ಗೆಲ್ಲದ ಭಾರತ.. ಸೋಲದ ಲಂಕಾ – 5ನೇ ದಿನ.. 3 ವಿಕೆಟ್.. ಕೈಚೆಲ್ಲಿದ ಗಿಲ್
ಡ್ರಾನಲ್ಲೂ ದಿಲ್ ಗೆದ್ದ ಸೋನಲ್!

ಗೆಲ್ಲದ ಭಾರತ.. ಸೋಲದ ಲಂಕಾ – 5ನೇ ದಿನ.. 3 ವಿಕೆಟ್.. ಕೈಚೆಲ್ಲಿದ ಗಿಲ್ಡ್ರಾನಲ್ಲೂ ದಿಲ್ ಗೆದ್ದ ಸೋನಲ್!

ಗಾಲೆಯಲ್ಲಿ 165 ರನ್​ಗಳ ಬಿಗ್ ಮಾರ್ಜಿನ್​ನಲ್ಲಿ ಗೆದ್ದು ಬೀಗಿದ್ದ ಭಾರತ ಕೊಲೊಂಬೊದಲ್ಲಿ ಇನ್ನಿಂಗ್ಸ್ + ರನ್ಸ್ ಜೊತೆ ಮ್ಯಾಚ್ ವಿನ್ ಆಗುತ್ತೆ ಅಂತಾ ಎಲ್ರೂ ಪ್ರೆಡಿಕ್ಟ್ ಮಾಡಿದ್ರು. ಮೊದಲ ನಾಲ್ಕು ದಿನಗಳ ಆಟವೂ ಕಂಪ್ಲೀಟ್ ಡಾಮಿನೇಷನ್ ಮೋಡ್​ನಲ್ಲೇ ಇತ್ತು. ಆದ್ರೆ ಯಾವಾಗ ಐದನೇ ದಿನದಾಟ ಶುರುವಾಯ್ತೋ ಸೀನೇ ಫುಲ್ ಉಲ್ಟಾ. ಒಂದು ಎರಡು ಅಂತಾ ಸೆಷನ್ಸ್ ಮುಗೀತಿದ್ರೂ ಲಂಕನ್ನರ ವಿಕೆಟ್ಸ್ ಮಾತ್ರ ಬೀಳ್ತಾನೇ ಇಲ್ಲ. ಬಾಲ್ ಹಾಕಿ ಹಾಕಿ ಭಾರತದ ಬೌಲರ್ಸ್ ಸುಸ್ತಾದ್ರೋ ಹೊರತು ಲಂಕನ್ನರು ಮಾತ್ರ ಸೋಲೋಕೆ ರೆಡಿ ಇರ್ಲಿಲ್ಲ. ಅಷ್ಟಕ್ಕೂ ಇಲ್ಲಿ ಗೆಲ್ಲೋ ಮ್ಯಾಚ್​ನ ಭಾರತವೇ ಕೈಚೆಲ್ಲಿದೆ.

ಇದನ್ನೂ ಓದಿ : 1 ಪಂದ್ಯ.. 11 NO-BALL – ಲಂಕಾಗೆ ಲೈಫ್ ಕೊಟ್ಟ ಭಾರತ

ಭಾರತದ ವಿರುದ್ಧ ಶ್ರೀಲಂಕಾ ತಂಡ ತವರಿನಲ್ಲೇ ಕ್ಲೀನ್ ಸ್ವೀಪ್ ಆಗುತ್ತೆ ಅನ್ನೋದು ಬುಧವಾರದ ಸಂಜೆವರೆಗೂ ಇದ್ದ ಪ್ರೆಡಿಕ್ಷನ್. ಬಟ್ ಕೊನೇ ದಿನ ಲಂಕನ್ನರ ಫೈಟ್ ಮೆಚ್ಚಲೇಬೇಕು. ಗಾಲೆ ಮ್ಯಾಚ್ ಅಂತೂ ಸೋತ್ವಿ ಅಟ್​ಲೀಸ್ಟ್ ಎರಡನೇ ಮ್ಯಾಚಲ್ಲಿ ಗೆಲ್ಲದೇ ಇದ್ರೂ ಪರ್ವಾಗಿಲ್ಲ ಸೋಲೋದಂತೂ ಬೇಡ ಅಂತಾ ಶಪಥ ಮಾಡಿದ್ರು. ಭಾರತದ ಬೌಲರ್​ಗಳನ್ನ ಅಕ್ಷರಶಃ ಬೆವರುವಂತೆ ಮಾಡಿದ್ರು. ಇಡೀ ದಿನ ಕ್ರೀಸ್ ಕಚ್ಚಿ ನಿಂತು ಕೊನೆಗೆ ಪಂದ್ಯವನ್ನ ಡ್ರಾಗೊಳಿಸುವಲ್ಲಿ ಯಶಸ್ವಿಯಾದ್ರು.

ಲಂಕಾ ಬ್ಯಾಟರ್ ಗಳ ಹೋರಾಟಕ್ಕೆ ಕೊಲಂಬೊ ಟೆಸ್ಟ್ ಡ್ರಾನಲ್ಲಿ ಕೊನೆ!

