ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ರೋಹಿತ್ ಶರ್ಮಾ ಫ್ಲಾಪ್ ಶೋ – ಪ್ರಮುಖ ಬ್ಯಾಟರ್‌ಗಳೇ ಕೈಕೊಟ್ಟರೆ ಮುಂದೇನು?

ಇಂಡಿಯಾ vs ಇಂಗ್ಲೆಂಡ್.. ಟಾಸ್ ಗೆದ್ದ ಟೀಂ ಇಂಡಿಯಾ ಫಸ್ಟ್ ಬ್ಯಾಟಿಂಗ್ ಸೆಲೆಕ್ಟ್ ಮಾಡಿಕೊಂಡಿತ್ತು. ಯಶಸ್ವಿ ಜೈಸ್ವಾಲ್ ಯಶಸ್ವಿಯಾಗಿಯೇ ಶತಕ ಸಿಡಿಸಿದ್ದರು. ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಕ್ಯಾಪ್ಟನ್ ರೋಹಿತ್ ಶರ್ಮಾ ಮೂವರು ಕೂಡಾ ಫ್ಲಾಪ್ ಶೋ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ – ಆಂಗ್ಲರನ್ನು ಬೆಂಡೆತ್ತಿದ ಭಾರತದ ಯಂಗ್ ಬ್ಯಾಟರ್
ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಓಪನಿಂಗ್ ಬಂದಿದ್ರು. ಸೆಕೆಂಡ್ ಟೆಸ್ಟ್.. ಮೊದಲನೇ ದಿನ. ಕ್ಯಾಪ್ಟನ್ ರೋಹಿತ್ ಶರ್ಮಾ 41 ಬಾಲ್ಗಳನ್ನ ಫೇಸ್ ಮಾಡಿ 14 ರನ್ ಗಳಿಸಿದ್ರು. ಓಪನಿಂಗ್ ಬಂದ ರೋಹಿತ್ ಶರ್ಮಾರನ್ನ ಆ್ಯಂಡರ್ಸನ್ ಮತ್ತೊಮ್ಮೆ ಬ್ಯಾಟಿಂಗ್ ಟೆಸ್ಟ್ ಮಾಡಿದ್ದಾರೆ. ಔಟ್ ಸ್ವಿಂಗ್, ಇನ್ ಸ್ವಿಂಗ್.. ಲೈನ್ & ಲೆಂತ್ ಬಾಲ್ಗಳ ರೋಹಿತ್ರನ್ನ ಫುಲ್ ಕನ್ಫ್ಯೂಸ್ ಮಾಡಿಬಿಟ್ರು. ರೋಹಿತ್ 14 ರನ್ ಮಾಡೋಕೆ 41 ಬಾಲ್ಗಳನ್ನ ತೆಗೆದುಕೊಂಡಿದ್ದು ಇದೇ ಕಾರಣಕ್ಕೆ. ಜೇಮ್ಸ್ ಆ್ಯಂಡರ್ಸನ್ ಆಕ್ಷರಶ: ರೋಹಿತ್ರನ್ನ ಆಟವಾಡಿಸಿದ್ರು. ಒಂದೋ ಬೀಟ್..ಇಲ್ಲಾ ಡಿಫೆನ್ಸ್.. ಇನ್ನೂ ಕೆಲ ಬಾಲ್ಗಳಿಗೆ ಡಿಫೆನ್ಸ್ ಮಾಡೋಕೂ ಆಗ್ತಾ ಇರಲಿಲ್ಲ. ಕೆಲ ಬಾಲ್ಗಳು ರೋಹಿತ್ ಮೈಗೆ ಬಂದು ಬಡೀತಿದ್ವು. ಜೇಮ್ಸ್ ಆ್ಯಂಡರ್ಸನ್ ಸ್ವಿಂಗ್ ಬೌಲಿಂಗ್ನ್ನ ನೋಡೋದೆ ಒಂದು ಮಜಾ. ಕೊನೆಗೂ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ಡೆಬ್ಯೂ ಮಾಡಿರೋ ಸ್ಪಿನ್ನರ್ ಶೋಯೆಬ್ ಬಶೀರ್ ಬೌಲಿಂಗ್ನಲ್ಲಿ ಲೆಗ್ ಸ್ಲಿಪ್ನಲ್ಲಿ ಕ್ಯಾಚ್ ಕೊಟ್ಟು ಔಟಾದರು. ಈ ಶೋಯೆಬ್ ಬಶೀರ್ ಇದ್ದಾನಲ್ಲ, ಆತ ಜೇಮ್ಸ್ ಆ್ಯಂಡರ್ಸನ್ ಕ್ರಿಕೆಟ್ ಕೆರಿಯರ್ ಆರಂಭವಾಗೋವಾಗ ಹುಟ್ಟಿಯೇ ಇರಲಿಲ್ಲ. ಬಟ್ ಶೋಯೆಬ್ ಫಸ್ಟ್ ಮ್ಯಾಚ್ ಆಡೋವಾಗ ಇತ್ತ 42 ವರ್ಷದ ಜೇಮ್ಸ್ ಆ್ಯಂಡರ್ಸನ್ ಇನ್ನೂ ಬೌಲಿಂಗ್ ಮಾಡ್ತಾನೆ ಇದ್ದಾರೆ. ಜೇಮ್ಸ್ ಆ್ಯಂಡರ್ಸನ್ ಗ್ರೇಟ್ನೆಸ್ಗೆ ಇದೇ ಸಾಕ್ಷಿ. 184ನೇ ಟೆಸ್ಟ್ ಮ್ಯಾಚ್ ಆಡ್ತಾ ಇದ್ದಾರೆ.
