ಅಕ್ಟೋಬರ್ 25ಕ್ಕೆ RO-KO ನಿವೃತ್ತಿ? – ಗಿಲ್ ಗೆ ಪಟ್ಟ ಕಟ್ಟಿದ್ದು ಇದಕ್ಕೇನಾ?

ಅಕ್ಟೋಬರ್ 25ಕ್ಕೆ RO-KO ನಿವೃತ್ತಿ? – ಗಿಲ್ ಗೆ ಪಟ್ಟ ಕಟ್ಟಿದ್ದು ಇದಕ್ಕೇನಾ?

2024ರ ಜೂನ್​ನಲ್ಲಿ ಐಸಿಸಿ ಟ್ರೋಫಿ ಕೈಯಲ್ಲಿಡಿದು ಟಿ20ಐ ನಿವೃತ್ತಿ.. 2025ರ ಮೇನಲ್ಲಿ ಟೆಸ್ಟ್ ಕ್ರಿಕೆಟ್ ವಿದಾಯ.. ಉಳಿದಿದ್ದು ಏಕದಿನ ಮಾದರಿ ಒಂದೇ. ಬಹುಶಃ ಈಗಿನ ಡವಲಪ್​ಮೆಂಟ್ಸ್ ನೋಡ್ತಿದ್ರೆ ಇಲ್ಲಿಂದಲೂ ಹೊರನಡೆಯೋ ದಿನ ದೂರ ಇಲ್ಲ ಅನ್ಸುತ್ತೆ.. ಭಾರತ ತಂಡದಲ್ಲಿ ಚರಿತ್ರೆಯನ್ನೇ ಸೃಷ್ಟಿಸಿದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇತಿಹಾಸದ ಪುಟ ಸೇರೋ ಟೈಂ ಬಂದೇ ಬಿಟ್ಟಂತಿದೆ. ಮುಂಬರುವ ಆಸ್ಟ್ರೇಲಿಯಾ ಸರಣಿಯೇ ಈ ದಿಗ್ಗಜರ ಪಾಲಿಗೆ ಕೊನೆಯಾಗಬಹುದು. ಆದ್ರೆ ನಿವೃತ್ತಿ ಹೊತ್ತಲ್ಲಿ ರೋಹಿತ್ ಶರ್ಮಾರನ್ನ ಬಿಸಿಸಿಐ ನಡೆಸಿಕೊಂಡ ಪರಿ ನಿಜಕ್ಕೂ ಖಂಡನೀಯ.

ಇದನ್ನೂ ಓದಿ:SSLC ವಿದ್ಯಾರ್ಥಿಗಳಿಗೆ ಶಾಕ್‌ ಕೊಟ್ಟ ಶಿಕ್ಷಣ ಇಲಾಖೆ – ಪರಿಕ್ಷಾ ಶುಲ್ಕ 5% ಹೆಚ್ಚಳ! 

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ. ಕಳೆದ ಒಂದೂವರೆ ದಶಕದಲ್ಲಿ ಟೀಂ ಇಂಡಿಯಾವನ್ನ ಉತ್ತುಂಗಕ್ಕೆ ಹೊತ್ತೊಯ್ದ ಜೋಡೆತ್ತುಗಳು. ವಿರಾಟ್​ಗೆ ಬ್ಯಾಟಿಂಗ್​ನಲ್ಲಿ ಸಿಕ್ಕ ಸಕ್ಸಸ್ ಕ್ಯಾಪ್ಟನ್ಸಿಯಲ್ಲಿ ಸಿಗ್ಲಿಲ್ಲ. ಬಟ್ ಹಿಟ್​ಮ್ಯಾನ್ ಬ್ಯಾಟ್ ಮತ್ತು ಕ್ಯಾಪ್ಟನ್ಸಿ ಎರಡರಲ್ಲೂ ಚರಿತ್ರೆಯನ್ನೇ ಸೃಷ್ಟಿಸಿದ ವೀರ. ಆದ್ರೆ ಅದ್ಯಾಕೋ ಏನೋ ನಿವೃತ್ತಿ ಟೈಮಲ್ಲಿ ಮಾತ್ರ ಮ್ಯಾನೇಜ್​ಮೆಂಟ್ ಪದೇಪದೆ ಅವಮಾನ ಮಾಡ್ತಾನೇ ಇದೆ. ಟಿ-20 ವಿಶ್ವಕಪ್ ಗೆದ್ದು ಚುಟುಕು ಸಮರಕ್ಕೆ ವಿದಾಯ ಹೇಳಿದ್ರು ಇಲ್ಲೇನು ತಪ್ಪಿಲ್ಲ. ಬಟ್ ಟೆಸ್ಟ್ ಮತ್ತು ಓಡಿಐ ನಲ್ಲಿ ಮಾತ್ರ ಅಭಿಮಾನಿಗಳ ನಿರೀಕ್ಷೆಯನ್ನ ಬಿಸಿಸಿಐ ಹುಸಿಗೊಳಿಸಿದೆ.

