ಪಾಕ್ ವಿರುದ್ಧ ಕಣಕ್ಕಿಳಿಯಲು ಶುಭ್‌ಮನ್ ಗಿಲ್ ಪ್ರ್ಯಾಕ್ಟೀಸ್ – ಇಶಾನ್ ಕಿಶನ್ ಮತ್ತು ಗಿಲ್ ನಡುವೆ ಆಡೋದ್ಯಾರು?

ಪಾಕ್ ವಿರುದ್ಧ ಕಣಕ್ಕಿಳಿಯಲು ಶುಭ್‌ಮನ್ ಗಿಲ್ ಪ್ರ್ಯಾಕ್ಟೀಸ್ – ಇಶಾನ್ ಕಿಶನ್ ಮತ್ತು ಗಿಲ್ ನಡುವೆ ಆಡೋದ್ಯಾರು?

ಟೀಮ್ ಇಂಡಿಯಾ ಸ್ಟಾರ್ ಆಟಗಾರ ಶುಭ್‌ಮನ್ ಗಿಲ್ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಬೇಕು ಎಂಬುದು ಅಭಿಮಾನಿಗಳ ಮಹಾದಾಸೆ. ಇದರ ಜೊತೆಗೆ ಟೀಮ್ ಇಂಡಿಯಾ ಕೂಡಾ ಪಾಕಿಸ್ತಾನ ತಂಡವನ್ನು ಬಗ್ಗು ಬಡಿಯುವುದನ್ನು ನೋಡಲು ಕೋಟಿ ಕೋಟಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಎರಡು ಗೆಲುವನ್ನು ಕಂಡು ಆತ್ಮವಿಶ್ವಾಸದಲ್ಲಿರುವ ಭಾರತ ಅಹ್ಮಾದಾಬಾದ್‌ಗೆ ಬಂದಿಳಿದಿದೆ. ಶುಭ್‌ಮನ್ ಗಿಲ್ ಕೂಡಾ ತಂಡ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ಶನಿವಾರ ಭಾರತ ಮತ್ತು ಪಾಕಿಸ್ತಾನ ಹೈವೋಲ್ಟೇಜ್ ಕದನಕ್ಕೆ ಅಭಿಮಾನಿಗಳು ಕಾತರ – 2 ಸಾವಿರ ರೂಪಾಯಿ ಟಿಕೆಟ್ 22 ಸಾವಿರ ರೂಪಾಯಿಗೆ ಮಾರಾಟ..!

ಅಕ್ಟೋಬರ್ 14ರ ಶನಿವಾರದಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯಾ ಪಾಕಿಸ್ತಾನ ಪಂದ್ಯ ನಡೆಯಲಿದೆ. ಅದಕ್ಕೂ ಮೊದಲು, ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಡೆಂಗ್ಯೂ ಜ್ವರದಿಂದ ಚೇತರಿಸಿಕೊಂಡಿರುವ ಗಿಲ್ ತಂಡವನ್ನು ಸೇರಿಕೊಂಡಿದ್ದಾರೆ. ಅಹಮದಾಬಾದ್‌ಗೆ ಬಂದಿರುವ ಶುಭ್ಮನ್ ಗಿಲ್ ನೆಟ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದ್ದಾರೆ. ಎರಡೂ ಪಂದ್ಯಗಳಲ್ಲಿ ಶುಭ್‌ಮನ್ ಬದಲಿಗೆ ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಡೆಂಗ್ಯೂ ಸೋಂಕಿನಿಂದ ಬಳಲುತ್ತಿದ್ದ ಗಿಲ್ ಆಸ್ಪತ್ರೆಗೂ ಕೂಡ ದಾಖಲಾಗಿದ್ದರು. ಆದರೆ ಕೆಲವೇ ಗಂಟೆಗಳ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು.

ಶುಭ್‌ಮನ್ ಗಿಲ್ ಒಂದು ಗಂಟೆಯ ಕಾಲ ಅಭ್ಯಾಸ ಮಾಡಿದ್ದು, ಪಾಕಿಸ್ತಾನ ವಿರುದ್ಧ ಆಡಲು ಕಠಿಣ ತಯಾರಿ ಆರಂಭಿಸಿದ್ದಾರೆ. ಅಕ್ಟೋಬರ್ 14 ರಂದು ನಡೆಯಲ್ಲಿರುವ ಹೈವೋಲ್ಟೇಜ್ ಕದನಕ್ಕೆ ಟೀಂ ಇಂಡಿಯಾ ಪರ ಗಿಲ್ ಕಣಕ್ಕಿಳಿಯುತ್ತಾರೆ ಎಂಬ ವಿಶ್ವಾಸ ಅಭಿಮಾನಿಗಳದ್ದು.  ಒಂದು ವೇಳೆ ಗಿಲ್ ಫಿಟ್ ಆದರೂ ಕೂಡ ಅವರನ್ನು ಆಡಿಸುವುದು ಕಷ್ಟವಾಗಿದೆ. ಏಕೆಂದರೆ ಆರಂಭಿಕರಾಗಿ ಅವಕಾಶ ಪಡೆದಿರುವ ಇಶಾನ್ ಕಿಶನ್, ಅಫ್ಘಾನಿಸ್ತಾನದ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಅಲ್ಲದೆ ಅನಾರೋಗ್ಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳುತ್ತಿರುವ ಗಿಲ್ ಅವರ ಫಾರ್ಮ್ ಹೇಗಿದೆ ಎಂಬುದು ಆಡಳಿತ ಮಂಡಳಿಗೆ ಖಚಿತವಾಗಿಲ್ಲ. ಗಿಲ್ ಕಣಕ್ಕಿಳಿಸುವ ಬಗ್ಗೆ ಆಡಳಿತ ಮಂಡಳಿಯೇ ತೀರ್ಮಾನ ಮಾಡಲಿದೆ.

Sulekha