ಗಿಲ್ ರಿಟೈರ್ಡ್.. ಭಾರತಕ್ಕೆ ಹರ್ಟ್ – ಕ್ಯಾಪ್ಟನ್ ಇಲ್ಲದ್ದಕ್ಕೇ ಮ್ಯಾಚ್ ಸೋತ್ರಾ?
5 ದಿನ ರೆಸ್ಟ್.. 2ನೇ ಪಂದ್ಯಕ್ಕೂ ಇಲ್ವಾ?

ಗಿಲ್ ರಿಟೈರ್ಡ್.. ಭಾರತಕ್ಕೆ ಹರ್ಟ್ – ಕ್ಯಾಪ್ಟನ್ ಇಲ್ಲದ್ದಕ್ಕೇ ಮ್ಯಾಚ್ ಸೋತ್ರಾ?5 ದಿನ ರೆಸ್ಟ್.. 2ನೇ ಪಂದ್ಯಕ್ಕೂ ಇಲ್ವಾ?

ಮೊದಲನೇ ಟೆಸ್ಟ್ ಮ್ಯಾಚಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಭಾರತದ ಸೋಲಿಗೆ ಸಾಲು ಸಾಲು ಕಾರಣಗಳಿವೆ. ಹಾಗೇ ಕ್ಯಾಪ್ಟನ್ ಶುಭ್ ಮನ್ ಗಿಲ್ ಆಬ್ಸೆನ್ಸ್ ಕೂಡ ಮೇನ್ ರೀಸನ್ ಆಯ್ತು. ಫಸ್ಟ್ ಇನ್ನಿಂಗ್ಸ್ ನಲ್ಲಿ 30 ರನ್ಸ್ ಲೀಡ್ ಪಡೆದಿದ್ದ ಭಾರತ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಅದೇ 30 ರನ್ ಗಳಿಂದ ಸೋಲನ್ನ ಕಂಡಿದೆ. ನೋಡೋದೆ ಅದೇನ್ ಚೇಸ್ ಮಾಡೋಕೆ ಆಗದೆ ಇರುವಂಥ ಟಾರ್ಗೆಟ್ ಆಗಿರಲಿಲ್ಲ. ಬಟ್ ಭಾರತದ ಬ್ಯಾಟಿಂಗ್ ತೀರಾ ಕಳಪೆಯಾಗಿತ್ತು. ಅದ್ರಲ್ಲೂ ಭಾರತ ತಂಡದ ಕ್ಯಾಪ್ಟನ್ ಶುಭಾಮನ್ ಗಿಲ್ ಇಲ್ಲದ್ದೂ ಹೊಡೆತ ಕೊಟ್ಟಿದೆ. ಸದ್ಯಕ್ಕೆ ಗಿಲ್ ಸಿಶುಯೇಶನ್ ನೋಡಿದ್ರೆ ಸೆಕೆಂಡ್ ಮ್ಯಾಚ್ ಆಡೋದೂ ಡೌಟ್ ಇದೆ.

ಇದನ್ನೂ ಓದಿ : ರುತುರಾಜ್ ಗಾಯಕ್ವಾಡ್ CSK ಕ್ಯಾಪ್ಟನ್ – ರಾಜಸ್ಥಾನ್‌ ರಾಯಲ್ಸ್‌ಗೆ ಕುಮಾರ ಸಂಗಕ್ಕಾರ  ಹೆಡ್ ಕೋಚ್

ಆಸ್ಪತ್ರೆಯಿಂದ ಡಿಸ್ಚಾರ್ಜ್.. 5 ದಿನಗಳ ರೆಸ್ಟ್ ಹೇಳಿದ ವೈದ್ಯರು!

ನವೆಂಬರ್ 14 ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ಮೊದಲ ಪಂದ್ಯ ಸ್ಟಾರ್ಟ್ ಆಗಿದ್ದು ಸೌತ್ ಆಫ್ರಿಕಾ ಟಾಸ್ ಗೆದ್ದು ಬ್ಯಾಟಿಂಗ್ ಚೂಸ್ ಮಾಡಿಕೊಂಡಿತ್ತು. ಌಂಡ್ ಸೌತ್ ಆಫ್ರಿಕಾ 159 ರನ್​ಗಳಿಗೆ ಆಲೌಟ್ ಆಗಿತ್ತು. ಫಸ್ಟ್ ಇನ್ನಿಂಗ್ಸ್ ಆರಂಭಿಸಿದ್ದ ಭಾರತದ ಪರ ಶುಭ್​ಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದಿದ್ದು ಮೊದಲ ಎರಡು ಬಾಲ್ಸ್ ಡಾಟ್ ಆಗಿತ್ತು. ಌಂಡ್ ನೆಕ್ಸ್​ಟ್ ಮೂರನೇ ಬಾಲ್​ನಲ್ಲಿ ಒಂದು ಫೋರ್ ಬಾರಿಸಿದ್ರು. ಅಷ್ಟೇ ಕುತ್ತಿಗೆ ನೋವಿನಿಂದ ಮೈದಾನವನ್ನೇ ತೊರೆದಿದ್ರು. ಸೋ ರಿಟೈರ್ಟ್ ಹರ್ಟ್ ಆಗಿದ್ರು. ಕೊನೆಗೂ ಮತ್ತೆ ಬ್ಯಾಟಿಂಗ್​ಗೆ ಬರಲೇ ಇಲ್ಲ. ಅಲ್ಲಿಂದ ಸೀದಾ ಆಸ್ಪತ್ರೆಗೆ ಹೋಗಿ ದಾಖಲಾಗಿದ್ರು. ಹಾಗೇ ಎರಡನೇ ಇನ್ನಿಂಗ್ಸ್​ನಲ್ಲೂ ಬ್ಯಾಟ್ ಬೀಸಿರಲಿಲ್ಲ. ಇದೀಗ ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಎರಡನೇ ಟೆಸ್ಟ್ ಪಂದ್ಯದಲ್ಲಿ ಗಿಲ್ ಆಡೋದು ಡೌಟ್!

