ಟೆಸ್ಟ್‌ನಲ್ಲಿ ಫ್ಲಾಪ್ ಕ್ರಿಕೆಟರ್ ಆದ ಶುಬ್ಮನ್ ಗಿಲ್ – ಸೆಕೆಂಡ್ ಟೆಸ್ಟ್‌ ಚಾನ್ಸ್ ಸಿಗೋದು ಡೌಟ್?

ಟೆಸ್ಟ್‌ನಲ್ಲಿ ಫ್ಲಾಪ್ ಕ್ರಿಕೆಟರ್ ಆದ ಶುಬ್ಮನ್ ಗಿಲ್ –  ಸೆಕೆಂಡ್ ಟೆಸ್ಟ್‌ ಚಾನ್ಸ್ ಸಿಗೋದು ಡೌಟ್?

ಟೆಸ್ಟ್ ಕ್ರಿಕೆಟ್​ನಲ್ಲಿ ಕಳೆದ ಎಂಟು ತಿಂಗಳಿನಿಂದ ಶುಬ್ಮನ್ ಗಿಲ್ ಕಂಪ್ಲೀಟ್ ಫ್ಲಾಪ್ ಶೋ. ಒಂದೇ ಒಂದು ಹಾಫ್​ ಸೆಂಚೂರಿ ಕೂಡ ಹೊಡೆದಿಲ್ಲ. ಆದ್ರೂ ಶುಬ್ಮನ್ ಗಿಲ್​ಗೆ ಮೇಲಿಂದ ಮೇಲೆ ಚಾನ್ಸ್​ ನೀಡ್ತಾನೆ ಇದ್ದಾರೆ. ಆದ್ರೆ ಈಗ ಚಾನ್ಸ್​ ಕೊಟ್ಟಿರೋದು ಸ್ವಲ್ಪ ಜಾಸ್ತಿನೇ ಆಯ್ತು ಅಂತಾ ಕಾಣ್ಸುತ್ತೆ. ಹೀಗಾಗಿ ಸ್ವಲ್ಪ ಬಿಸಿ ಮುಟ್ಟಿಸಬೇಕಾದ ಅವಶ್ಯಕತೆ ಇದೆ. ಫಾರ್ಮ್​​ನಲ್ಲಿ ಇಲ್ಲ ಅಂದ್ಮೇಲೆ ಟೀಮ್​​​ನಲ್ಲಿ ಆಡಿಸೋದು ಸರಿಯಲ್ಲ. ಶುಬ್ಮಗಿಲ್​ ಔಟ್ ಫಾರ್ಮ್ ಮತ್ತು ಇಂಗ್ಲೆಂಡ್​​ ವಿರುದ್ಧದ ಫಸ್ಟ್​ ಟೆಸ್ಟ್​​ನಲ್ಲಿ ಟೀಂ ಇಂಡಿಯಾದ ಫೇಲ್ಯೂರ್ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 69 ವರ್ಷಗಳ ಹಳೆಯ ದಾಖಲೆ ಮುರಿದು ಇತಿಹಾಸ ನಿರ್ಮಿಸಿದ ಇಂಗ್ಲೆಂಡ್ – ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಮುಖಭಂಗ

ಟಿ-20 ಮತ್ತು ವಂಡೇ ಕ್ರಿಕೆಟ್ ನಮಗೆಲ್ಲಾ ತುಂಬಾನೆ ಎಂಟರ್​ಟೈನ್​​ಮೆಂಟ್ ನೀಡ್ತಾ ಇರಬಹುದು. ಹೀಗಾಗಿ ಟೆಸ್ಟ್​ ಕ್ರಿಕೆಟ್ ಬೋರ್ ಅನ್ನಿಸ್​​ಬಹುದು. ​ಆದ್ರೆ ಒಬ್ಬ ಕ್ರಿಕೆಟರ್ ಪಾಲಿಗೆ ಟೆಸ್ಟ್​ ಫಾರ್ಮೆಟ್ ಅತ್ಯಂತ ಕ್ರೂಶಿಯಲ್. ಟೆಸ್ಟ್​​ ಮ್ಯಾಚ್​​ಗಳನ್ನಾಡೋಕೆ ಫಿಟ್ ಆಗಿದ್ರಷ್ಟೇ ಆತ ಒಬ್ಬ ಪರ್ಫೆಕ್ಟ್ ಕ್ರಿಕೆಟರ್ ಎನ್ನಿಸಿಕೊಳ್ತಾನೆ.

