ಗಿಲ್ ​ಗೆ ಇನ್ನೆಷ್ಟು ಚಾನ್ಸ್? – ಸಂಜು ಟೆಸ್ಟ್ ಆಡೋದ್ಯಾವಾಗ?

ಗಿಲ್ ​ಗೆ ಇನ್ನೆಷ್ಟು ಚಾನ್ಸ್? – ಸಂಜು ಟೆಸ್ಟ್ ಆಡೋದ್ಯಾವಾಗ?

ಭಾರತದಲ್ಲಿ ಟ್ಯಾಲೆಂಟೆಡ್ ಕ್ರಿಕೆಟರ್ಸ್​ಗಳಿಗೇನೂ ಕಡಿಮೆ ಇಲ್ಲ. ಅವಕಾಶಕ್ಕಾಗಿ ಕಾಯ್ತಾ ಇರೋ ಪ್ಲೇಯರ್ಸ್​ಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಇಷ್ಟಾದ್ರೂ ಶುಬ್ಮನ್​ ಗಿಲ್​ಗೆ ಅತೀ ಹೆಚ್ಚು ಪ್ರಯಾರಿಟಿ ನೀಡಲಾಗ್ತಿದೆ. ಶುಬ್ಮನ್ ಗಿಲ್ ಪರ್ಫಾಮೆನ್ಸ್ ಮತ್ತು ಸ್ಟಾರ್​​ ಬ್ಯಾಟ್ಸ್​ಮನ್​ಗೆ ಇಷ್ಟೆಲ್ಲಾ ಚಾನ್ಸ್ ಕೊಡ್ತಾ ಇರೋದ್ರಿಂದ ಇನ್ಯಾರಿಗೆಲ್ಲಾ ಸಮಸ್ಯೆಯಾಗ್ತಾ ಇದೆ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ..

ಟೆಸ್ಟ್​ನಲ್ಲಿ ಫೇಲ್ ಆಗ್ತಿದ್ರೂ ಶುಬ್ಮನ್ ಗಿಲ್​ಗೆ ಹೀಗೆ ಚಾನ್ಸ್​ ಕೊಡ್ತಾನೆ ಇರೋದ್ರಿಂದ ಬೇರೆ ಟ್ಯಾಲೆಂಟೆಡ್ ಬ್ಯಾಟ್ಸ್​​ಮನ್​ಗಳಿಗೆ ಅವಕಾಶ ಸಿಗ್ತಾ ಇಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಸಂಜು ಸ್ಯಾಮ್ಸನ್. ಇದುವರೆಗೆ ಟೀಂ ಇಂಡಿಯಾ ಪರ ಸಂಜು ಸ್ಯಾಮ್ಸನ್ ಒಂದೇ ಒಂದು ಟೆಸ್ಟ್​ ಮ್ಯಾಚ್​ನ್ನ ಆಡಿಲ್ಲ. ಸಂಜು ಸ್ಯಾಮ್ಸನ್ ಟೆಸ್ಟ್ ಡೆಬ್ಯೂನೇ ಆಗಿಲ್ಲ. ಕ್ಯಾ ಹೋರಹಾಹೆ ಭಾಯೀ.. ಆ್ಯಕ್ಚುವಲಿ ಸಂಜು ಟೆಸ್ಟ್​​ನಲ್ಲಿ ಆಡಲೇಬೇಕಾದಂಥಾ ಪ್ಲೇಯರ್. ಓಪನರ್ ಆಗಿಯೂ ಬ್ಯಾಟಿಂಗ್ ಮಾಡ್ತಾರೆ. ಕ್ಲಾಸ್ ಪ್ಲೇಯರ್​ ಬೇರೆ.. ಆದ್ರೆ ಚಾನ್ಸೇ ಸಿಕ್ಕಿಲ್ಲ.

ಇದನ್ನೂ ಓದಿ: ಮೊದಲ ಟೆಸ್ಟ್ ಪಂದ್ಯ ಸೋಲಿಗೆ ಬೌಲರ್ಸ್ ಕಾರಣ ಎಂದ ಕ್ಯಾಪ್ಟನ್ – ಬ್ಯಾಟಿಂಗ್ ಬಲವನ್ನು ಸಮರ್ಥಿಸಿಕೊಂಡ ರೋಹಿತ್ ಶರ್ಮಾ