ಆಸ್ಟ್ರೇಲಿಯಾ ಸರಣಿಗೆ ಕ್ಯಾಪ್ಟನ್ ಮಾಡಿ ನಿವೃತ್ತಿ ಪಡೆಯಬಹುದಿತ್ತು!

ಪ್ರಸ್ತುತ ಟೀಂ ಇಂಡಿಯಾದಲ್ಲಿ ಆಗ್ತಿರೋ ಡವಲಪ್​ಮೆಂಟ್ಸ್ ನೋಡ್ತಿದ್ರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯೇ ಕೊನೇ ಸರಣಿ ಆಗೋ ಸಾಧ್ಯತೆಗಳಿವೆ. ಈ ಇಬ್ಬರು ಲೆಜೆಂಡರಿ ಪ್ಲೇಯರ್ಸ್ 2027ರ ಏಕದಿನ ವಿಶ್ವಕಪ್ ಗೆದ್ದು ನಿವೃತ್ತಿ ಘೋಷಿಸೋ ಆಸೆಯಲ್ಲಿದ್ರು. ಆದ್ರೆ ಏಜ್ ರೀಸನ್ ನೀಡಿ ಬಿಸಿಸಿಐ ಆಯ್ಕೆ ಸಮಿತಿ ಇದಕ್ಕೆ ಒಪ್ತಾ ಇಲ್ಲ. ಅಲ್ದೇ ಅಕ್ಬೋಬರ್ 19 ರಿಂದ 25ರವರೆಗೆ ನಡೆಯಲಿರೋ ಸರಣಿಯಲ್ಲೇ ಬೀಳ್ಕೊಡುಗೆಗೆ ಬಿಸಿಸಿಐ ಪ್ಲ್ಯಾನ್ ಮಾಡಿದೆ. 25ರಂದು ಕೊನೇ ಪಂದ್ಯ ಇದ್ದು ಅಂದೇ ಸೆಂಡ್ ಆಫ್ ಕೊಡೋ ಸುದ್ದಿ ಇದೆ. ಓಕೆ ಇವ್ರು ಯಂಗ್​ಸ್ಟರ್ಸ್ ಟೀಂ ಕಟ್ಲಿ ಯಾರು ಬೇಡ ಅಂದಿಲ್ಲ. ಬಟ್ ಆಸ್ಟ್ರೇಲಿಯಾ ಸರಣಿಗೆ ರೋಹಿತ್ ಶರ್ಮಾರನ್ನೇ ಕ್ಯಾಪ್ಟನ್ ಮಾಡಿ ನಿವೃತ್ತಿಯನ್ನ ಪಡೆಯಬಹುದಿತ್ತಲ್ವ. ಅವ್ರಿಬ್ಬರು ತಂಡದಲ್ಲಿ ಇದ್ದಾಗ್ಲೇ ಶುಭ್​ಮನ್ ಗಿಲ್​ಗೆ ನಾಯಕತ್ವ ಕಟ್ಟೋ ಅರ್ಜೆನ್ಸಿ ಏನಿತ್ತು ಅನ್ನೋದಷ್ಟೇ ಇಲ್ಲಿರೋ ಪ್ರಶ್ನೆ. ಇದು ಹಿಟ್​ಮ್ಯಾನ್​ಗೆ ಬಿಸಿಸಿಐ ಒಂಥರಾ ಮೋಸ ಮಾಡಿದಂತೆಯೇ ಆಗಿದೆ. ಟೀಂ ಇಂಡಿಯಾಗೆ ಹತ್ತಾರು ಆಟಗಾರರು ಬರ್ತಾರೆ ಹೋಗ್ತಾರೆ. ಆದ್ರೆ ಇವ್ರಿಬ್ಬರು ತಂಡವನ್ನ ಕಟ್ಟಿದ ರೀತಿ, ಹಾಕಿಕೊಟ್ಟಿರೋ ಸ್ಟಾಂಡರ್ಡ್​ನ ಗೌರವಿಸಲೇಬೇಕಾಗುತ್ತೆ.