ಆದ್ರೆ ಶುಬ್ಮನ್ ಗಿಲ್ ಮಾತ್ರ ಟೆಸ್ಟ್​ನಲ್ಲಿ ದೊಡ್ಡ ಫ್ಲಾಪ್ ಕ್ರಿಕೆಟರ್ ಆಗಿದ್ದಾರೆ. ಶುಬ್ಮನ್ ಗಿಲ್​ ಇದುವರೆಗೆ 21 ಟೆಸ್ಟ್​ ಮ್ಯಾಚ್​ಗಳನ್ನ ಆಡಿದ್ದಾರೆ. ಅಂದ್ರೆ 39 ಇನ್ನಿಂಗ್ಸ್​​ಗಳು.. ಈ 19 ಮ್ಯಾಚ್​ಗಳಲ್ಲಿ, 39 ಇನ್ನಿಂಗ್ಸ್​ಗಳಲ್ಲಿ ಗಿಲ್ ಗಳಿಸಿರೋದು 1063 ರನ್ ಮಾತ್ರ. ಎವರೇಜ್ 29.53. ಒಬ್ಬ ಫುಲ್​ಟೈಮ್ ಬ್ಯಾಟ್ಸ್​ಮನ್ ಆಗಿ ಓಪನಿಂಗ್​​ ಮತ್ತು 3ನೇ ಆರ್ಡರ್​​ನಲ್ಲಿ ಬ್ಯಾಟಿಂಗ್​ಗೆ ಇಳಿದ್ರೂ 21 ಟೆಸ್ಟ್ ಮ್ಯಾಚ್​ಗಳಲ್ಲಿ ಶುಬ್ಮನ್ ಗಿಲ್ 1063 ರನ್ ಗಳಿಸಿದ್ದಾರಷ್ಟೇ. ಆಡಿರೋ ಎಲ್ಲಾ 21 ಮ್ಯಾಚ್​ಗಳಲ್ಲೂ ಶುಬ್ಮನ್​ ಗಿಲ್​ಗೆ ಬ್ಯಾಟಿಂಗ್ ಮಾಡೋಕೆ ಅವಕಾಶ ಸಿಕ್ಕಿದೆ. ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ ಆಗಿಯೇ ಕ್ರೀಸ್​ಗಿಳಿದಿದ್ರು. ಆದ್ರೂ ಕೂಡ ಟೆಸ್ಟ್​ನಲ್ಲಿ ಒಂದು ಬಿಗ್ ಇನ್ನಿಂಗ್ಸ್​ ಆಡೋಕೆ ಶುಬ್ಮನ್ ಗಿಲ್​ಗೆ ಸಾಧ್ಯವಾಗಿಲ್ಲ. ಅದ್ರಲ್ಲೂ ಫಾರಿನ್​​ ಪಿಚ್​ಗಳಲ್ಲಂತೂ ಶುಬ್ಮನ್ ಗಿಲ್ ಅಟ್ಟರ್ ಫ್ಲಾಪ್. ಅದ್ಯಾಕೋ ಗೊತ್ತಿಲ್ಲ, ಇಂಗ್ಲೆಂಡ್​ ಬೌಲರ್ಸ್​ಗಳನ್ನಂತೂ ಫೇಸ್ ಮಾಡೋಕೆ ಶುಬ್ಮನ್ ಗಿಲ್ ಒದ್ದಾಡ್ತಾರೆ. ​ಇಂಗ್ಲೆಂಡ್ ವಿರುದ್ಧ ಶುಬ್ಮನ್ ಗಿಲ್ ಸ್ಕೋರ್ ನೋಡಿ.. 0, 15, 11, 14, 0, 23, 0.. ಒಟ್ಟು ಮೂರು ಬಾರಿ ಗೋಲ್ಡನ್ ಡಕ್. ಟೆಸ್ಟ್​ನಲ್ಲಿ ಒಟ್ಟು 10 ಬಾರಿ ಸಿಂಗಲ್​ ಡಿಜಿಟ್​ಗೆ ಔಟಾಗಿದ್ದಾರೆ.

