ಕ್ಯಾಪ್ಟನ್ಸಿ ಬೆನ್ನಲ್ಲೇ ದುರಹಂಕಾರಿ ಗಿಲ್ – ಬ್ಯಾಟ್ ಮೇಲೆ PRINCE ಬೇಕಿತ್ತಾ?
ಸಚಿನ್, ಕೊಹ್ಲಿಗಿಂತಲೂ ದೊಡ್ಡವರಾ? 

ಕ್ಯಾಪ್ಟನ್ಸಿ ಬೆನ್ನಲ್ಲೇ ದುರಹಂಕಾರಿ ಗಿಲ್ – ಬ್ಯಾಟ್ ಮೇಲೆ PRINCE ಬೇಕಿತ್ತಾ?ಸಚಿನ್, ಕೊಹ್ಲಿಗಿಂತಲೂ ದೊಡ್ಡವರಾ? 

ಬರೀ ಮಾತಾಡೋದೇ ಸಾಧನೆ ಅಲ್ಲ.. ಸಾಧನೆಗಳು ಮಾತಾಡ್ಬೇಕು ಅನ್ನೋ ಮಾತಿದೆ. ಸಾಧಕನಿಗೆ ಮಾತ್ರ ಈ ಮಾತಿನ ಮಹತ್ವ ಗೊತ್ತಿರುತ್ತೆ. ಆದ್ರೆ ಶುಭ್​ಮನ್ ಗಿಲ್ ಮಾತ್ರ ಇದಕ್ಕೆ ತದ್ವಿರುದ್ಧ ಆದಂತಿದೆ. ಈಗಷ್ಟೇ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿರೋ ಗಿಲ್ ತಮ್ಮ ಮೊದಲ ಸರಣಿ ಆರಂಭಕ್ಕೂ ಮುನ್ನವೇ ವಿವಾದ ಮೈಮೇಲೆ ಎಳ್ಕೊಂಡಿದ್ದಾರೆ. ಅಭಿಮಾನಿಗಳಂತೂ ಕೆರಳಿ ಕೆಂಡವಾಗಿದ್ದಾರೆ. ಅಷ್ಟಕ್ಕೂ ಗಿಲ್ ವಿರುದ್ಧದ ಜನಾಕ್ರೋಶಕ್ಕೆ ಕಾರಣವೇ ಈ ಬ್ಯಾಟ್ & ಮತ್ತು ಬ್ಯಾಟ್ ಮೇಲಿರೋ ಬರಹ.

ಇದನ್ನೂ ಓದಿ : ಬುಮ್ರಾಗೆ ಆಡಿದ್ರೂ ಕಷ್ಟ.. ಆಡದಿದ್ರೂ ಕಷ್ಟ – ವಾರ್ನಿಂಗ್ ಕೊಟ್ಟಿದ್ದೇಕೆ ಫಿಸಿಯೋ ತಜ್ಞ?

