TEST ಗೆದ್ದ ಗಿಲ್ ODI ಫೇಲ್ ರನ್ಸ್ ಬರ್ತಿಲ್ಲ.. ಮ್ಯಾಚ್ ಗೆಲ್ತಿಲ್ಲ!
ರೋಹಿತ್ ಸ್ಟಾಂಡರ್ಡ್ ಉಳಿಸ್ತಾರಾ?

ಮೊದ್ಲಿಗೆ ಟೆಸ್ಟ್ ಕ್ಯಾಪ್ಟನ್ಸಿ.. ಆಮೇಲೆ ಏಕದಿನ ಮಾದರಿ.. ಮುಂದೆ ಟಿ-20ಐನಲ್ಲೂ ಪಟ್ಟಾಭಿಷೇಕ.. ಹೀಗೇ ಶುಭ್ಮನ್ಗಿಲ್ರನ್ನ ಮೂರೂ ಮಾದರಿಗೂ ಅಂದ್ರೆ ಆಲ್ ಫಾರ್ಮೆಟ್ ನಾಯಕನಾಗಿ ಮಾಡೋಕೆ ಗೌತಮ್ ಗಂಭೀರ್ ಬಣ ಸರ್ವಸನ್ನದ್ಧವಾಗಿದೆ.. ಬಟ್ ರಿಯಾಲಿಟಿ ಏನಂದ್ರೆ ಶುಭ್ಮನ್ ಗಿಲ್ಗೆ ರೆಡ್ ಬಾಲ್ ಫಾರ್ಮೆಟ್ನಲ್ಲಿ ಸಿಕ್ಕ ಸಕ್ಸಸ್ ವೈಟ್ ಬಾಲ್ ಫಾರ್ಮೆಟ್ನಲ್ಲಿ ಸಿಗ್ತಾ ಇಲ್ಲ. ಹಾಗಂತ ನಾವಿಲ್ಲಿ ನಾಯಕನಾಗಿ ಹೇಳ್ತಿಲ್ಲ. ಬ್ಯಾಟ್ಸ್ಮನ್ ಆಗಿ ಕೂಡ ಗಿಲ್ ವೈಟ್ ಬಾಲ್ ಮಾದರಿಯಲ್ಲಿ ಅಷ್ಟೇನು ಸೌಂಡ್ ಮಾಡ್ತಿಲ್ಲ. ಟಿ-20ಐ ಹಾಗೇ ಏಕದಿನ ಮಾದರಿಯಲ್ಲಿ ಗಿಲ್ ರೆಕಾರ್ಡ್ಸ್ ಹೇಗಿದೆ ಅನ್ನೋದನ್ನೇ ನೋಡೋಣ.
ಇದನ್ನೂ ಓದಿ: ಬಿಹಾರ ಸಂಪುಟದಲ್ಲಿ ಒಂದಕ್ಕಿಂತ ಹೆಚ್ಚಿನ ಡಿಸಿಎಂ ಇರುತ್ತಾರೆ? – ಮಹಾಘಟಬಂಧನ್‌ನ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ ರೋಹಿತ್ ಶರ್ಮಾರನ್ನ ನಾಯಕತ್ವದಿಂದ ಕೆಳಗಿಳಿಸಿ ಶುಭ್ಮನ್ ಗಿಲ್ಗೆ ಜವಾಬ್ದಾರಿ ನೀಡಿದ್ರು. ಅಕ್ಟೋಬರ್ 19 ರಂದು ಪರ್ತ್‌ನಲ್ಲಿ ತಮ್ಮ ODI ನಾಯಕತ್ವಕ್ಕೆ ಗಿಲ್ ಪದಾರ್ಪಣೆ ಮಾಡಿದ್ರು. ಬಟ್ ಬ್ಯಾಡ್ಲಕ್ ಫಸ್ಟ್ ಮ್ಯಾಚಲ್ಲಿ ಟಾಸ್ ಜೊತೆ ಮ್ಯಾಚ್ನೂ ಸೋತ್ರು. ಌಂಡ್ ಸೆಕೆಂಡ್ ಅಕ್ಬೋಬರ್ 23ಕ್ಕೆ ಅಡಿಲೇಡ್ನಲ್ಲಿ ಎರಡನೇ ಪಂದ್ಯದಲ್ಲಿ ಕಣಕ್ಕಿಳಿದ್ರು. ಇಲ್ಲೂ ಅಷ್ಟೇ ಟಾಸ್ ಜೊತೆ ಮ್ಯಾಚ್ನೂ ಕೈಚೆಲ್ಲಿದ್ರು. ಅಲ್ಲಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನ ಸೋತಾಗಿದೆ. ಇನ್ನು