ಗಿಲ್ ಸ್ವಾರ್ಥಕ್ಕೆ ಕೊನೆಯೇ ಇಲ್ವಾ? – ಜೈಸ್ವಾಲ್‌ ಶತಕಕ್ಕೆ ಶುಭ್ಮನ್ ಕಲ್ಲು
ಗಾಯಕ್ವಾಡ್ ಸೈಡ್ ​ಲೈನ್ ಮಾಡಿದ್ಯಾಕೆ?

ಗಿಲ್ ಸ್ವಾರ್ಥಕ್ಕೆ ಕೊನೆಯೇ ಇಲ್ವಾ? – ಜೈಸ್ವಾಲ್‌ ಶತಕಕ್ಕೆ ಶುಭ್ಮನ್ ಕಲ್ಲುಗಾಯಕ್ವಾಡ್ ಸೈಡ್ ​ಲೈನ್ ಮಾಡಿದ್ಯಾಕೆ?

ಟಿ20 ವಿಶ್ವಕಪ್ ಗೆದ್ದ ಸಂಭ್ರಮದಲ್ಲಿದ್ದ ಟೀಮ್ ಇಂಡಿಯಾ, ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದಿದೆ. ಕ್ಯಾಪ್ಟನ್ ಶುಭ್ಮನ್ ಗಿಲ್ ಸಾರಥ್ಯದ ಟೀಮ್ ಗೆಲುವಿನ ಕೇಕೆ ಹಾಕಿದೆ. ಆದ್ರೆ, ಶುಭ್ಮನ್ ಗಿಲ್ ನಾಯಕತ್ವದ ಮೊದಲ ಸರಣಿ ಗೆಲುವನ್ನು ಕೊಂಡಾಡಬೇಕಿದ್ದ ಫ್ಯಾನ್ಸ್, ಗಿಲ್ ವಿರುದ್ಧ ಬಹಿರಂಗವಾಯಿಗೇ ಟೀಕೆ ಮಾಡ್ತಿದ್ದಾರೆ. ಯಾವ ನಾಯಕನನ್ನ ಹೊಗಳಿ ಮೆರೆದಾಡಿಸಬೇಕಿತ್ತೋ ಅದೇ ನಾಯಕನಿಗೆ ಈಗ ಸಿಕ್ಕಿದ್ದು ಸ್ವಾರ್ಥಿ ಎಂಬ ಪಟ್ಟ. ಹಾಗಾದ್ರೆ ಸ್ನೇಹಿತರೇ, ಗಿಲ್ ಸ್ವಾರ್ಥಿ ಎಂಬ ಆರೋಪಕ್ಕೆ ಗುರಿಯಾಗಿದ್ದು ಯಾಕೆ?. ಯಂಗ್ ಟೈಗರ್ಸ್ ಮೊದಲ ಸರಣಿ ಗೆದ್ದ ಸಂಭ್ರಮ ಫ್ಯಾನ್ಸ್ ಗಿಲ್ಲ ಯಾಕೆ?, ಗಿಲ್ ಸ್ವಾರ್ಥಕ್ಕೆ ಯಾವ್ಯಾವ ಆಟಗಾರರು ಬಲಿಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಚ್ಚನ್ ಫ್ಯಾಮಿಲಿ ಬಿಟ್ರಾ ಐಶ್ವರ್ಯಾ ರೈ? – ಅಂಬಾನಿ ಮದ್ವೇಲಿ ಬಿಗ್​ ಸೀಕ್ರೆಟ್ ರಿವೀಲ್