25 ಐಸಿಸಿ ಪಂದ್ಯ.. ಒಂದೇ ಸೋಲು.. 2 ಟ್ರೋಫಿ!

ಟೀಂ ಇಂಡಿಯಾಗೆ ಒಬ್ಬ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಕಾಂಟ್ರಿಬ್ಯೂಷನ್ ನಿಜಕ್ಕೂ ಅತ್ಯದ್ಭುತ. 8 ತಿಂಗಳ ಅವಧಿಯಲ್ಲೇ ಭಾರತ ತಂಡಕ್ಕೆ ಎರಡು ಐಸಿಸಿ ಟ್ರೋಫಿಗಳನ್ನ ಗೆಲ್ಲಿಸಿಕೊಟ್ಟ ಸೂಪರ್ ಸ್ಟಾರ್. ಅದ್ರಲ್ಲೂ ನಾಯಕನಾಗಿ ತಮ್ಮ ಕೊನೆಯ ಮೂರು ಐಸಿಸಿ ಟೂರ್ನಿಗಳಲ್ಲಿ ಒಟ್ಟು 25 ಮ್ಯಾಚ್ ಆಡಿದ್ರು. ಬಟ್ ಸೋತಿದ್ದು ಒಂದೇ ಒಂದು. 2023ರ ವಿಶ್ವಕಪ್​ನ ಫೈನಲ್ ಪಂದ್ಯ. 2024ರ ಟಿ-20 ವಿಶ್ವಕಪ್ ಹಾಗೇ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅಜೇಯವಾಗಿ ಭಾರತವನ್ನ ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ರು.  ಚಾಂಪಿಯನ್ಸ್ ಟ್ರೋಫಿ ಗೆದ್ದ ಮೇಲೆ ಮಾತನಾಡಿದ್ದ ರೋಹಿತ್ ಏಕದಿನ ವಿಶ್ವಕಪ್ ಗೆಲ್ಲದೇ ನಿವೃತ್ತಿ ಇಲ್ಲ ಎಂದಿದ್ರು. ಇದೀಗ ಆಸೀಸ್ ಸರಣಿಗೂ ಮುನ್ನ ಫಿಟ್ನೆಸ್​ಗಾಗಿ 10 ಕೆಜಿ ತೂಕ ಇಳಿಸಿದ್ರು. ಆದ್ರೆ ಈಗ ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಈಗಿನ ಬೆಳವಣಿಗೆಗಳನ್ನ ನೋಡ್ತಿದ್ರೆ  ಆಟಗಾರನಾಗಿಯೂ ಮುಂದುವರಿಯೋದು ಡೌಟ್ ಇದೆ.

10 ವರ್ಷಗಳ ಬಳಿಕ ಐಸಿಸಿ ಕಪ್ ಗೆಲ್ಲಿಸಿದ್ದ ರೋಹಿತ್!