ಇನ್ನು ರುತುರಾಜ್​ ಗಾಯಕ್ವಾಡ್​ ವಿಚಾರದಲ್ಲೂ ಇದೇ ಆಗಿರೋದು. ಶುಬ್ಮನ್ ಗಿಲ್​ಗೆ ಹೆಚ್ಚಿನ ಇಂಪಾರ್ಟೆನ್ಸ್​ ಕೊಡ್ತಾ ಇರೋದ್ರಿಂದ ಗಾಯಕ್ವಾಡ್​ಗೂ ಚಾನ್ಸ್​ ಸಿಕ್ಕಿಲ್ಲ. ಹಾಗೆಯೇ ಅಜಿಂಕ್ಯ ರಹಾಣೆಯನ್ನ ಕೂಡ ಟೆಸ್ಟ್​ ಸ್ಕ್ವಾಡ್​ಗೆ ಪಿಕ್ ಮಾಡ್ತಾ ಇಲ್ಲ. ರಹಾಣೆ ಏನೂ ಕಂಪ್ಲೀಟ್ ಔಟ್ ಆಫ್ ಫಾರ್ಮ್​​ನಲ್ಲಿರೋ ಪ್ಲೇಯರ್ ಅಂತೂ ಅಲ್ವೇ ಅಲ್ಲ. ಎಕ್ಸ್​ಪೀರಿಯನ್​​ ಇರೋ ಆಟಗಾರನೂ ಆಗಿರೋದ್ರಿಂದ ರಹಾಣೆಯಂತವರಿಗೆ ಚಾನ್ಸ್ ಕೊಡಬೇಕಿತ್ತು. ಇನ್ನು ಮುಂಬೈ ಮೂಲಕ ಸರ್ಫರಾಜ್​ ಖಾನ್​ ಫಸ್ಟ್​ ಕ್ಲಾಸ್​ ಕ್ರಿಕೆಟ್​​ನಲ್ಲಿ ಟಾಪ್​ ಕ್ಲಾಸ್ ಆಗಿ ಆಡಿದ್ರೂ ಇದುವರೆಗೂ ಟೀಂ ಇಂಡಿಯಾದ ಎಂಟ್ರಿ ಗೇಟ್ ಓಪನ್ ಆಗಿಲ್ಲ. ಬಟ್, ಅದ್ಯಾಕೋ ಈಗಿನ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಶುಬ್ಮನ್ ಗಿಲ್​ಗೆ ಫಿಕ್ಸ್ ಆಗಿ ಬಿಟ್ಟಿದೆ.