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯನ್ನು ಗೆದ್ದು ಬೀಗಿದ್ದಾರೆ ಟೀಮ್ ಇಂಡಿಯಾದ ಯಂಗ್ ಟೈಗರ್ಸ್. ಬಿಸಿಸಿಐ, ಶುಭ್ಮನ್ ಗಿಲ್ ಸಾರಥ್ಯದ ಯಂಗ್ ಇಂಡಿಯಾವನ್ನು ಜಿಂಬಾಬ್ವೆ ವಿರುದ್ಧ ಕಳಿಸಿದ್ದು ಸಾರ್ಥಕ ಎಂಬಂತೆ ನಮ್ಮ ಯುವ ಹುಲಿಗಳು ಕೂಡಾ ಜಿಂಬಾಬ್ವೆ ವಿರುದ್ಧ ಗೆಲುವಿನ ಘರ್ಜನೆ ಮಾಡಿದ್ದಾರೆ. ಆದ್ರೆ, ಫ್ಯಾನ್ಸ್ ಯಾಕೋ ಈ ಗೆಲುವನ್ನ ಸಂಭ್ರಮಿಸಿಲ್ಲ. ಫ್ಯಾನ್ಸ್ ಯಾಕೆ, ಯಂಗ್ ಇಂಡಿಯಾ ಟೀಮ್ ನಲ್ಲೂ ಸರಣಿ ಗೆದ್ದ ಸಂಭ್ರಮ ಅಷ್ಟೇನು ಕಾಣಿಸಲೇ ಇಲ್ಲ. ಇದಕ್ಕೆ ಕಾರಣ ಕ್ಯಾಪ್ಟನ್ ಗಿಲ್ ಅವರ ಸ್ವಾರ್ಥ ಬುದ್ದಿ ಎಂಬ ವಿಚಾರ ಈಗ ಬಹಿರಂಗಗೊಂಡಿದೆ. ಒಬ್ಬ ನಾಯಕ ಹೇಗೆ ಇರ್ಬೇಕು ಅನ್ನೋದಕ್ಕೆ ಅಪವಾದ ಎಂಬಂತೆ ಗಿಲ್ ಇದ್ರು ಅನ್ನೋದು ಫ್ಯಾನ್ಸ್ ಆರೋಪ. ಅಷ್ಟೇ ಅಲ್ಲ, ಕ್ಯಾಪ್ಟನ್ ಗಿಲ್ ಇಲ್ಲಿ ತಾನು, ತನ್ನದು, ತನ್ನ ಆಟ, ತಾನೊಬ್ಬನೇ ಸಮರ್ಥ ಅನ್ನೋದನ್ನ ಬಿಂಬಿಸಲು ಹೊರಟಿದ್ದಾರೆ ಎಂಬ ಆರೋಪ ಕೂಡಾ ಕೇಳಿಬಂದಿದೆ. ಜೊತೆಗೆ ಫ್ಯಾನ್ಸ್ ಕೂಡಾ ಗಿಲ್ ಯಾಕೆ ಸ್ವಾರ್ಥಿ ಎಂಬುದನ್ನ ಪಟ್ಟಿ ಮಾಡಿ ಆರೋಪ ಮಾಡಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳು ಗಿಲ್ ವಿರುದ್ಧ ಮಾಡಿರೋ ಆರೋಪಗಳ ಪಟ್ಟಿಯನ್ನ ಒಂದೊಂದಾಗಿಯೇ ಹೇಳ್ತಾ ಹೋಗ್ತೇನೆ ನೋಡಿ.