ಮೂರನೇ ಪಂದ್ಯ ಅಕ್ಬೋಬರ್ 25ಕ್ಕೆ ಸಿಡ್ನಿಯಲ್ಲಿ ಫಿಕ್ಸ್ ಆಗಿದೆ. ಅಟ್ಲೀಸ್ಟ್ ಈ ಪಂದ್ಯವನ್ನಾದ್ರೂ ಗೆದ್ದು ಕ್ಲೀನ್ ಸ್ವೀಪ್ ಆಗದೇ ಇರುವಂತೆ ನೋಡಿಕೊಳ್ಬೇಕಿದೆ. ಆದ್ರೆ ಇಲ್ಲಿ ಗಿಲ್ ಏಕದಿನ ಮಾದರಿಯಲ್ಲಿ ಒಬ್ಬ ನಾಯಕನಾಗಿ ಅಲ್ಲ ಆಟಗಾರನಾಗಿಯೂ ಕ್ಲಿಕ್ ಆಗ್ತಿಲ್ಲ. ಟಿ-20ಐ ಹಾಗೇ ಒಡಿಐನಲ್ಲಿ ಅವ್ರ ಸ್ಟಾಟ್ಸ್ ಕೂಡ ಅಂತಾ ಇಂಪ್ರೆಸ್ಸಿವ್ ಆಗಿಲ್ಲ.
ವೈಟ್ ಬಾಲ್ ಫಾರ್ಮೆಟ್ ನಲ್ಲಿ ಸದ್ದು ಮಾಡದ ಗಿಲ್!
ಕಳೆದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಶುಭ್ಮನ್ ಗಿಲ್ಗೆ ಟೆಸ್ಟ್ ಫಾರ್ಮೆಟ್ ಕ್ಯಾಪ್ಟನ್ಸಿ ನೀಡ್ಲಾಗಿತ್ತು. ಈ ಸರಣಿ ಡ್ರಾನಲ್ಲಿ ಅಂತ್ಯಗೊಂಡಿತ್ತು. ಹಾಗೇ ಶುಭ್ಮನ್ ಗಿಲ್ ಇಡೀ ಸಿರೀಸ್ನಲ್ಲಿ ಹೈಯೆಸ್ಟ್ ರನ್ ಸ್ಕೋರರ್ ಆಗಿದ್ರು. ಒಂದು ಡಬಲ್ ಸೆಂಚುರಿ ಬಂದಿತ್ತು. ಹಾಗೇ ಟೋಟಲ್ ಆಗಿ 754 ರನ್ಸ್ ಕಲೆ ಹಾಕಿದ್ರು. ಇನ್ನು ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3 ಇನ್ನಿಂಗ್ಸ್ಗಳಿಂದ ಒಂದು ಸೆಂಚುರಿ ಸೇರಿದಂತೆ 192 ರನ್ಸ್ ಕಲೆ ಹಾಕಿದ್ರು. ಅಂದ್ರೆ ಟೆಸ್ಟ್ ಮ್ಯಾಚ್ಗಳಲ್ಲಿ ನಾಯಕನಾಗಿ ಅಷ್ಟೇ ಅಲ್ದೇ ಆಟಗಾರನಾಗಿಯೂ ಇಂಪ್ಯಾಕ್ಟ್ ಮಾಡಿದ್ರು. ಬಟ್ ವೈಟ್ ಬಾಲ್ ಫಾರ್ಮೆಟ್ನಲ್ಲಿ ಹೀಗಾಗ್ತಿಲ್ಲ. ಲಾಂಗ್ ಬ್ರೇಕ್ ಬಳಿಕ ಏಷ್ಯಾಕಪ್ ನಲ್ಲಿ ಟಿ-20ಐಗೆ ಕಮ್ ಬ್ಯಾಕ್ ಮಾಡಿದ್ದ ಗಿಲ್ ಅಷ್ಟೇನು ಸೌಂಡ್ ಮಾಡ್ಲಿಲ್ಲ. 7 ಇನ್ನಿಂಗ್ಸ್ಗಳಿಂದ 21ರ ಆವರೇಜ್ನಲ್ಲಿ 127 ರನ್ ಕಲೆ ಹಾಕಿದ್ರು. 