ಸದ್ಯ ಗಿಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ರೂ ಎರಡನೇ ಟೆಸ್ಟ್ ಮ್ಯಾಚಲ್ಲಿ ಭಾಗವಹಿಸೋದು ಡೌಟ್ ಇದೆ. ನವೆಂಬರ್ 22 ರಂದು ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ಆರಂಭವಾಗಲಿದೆ. ಗಿಲ್ ಗೆ ನಾಲ್ಕರಿಂದ ಐದು ದಿನಗಳ ಕಾಲ ರೆಸ್ಟ್ ಹೇಳಿರೋದ್ರಿಂದ ಎರಡನೇ ಪಂದ್ಯದ ವೇಳೆಗೆ ಕಂಪ್ಲೀಟ್ ರಿಕವರ್ ಆಗ್ತಾರಾ ಅನ್ನೋ ಅನುಮಾನವೂ ಇದೆ. ಌಕ್ಚುಲಿ ಶುಭ್​ಮನ್ ಗಿಲ್ ಟೀಮ್ ಇಂಡಿಯಾದ ಮೇನ್ ಬ್ಯಾಟ್ಸ್‌ಮನ್. ವೈಟ್ ಬಾಲ್ ಸಿರೀಸ್​ನಲ್ಲಿ ಬ್ಯಾಕ್ ಟು ಬ್ಯಾಕ್ ಫೇಲ್ಯೂರ್ ಇದ್ರೂ ರೆಡ್ ಬಾಲ್ ಫಾರ್ಮೆಟ್​ನಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಸಿರೀಸ್​ನಲ್ಲಿ ಒಳ್ಳೆ ಸ್ಕೋರ್ ಮಾಡಿದ್ರು. ಬಟ್ ಸೌತ್ ಆಫ್ರಿಕಾ ವಿರುದ್ಧ ರಿಟೈರ್ಡ್ ಹರ್ಟ್ ಆಗಿದ್ರಿಂದ ಭಾರತ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಬ್ಬ ಪ್ಯೂರ್ ಬ್ಯಾಟ್ಸ್​ಮನ್​ನ ಮಿಸ್ ಮಾಡಿಕೊಳ್ತು. ಹಾಗೇ ಭಾರತದ ಸೋಲಿಗೆ ಕಾರಣವಾಯ್ತು. ಬಹುಶಃ ಗಿಲ್ ಇದ್ದಿದ್ರೆ ಅಟ್​ಲೀಸ್ಟ್ ಫಸ್ಟ್ ಇನ್ನಿಂಗ್ಸ್ ಒಂದು 20 ರನ್ಸ್ ಌಂಡ್ ಸೆಕೆಂಡ್ ಇನ್ನಿಂಗ್ಸ್ ಜಸ್ಟ್ 20 ರನ್ಸ್ ಅಂದಿದ್ರೂ ಭಾರತ ಸೋಲ್ತಾ ಇರ್ಲಿಲ್ವೋ ಏನೋ.

ವಿಶ್ವಟೆಸ್ಟ್ ಚಾಂಪಿಯನ್​ಶಿಪ್​ನ ಹಾಲಿ ಚಾಂಪಿಯನ್ಸ್ ಆಗಿರೋ ಟೆಂಬಾ ಬವುಮಾ ಪಡೆ ಭಾರತದಲ್ಲಿ ದಶಕದ ಬಳಿಕ ಟೆಸ್ಟ್ ಮ್ಯಾಚ್ ವಿನ್ ಆಗಿದೆ. ತವರು ನೆಲದಲ್ಲಿ ಇಷ್ಟು ಸಣ್ಣ ಟಾರ್ಗೆಟ್ ಇದ್ದಾಗ ಭಾರತ ಸೋತೇ ಇರಲಿಲ್ಲ. ದಕ್ಷಿಣ ಆಫ್ರಿಕಾದ ಬೌಲರ್‌ಗಳು ಭಾರತದ ಎರಡನೇ ಇನ್ನಿಂಗ್ಸ್​ನ ಜಸ್ಟ್ 93 ರನ್‌ಗಳಿಗೆ ಸೀಮಿತಗೊಳಿಸಿದರು. ಟೀಮ್ ಇಂಡಿಯಾ ಪಂದ್ಯವನ್ನು 30 ರನ್‌ಗಳಿಂದ ಸೋತಿದೆ. ಅಟ್​ಲೀಸ್ ಸೆಕೆಂಡ್ ಮ್ಯಾಚ್​ನಾದ್ರೂ ಗೆದ್ದು ಸರಣಿ ಸಮಬಲ ಮಾಡಿಕೊಳ್ಬೇಕು. ಇಲ್ದಿದ್ರೆ ಡಬ್ಲ್ಯೂಟಿಸಿ ಫೈನಲ್ ರೇಸ್​ನಲ್ಲಿ ತುಂಬಾನೇ ಎಫೆಕ್ಟ್ ಆಗುತ್ತೆ.

Shantha Kumari