ಆಗಸ್ಟ್ 23ರಿಂದ ಶುರುವಾಗಿದ್ದ ಈ ಪಂದ್ಯ ಐದೂ ದಿನವೂ ನಡೆದಿದೆ. ಫಸ್ಟ್ ಬ್ಯಾಟಿಂಗ್ ಮಾಡಿದ್ದ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 503 ರನ್ ಗಳಿಸಿ ಡಿಕ್ಲೇರ್ ಘೋಷಣೆ ಮಾಡಿತ್ತು. ಅತ್ತ ಲಂಕಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 290 ರನ್​ಗಳಿಗೆ ಆಲೌಟ್ ಆಗಿತ್ತು. 213 ರನ್​ಗಳ ಲೀಡ್​ನಲ್ಲಿದ್ದ ಭಾರತ ಫಾಲೋ ಆನ್ ಹೇರಿತ್ತು. ಆದಷ್ಟು ಬೇಗ ಸಿಂಹಳೀಯರನ್ನ ಬೇಟೆಯಾಡಿದ್ರೆ ವಿನ್ ಆಗ್ತೀವಿ ಅನ್ನೋದು ಭಾರತದ ಪ್ಲ್ಯಾನ್ ಆಗಿತ್ತು. ಅಷ್ಟೇ ಅಲ್ಲದೆ ನಾಲ್ಕನೇ ದಿನದಾಟದ ಅಂತ್ಯಕ್ಕೆ 229ಕ್ಕೆ 6 ವಿಕೆಟ್ ಕಳ್ಕೊಂಡಿದ್ದ ಲಂಕಾ ಕೇವಲ 16 ರನ್​ಗಳ ಲೀಡ್​ನಲ್ಲಷ್ಟೇ ಇತ್ತು. ಸೋ ಅಲ್ಲಿಗೆ ಭಾರತದ ಗೆಲುವಿನ ದಾರಿ ಕ್ಲಿಯರ್ ಇತ್ತು. ಕೇವಲ ನಾಲ್ಕೇ ನಾಲ್ಕು ವಿಕೆಟ್ ತೆಗೆದಿದ್ರೆ ಭಾರತ ಈ ಪಂದ್ಯವನ್ನ ಗೆದ್ದು ಬಿಡ್ತಿತ್ತು. ಆದ್ರೆ ಲಂಕಾ ಪಡೆ ಈ ಸಲ ಸೋಲೋಕೆ ರೆಡಿ ಇರ್ಲಿಲ್ಲ. ಮೊದಲ ನಾಲ್ಕೂ ದಿನವೂ ಭಾರತವೇ ಪ್ರಾಬಲ್ಯ ಮೆರೆದ್ರೂ ಕೊನೇ ದಿನದಾಟದಲ್ಲಿ ಭಾರತದ ತಾಳ್ಮೆ ಪರೀಕ್ಷೆ ಮಾಡಿದ್ರು. ವಿಕೆಟ್ ಬಿಟ್ಟುಕೊಡದೆ ಸಂಜೆವರೆಗೂ ಬ್ಯಾಟಿಂಗ್​ ಮಾಡಿ ಪಂದ್ಯವನ್ನ ಡ್ರಾಗೊಳಿಸುವಲ್ಲಿ ಯಶಸ್ವಿಯಾದ್ರು. ಅದ್ರಲ್ಲೂ ಸರಣಿಯುದ್ದಕ್ಕೂ ಭಾರತಕ್ಕೆ ಸಿಂಹಸ್ವಪ್ನವಾಗಿದ್ದೇ ಸೋನಲ್ ಡಿನುಷ. ಎರಡನೇ ಇನ್ನಿಂಗ್ಸ್​ನಲ್ಲೂ ಕ್ರೀಸ್ ಕಚ್ಚಿ ನಿಂತು ಶತಕ ಬಾರಿಸಿದ್ರು. ಲಹಿರು ಕುಮಾರ ಮತ್ತು ಸೋನಲ್ ಡಿನುಷ ಜೊತೆಗೂಡಿ ಭಾರತದ ಬೌಲರ್​ಗಳನ್ನ ಗಂಟೆಗಟ್ಟಲೆ ಕಾಡಿದ್ರು. ಅಂತಿಮವಾಗಿ ಭಾರತಕ್ಕೆ ಗೆಲ್ಲೋ ದಾರಿಯೇ ಮುಚ್ಚಿಹೋಯ್ತು.

ಭಾರತ ಎಡವಿದ್ದೆಲ್ಲಿ?

