ಅಮ್ಮನನ್ನು ಕೊಂದಿದ್ದು ನಾನೇ ಎಂದ ಶ್ವೇತಾ – ಡೈರಿಯಲ್ಲಿತ್ತು ತ್ರಿವಳಿ ಕೊ*ಲೆಯ ಹಿಂದಿನ ರಹಸ್ಯ

ಅಮ್ಮನನ್ನು ಕೊಂದಿದ್ದು ನಾನೇ ಎಂದ ಶ್ವೇತಾ – ಡೈರಿಯಲ್ಲಿತ್ತು ತ್ರಿವಳಿ ಕೊ*ಲೆಯ ಹಿಂದಿನ ರಹಸ್ಯ

ತಾಯಿಗಿಂತ ಬೇರೆ ದೇವರಿಲ್ಲ ಅಂತಾರೆ. ಆದರೆ, ಇಲ್ಲೊಬ್ಬಳು ಮಗಳಿಗೆ ಪ್ರೇಮಿಗಿಂತ ಬೇರೆ ಜಗತ್ತೇ ಇರಲಿಲ್ಲ. ಜನ್ಮಕೊಟ್ಟವಳು, ಹಾಲುಣಿಸಿದವಳು, ಮಗಳಿಗೆ ಬದುಕು ಕೊಟ್ಟವಳ ಬೆಲೆ ಮಗಳಿಗೆ ಬೇಕಿರಲಿಲ್ಲ. ತಾಯಿ ಜೊತೆಗೆ ಅಪ್ಪ, ತಂಗಿಯ ಕಥೆಯನ್ನೂ ಮುಗಿಸಿದ್ದಳು ಪಾಪಿ ಶ್ವೇತಾ. ಈಕೆಗೆ ಸಾಥ್ ಕೊಟ್ಟಿದ್ದು ಪಾಪಿ ಪ್ರೇಮಿ ಕೆನತ್. ಇದೀಗ ಶ್ವೇತಾ ಕೊಲೆಯ ವಿಚಾರವನ್ನು ಪೊಲೀಸರೆದುರು ಬಾಯ್ಬಿಟ್ಟಿದ್ದಾಳೆ.

ಇದನ್ನೂ ಓದಿ:ಪ್ರೇಮಿ ಜೊತೆ ಸೇರಿ ಮಗಳಿಂದಲೇ ತ್ರಿಬಲ್ ಮರ್ಡರ್ – ಸಾಯುವ ಮೊದಲು ಸತ್ಯ ಬಾಯ್ಬಿಟ್ಟ ತಂದೆ

ಕೆಆರ್ ಪುರಂ ತ್ರಿಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ಶ್ವೇತಾಳನ್ನು ಪುದುಚೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ದಿನಗಳಿಂದ ಒಂದು ಕಡೆ ನಿಲ್ಲದೇ ಆರೋಪಿ ಶ್ವೇತಾ ಹಾಗೂ ಪ್ರಿಯಕರ ಕೆನತ್ ಸಂಚಾರ ಮಾಡುತ್ತಿದ್ದರು. ಇವರಿಬ್ಬರ ಪತ್ತೆಗಾಗಿ ವೈಟ್ ಫೀಲ್ಡ್ ವಿಭಾಗದ ಆರು ವಿಶೇಷ ಪೊಲೀಸ್ ತಂಡಗಳು ಶೋಧ ಕಾರ್ಯ ನಡೆಸುತ್ತಿದ್ದರು. ಇದೀಗ ಶ್ವೇತಾ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಪುದುಚೇರಿಯ ರೈಲ್ವೇಸ್ಟೇಷನ್‌ನಲ್ಲಿ ಶ್ವೇತಾ ಸಿಕ್ಕಿಬಿದ್ದಿದ್ದಾಳೆ. ಪ್ರಿಯಕರನಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

ಲಿವಿಂಗ್ ಇನ್ ರಿಲೇಷನ್ ಶಿಪ್‌ನಲ್ಲಿದ್ದ ಮಗಳನ್ನ ತಮ್ಮ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದ ಅಪ್ಪ-ಅಮ್ಮ ತಂಗಿಯ ಕಥೆಯನ್ನೇ ಮುಗಿಸುವಂತಹ ಘೋರ ಕೃತ್ಯಕ್ಕೆ ಶ್ವೇತಾ ಮತ್ತು ಕೆತನ್ ಮಾಡಿದ್ಯಾಕೆ ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವಿಚಾರದ ಬಗ್ಗೆ ಶ್ವೇತಾ ಕೆಲವೊಂದು ವಿಚಾರವನ್ನು ಬಾಯ್ಬಿಟ್ಟಿದ್ದಾಳೆ. ತನ್ನ ತಾಯಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು ನಾನೇ ಎಂದು ಶ್ವೇತಾ ಸತ್ಯ ಬಾಯ್ಬಿಟ್ಟಿದ್ದಾಳೆ. ನನ್ನ ಅಮ್ಮನೇ ನನ್ನ ಜೀವನವನ್ನ ಕಂಟ್ರೋಲ್ ಮಾಡುತ್ತಿದ್ದರು. ಅವಳೇ ನನ್ನ ಜೀವನ ಹಾಳು ಮಾಡಿಬಿಟ್ಟಳು. ಏನೂ ಮಾಡೋಕೂ ಅವಕಾಶ ಕೊಟ್ಟಿಲ್ಲ. ತಾನು ಏನು ಮಾಡ್ತೀನಿ ಅಂದ್ರು, ತನ್ನ ತಾಯಿ ನನ್ನನ್ನ ಸ್ವತಂತ್ರವಾಗಿ ಬಿಟ್ಟಿರಲಿಲ್ಲ. ಅವರು ತನ್ನ ಜೀವನ ಹಾಳು ಮಾಡಿದ್ದಾರೆ. ಅದಕ್ಕಾಗಿಯೇ ನಾನು ನನ್ನ ತಾಯಿಯನ್ನ ಕೊಂದೇ ಎಂದು ಶ್ವೇತಾ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾಳೆ.

ತ್ರಿವಳಿ ಕೇಸ್​ಗೆ ಸಂಬಂಧಿಸಿದಂತೆ ಸ್ಫೋಟಕ ವಿಚಾರಗಳು ಬಯಲಾಗ್ತಿದೆ. ಇತ್ತ ಪೊಲೀಸ್ ತನಿಖೆ ವೇಳೆ ಆರೋಪಿ ಶ್ವೇತಾ ವಾಸವಿದ್ದ ಮನೆಯಲ್ಲಿ ಡೈರಿ ಪತ್ತೆಯಾಗಿದೆ. ಹಲವು ದಿನಗಳಿಂದ ಡೈರಿ ಬರೀತಿದ್ದ ಶ್ವೇತಾ, ಇದರಲ್ಲಿ  I am sad, I’m lonely, feeling loved, I’m dispersed, I’m superior ಎಂದು ಬರೆದಿದ್ದಾಳೆ. ಮನೆಯಲ್ಲಿ ಮಹತ್ವದ ಸಾಕ್ಷ್ಯಗಳನ್ನ ಕಲೆ ಹಾಕಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Sulekha

Leave a Reply

Your email address will not be published. Required fields are marked *