14 ಬ್ರ್ಯಾಂಡ್.. ಗಿಲ್ ಗಳಿಕೆ 35 ಕೋಟಿ.. ಶುಭ್ಮನ್ ರಿಚ್ ಆಗಿದ್ದೇ ಇದ್ರಿಂದ? – ಟೀಂ ಇಂಡಿಯಾ ಪ್ರಿನ್ಸ್ ದುಡ್ಡಿನ ಕೋಟೆ!

ಶುಭ್ಮನ್ ಗಿಲ್.. ಟೀಮ್ ಇಂಡಿಯಾದ ಮೋಸ್ಟ್ ಹ್ಯಾಂಡ್ಸಮ್ ಪ್ಲೇಯರ್.. ಯುವತಿಯರ ಪಾಲಿನ ಡೀಮ್ ಬಾಯ್.. ಟೀಮ್ ಇಂಡಿಯಾದಲ್ಲಿ ಸಾಮಾನ್ಯ ಕ್ರಿಕೆಟರ್ ನಂತೆ ಸ್ಥಾನ ಪಡೆದ ಗಿಲ್ ತಮ್ಮ ಅಮೋಘ ಪ್ರದರ್ಶನದ ಮೂಲಕ ತಂಡದ ಕ್ಯಾಪ್ಟನ್ ಆಗಿದ್ದಾರೆ.. ಶುಭ್‌ಮನ್ ಗಿಲ್ ಕ್ರಿಕೆಟ್‌ನಲ್ಲಿ ಮಿಂಚೋದಿಕ್ಕೆ ಶುರುಮಾಡಿದ್ಮೇಲೆ ಅವ್ರ ಇನ್‌ಕಮ್ ಕೂಡ ಹೆಚ್ಚಾಗಿದೆ.. ಕ್ರಿಕೆಟ್‌ನಿಂದ ಮಾತ್ರವಲ್ಲ ಬೇರೆ ಬೇರೆ ಮೂಲಗಳಿಂದಲೂ ಗಿಲ್‌ಗೆ ಆದಾಯ ಗಳಿಸ್ತಿದ್ದಾರೆ.
ಇದನ್ನೂ ಓದಿ: ಶಾರುಖ್ ಖಾನ್‌ಗೆ ಸಿನಿಮಾ ಶೂಟಿಂಗ್ ವೇಳೆ ಗಾಯ -ಸ್ಟಂಟ್ ಮಾಡುವಾಗ ಬೆನ್ನಿಗೆ ಪೆಟ್ಟು
ಟೀಮ್ ಇಂಡಿಯಾ ಮಾಜಿ ನಾಯಕರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ದೀರ್ಘಾವಧಿ ಸ್ವರೂಪದ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ನಂತ್ರ ತಂಡವನ್ನ ಗಿಲ್ ಮುನ್ನಡೆಸ್ತಿದ್ದಾರೆ. ಸೀನಿಯರ್ಸ್ ನಿವೃತ್ತಿ ಹೇಳ್ತಿದ್ದಂತೆ ಗಿಲ್ ಜವಾಬ್ದಾರಿಯುವಾಗಿ ಆಟ ಆಡ್ತಿದ್ದಾರೆ. ಆರಂಭದಿಂದಲೂ ಕ್ರಿಕೆಟ್‌ನಲ್ಲಿ ಮಿಂಚುತ್ತಾ ಬಂದಿರುವ ಗಿಲ್, ಸಣ್ಣ ವಯಸ್ಸಿನಲ್ಲೇ ಕೋಟಿಗಳ ಒಡೆಯ ಆಗಿದ್ದಾರೆ..
ಗಿಲ್ ತಂದೆ ಲಖ್ವಿಂದರ್ ಸಿಂಗ್ ರೈತರು.. ಮಗ ಟೀಮ್ ಇಂಡಿಯಾದಲ್ಲಿ ಆಡಬೇಕು ಅನ್ನೋದು ಅವರ ಕನಸಾಗಿತ್ತು. ತಮ್ಮ ಕೃಷಿ ಜಮೀನಿನಲ್ಲೇ ಮಗನ ಕ್ರಿಕೆಟ್ ಅಭ್ಯಾಸಕ್ಕೆಂದು ಪ್ರಾಕ್ಟೀಸ್ ಪಿಚ್ವೊಂದನ್ನು ನಿರ್ಮಿಸಿದ್ದರು. ಶುಬ್ಮನ್ ಗಿಲ್ ಒಂದು ಹಂತ ದಾಟಿದಾಗ ಅವರನ್ನು ಮೊಹಾಲಿಯ PCA ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು. ಅಲ್ಲಿಂದ ಶುರುವಾದ ಗಿಲ್ ಕ್ರಿಕೆಟ್ ಜರ್ನಿ ಈಗ ವಿಶ್ವ ಮಟ್ಟದಲ್ಲಿ ಮಿಂಚುವಂತೆ ಮಾಡಿದೆ. ಇದೀಗ ಗಿಲ್ ಮೈದಾನದಲ್ಲಿ ಬ್ಯಾಕ್ ಟು ಬ್ಯಾಕ್ ಸೆಂಚುರಿ ಬಾರಿಸ್ತಿದ್ದಂತೆ ಅವ್ರ ಆದಾಯ ಕೂಡ ದುಪ್ಟಟ್ಟು ಆಗಿದೆ.. ಇದೀಗ ಸೆಂಚುರಿ ಸ್ಟಾರ್ ಗಿಲ್ ಎಷ್ಟು ಕೋಟಿಗಳ ಒಡೆಯಾ? ಅವ್ರ ಐಶರಾಮಿ ಜೀವನ ಹೇಗಿದೆ. ಆದಾಯ ಮೂಲ ಯಾವುದು ಅನ್ನೋದನ್ನ ತಿಳಿದುಕೊಳ್ಳಲು ಫ್ಯಾನ್ಸ್ ಉತ್ಸುಕರಾಗಿದ್ದಾರೆ..