ಕಳೆದ 8 ಇನ್ನಿಂಗ್ಸ್ಗಳಲ್ಲಿ ರೋಹಿತ್ ಶರ್ಮಾ ಹೊಡೆದಿರೋದು ಒಂದು ಹಾಫ್ ಸೆಂಚೂರಿ ಮಾತ್ರ. ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ ಮೇಲಿಂದ ಮೇಲೆ ಫೇಲ್ ಆಗ್ತಾನೆ ಇದ್ದಾರೆ. ವಂಡೇನಲ್ಲಿ ಅಟ್ಯಾಕಿಂಗ್ ಬ್ಯಾಟಿಂಗ್ ಮಾಡೋ ರೋಹಿತ್ ಟೆಸ್ಟ್ಗೆ ಬಂದಾಗ ಸ್ಕೋರ್ ಮಾಡೋಕೆ ಒದ್ದಾಡ್ತಿದ್ದಾರೆ. ಸೆಕೆಂಡ್ ಟೆಸ್ಟ್ನ ಡೇ-1 ಟೀಂ ಇಂಡಿಯಾ 50 ರನ್ ಗಳಿಸೋಕೆ 19 ಓವರ್ ಆಡಿದೆ. ಕಳೆದ 4 ವರ್ಷಗಳಲ್ಲಿ ಸಕೆಂಡ್ ಸ್ಲೋವೆಸ್ಟ್ ಸ್ಟಾರ್ಟ್ ಇದು. ಈ ಪೈಕಿ ಹೆಚ್ಚಿನ ಬಾಲ್ಗಳನ್ನ ಫೇಸ್ ಮಾಡಿರೋದೆ ರೋಹಿತ್ ಶರ್ಮಾ. ಫುಲ್ ಡಿಫೆನ್ಸ್ ಮೋಡ್ನಲ್ಲಿದ್ರು. ಓಕೆ ಟೆಸ್ಟ್ ಮ್ಯಾಚ್.. ಸ್ಲೋವಾಗಿ ಸ್ಟಾರ್ಟ್ ಮಾಡಿ ಆಮೇಲೆ ಆಡ್ಬಹುದು ಅದ್ಕೊಂಡ್ರೆ 14 ರನ್ಗೆ ಕ್ಯಾಪ್ಟನ್ ಔಟ್.