ಕ್ಯಾಪ್ಟನ್ ಶುಭ್‌ಮನ್ ಗಿಲ್ ಸ್ವಾರ್ಥಿ

ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಗೆಲುವು ದಕ್ಕಿಸಿಕೊಂಡು, ತಾನೊಬ್ಬ ಯಶಸ್ವಿ ಕ್ಯಾಪ್ಟನ್ ಆಗಬಲ್ಲೆ ಅನ್ನೋದನ್ನ ತೋರಿಸಲು ಹೊರಟಿರುವ ಶುಭ್ಮನ್ ಗಿಲ್‌ ವಿರುದ್ಧ ಫ್ಯಾನ್ಸ್ ಸ್ವಾರ್ಥಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಂಬಾಬ್ವೆ ವಿರುದ್ಧದ ಪಂದ್ಯಗಳಲ್ಲಿ ಎರಡನೇ ಲೀಡಿಂಗ್ ಸ್ಕೋರರ್ ರುತುರಾಜ್ ಗಾಯಕ್ವಾಡ್ ಅವ್ರಿಗೆ ಕೊನೇ ಪಂದ್ಯದಲ್ಲಿ ಶುಭ್ಮನ್ ಗಿಲ್ ಆಡಲು ಅವಕಾಶವನ್ನೇ ಕೊಟ್ಟಿಲ್ಲ. ಲಾಸ್ಟ್ ಮ್ಯಾಚ್‌ನಲ್ಲಿ ರುತುರಾಜ್ ಬೆಂಚ್ ಕಾಯಬೇಕಾಯ್ತು. ಇನ್ನು ಜಿಂಬಾಬ್ವೆ ವಿರುದ್ಧ ಸೆಂಚೂರಿ ಬಾರಿಸಿ ತಾನೊಬ್ಬ ರೋಹಿತ್ ಶರ್ಮಾಗೆ ಉತ್ತಾರಾಧಿಕಾರಿಯಾಗಬಲ್ಲೆ ಎಂದು ತೋರಿಸಿಕೊಟ್ಟ ಅಭಿಷೇಕ್ ಶರ್ಮಾ ವಿಚಾರದಲ್ಲೂ ಗಿಲ್ ಸ್ವಾರ್ಥಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೇಳಿಕೇಳಿ ಅಭಿಷೇಕ್ ಶರ್ಮಾ ಆರಂಭಿಕ ಸ್ಪೋಟಕ ಬ್ಯಾಟರ್. ಆದ್ರೆ, ಗಿಲ್ ಶತಕ ಸಿಡಿಸಿದ ಮೇಲೂ ಅಭಿಶೇಕ್​ ಅನ್ನೋ ಅದ್ಭುತ ಆಟಗಾರನ್ನು 3ನೇ ಪಂದ್ಯದಲ್ಲಿ ಡಿಮೋಟ್​ ಮಾಡಿದ್ದಾರೆ ಎಂಬ ಅಪವಾದಕ್ಕೆ ಗುರಿಯಾಗಿದ್ದಾರೆ. ನಾಲ್ಕನೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಚೊಚ್ಚಲ ಟಿ20 ಶತಕ ಹೊಡಿತಾರೆ ಅಂತಾನೇ ಫ್ಯಾನ್ಸ್ ಎಲ್ರೂ ಕಾಯ್ತಿದ್ರು. ಆದ್ರೆ, ಕ್ಯಾಪ್ಟನ್ ಗಿಲ್ ಜೈಸ್ವಾಲ್ ಅವರ ಶತಕವನ್ನೂ ಮಿಸ್ ಮಾಡಿದ್ರು. ಇದು ಕೂಡಾ ಗಿಲ್ ಸ್ವಾರ್ಥ ಬುದ್ದಿ ತೋರಿಸುತ್ತೆ ಅಂತಾ ಫ್ಯಾನ್ಸ್ ಕಿಡಿಕಾರಿದ್ದಾರೆ. ಗಿಲ್​​ ಓರ್ವ ಮೋಸ್ಟ್​ ಸೆಲ್ಫಿಶ್​ ಮತ್ತು ಇನ್​ಸೆಕ್ಯೂರಿಟಿ ಇರೋ ಆಟಗಾರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಫ್ಯಾನ್ಸ್.

