಮೃಗಾಲಯದ ರಾತ್ರಿ ಆಶ್ರಯದಲ್ಲಿ ಇರಿಸಲಾಗಿದೆ. ಮುಂದಿನ ಒಂದು ತಿಂಗಳ ಕಾಲ ಅವರು ಕ್ವಾರಂಟೈನ್ನಲ್ಲಿ ಇರಬೇಕಾಗುತ್ತದೆ. ಇಬ್ಬರಿಗೂ ವಿಶೇಷ ಆಹಾರ ಪದ್ಧತಿ ಇದೆ. ವಿಟಮಿನ್ಸ್ ಮುಂದುವರಿಯುತ್ತದೆ. ಹುಲಿಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಆರೋಗ್ಯವಾಗಿದ್ದರೆ, ಜನವರಿ 1 ರಂದು ಪ್ರವಾಸಿಗರ ಕಣ್ಣಿಗೆ ಬೀಳಲಿವೆ.
ಇನ್ನು ಸೈಬೀರಿಯನ್ ಹುಲಿ ಬದಲು ಎರಡು ಕೆಂಪು ಪಾಂಡಾಗಳನ್ನು ಯುರೋಪ್ ಮೃಗಾಲಯಕ್ಕೆ ಕಳುಹಿಸಲಾಗಿದೆ. ಡಾರ್ಜಿಲಿಂಗ್ ಮೃಗಾಲಯದ ನಿರ್ದೇಶಕ ಬಸ್ಬ್ರಾಜ್ ಹೊಲೆಯಾಚಿ ಮಾತನಾಡಿ, ಲಾರಾ ಮತ್ತು ಅಕಾಮಾಸ್ ವಿಶೇಷ ವಿಮಾನದ ಮೂಲಕ ಶನಿವಾರ ಕೋಲ್ಕತ್ತಾ ತಲುಪಿವೆ. ಅಲ್ಲಿಂದ ಹವಾನಿಯಂತ್ರಿತ ಆಂಬುಲೆನ್ಸ್ನಲ್ಲಿ ಮೃಗಾಲಯಕ್ಕೆ ಕರೆತರಲಾಯಿತು ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ಎರಡು ಸಿಂಹ ಡಿಸೆಂಬರ್ನಲ್ಲಿ ಬೆಂಗಾಲ್ ಸಫಾರಿ ಪಾರ್ಕ್ಗೆ ಬರಬೇಕಾಗಿತ್ತು, ಆದರೆ ಕಾರ್ಯವಿಧಾನದ ಕಾರಣಗಳಿಂದ ಅದು ಒಂದು ತಿಂಗಳು ವಿಳಂಬವಾಗಿದೆ. ಜನವರಿ ತಿಂಗಳಿನಲ್ಲಿ ಸಿಂಹದ ಜೋಡಿ ಬೆಂಗಾಲ್ ಸಫಾರಿ ಪಾರ್ಕ್ಗೆ ಆಗಮಿಸಲಿದೆ ಎಂದು ತಿಳಿದುಬಂದಿದೆ.