ಐದನೇ ದಿನದಾಟದಲ್ಲಿ ಭಾರತದ ಪರ ಬೌಲಿಂಗ್ ನಲ್ಲಿ ಕಂಪ್ಲೀಟ್ ಫೇಲ್ಯೂರ್

ನಾಲ್ಕನೇ ದಿನದಾಟದ ಅಂತ್ಯಕ್ಕೆ 229ಕ್ಕೆ 6 ವಿಕೆಟ್, 5ನೇ ದಿನ 4 ವಿಕೆಟ್ ಬೇಕಿತ್ತು

ಸೋನಲ್ ಡಿನುಷ ಮತ್ತು ಕೇಶಾರ ನುವಾಂತ 7ನೇ ವಿಕೆಟ್ ಗೆ ಅದ್ಭುತ ಜೊತೆಯಾಟ

242(40.2) ಎಸೆತಗಳನ್ನ ಫೇಸ್ ಮಾಡಿ ಭಾರತದ ಬೌಲರ್ ಗಳನ್ನ ಸುಸ್ತು ಮಾಡಿದ್ರು

ಮೊದಲ ಸೆಷನ್ ನಲ್ಲಿ ಒಂದೂ ವಿಕೆಟ್ ನೀಡದೆ ಕಾಡಿದ್ರು, ಲಂಚ್ ಬ್ರೇಕ್ ಬಳಿಕ ವಿಕೆಟ್

150 ಎಸೆತಗಳನ್ನು ಎದುರಿಸಿ 46 ರನ್ ಗಳಿಸಿ ಸುತಾಗೆ ವಿಕೆಟ್ ಒಪ್ಪಿಸಿದ ನುವಾಂತ

ಪ್ರಭಾತ್ ಜಯಸೂರ್ಯ 2(28)ಕ್ಕೆ ಔಟ್.. 9ನೇ ವಿಕೆಟ್ ಗೆ ಮತ್ತೆ ಹೆಣಗಾಡಿದ ಭಾರತ

ಸೋನಲ್ ಮತ್ತು ಲಹಿರು ಕುಮಾರ ಜೊತೆಗೂಡಿ ಒಟ್ಟು 169 ಬಾಲ್ ಗಳ ಫೇಸ್

90 ಎಸೆತಗಳಲ್ಲಿ 12 ರನ್ ಗಳಿಸಿ ಲಹಿರು ವಿಕೆಟ್.. ಅಸಿತಾ ಫೆರ್ನಾಂಡೋ 0(24)

264 ಎಸೆತಗಳಲ್ಲಿ 133 ರನ್ ಗಳಿಸಿ ಭಾರತದ ಗೆಲುವನ್ನೇ ಕಸಿದ ಸೋನಲ್ ಡಿನುಷ

2 ಪಂದ್ಯಗಳಲ್ಲಿ 3 ಶತಕ, 1 ಅರ್ಧಶತಕ ಬಾರಿಸಿ ಭಾರದ ಬೌಲರ್ಸ್ ಗೆ ಸವಾಲ್

100(168), 84(128), 103(168) ಹಾಗೂ 133*(264).. ಒಟ್ಟು 420 ರನ್ಸ್

ಮೊದಲ ನಾಲ್ಕು ದಿನ ಭಾರತದ ಪರ್ಫಾಮೆನ್ಸ್ ಚೆನ್ನಾಗಿದ್ರೂ 5ನೇ ದಿನ ವೀಕ್

ಇಡೀ ದಿನ ಆಡಿದ್ರೂ ಸಿಕ್ಕಿದ್ದು 3 ವಿಕೆಟ್.. ಬೌಲಿಂಗ್ ನಿಂದಲೇ ಪಂದ್ಯ ಡ್ರಾ

ಹೀಗೆ ಶ್ರೀಲಂಕಾ ಬ್ಯಾಟಿಂಗ್ ಪೇಷನ್ಸ್ ಮುಂದೆ ಭಾರತದ ಬೌಲಿಂಗ್ ಸರೆಂಡರ್ ಆಗ್ಲೇಬೇಕಾಯ್ತು. ಅಂತಿಮವಾಗಿ ಐದನೇ ದಿನದಾಟದ ಕೊನೇ ಸೆಷನ್​ ಕೊನೇ ಹಂತದಲ್ಲಿ ಲಂಕಾ ಪಡೆ 9 ವಿಕೆಟ್ ನಷ್ಟಕ್ಕೆ 429 ರನ್ಸ್ ಗಳಿಸಿದ್ರು. ಅಂತಿಮವಾಗಿ ಈ ಪಂದ್ಯ ಡ್ರಾನಲ್ಲಿ ಕೊನೆಯಾಯ್ತು. ಈ ಪಂದ್ಯದ ಮೂಲಕ ಭಾರತ ಪಾಠ ಕಲಿಯಲೇಬೇಕಿದೆ. ಬೌಲಿಂಗ್ ಸ್ಟ್ರಾಂಗ್ ಆಗ್ಬೇಕು. ಫೀಲ್ಡಿಂಗ್ ಇನ್ನೂ ಕೂಡ ಶಾರ್ಪ್ ಆಗ್ಬೇಕು. ಅಟ್ ದಿ ಸೇಮ್ ಟೈಂ ಸ್ಟಾರ್ಟಿಂಗ್​ನಲ್ಲಿ ಲೀಡ್ ಸಿಕ್ಕಾಗ ಗೆದ್ದೇ ಬಿಡ್ತೀವಿ ಅನ್ನೋ ಭ್ರಮೆ ಬಿಡ್ಬೇಕು.

Shantha Kumari

Leave a Reply

Your email address will not be published. Required fields are marked *