ಜಿಂಬಾಬ್ವೆ ವಿರುದ್ಧದ ಎರಡನೇ ಪಂದ್ಯದಲ್ಲಿ ಅಭಿಷೇಕ್‌ ತಮ್ಮ ಚೊಚ್ಚಲ ಶತಕವನ್ನು ಸಿಡಿಸಿದ್ದರು. ಹೀಗಾಗಿ ಮೂರನೇ ಪಂದ್ಯದಲ್ಲಿ ಅಭಿಷೇಕ್ ಮೇಲೆ ಫ್ಯಾನ್ಸ್ ನೀರಿಕ್ಷೆ ದೊಡ್ಡ ಮಟ್ಟದಲ್ಲೇ ಇತ್ತು. ಆದ್ರೆ, ಅವರನ್ನು ಮೂರನೇ ಕ್ರಮಾಂಕಕ್ಕೆ ಇಳಿಸಿದ ನಾಯಕ ಶುಭಮನ್ ಗಿಲ್‌ ನಿರ್ಧಾರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಹೀಗಾಗಿ ಮೂರನೇ ಪಂದ್ಯದಿಂದಲೇ ಗಿಲ್ ವಿರುದ್ಧ ಫ್ಯಾನ್ಸ್ ಆಕ್ರೋಶ ಹೊರಹಾಕುತ್ತಲೇ ಬಂದಿದ್ದರು. ಈ ಆಕ್ರೋಶ ಕೊನೇ ಪಂದ್ಯದವರೆಗೂ ಗಿಲ್ ಎದುರಿಸಬೇಕಾಗಿ ಬಂದಿದೆ. ಇದಕ್ಕಿಂತಲೂ ಇನ್ನೊಂದು ವಿಪರ್ಯಾಸವೆಂದರೆ, ಹುಮ್ಮಸ್ಸಲ್ಲೇ ಜಿಂಬಾಬ್ವೆ ನಾಡಿಗೆ ಕಾಲಿಟ್ಟ ಯಂಗ್ ಟೈಗರ್ಸ್, ಕೊನೇ ಮ್ಯಾಚ್‌ನಲ್ಲಿ ಸರಣಿ ಗೆದ್ದರೂ ಕೂಡಾ ಅಷ್ಟೊಂದು ಸಂಭ್ರಮಿಸಿಲ್ಲ. ಇದಕ್ಕೆ ಕಾರಣ ಗಿಲ್ ಅವರ ಸ್ವಾರ್ಥ ಬುದ್ದಿ ಅನ್ನೋ ಮಾತು ಕೂಡಾ ಕೇಳಿಬರ್ತಿದೆ. ಅಷ್ಟೇ, ಅಲ್ಲ, ಯಾವ ನಾಯಕ ಸ್ವಾರ್ಥದಿಂದ ಆಡುತ್ತಾನೋ ಅವನು ನಾಯಕನಾದರೆ ಟೀಮ್‌ಗೆ ಯಾವ ರೀತಿಯ ಪ್ರಯೋಜನವಾಗುವುದಿಲ್ಲ ಅಂತಿದ್ದಾರೆ ಫ್ಯಾನ್ಸ್. ಗಿಲ್ ನಾಯಕತ್ವ ಏನು ಅನ್ನೋದನ್ನ ಧೋನಿ, ರೋಹಿತ್ ಶರ್ಮಾ ಅವರನ್ನ ನೋಡಿ ಕಲಿಯಬೇಕು ಅಂತಿದ್ದಾರೆ ಫ್ಯಾನ್ಸ್. ಇನ್ನು ಜೈಸ್ವಾಲ್ ಗೆ ಸೆಂಚೂರಿ ಹೊಡೆಯಲು ಬಿಡದ ಗಿಲ್ ಅವ್ರನ್ನ ಫ್ಯಾನ್ಸ್ ಪಾಕಿಸ್ತಾನದ ನಾಯಕ ಬಾಬರ್ ಅಜಂಗೆ ಫ್ಯಾನ್ಸ್ ಹೋಲಿಸುತ್ತಿದ್ದಾರೆ. ಬಾಬರ್ ಅಜಂ ಯಾವಾಗಲೂ ಸ್ವಾರ್ಥಿ ಕ್ಯಾಪ್ಟನ್. ಈಗ ಅವರ ಲಿಸ್ಟ್‌ಗೆ ಗಿಲ್ ಕೂಡಾ ಸೇರಿದ್ದಾರೆ ಅಂತಿದ್ದಾರೆ ಫ್ಯಾನ್ಸ್.