ಭಾರತ ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್ ಬಳಸುವ ಬ್ಯಾಟ್ ಮೇಲಿರುವ ಬರಹವೇ ಕಾಂಟ್ರವರ್ಸಿಗೆ ಕಾರಣವಾಗಿದೆ. ಗಿಲ್ ತಾವು ಬಳಸುವ MRF ಬ್ಯಾಟ್ ನಲ್ಲಿ ಪ್ರಿನ್ಸ್ ಎಂದು ಬರೆಸಿಕೊಂಡಿರುವುದು ಅಭಿಮಾನಿಗಳ ಸಿಟ್ಟಿಗೆ ಕಾರಣ ಆಗಿದೆ. ಈ ಮುಂಚೆ ಎಂಆರ್ ಎಫ್ ಬ್ಯಾಟ್ ಗಳನ್ನೇ ಬಳಸುತ್ತಿದ್ದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರೇ ಅಭಿಮಾನಿಗಳು ಕೊಟ್ಟ ಬಿರುದುಗಳನ್ನು ಯಾವತ್ತೂ ಬ್ಯಾಟ್ ನಲ್ಲಿ ಬರೆಸಿಕೊಂಡಿಲ್ಲ. ಹೀಗಿರುವಾಗ ಶುಭ್ಮನ್ ಗಿಲ್  ಇನ್ನೂ ಕ್ಯಾಪ್ಟನ್ ಯುಗಾರಂಭದ ಹೊಸ್ತಿಲಲ್ಲೇ ಪ್ರಿನ್ಸ್ ಅಂತಾ ಬರೆದುಕೊಂಡಿರುವುದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ. ಹೊಸ ಕರಿಯರ್ ಈಗಷ್ಟೇ ಆರಂಭ ಆಗ್ತಿದೆ. ಈಗಿನ್ನೂ 25 ವರ್ಷ. ಸಾಧಿಸಬೇಕಾದ್ದು ಸಾಕಷ್ಟಿದೆ. ಅದನ್ನ ಬಿಟ್ಟು ಈ ಬಿರುದುಗಳ ಗೀಳಿಗೆ ಬಿದ್ರೆ ಯಶಸ್ಸು ಸಿಗೋದಿಲ್ಲ ಎಂದು ಸಿಟ್ಟಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಕ್ರಿಕೆಟ್ ದೇವರು ಎಂದು ಕರೆದಿದ್ದಾರೆ. ಅದೇ ರೀತಿ ವಿರಾಟ್ ಕೊಹ್ಲಿಯನ್ನು ಕಿಂಗ್ ಎಂದು ಕೊಂಡಾಡಿದ್ದಾರೆ. ಹಾಗೇ ಗಿಲ್ ಅವರನ್ನೂ ಅಭಿಮಾನಿಗಳು ‘ಪ್ರಿನ್ಸ್’ ಎಂದು ಬಿರುದು ಕೊಟ್ಟಿದ್ರು. ಆದ್ರೆ ತೆಂಡೂಲ್ಕರ್ ಆಗಲಿ ಅಥವಾ ಕೊಹ್ಲಿ ಅವ್ರಾಗ್ಲಿ ತಮ್ಮ ಬ್ಯಾಟ್‌ಗಳ ಮೇಲೆ ಈ ಬಿರುದುಗಳನ್ನು ಯಾವತ್ತೂ ಬಳಸಿಲ್ಲ. ಹೀಗಿರುವಾಗ ಶುಭ್ಮನ್ ಗಿಲ್ ಪ್ರಿನ್ಸ್ ಎಂದು ಬರೆದಿರುವುದು ಟೀಕೆಗೆ ಆಹಾರವಾಗಿದೆ.

