ಶೂರ್ಪನಖಿ ಶ್ವೇತಾಳ ಪ್ರೇಮಿ ಅರೆಸ್ಟ್ – ಪಾಂಡಿಚೇರಿಯಲ್ಲೇ ಸಿಕ್ಕಿಬಿದ್ದ ಪಾಪಿ ಕೆನತ್

ಅವರಿಬ್ಬರೂ ಪ್ರೀತಿ ಎಂಬ ಹೆಸರಿಗೆ ಕಳಂಕ ತಂದವರು. ತಮ್ಮ ಸ್ವಾರ್ಥಕ್ಕಾಗಿ ಮೂವರ ಜೀವ ತೆಗೆದವರು. ಇದೀಗ ಶೂರ್ಪನಖಿ ಶ್ವೇತಾ ಪೊಲೀಸ್ ಕಸ್ಟಡಿಯಲ್ಲಿದ್ದರೆ, ಪಾಪಿ ಪ್ರೇಮಿ ಕೆನತ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇದನ್ನೂ ಓದಿ:32 ಲಕ್ಷ ಸಾಲ.. ಹೆತ್ತವರಿಗೆ 30 ಬಾರಿ ಚಾಕು ಇರಿತ – ಶ್ವೇತಾ ಕೆನತ್ ಮಾಡಿರುವ ಪಾಪ ಕೃತ್ಯ ಅತ್ಯಂತ ಭೀಕರ..!
ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ತಂದೆ, ತಾಯಿ, ಮಗಳನ್ನು ಕೊಂದ ಪ್ರಕರಣದಲ್ಲಿ ತನಿಖೆ ಚುರುಕುಗೊಂಡಿದೆ. ಶ್ವೇತಾ ಪ್ರಿಯಕರ ಕೆನತ್ನನ್ನು ಪೊಲೀಸರು ಬಂಧಿಸಿದ್ದಾರೆ. ಪಾಂಡಿಚೇರಿ ಬಳಿ ಕೆನತ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಬೇರೆ ಬೇರೆಯಾಗಿ ಪಾಂಡಿಚೇರಿ ತಲುಪಿದ್ದರಂತೆ. ಇದೀಗ ಶ್ವೇತಾಳನ್ನ ಪಾಂಡಿಚೇರಿಯಲ್ಲಿ ಎರಡು ದಿನಗಳ ಹಿಂದೆ ಬಂಧಿಸಲಾಗಿತ್ತು. ಇದೀಗ ಪ್ರಕರಣದ ಎರಡನೇ ಆರೋಪಿ ಕೂಡಾ ಪಾಂಡಿಚೇರಿಯಲ್ಲೇ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕೆನತ್ನನ್ನು ಕೆಆರ್ ಪುರ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆಸಿದ್ದಾರೆ.
ಇಬ್ಬರೂ ಜೊತೆಯಲ್ಲೇ ಪಾಂಡಿಚೇರಿಗೆ ಹೊರಟರೂ ಕೂಡಾ ದಾರಿಮಧ್ಯೆ ಜಗಳ ಮಾಡಿಕೊಂಡಿದ್ದರಂತೆ. ಗಲಾಟೆಯ ಬಳಿಕ ಕೆನತ್, ಶ್ವೇತಾಳನ್ನು ಪಾಂಡಿಚೇರಿಯಲ್ಲೇ ಬಿಟ್ಟುಹೋಗಿದ್ದನಂತೆ. ಇದೀಗ ಇಬ್ಬರೂ ಪಾಪಿ ಪ್ರೇಮಿಗಳು ಪೊಲೀಸರ ವಶದಲ್ಲಿದ್ದಾರೆ. ಅಪ್ಪ-ಅಮ್ಮ ತಂಗಿ ಅನ್ನೋದನ್ನ ಮರೆತ ಶ್ವೇತಾ ಮೂವರನ್ನ ನಾನೇ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾಳೆ. ವಿಚಾರಣೆ ವೇಳೆ ತಾಯಿಯ ಮೇಲಿದ್ದ ಕೋಪವನ್ನು ಶ್ವೇತಾ ಹೊರಹಾಕಿದ್ದಾಳೆ ಎಂದು ಹೇಳಲಾಗಿದೆ. ತಂದೆ, ತಾಯಿ, ತಂಗಿ ಇದ್ರೂ ಅನಾಥೆಯಾಗಿದ್ದೆ, ತಾಯಿಯ ನಡವಳಿಕೆ ನನ್ನನ್ನ ಕೈದಿಯನ್ನಾಗಿ ಮಾಡಿತ್ತು. ಸ್ಕೂಲ್ ದಿನಗಳಿಂದಲೂ ಮಾನಸಿಕವಾಗಿ ಎದುರಿಸಿದ ಸಮಸ್ಯೆ ಹೇಳಿಕೊಂಡ ಆರೋಪಿತೆ ಶ್ವೇತಾ, ನನಗೆ ಫ್ರೀಡಂ ಕೊಡ್ತಿರಲಿಲ್ಲ, ಕೈದಿಯಂತೆ ನೋಡಿಸಿಕೊಳ್ತಿದ್ರು ಎಂದಿದ್ದಾಳೆ. ‘ಈ ಒಂದು ಕಾರಣಕ್ಕೆ ಇಡೀ ಫ್ಯಾಮಿಲಿಯನ್ನೇ ಕೊಂದೆ’ ವಿಚಾರಣೆ ವೇಳೆ ಪೊಲೀಸ ಬಳಿ ಶ್ವೇತಾ ವಿವರಿಸಿದ್ದಾಳೆ. ತಾಯಿ ಮುತ್ತುಲಕ್ಷ್ಮೀ ಸ್ಕೂಲ್ ದಿನಗಳಿಂದಲೂ ಶ್ವೇತಾಳ ವಿಚಾರದಲ್ಲಿ ತುಂಬಾ ಕಟ್ಟುನಿಟ್ಟಾಗಿ ಇದ್ದರಂತೆ. ತಾಯಿ ಪ್ರತೀ ವಿಚಾರದಲ್ಲೂ ನನ್ನ ಜೊತೆ ಕಠೋರವಾಗಿ ನಡೆದುಕೊಳ್ತಿದ್ದಳು. ನನ್ನ ಯಾವ ನಿರ್ಧಾರವನ್ನೂ ಒಪ್ಪುತ್ತಿರಲಿಲ್ಲ. ಇದು ಆಕೆ ನಡವಳಿಕೆ ನನ್ನ ಮನಸ್ಥಿತಿ ಹಾಳು ಮಾಡಿತ್ತು. ನನ್ನ ಪರಿಸ್ಥಿತಿ ನೋಡಿ ಸ್ಕೂಲ್ ಮೇಟ್ ಗಳು ರೇಗಿಸ್ತಿದ್ರು. ಕೆಲವರು ನಿನ್ನ ಪರಿಸ್ಥಿತಿ ನೋಡೋಕೆ ಆಗಲ್ಲ ಅಂತ ಬೇಸರ ವ್ಯಕ್ತಪಡಿಸ್ತಿದ್ರು ಎಂದು ಶ್ವೇತಾ ಪೊಲೀಸರೆದುರು ಹೇಳಿಕೆ ನೀಡಿದ್ದಾಳೆ. ಶ್ವೇತಾ 7 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದರೆ, ಪ್ರೇಮಿ ಕೆನತ್ ಪೊಲೀಸರ ವಶದಲ್ಲಿದ್ದಾನೆ.

ನೋಡಿರಿ