ಕಳೆದ ವೆಸ್ಟ್​ಇಂಡೀಸ್​ ಸೀರಿಸ್​ನಲ್ಲೂ ಫ್ಲಾಪ್, ಸೌತ್ ಆಫ್ರಿಕಾ ವಿರುದ್ಧದ ಸೀರಿಸ್​​ನಲ್ಲೂ ಫ್ಲಾಪ್. ಇಂಥಾ ಸೂಪರ್​ ಫ್ಲಾಪ್​ ಶೋಗಳನ್ನ ನೀಡಿದ್ರೂ ಶುಬ್ಮನ್ ಗಿಲ್​ಗೆ ಮೇಲಿಂದ ಮೇಲೆ ಚಾನ್ಸ್ ಕೊಡ್ತಾನೆ ಇದ್ದಾರೆ. ಅಫ್​​ಕೋಸ್ ಶುಬ್ಮನ್ ಗಿಲ್ ಒಬ್ಬ ಹೆವೀ ಟ್ಯಾಲೆಂಟೆಡ್ ಕ್ರಿಕೆಟರ್ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಆದ್ರೆ ಇಷ್ಟೆಲ್ಲಾ ಅವಕಾಶ ಕೊಟ್ರೂ ತಮ್ಮ ಕೆಪಾಸಿಟಿಯನ್ನ ಪ್ರೂವ್ ಮಾಡೋಕೆ ಶುಬ್ಮನ್​​ ಗಿಲ್​ಗೆ ಆಗ್ತಾ ಇಲ್ಲ ಅಂದ್ರೆ ಏನರ್ಥ. ಸದ್ಯ ಭಾರತದ ಟೆಸ್ಟ್​​ ಟೀಮ್​ನಲ್ಲಿ ಆಡೋಕೆ ಶುಬ್ಮನ್ ಗಿಲ್ ಅನ್​ಫಿಟ್. ಅಷ್ಟೇ.. ಕೋಚ್ ರಾಹುಲ್ ದ್ರಾವಿಡ್ ಈಗಾಗ್ಲೇ ಶುಬ್ಮನ್ ಗಿಲ್ ದೋಸ್ತಿಯಾಗಿರೋ ಇಶಾನ್​ ಕಿಶನ್​ಗೆ ಒಂದಷ್ಟು ಫಸ್ಟ್​ ಕ್ಲಾಸ್​​ ಮ್ಯಾಚ್​ಗಳನ್ನ ಆಡುವಂತೆ ಸೂಚಿಸಿದ್ದಾರೆ. ಈಗ ಶುಬ್ಮನ್ ಗಿಲ್ ಸರದಿ ಬಂದಿದೆ. ಗಿಲ್​ ಕೂಡ ಒಂದಷ್ಟು ಡೊಮೆಸ್ಟಿಕ್​​ ಮ್ಯಾಚ್​​ಗಳನ್ನ ಆಡಿ ಬರೋದು ಒಳ್ಳೆಯದು ಅನ್ಸುತ್ತೆ. ಫಾರ್ಮ್​ನಲ್ಲಿ ಇಲ್ಲ ಅಂದ್ಮೇಲೆ ನ್ಯಾಷನಲ್​ ಟೀಮ್​ನಲ್ಲಿ ಆಡಿಸೋ ರಿಸ್ಕ್ ಯಾಕೆ ತಗೋಬೇಕು. ಟೀಂ ಇಂಡಿಯಾ ಏನು ಪ್ರಯೋಗ ಶಾಲೆ ಅಲ್ವಲ್ಲಾ. ದೇಶವನ್ನ ರೆಪ್ರೆಸೆಂಟ್​ ಮಾಡೋ ಟೀಮ್. ಅದು ಬೇರೆ ಈಗ ಆಡೋ ಪ್ರತಿ ಟೆಸ್ಟ್​ ಮ್ಯಾಚ್​​ ಕೂಡ ಭಾರತಕ್ಕೆ ತುಂಬಾನೆ ಇಂಪಾರ್ಟೆಂಟ್. ಯಾಕಂದ್ರೆ ಇವೆಲ್ಲವೂ ವರ್ಲ್ಡ್ ಟೆಸ್ಟ್​ ಚಾಂಪಿಯನ್​​ಶಿಪ್​​ನ ಅಂಡರ್​​ನಲ್ಲೇ ಬರುತ್ತೆ. 2025ರ ಟೆಸ್ಟ್ ಚಾಂಪಿಯನ್​​ಶಿಪ್​ಗೆ ಕ್ವಾಲಿಫೈ ಆಗಬೇಕು ಅನ್ನೋದಾದ್ರೆ ಪ್ರತಿ ಮ್ಯಾಚ್​​ನ ಪರ್ಫಾಮೆನ್ಸ್ ಕೂಡ ಕೌಂಟ್ ಆಗುತ್ತೆ. ಹೀಗಿರೋವಾಗ ಔಟ್ ಆಫ್ ಫಾರ್ಮ್​​ನಲ್ಲಿರೋರಿಗೆ ಚಾನ್ಸ್​ ನೀಡುತ್ತಾ ಎಕ್ಸ್​ಪರಿಮೆಂಟ್ ಮಾಡೋ ಸ್ವಿಚ್ಯುವೇಶನ್​ನಲ್ಲೂ ಇಂಡಿಯನ್​ ಟೀಮ್ ಇಲ್ಲ. ಮೋಸ್ಟ್ಲಿ ಸೆಕೆಂಡ್​ ಟೆಸ್ಟ್​​ ಮ್ಯಾಚ್​​ಗೆ ಶುಬ್ಮನ್ ಗಿಲ್​​ರನ್ನ ಡ್ರಾಪ್​ ಮಾಡೋ ಚಾನ್ಸ್ ಹೆಚ್ಚಿದೆ.

 

Sulekha