ಇನ್ನು 3ನೇ ಆರ್ಡರ್ನಲ್ಲಿ ಬ್ಯಾಟಿಂಗ್ಗೆ ಇಳಿದ ಶುಬ್ಮನ್ ಗಿಲ್ರದ್ದು ಅದೇ ಹಾಡು..ಅದೇ ರಾಗ..46 ಬಾಲ್ಗಳನ್ನ ಆಡಿ 34 ರನ್ಗೆ ಔಟ್. ಅದು ಕೂಡ ವಿಕೆಟ್ ಒಪ್ಪಿಸಿರೋದು ಜೇಮ್ಸ್ ಆ್ಯಂಡರ್ಸನ್ಗೆ. ಇಂಗ್ಲೆಂಡ್ ವಿರುದ್ಧದ ಕಳೆದ 7 ಇನ್ನಿಂಗ್ಸ್ಗಳಲ್ಲಿ 5ನೇ ಬಾರಿಗೆ ಜೇಮ್ಸ್ ಆ್ಯಂಡರ್ಸನ್ ಶುಬ್ಮನ್ ಗಿಲ್ರನ್ನ ಔಟ್ ಮಾಡಿದ್ದಾರೆ. ಔಟ್ ಸೈಡ್ ದಿ ಆಫ್ ಸ್ಟಂಪ್ ಔಟ್ ಸ್ವಿಂಗ್ ಬಾಲ್ನ್ನ ಕೆಣಕೋಕೆ ಹೋಗಿ ಕ್ಯಾಚ್ ಕೊಟ್ರು. ಶುಬ್ಮನ್ ಗಿಲ್ ಕಳೆದ 12 ಇನ್ನಿಂಗ್ಸ್ಗಳಲ್ಲಿ ಗಳಿಸಿರೋದು 207 ರನ್. ಹೈಯೆಸ್ಟ್ 36.. ಸೀರಿಸ್ ಫ್ಲಾಪ್ಶೋ ಕೊಡ್ತಿದ್ತೂ ಶುಬ್ಮನ್ ಗಿಲ್ರನ್ನ ಸೆಲೆಕ್ಟ್ ಮಾಡ್ತಾನೆ ಇದ್ದಾರೆ. ಇನ್ನೂ ಅದೆಷ್ಟು ಚಾನ್ಸ್ ಕೊಡ್ತಾರೋ ಗೊತ್ತಿಲ್ಲ. ಇದೊಂಥರಾ ಆನ್ಸರೇ ಇಲ್ಲದ ಕ್ವಶ್ಚನ್ನಂತಾಗಿದೆ.
ಮಿಸ್ಟರ್ ಶ್ರೇಯಸ್ ಅಯ್ಯರ್.. 59 ಬಾಲ್ಗಳಲ್ಲಿ 27 ರನ್ ಹೊಡೆದು ಅಣ್ಣ ಸೀದ ಪೆವಿಲಿಯನ್ನಲ್ಲಿ ಸೆಟ್ಲ್ ಆದ್ರು. ಇವ್ರದ್ದೂ ಡೇಟಾ ಇದೆ. 12 ಇನ್ನಿಂಗ್ಸ್ಗಳಲ್ಲಿ ಶ್ರೇಯಸ್ ಅಯ್ಯರ್ ಹೊಡೆದಿರೋದು ಕೇವಲ 187 ರನ್. ಶ್ರೇಯಸ್ ಬ್ಯಾಟಿಂಗ್ ನೋಡೋವಾಗ ಟೆಸ್ಟ್ಗೆ ಅನ್ಫಿಟ್ ಪ್ಲೇಯರ್ ಅಂತಾ ಅನ್ನಿಸೋದು ಸುಳ್ಳಲ್ಲ. ಟ್ಯಾಲೆಂಟ್ ಇದೆ.. ಬಟ್ ಟೆಸ್ಟ್ ಕ್ರಿಕೆಟ್ಗೆ ಬೇಕಾದ ಎಬಿಲಿಟಿ ಅವರ ಬ್ಯಾಟಿಂಗ್ನಲ್ಲಿ ಕಾಣ್ತಾ ಇಲ್ಲ.
ಇನ್ನು ರಜತ್ ಪಾಟೀದಾರ್ ಡೆಬ್ಯೂ ಆಗಿದೆ. ಫಸ್ಟ್ ಇನ್ನಿಂಗ್ಸ್ನಲ್ಲಿ ರಜತ್ 32 ರನ್ ಗಳಿಸಿ ಔಟಾದ್ರು. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಶ್ರೀಕರ್ ಭರತ್ ಕೂಡ 17 ರನ್ಗೆ ಔಟ್. ಸಿಕ್ಕ ಚಾನ್ಸ್ ಬಳಸಿಕೊಳ್ಳುವಲ್ಲಿ ಮತ್ತೊಮ್ಮೆ ಫೇಲ್ ಆಗಿದ್ದಾರೆ. ಫಸ್ಟ್ ಡೇ ಟೀಂ ಇಂಡಿಯಾ 336/6 ಸ್ಕೋರ್ ಮಾಡಿದೆ.