ಭಾರತ ಪಂದ್ಯ ಗೆದ್ದರೂ ನಾಯಕ ಶುಭಮನ್ ಗಿಲ್ ವಿರುದ್ಧ ಅಭಿಮಾನಿಗಳು ಆಕ್ರೊಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಗಿಲ್‌ರನ್ನು ಸ್ವಾರ್ಥಿ ಎಂದು ನಿಂದಿಸಲಾಗುತ್ತಿದೆ. ಯಶಸ್ವಿ ಜೈಸ್ವಾಲ್‌ಗೆ ಶತಕ ಗಳಿಸುವ ಅವಕಾಶವನ್ನು ಗಿಲ್ ಕಸಿದುಕೊಂಡರು ಎನ್ನುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಭಾರತದ ಗೆಲುವಿಗೆ ಕೇವಲ 23 ರನ್‌ಗಳ ಅಗತ್ಯವಿತ್ತು. ಮತ್ತು ಜೈಸ್ವಾಲ್ ಬ್ಯಾಟಿಂಗ್ 83 ರನ್ ಗಳಿಸಿದ್ದರು. ಅಭಿಮಾನಿಗಳು ಜೈಸ್ವಾಲ್ ಶತಕ ಬಾರಿಸಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದರೆ ಶುಭಮನ್ ಗಿಲ್ ಬೌಂಡರಿ, ಸಿಕ್ಸರ್ ಬಾರಿಸುವ ಮೂಲಕ ಭಾರತದ ಗೆಲುವಿಗೆ ಹತ್ತಿರವಾಗುವಂತೆ ಮಾಡಿದ್ರು. ಇದ್ರಿಂದಾಗಿ ಜೈಸ್ವಾಲ್ ಶತಕ ಗಳಿಸಲು ಸಾಧ್ಯವಾಗಲೇ ಇಲ್ಲ. ಈ ಘಟನೆಯನ್ನು 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹಾರ್ದಿಕ್ ಪಾಂಡ್ಯ ಅವರ ಇದೇ ರೀತಿಯ ಕೃತ್ಯಕ್ಕೆ ಹೋಲಿಕೆ ಮಾಡಲಾಗುತ್ತಿದೆ. ಆ ಪಂದ್ಯದಲ್ಲಿ ಪಾಂಡ್ಯ ತಿಲಕ್ ವರ್ಮಾ ಅವರನ್ನು ಅರ್ಧಶತಕ ಗಳಿಸಲು ಅವಕಾಶ ಕೊಡಲಿಲ್ಲ. ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಗೆಲ್ಲಿಸಿದರು. ಗಿಲ್ ಈ ರೀತಿ ಮಾಡೋದು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಅನ್ನೋ ಸಿಟ್ಟು ಫ್ಯಾನ್ಸ್ ಗಿದೆ. ಅದಕ್ಕೆ ಸರಿಯಾಗಿಯೇ ಗಿಲ್ ಪ್ರತಿ ಪಂದ್ಯದಲ್ಲೂ ತನ್ನ ಸ್ಥಾನ ಭದ್ರಪಡಿಸಿಕೊಳ್ಳವುಲ್ಲಿ ಮಾತ್ರ ಯೋಚನೆ ಮಾಡ್ತಿರೋದು ಎಲ್ಲರ ಕಣ್ಣಿಗೂ ಕಾಣಿಸ್ತಿದೆ. ಹೀಗೇ ಆದ್ರೆ, ಗಿಲ್ ತನ್ನ ಟೀಮ್ ನ ಆಟಗಾರರ ಅಸಮಾಧಾನಕ್ಕೆ ಕಾರಣವಾಗೋದ್ರಲ್ಲಿ ನೋ ಡೌಟ್. ಒಬ್ಬ ಕ್ಯಾಪ್ಟನ್ ಇಡೀ ಟೀಮ್ ನನ್ನದು, ನಾನು ದೇಶಕ್ಕಾಗಿ ಆಡೋದು ಅನ್ನೋದನ್ನ ನೆನಪಿಟ್ಟುಕೊಳ್ಳಬೇಕು. ಮೊದಲು ದೇಶ, ನಂತರ ಟೀಮ್, ನಂತನ ನಾನು ಅನ್ನೋದು ಇರ್ಬೇಕು. ಅದು ಬಿಟ್ಟು ಕೇವಲ ಸ್ವಾರ್ಥಿಯಾದ್ರೆ ಆತ ಒಬ್ಬ ಯಶಸ್ವೀ ನಾಯಕ ಆಗಲು ಸಾಧ್ಯವೇ ಇಲ್ಲ.

Shwetha M

Leave a Reply

Your email address will not be published. Required fields are marked *