ಇನ್ನು ಮಾಜಿ ಕ್ರಿಕೆಟರ್ಸ್ಗಳು ಕೂಡ ಶುಬ್ಮನ್​​ ಗಿಲ್​ಗೆ ವಾರ್ನಿಂಗ್ ಮೆಸೇಜ್​​ ಪಾಸ್ ಮಾಡೋಕೆ ಶುರು ಮಾಡಿದ್ದಾರೆ. ಟೆಸ್ಟ್​ನಲ್ಲಿ ಶುಬ್ಮನ್ ಗಿಲ್​ ಬ್ಯಾಟಿಂಗ್ ಎವರೇಜ್​ 30ಕ್ಕೆ ಇಳಿದಿದೆ. ರನ್​ಗಳು ಬರ್ತಾ ಇಲ್ಲ. ಆ ಕಡೆ ಸಾಕಷ್ಟು ಮಂದಿ ಗಿಲ್​​ ಜೊತೆ ರೇಸ್​ನಲ್ಲಿದ್ದಾರೆ. ಮುಂದಿನ ಮ್ಯಾಚ್​ಗಳಲ್ಲಿ ಶುಬ್ಮನ್ ಗಿಲ್​ ಕನ್ಸಿಸ್ಟೆಂಟ್ ಆಗಿ ಸ್ಕೋರ್ ಗಳಿಸಿಲ್ಲ ಅಂದ್ರೆ ಟೆಸ್ಟ್ ಮತ್ತು ಟಿ-20ಯಲ್ಲಿ ಗಿಲ್​ ಪೊಸೀಶನ್​ಗೆ ಥ್ರೆಟ್ ಬರೋದು ಗ್ಯಾರಂಟಿ ಅಂತಾ ಕಾಮೆಂಟ್ರೇಟರ್ ಸಂಜಯ್​ ಮಂಜ್ರೇಕರ್ ವಾರ್ನ್ ಮಾಡಿದ್ದಾರೆ. ಇನ್ನು ದಿನೇಶ್ ಕಾರ್ತಿಕ್ ಕೂಡ ಗಿಲ್ ಪೂವರ್ ಪರ್ಫಾಮೆನ್ಸ್​ ಬಗ್ಗೆ ರಿಯಾಕ್ಟ್ ಮಾಡಿದ್ದು, ಟೆಸ್ಟ್​ ಟೀಮ್​ನಲ್ಲಿ ಪರ್ಮನೆಂಟ್ ಸ್ಥಾನ ಪಡೀಬೇಕು ಅಂದ್ರ ಶುಬ್ಮನ್​ ಗಿಲ್​​ ಸೌತ್ ಆಫ್ರಿಕಾ ವಿರುದ್ಧದ ಸೆಕೆಂಡ್​​ ಟೆಸ್ಟ್​​ನಲ್ಲಿ ಬಿಗ್​ ಸ್ಕೋರ್​​ ಗಳಿಸಲೇಬೇಕು. ಸದ್ಯ ಗಿಲ್ ಕೆರಿಯರ್​​ ಮೇಲೆ ಕ್ವಶ್ಚನ್ ಮಾರ್ಕ್ ಇದೆ. ಎಕ್ಸ್​​ಪೆಕ್ಟೇಶನ್​​ ರೀಚ್ ಆಗ್ತಾ ಇಲ್ಲ. 19 ಟೆಸ್ಟ್​ ಮ್ಯಾಚ್​ಗಳನ್ನ ಆಡಿದ್ರೂ ಓವರ್​ಆಲ್ ಎವರೇಜ್ 30 ಕ್ರಾಸ್ ಆಗಿಲ್ಲ ಅಂದ್ರೆ ಅದು ಡೇಂಜರಸ್ ಸೈನ್. ಕೆರಿಯರ್​​ಗೆ ಡ್ಯಾಮೇಜ್​ ಆಗೋಕೆ ಇದೇ ಸಾಕು. ನೆಕ್ಟ್ಸ್  ಮ್ಯಾಚ್​​ನಲ್ಲಿ ಪರ್ಫಾಮ್ ಮಾಡಿಲ್ಲ ಅಂದ್ರೆ ಗಿಲ್​​ ಪ್ರಾಬ್ಲಂ ಎದುರಿಸೋದು ಗ್ಯಾರಂಟಿ ಅಂತಾ ದಿನೇಶ್ ಕಾರ್ತಿಕ್ ಕೂಡ ವಾರ್ನ್ ಮಾಡಿದ್ದಾರೆ.

ಆದ್ರೆ ಸೌತ್​ ಆಫ್ರಿಕಾ ವಿರುದ್ಧದ ಸೆಕೆಂಡ್ ಟೆಸ್ಟ್​ನಲ್ಲಿ ಶುಬ್ಮನ್ ಗಿಲ್​ಗೆ ಚಾನ್ಸ್​ ಸಿಗುತ್ತೆ ಅನ್ನೋದು ಕೂಡ ಗ್ಯಾರಂಟಿ ಇಲ್ಲ. ಯಾಕಂದ್ರೆ, ತಮಿಳುನಾಡು ಮೂಲದ ಅಭಿಮನ್ಯು ಈಶ್ವರನ್​ಗೆ ಚಾನ್ಸ್ ಕೊಟ್ರೂ ಆಶ್ಚರ್ಯ ಇಲ್ಲ. ಯಾಕಂದ್ರೆ ಗಾಯಕ್ವಾಡ್ ಇಂಜ್ಯೂರಿ ಬಳಿಕ ಅಭಿಮನ್ಯು ಈಶ್ವರನ್​ರನ್ನ ಟೆಸ್ಟ್​ ಸ್ಕ್ವಾಡ್​ಗೆ ಸೇರಿಸಿಕೊಳ್ಳಲಾಗಿದೆ. ಒಂದು ವೇಳೆ ಗಾಯಕ್ವಾಡ್ ಇರ್ತಿದ್ರೆ, ನೆಕ್ಸ್ಟ್ ಮ್ಯಾಚ್​​ನಲ್ಲಿ ಶುಬ್ಮನ್ ಗಿಲ್ ಬದಲು ಗಾಯಕ್ವಾಡ್​ಗೆ ಚಾನ್ಸ್ ಕೊಡ್ತಿದ್ರೋ ಗೊತ್ತಿಲ್ಲ. ಆದ್ರೆ ರುತುರಾಜ್ ಗಾಯಕ್ವಾಡ್​ಗೆ ಈ ಹಿಂದೆ ಚಾನ್ಸ್​ ಕೊಡಬೇಕಿತ್ತು.

Shwetha M