47 ರನ್ ಗಳಿಸಿದ್ದೇ ಹೈಯೆಸ್ಟ್ ಸ್ಕೋರ್ ಆಗಿತ್ತು. ಇದೀಗ ಆಸ್ಟ್ರೇಲಿಯಾ ವಿರುದ್ಧಧ ಏಕದಿನ ಸರಣಿಯಲ್ಲೂ ಬಿಗ್ ಸ್ಕೋರ್ ಬಂದಿಲ್ಲ. ಮೊದಲ ಪಂದ್ಯದಲ್ಲಿ 10 ರನ್, ಎರಡನೇ ಪಂದ್ಯದಲ್ಲಿ 9 ರನ್ಸ್.. ಬಟ್ ನಾಯಕತ್ವಕ್ಕೂ ಮುನ್ನ ಏಕದಿನ ಮಾದರಿಯಲ್ಲಿ ಒಳ್ಳೆ ಸ್ಕೋರ್ ಮಾಡಿದ್ರು. ಭಾರತದ ಪರ ಒಟ್ಟಾರೆಯಾಗಿ 57 ಏಕದಿನ ಪಂದ್ಯಗಳನ್ನ ಆಡಿರೋ ಗಿಲ್ 2794 ರನ್ಸ್ ಕಲೆ ಹಾಕಿದ್ದಾರೆ. 57ರ ಸರಾಸರಿಯಲ್ಲಿ ರನ್ಸ್ ಬಂದಿದ್ದು 8 ಶತಕಗಳೂ ಸೇರಿವೆ. 15 ಅರ್ಧಶತಕಗಳಿವೆ. ಬಟ್ ಟಿ-20ಐನಲ್ಲಿ ಕಂಪ್ಲೀಟ್ ಡಲ್ ಆಗಿದ್ದಾರೆ. ಭಾರತದ ಪರ 28 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನ ಆಡಿದ್ದು 28ರ ಸರಾಸರಿಯಲ್ಲಿ 705 ರನ್ಸ್ ಕಲೆ ಹಾಕಿದ್ದಾರೆ. 1 ಶತಕ ಸೇರಿದೆ. ಹೀಗಾಗಿ ಗಿಲ್ ಟೆಸ್ಟ್ಗೆ ಮಾತ್ರ ಸೂಟ್ ಆಗ್ತಾರೆ ವೈಟ್ ಬಾಲ್ ಫಾರ್ಮೆಟ್ ಬೇಡ ಅನ್ನೋ ಅನ್ನೋ ಚರ್ಚೆ ನಡೀತಿದೆ.
ಸದ್ಯ ಭಾರತದ ಕ್ರಿಕೆಟ್ ಇತಿಹಾಸದಲ್ಲಿ 28ನೇ ಏಕದಿನ ನಾಯಕನಾಗಿ ಗಿಲ್ ನೇಮಕಗೊಂಡಿದ್ದು ಮೊದಲ ಸರಣಿಯಲ್ಲೇ ಸೋಲು ಕಂಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ರೋಹಿತ್ ನಾಯಕತ್ವದಲ್ಲಿ ಏಕದಿನ ಮಾದರಿಯ ಬೆಸ್ಟ್ ಟೀಂ ಆಗಿರೋ ಭಾರತ 2023 ರ ಏಕದಿನ ವಿಶ್ವಕಪ್‌ನಲ್ಲಿ ರನ್ನರ್-ಅಪ್ ಆಗಿತ್ತು. 12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕನಿಷ್ಠ 50 ಏಕದಿನ ಪಂದ್ಯಗಳಿಗೆ ನಾಯಕತ್ವ ವಹಿಸಿದ ಏಳು ಭಾರತೀಯ ಪುರುಷರಲ್ಲಿ ರೋಹಿತ್ ಒಬ್ಬರು. ಅವರು 56 ಪಂದ್ಯಗಳಲ್ಲಿ ಭಾರತವನ್ನು 42 ಗೆಲುವುಗಳಿಗೆ ಮುನ್ನಡೆಸಿದ್ದಾರೆ. 75% ಗೆಲುವಿನ ಶೇಕಡಾವಾರು ಇದೆ. ಹೀಗಾಗಿ ಗಿಲ್ಗೆ ಇರೋ ಚಾಲೆಂಜ್ ಅಂದ್ರೆ ರೋಹಿತ್ ಸ್ಟಾಂಡರ್ಡ್ನ ಮೇಂಟೇನ್ ಮಾಡೋದಷ್ಟೇ.

ನೋಡಿರಿ