ಭಾರತ ಬಲಿಷ್ಠ ತಂಡವೇ ಆಗಿದ್ರೂ 2014ರಿಂದ 2024 ಅಂದ್ರೆ ಸತತ 10 ವರ್ಷಗಳ ಕಾಲ ಕ್ರಿಕೆಟ್ ಜಗತ್ತಿನ ಪವರ್ ಹೌಸ್ ಭಾರತಕ್ಕೆ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲಲಾಗಿರಲಿಲ್ಲ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮೂರು ಸಲ ಟ್ರೋಫಿ ಹತ್ತಿರಕ್ಕೆ ಬಂದ್ರೂ ಸಿಕ್ಕಿರಲಿಲ್ಲ. ಆದ್ರೆ ಈ 10 ವರ್ಷಗಳ ಕೊರಗನ್ನು ನೀಗಿಸಿದ್ದು ರೋಹಿತ್ ಶರ್ಮಾ. ರೋಹಿತ್ ಶರ್ಮಾ ಭಾರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡದ್ದು 2021ರಲ್ಲಿ. ನಾಲ್ಕು ವರ್ಷಗಳಲ್ಲಿ ನಾಲ್ಕು ಐಸಿಸಿ ಫೈನಲ್ಸ್. ಎರಡು ಚಾಂಪಿಯನ್ ಕಿರೀಟ. ಏಕದಿನ ಕ್ರಿಕೆಟ್ ನಲ್ಲಿ ನಾಯಕನಾಗಿ 56 ಪಂದ್ಯಗಳಲ್ಲಿ 42 ಗೆಲುವು.  ಏಕದಿನ ನಾಯಕನಾಗಿ ಎರಡು ಬಾರಿ ಏಷ್ಯಾಕಪ್ ಗೆಲ್ಲಿಸಿಕೊಟ್ಟಿರುವ ರೋಹಿತ್, 2018 ಮತ್ತು 2023 ರ ಏಷ್ಯಾಕಪ್​ನಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಹಾಗೆಯೇ ಇದೇ ವರ್ಷ ನಡೆದಿದ್ದ 2025 ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲೂ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ್ದರು. ಈ ಮೂಲಕ 12 ವರ್ಷಗಳ ನಂತರ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅತಿ ಹೆಚ್ಚು ಗೆಲುವಿನ ಶೇಕಡಾವಾರು ಪ್ರಮಾಣವನ್ನು ಹೊಂದಿದ್ದು, ಅವರ ನಾಯಕತ್ವದಲ್ಲಿ ತಂಡದ ಗೆಲುವಿನ ಶೇಕಡಾವಾರು 72.5% ಆಗಿದೆ. ರೋಹಿತ್ ಹೊರತುಪಡಿಸಿದರೆ ಬೇರೆ ಯಾವುದೇ ನಾಯಕನ ಗೆಲುವಿನ ಶೇಕಡಾವಾರು 70% ಕ್ಕಿಂತ ಹೆಚ್ಚಿಲ್ಲ. ರೋಹಿತ್ ಏಕದಿನ ಕ್ರಿಕೆಟ್‌ನಲ್ಲಿ ನಾಯಕನಾಗಿ ಶೇ.77.27 ರಷ್ಟು ಪಂದ್ಯಗಳನ್ನು ಗೆದ್ದಿದ್ದು, ಇದು ವಿಶ್ವದ ಎರಡನೇ ಅತಿ ಹೆಚ್ಚು ಗೆಲುವಿನ ಶೇಕಡಾವಾರು ಆಗಿದೆ. ವೆಸ್ಟ್ ಇಂಡೀಸ್‌ನ ಕ್ಲೈವ್ ಲಾಯ್ಡ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಅವರ ನಾಯಕತ್ವದಲ್ಲಿ ತಂಡ ಶೇ .77.71 ರಷ್ಟು ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ ಐಸಿಸಿ ಟೂರ್ನಮೆಂಟ್‌ಗಳಲ್ಲಿ ರೋಹಿತ್ ಅವರ ಗೆಲುವಿನ ಶೇಕಡಾವಾರು 87.1% ರಷ್ಟಿದ್ದು, ಇದು ಇತರ ಎಲ್ಲಾ ನಾಯಕರಿಗಿಂತ ಅತ್ಯಧಿಕವಾಗಿದೆ. ರೋಹಿತ್ ಹೊರತುಪಡಿಸಿದರೆ ಐಸಿಸಿ ಈವೆಂಟ್‌ನಲ್ಲಿ ಬೇರೆ ಯಾವುದೇ ನಾಯಕ ಶೇ .80 ರಷ್ಟು ಪಂದ್ಯಗಳನ್ನು ಗೆದ್ದಿಲ್ಲ. ಸೋ ಇದನ್ನೆಲ್ಲಾ ನೋಡಿದ್ರೆ ರೋಹಿತ್ ಕ್ಯಾಪ್ಟನ್ ಯುವ ಭಾರತಕ್ಕೆ ಸುವರ್ಣಯುಗವಾಗಿತ್ತು. ಈಗ ಶುಭ್​ಮನ್ ಗಿಲ್​​ಗೆ ಜವಾಬ್ದಾರಿ ಸಿಕ್ಕಿದೆ.  ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಸೆಟ್ ಮಾಡಿರೋ ಸ್ಟಾಂಡರ್ಡ್​ನ ಮೇಂಟೇನ್ ಮಾಡೋದಷ್ಟೇ ಗಿಲ್ ಮುಂದಿರೋ ಸವಾಲು.

Shwetha M