ಸದ್ಯ ಜೂನ್ 20 ರಿಂದ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿ ಆರಂಭವಾಗಲಿದೆ. ಈ ಸರಣಿಗಾಗಿ ಆಟಗಾರರೆಲ್ಲಾ ಭರ್ಜರಿ ಪ್ರಾಕ್ಟೀಸ್​ನಲ್ಲಿದ್ದಾರೆ. ಈ ಸರಣಿಗೆ ಗಿಲ್ ಕ್ಯಾಪ್ಟನ್ಸಿ ವಹಿಸಿದ್ದಾರೆ. ಸರಣಿಗೂ ಮುನ್ನ ನಡೆದ ಫೋಟೋ ಶೂಟ್‌ನಲ್ಲಿ ಗಿಲ್ ಅವರ ಬ್ಯಾಟ್‌ನಲ್ಲಿ ಪ್ರಿನ್ಸ್ ಎಂದು ಬರೆದಿರುವುದು ಕಂಡುಬಂದಿದೆ. ಅಸಲಿಗೆ ಐಸಿಸಿ ಚಾಂಪಿಯನ್ ಟ್ರೋಫಿ ವೇಳೆ ಶುಭ್ಮನ್ ಗಿಲ್ ಅವರು ಎಂಆರ್ ಎಫ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಹೀಗಾಗಿ ಅಲ್ಲಿಂದ ಎಂಆರ್ ಎಫ್ ಬ್ಯಾಟ್ ಗಳನ್ನು ಬಳಸುತ್ತಿದ್ದಾರೆ. ಎಂಆರ್ ಎಫ್ ಜೊತೆ ದೊಡ್ಡ ಮಟ್ಟಿಗೆ ಒಪ್ಪಂದ ಮಾಡಿಕೊಂಡ ಭಾರತದ 3ನೇ ಬ್ಯಾಟರ್ ಶುಭ್ಮನ್ ಗಿಲ್. ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರು ಎಂಆರ್ ಎಫ್ ಸ್ಟಿಕ್ಕರ್ ಅಂಟಿಸಿದ ಬ್ಯಾಟ್ ನಲ್ಲಿ ಬಹುವರ್ಷಗಳ ಕಾಲ ಆಡಿದ್ರು. ಆಗೆಲ್ಲಾ ಎಂಆರ್ ಎಫ್ ಎಂದರೆ ಸಚಿನ್ ತೆಂಡೂಲ್ಕರ್ ಎನ್ನುವಂತಾಗಿತ್ತು. ಸಚಿನ್ ಬಳಿಕ ವಿರಾಟ್ ಕೊಹ್ಲಿ ಅವರು 2014ರ ಬಳಿಕ ಎಂಆರ್ ಎಫ್ ಬ್ಯಾಟ್ ಗಳನ್ನು ಬಳಸುತ್ತಿದ್ದಾರೆ. ಇದೀಗ ಶುಭ್ಮನ್ ಗಿಲ್ ಅವರು ಎಂಆರ್ ಎಫ್ ನ ಹೊಸ ರಾಯಭಾರಿಯಾಗಿದ್ದಾರೆ. ಈ ಮೂವರನ್ನು ಹೊರತು ಪಡಿಸಿದರೆ ವಿಶ್ವಮಟ್ಟದಲ್ಲಿ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ ಅವರು ಎಂಆರ್ ಎಫ್ ಬ್ಯಾಟ್ ಬಳಸಿದ್ದರು. ಅದೇ ರೀತಿ ಸ್ಟೀವ್ ವಾ, ಎಬಿ ಡಿವಿಲಿಯರ್ಸ್, ಶಿಖರ್ ಧವನ್ ಅವರೂ ಸಹ ಎಂಆರ್ ಎಫ್ ಬ್ಯಾಟ್ ಉಪಯೋಗಿಸಿದ್ದರು. ಇನ್ನು ರೋಹಿತ್ ಶರ್ಮಾ ಅವರು ಕೆಲಕಾಲ ಎಂಆಪ್ ಎಫ್ ಬ್ಯಾಟ್ ಬಳಸಿದ್ದರು. ಸದ್ಯ ಬ್ಯಾಟ್​ ಮೇಲೆ ಇರುವಂಥ ಪ್ರಿನ್ಸ್ ಅನ್ನೋ ಸ್ಟಿಕ್ಕರ್ ಬಳಸೋಕೆ ಸ್ವತಃ ಗಿಲ್ ಅವ್ರೇ ಹೇಳಿದ್ರೋ ಅಥವಾ ಕಂಪನಿಯ ನಿರ್ಧಾರವೋ ಅನ್ನೋದು ಗೊತ್ತಾಗಿಲ್ಲ. ಹಾಗಂತ ಗಿಲ್​ ಓವರ್​ ಆಗಿ ಆಡ್ತಿರೋದು ಇದೇ ಮೊದ್ಲೇನಲ್ಲ.

