ಜೊತೆಯಲ್ಲೇ ಸೆಂಚುರಿ ಸಿಡಿಸಿದ ಸ್ನೇಹಿತರು – ಶತಕ ಸಿಡಿಸಿದ ಶುಭ್ಮನ್ ಗಿಲ್, ಇಶಾನ್ ಕಿಶನ್

ಜೊತೆಯಲ್ಲೇ ಸೆಂಚುರಿ ಸಿಡಿಸಿದ ಸ್ನೇಹಿತರು – ಶತಕ ಸಿಡಿಸಿದ ಶುಭ್ಮನ್ ಗಿಲ್, ಇಶಾನ್ ಕಿಶನ್

ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಮತ್ತು ಇಶಾನ್ ಕಿಶನ್ ಭರ್ಜರಿ ಸೆಂಚುರಿ ಸಿಡಿಸಿದ್ದಾದರೆ. ನಾಯಕನಾದ ಬಳಿಕ ಇದೇ ಮೊದಲ ಬಾರಿಗೆ ಗಿಲ್ ಶತಕ ಸಿಡಿಸಿದ್ದಾರೆ. ಜೊತೆಗೆ ಗಿಲ್ ಕುಚಿಕು ಗೆಳೆಯ ಇಶಾನ್ ಕಿಶಾನ್ ಕೂಡಾ ಶತಕ ಬಾರಿಸಿದ್ದಾರೆ.

ಇದನ್ನೂ ಓದಿ:AFG ಮ್ಯಾಚಲ್ಲೂ ಕೈಕೊಟ್ಟ ವೈಭವ್ – ಸೂರ್ಯವಂಶಿನೇ TARGET ಮಾಡಿದ್ರಾ?

ಟೀಮ್ ಇಂಡಿಯಾ ಬ್ಯಾಟರ್ಸ್ ಇವತ್ತು ಅಫ್ಘನ್ ಬೌಲರ್‌ಗಳ ಬೆವರಿಳಿಸಿದ್ದಂತೂ ಸತ್ಯ. ಅರ್ಧಶತಕದ ಹೊಸ್ತಿಲಲ್ಲಿ ಎಡವಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಕೂಡಾ ಬೊಂಬಾಟಾಗಿಯೇ ಬ್ಯಾಟಿಂಗ್ ಮಾಡಿ 48 ರನ್‌ಗಳಿಗೆ ಔಟಾಗಿದ್ದರು. ನಂತರ ಟೀಂ ಇಂಡಿಯಾದ ನಾಯಕ ಶುಭ್​ಮನ್ ಗಿಲ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಲಕ್ನೋದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಗಿಲ್, ಕೇವಲ 38 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅರ್ಧಶತಕದ ಬಳಿಕವೂ ಸಿಡಿಲಬ್ಬರದ ಬ್ಯಾಟಿಂಗ್‌ ಮುಂದುವರೆಸಿದ ಗಿಲ್ 77 ಎಸೆತಗಳಲ್ಲಿ ತಮ್ಮ ಏಕದಿನ ವೃತ್ತಜೀವನದ 9ನೇ ಶತಕವನ್ನು ಪೂರ್ಣಗೊಳಿಸಿದರು.

ಗಿಲ್ ಜೊತೆಗೆ ಇಶಾನ್ ಕಿಶನ್ ಕೂಡಾ ಬ್ಯಾಟಿಂಗ್‌ನಲ್ಲಿ ಶೈನ್ ಆದರು. ಕಿಶನ್ ಕೇವಲ 71 ಎಸೆತಗಳಲ್ಲಿ 14 ಬೌಂಡರಿ, 4 ಸಿಕ್ಸರ್ ಸೇರಿ ಶತಕ ಪೂರೈಸಿದರು. ಇಶಾನ್ ಕಿಶನ್ ಕೂಡ ತಮ್ಮ ಏಕದಿನ ವೃತ್ತಜೀವನದ ಎರಡನೇ ಶತಕವನ್ನು ಬಾರಿಸಿದರು. ಗಿಲ್ ಮತ್ತು ಇಶಾನ್ ಕಿಶನ್ ಒಂದೇ ಓವರ್‌ನಲ್ಲಿ ಶತಕ ಪೂರೈಸಿದ್ದು ವಿಶೇಷವಾಗಿತ್ತು.

Sulekha

Leave a Reply

Your email address will not be published. Required fields are marked *