ಅಂತೂ ಟೀಂ ಇಂಡಿಯಾಗೆ ನೆರವಾಗಿರೋದು ಯಂಗ್ ಯಶಸ್ವಿ ಜೈಸ್ವಾಲ್. ಈ ಯಂಗ್ಸ್ಟರ್ಗೆ ನಿಜಕ್ಕೂ ಹಸಿವು ಇದೆ. ಪರ್ಫಾಮ್ ಮಾಡ್ಲೇ ಬೇಕು ಅನ್ನೋ ಹಠ ಇದೆ. ತಮ್ಮ ನ್ಯಾಚ್ಯುರಲ್ ಸ್ಟೈಲ್ನಲ್ಲೇ ಅಗ್ರೆಸ್ಸಿವ್ ಆಗಿಯೇ ಆಡಿದ್ರು. ಈವನ್ ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ನ್ನ ಕೂಡ ಸಮರ್ಥವಾಗಿಯೇ ಎದುರಿಸಿದ್ದಾರೆ. 257 ಬಾಲ್ಗಳಲ್ಲಿ 179 ರನ್ ನಾಟ್ಔಟ್. 17 ಬೌಂಡರಿ..5 ಸಿಕ್ಸರ್.. ಇಲ್ಲೇ ಗೊತ್ತಾಗುತ್ತೆ. ಯಶಸ್ವಿ ಜೈಸ್ವಾಲ್ ಯಾವ ರೀತಿ ಅಗ್ರೆಸ್ಸಿವ್ ಆಗಿ ಆಡಿದ್ರು ಅಂತಾ. ಜೈಸ್ವಾಲ್ಗೆ ಡಬಲ್ ಸೆಂಚೂರಿ ಹೊಡೆಯೋ ಎಲ್ಲಾ ಅವಕಾಶಗಳೂ ಇದೆ. ಬಟ್ ಸೆಕೆಂಡ್ ಡೇ ಆರಂಭದಲ್ಲಿ ನ್ಯೂಬಾಲ್ನ್ನ ಫೇಸ್ ಮಾಡೋವಾಗ ತುಂಬಾನೆ ಕೇರ್ಫುಲ್ ಇರ್ಬೇಕಾಗುತ್ತೆ. ಅದು ಬೇರೆ ಜೇಮ್ಸ್ ಆ್ಯಂಡರ್ಸನ್ ಓಪನಿಂಗ್ ಬೌಲಿಂಗ್. ಸ್ವಿಂಗ್ ಆಗ್ತಾ ಇರುತ್ತೆ. ಬಟ್ ಯಶಸ್ವಿ ಜೈಸ್ವಾಲ್ ಕಾನ್ಫಿಡೆನ್ಸ್ ನೋಡಿದ್ರೆ ಡಬಲ್ ಸೆಂಚೂರಿ ಹೊಡೀಬಹುದು ಅನ್ಸುತ್ತೆ. ಇನ್ನು ಇಂಗ್ಲೆಂಡ್ ಟೀಮ್ ಆ್ಯಕ್ಚುವಲಿ ಒಂದು ಮಿಸ್ಟೇಕ್ ಮಾಡಿದಂತೆ ಕಾಣ್ತಿದೆ. ಒಬ್ಬನೇ ಒಬ್ಬ ಫಾಸ್ಟ್ ಬೌಲರ್ನ್ನ ಆಡಿಸ್ತಾ ಇದೆ. ಜೇಮ್ಸ್ ಆ್ಯಂಡರ್ಸನ್ ಬಿಟ್ರೆ ಈ ಮ್ಯಾಚ್ನಲ್ಲಿ ಇಂಗ್ಲೆಂಡ್ನಲ್ಲಿ ಇನ್ಯಾರೂ ಪೇಸ್ ಬೌಲರ್ಸ್ ಇಲ್ಲ ಹೀಗಾಗಿ ಆ್ಯಂಡರ್ಸನ್ ಒಬ್ಬರೇ ಫಸ್ಟ್ ಡೇ 17 ಓವರ್ ಬೌಲ್ ಮಾಡಿದ್ದಾರೆ. 17 ಓವರ್ಗಳಲ್ಲಿ ಜೇಮ್ಸ್ ಆ್ಯಂಡರ್ಸನ್ ಕೊಟ್ಟಿರೋದು ಕೇವಲ 30 ರನ್ ಮಾತ್ರ. ಎಂಥಾ ಬೌಲರ್ ನೋಡಿ. 42 ವರ್ಷವಾದ್ರೂ ಬೌಲಿಂಗ್ ಮಾಡೋ ಅವರ ಉತ್ಸಾಹ ಇನ್ನೂ ಕಡಿಮೆಯಾಗಿಲ್ಲ. ಅದು ಕೂಡ ಟೆಸ್ಟ್ ಕ್ರಿಕೆಟ್ನಲ್ಲಿ. ಏಜ್ ಈಸ್ ನಾಟ್ ಮ್ಯಾಟರ್ ಅನ್ನೋದು ಇದಕ್ಕೆ.