ಶುಭ್ಮನ್ ಗಿಲ್ ಅವರ ಅಂದಾಜು ನಿವ್ವಳ ಮೌಲ್ಯವು ರೂ 35 ಕೋಟಿಗೂ ಅಧಿಕ ಎಂದು ಹೇಳಲಾಗ್ತಿದೆ.. ಇದರಲ್ಲಿ ಅವರ ಐಪಿಎಲ್ ಗಳಿಕೆ, ಕೇಂದ್ರ ಬಿಸಿಸಿಐ ಒಪ್ಪಂದ, ಎಲ್ಲಾ ಮೂರು ಕ್ರಿಕೆಟ್ ಮಾದರಿಗಳ ಪಂದ್ಯ ಶುಲ್ಕಗಳು ಮತ್ತು ಹಲವಾರು ಲಾಭದಾಯಕ ಬ್ರ್ಯಾಂಡ್ ಜಾಹಿರಾತುಗಳು ಸೇರಿವೆ.
ಬಿಸಿಸಿಐನ ಕೇಂದ್ರ ಒಪ್ಪಂದದಲ್ಲಿ ಶುಭ್ಮನ್ ಗಿಲ್ ಅವ್ರನ್ನ ಎ+ ದರ್ಜೆ ಸ್ಥಾನದಲ್ಲಿ ಇರಿಸಲಾಗಿದೆ . ಶುಭ್ಮನ್ ಗಿಲ್ ಕೇಂದ್ರ ಒಪ್ಪಂದದ ಎ+ ದರ್ಜೆಯಲ್ಲಿರುವುದರಿಂದ ಅವರಿಗೆ ವರ್ಷಕ್ಕೆ 5 ಕೋಟಿ ರೂ ಸಿಗುತ್ತದೆ. ಇದರ ಜೊತೆಗೆ ಪ್ರತೀ ಪಂದ್ಯಕ್ಕೆ ಪ್ರತ್ಯೇಕ ಹಣ ಸಿಗುತ್ತದೆ. ಗಿಲ್ ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ ಮತ್ತು ಟಿ20 ಪಂದ್ಯಕ್ಕೆ 3 ಲಕ್ಷ ರೂಪಾಯಿ ಪಡೆಯುತ್ತಾರೆ. ಇನ್ನು ಐಪಿಎಲ್‌ನಲ್ಲಿ ಗಿಲ್ ಗುಜರಾತ್ ಟೈಟಾನ್ಸ್ ತಂಡದ ಕ್ಯಾಪ್ಟನ್.. 2025 ರ ಐಪಿಎಲ್‌ನಲ್ಲಿ ಗುಜರಾತ್ ಫ್ರಾಂಚೈಸಿ ಗಿಲ್ ಗೆ 16.5 ಕೋಟಿ ಸಂಭಾವನೆ ನೀಡಿತ್ತು. ಇದರ ಜೊತೆಗೆ ಶುಬ್ಮನ್ ಗಿಲ್ ಬ್ರ್ಯಾಂಡ್ ವ್ಯಾಲ್ಯೂ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಗಿಲ್ ಬ್ರ್ಯಾಂಡೆಡ್‌ಗಳ ಜಾಹಿರಾತುಗಳಲ್ಲಿ ಕಾಣಿಸಿಕೊಂಡ್ರೆ, ಇನ್ನೂ ಕೆಲವು ಬ್ರ್ಯಾಂಡ್‌ಗಳ ರಾಯಭಾರಿ ಆಗಿದ್ದಾರೆ.. ಈಗಾಗಲೇ ಟಾಟಾ ಕ್ಯಾಪಿಟಲ್, ಜಿಲೆಟ್, ಸಿಯೆಟ್ ಟೈರ್ಸ್, ಬೀಟ್ಸ್, ಭಾರತ್‌ಪೇ, ಮೈ11ಸರ್ಕಲ್, ಎಂಆರ್‌ಎಫ್ ಸೇರಿ 14 ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಇನ್ನು ಗಿಲ್ ಸೋಶಿಯಲ್ ಮೀಡಿಯಾ ಮೂಲಕವೂ ಹಣ ಗಳಿಸುತ್ತಾರೆ.. ಒಂದು ಪ್ರಾಯೋಜಿತ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ₹88 ಲಕ್ಷದಿಂದ ₹1 ಕೋಟಿಯವರೆಗೆ ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿದೆ.

ನೋಡಿರಿ

