ದಾಖಲೆಗಳ ಜೊತೆ ದಿಲ್ ಗೆದ್ದ ಗಿಲ್ – ಶತಕವೀರನಿಗೆ ಬಿಸಿಸಿಐ ಬಿಗ್‌ಬಾಸ್ ಶಹಬ್ಬಾಸ್ ಗಿರಿ

ದಾಖಲೆಗಳ ಜೊತೆ ದಿಲ್ ಗೆದ್ದ ಗಿಲ್ – ಶತಕವೀರನಿಗೆ ಬಿಸಿಸಿಐ ಬಿಗ್‌ಬಾಸ್ ಶಹಬ್ಬಾಸ್ ಗಿರಿ

ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಕ್ವಾಲಿಫೈಯರ್‌- 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಎದುರು ಸಿಡಿದೆದ್ದ ಶುಭಮನ್ ಗಿಲ್‌, ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಗಿಲ್ ಭಾರಿಸಿದ ಆಕರ್ಷಕ ಶತಕದ ಮಧ್ಯೆ, 13ನೇ ಓವರ್‌ನ ಪಿಯೂಷ್ ಚಾವ್ಲಾ ಅವರ ಎಸೆತದಲ್ಲಿ ಹೊಡೆದ ಸಿಕ್ಸ್ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಗಿಲ್ ಬ್ಯಾಟ್‌ನಿಂದ ಸಿಡಿದ ಸಿಕ್ಸ್ , ಬರೋಬ್ಬರಿ 106 ಮೀಟರ್ ದೂರ ಸಾಗಿತು. ಸಿಕ್ಸ್ ಅಬ್ಬರ ನೋಡಿ ಇಡೀ ನರೇಂದ್ರ ಮೋದಿ ಸ್ಟೇಡಿಯಂ ಒಂದು ಕ್ಷಣ ಶಾಕ್ ಆಗಿದ್ದಂತೂ ಸತ್ಯ. ಅತ್ತ ಡಗೌಟ್‌ನಲ್ಲಿ ಕೂತಿದ್ದ ನಾಯಕ ಹಾರ್ದಿಕ್ ಪಾಂಡ್ಯ ನಗುತ್ತಾ ರಿಯಾಕ್ಷನ್ ಕೊಟ್ಟಿದ್ದಾರೆ.

ಇದನ್ನೂ ಓದಿ:ಕೊಹ್ಲಿ ದಾಖಲೆ ಮುರಿದು ದಿಲ್ ಗೆದ್ದ ಗಿಲ್ – ಶುಭ್ ಮನ್ ಆಟಕ್ಕೆ ರೆಕಾರ್ಡ್ ಗಳೇ ಉಡೀಸ್!

ಶುಭಮನ್ ಗಿಲ್‌ ಶತಕ ಸಿಡಿಸಿದಾಗ ಇಡೀ ನರೇಂದ್ರ ಮೋದಿ ಸ್ಟೇಡಿಯಂ ಎದ್ದು ನಿಂತು ಗೌರವ ಸೂಚಿಸಿತು. ಫೀಲ್ಡಿಂಗ್ ಮಾಡುತ್ತಿದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕೂಡಾ ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು. ಅತ್ತ ಪ್ರೇಕ್ಷಕ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಎದ್ದು ನಿಂತು ಚಪ್ಪಾಳೆ ತಟ್ಟಿದರು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಶತಕವೀರ ಶುಭಮನ್ ಗಿಲ್‌, ಐಪಿಎಲ್‌ನಲ್ಲಿ ಇದು ನನ್ನ ಶ್ರೇಷ್ಠ ಇನ್ನಿಂಗ್ಸ್ ಎಂದು ಹೇಳಿದ್ದಾರೆ. ‘ನಾನು ಬಾಲ್ ಟು ಬಾಲ್, ಓವರ್ ಟು ಓವರ್ ಆಡುತ್ತಾ ಸಾಗಿದೆ. ಆ ಒಂದು ಓವರ್‌ನಲ್ಲಿ ಮೂರು ಸಿಕ್ಸ್ ಸಿಡಿಸಿದ್ದು ನನಗೆ ಒಳ್ಳೆಯ ಟಚ್ ಸಿಕ್ಕಿತು. ಆಗ ನನಗೆ ಅನಿಸಿತು ಇಂದು ನನ್ನ ದಿನವೆಂದು. ಅಲ್ಲದೆ ಈ ಪಿಚ್‌ನಲ್ಲಿ ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತಿದ್ದರಿಂದ ಸುಲಭವಾಯಿತು. ಈ ಪಂದ್ಯದಲ್ಲಿ ಆಡಬೇಕಿರುವುದು ಮುಖ್ಯವಾಗಿತ್ತು. ನಾನು ಉತ್ತಮವಾದ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿ ಐಪಿಎಲ್‌ನಲ್ಲಿ ಕಣಕ್ಕಿಳಿದೆ. ಕೊನೆಯ ಸೀಸನ್ ಕೂಡ ನನಗೆ ಅತ್ಯುತ್ತಮವಾಗಿತ್ತು. ನಾನು ಬ್ಯಾಟ್ ಮಾಡಲು ಶುರು ಮಾಡಿದಾಗ ಇಲ್ಲಿ ಒಳ್ಳೆಯ ಸ್ಕೋರ್ ಮಾಡಬಹುದು ಎಂಬ ನಂಬಿಕೆ ಬಂತು’ ಎಂದು ಗಿಲ್ ಹೇಳಿದ್ದಾರೆ.

suddiyaana