ಐಪಿಎಲ್ ಪಂದ್ಯಗಳ ವೇಳೆಯೂ ಇದು ಸಾಕಷ್ಟು ಸಲ ಪ್ರೂವ್ ಆಗಿದೆ. ಮುಂಬೈ ಮತ್ತು ಗುಜರಾಥ್ ನಡುವಿನ ಎಲಿಮಿನೇಟರ್ ಮ್ಯಾಚಲ್ಲಿ ಟಾಸ್ ವೇಳೆ ಗಿಲ್ ಉದ್ಧಟತನ ತೋರಿಸಿದ್ರು. ಪಂದ್ಯದ ಟಾಸ್ ಸಮಯದಲ್ಲಿ ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್​ಗೆ ಹ್ಯಾಂಡ್​ ಶೇಕ್​ ಮಾಡಲು ಮುಂದಾಗಿದ್ರು. ಆದ್ರೆ ಗಿಲ್ ನೋಡಿಯೂ ನೋಡದಂತೆ ಹಸ್ತಲಾಘವ ಮಾಡದೇ ಹೋಗಿದ್ರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಸಾಕಷ್ಟು ಫ್ಯಾನ್ಸ್ ಗಿಲ್ ನಿಮಗೆ ದುರಹಂಕಾರ ಒಳ್ಳೇದಲ್ಲ ಎಂದು ಪೋಸ್ಟ್​​ಗಳನ್ನ ಹಾಕಿದ್ರು. ವಿಪರ್ಯಾಸ ಅಂದ್ರೆ ಆ ನಿರ್ಣಾಯಕ ಮ್ಯಾಚ್​ನಲ್ಲಿ ಗಿಲ್​ ಕೇವಲ 1 ರನ್​ ಗಳಿಸಿ ಔಟಾಗಿದ್ರು.

ಇನ್ನು ಹೈದ್ರಾಬಾದ್ ಹಾಗೇ ಗುಜರಾಟ್ ನಡುವಿನ ಪಂದ್ಯದಲ್ಲೂ ಗಿಲ್ ವರ್ತನೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಇಶಾನ್ ಕಿಶನ್ ಬ್ಯಾಟಿಂಗ್ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಗುಜರಾತ್ ಟೈಟಾನ್ಸ್ ಆಟಗಾರ ಗ್ಲೆನ್ ಫಿಲಿಪ್ಸ್ ಚೆಂಡನ್ನು ಎಸೆಯಲು ಮುಂದಾದಾಗ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ರು. ನೋವಿನಿಂದ ನರಳುತ್ತಿದ್ದ ಅವರಿಗೆ ಚಿಕಿತ್ಸೆ ನೀಡಲು ತಕ್ಷಣವೇ ಫಿಸಿಯೋ ಮೈದಾನಕ್ಕೆ ಓಡಿ ಬಂದರು. ಒಬ್ಬ ನಾಯಕನಾಗಿ ಮೈದಾನದಲ್ಲೇ ಇದ್ದ ಗಿಲ್ ಫಿಲಿಪ್ಸ್ ಕಡೆ ತಿರುಗಿಯೂ ನೋಡ್ಲಿಲ್ಲ. ತಮ್ಮ ಎದುರಾಳಿ ತಂಡದ ಹಾಗೇ ಅವ್ರ ಬೆಸ್ಟ್ ಫ್ರೆಂಡ್ ಆಗಿರೋ ಇಶಾನ್ ಕಿಶನ್ ಜತೆ ಮಾತನಾಡುತ್ತಾ ತಮಾಷೆ, ಚೇಷ್ಟೆಗಳನ್ನು ಮಾಡುತ್ತಿದ್ದರು. ಈ ವಿಡಿಯೋಗಳು ಸಾಕಷ್ಟು ವೈರಲ್ ಆಗಿ ಆಕ್ರೋಶಕ್ಕೆ ಕಾರಣವಾಗಿತ್ತು.

Shantha Kumari

Leave a Reply

Your email address will not be published. Required fields are marked *